SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಅದಾನಿ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ISSO ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್

ISSO National Chess Championship 2025: ಅಹಮದಾಬಾದ್‌ನ ಅದಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ 2025ರ ISSO ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ನಡೆಯಿತು. ಭಾರತದ 10 ರಾಜ್ಯಗಳಿಂದ 370ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಂಬೈನ ಛತ್ರಭುಜ್ ನರ್ಸೀ ಶಾಲೆ ಒಟ್ಟಾರೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಗ್ರ್ಯಾಂಡ್‌ಮಾಸ್ಟರ್ ಅಂಕಿತ್ ರಾಜ್‌ಪರಾ ಅವರು ಯುವ ಆಟಗಾರರಿಗೆ ಸ್ಫೂರ್ತಿಯ ಮಾತುಗಳನ್ನು ಹೇಳಿದರು. ಈ ಚಾಂಪಿಯನ್‌ಶಿಪ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸಿತು.

ಟಿವಿ 9 ಕನ್ನಡ 7 Sep 2025 11:26 pm

ಶುರುವಾಯ್ತು ತೆಲುಗು ಬಿಗ್​​ಬಾಸ್ 9, ಸ್ಪರ್ಧಿಗಳು ಯಾರ್ಯಾರು? ಇದ್ದಾರೆ ಕನ್ನಡಿಗರು

Bigg Boss Telugu season 9: ಬಿಗ್​​ಬಾಸ್ ತೆಲುಗು ಸೀಸನ್ 09 ಇಂದಿನಿಂದ (ಸೆಪ್ಟೆಂಬರ್ 07) ಪ್ರಾರಂಭವಾಗಿದೆ. ಕನ್ನಡದ ಕೆಲವು ನಟಿಯರು ಸೇರಿದಂತೆ ಭಿನ್ನ ಕ್ಷೇತ್ರಗಳಿಗೆ ಸೇರಿದ ಸ್ಪರ್ಧಿಗಳು ಈ ಬಾರಿ ಬಿಗ್​​ಬಾಸ್ ಮನೆ ಸೇರಿಕೊಂಡಿದ್ದಾರೆ. ಈ ಬಾರಿ ಬಿಗ್​​ಬಾಸ್ ಮನೆ ಸೇರಿದ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ...

ಟಿವಿ 9 ಕನ್ನಡ 7 Sep 2025 11:16 pm

ENG vs SA: ಆಫ್ರಿಕಾ ವಿರುದ್ಧ 342 ರನ್​ಗಳಿಂದ ಗೆದ್ದು ಭಾರತದ ವಿಶ್ವ ದಾಖಲೆ ಮುರಿದ ಇಂಗ್ಲೆಂಡ್‌

England Thrashes South Africa by 342 Runs: ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭರ್ಜರಿ 342 ರನ್‌ಗಳ ಗೆಲುವು ಸಾಧಿಸಿತು. ಜಾಕೋಬ್ ಬೆಥೆಲ್ ಮತ್ತು ಜೋ ರೂಟ್ ಅವರ ಶತಕಗಳ ನೆರವಿನಿಂದ ಇಂಗ್ಲೆಂಡ್ 414 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ದಕ್ಷಿಣ ಆಫ್ರಿಕಾ ಕೇವಲ 72 ರನ್‌ಗಳಿಗೆ ಆಲೌಟ್ ಆಯಿತು.

ಟಿವಿ 9 ಕನ್ನಡ 7 Sep 2025 10:49 pm

12 ವರ್ಷಗಳ ಬಳಿಕ ಮತ್ತೆ ಬಿಗ್​​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸಂಜನಾ ಗಲ್ರಾನಿ

Sanjana Galrani: 2013 ರಲ್ಲಿ ಪ್ರಸಾರವಾಗಿದ್ದ ಕನ್ನಡದ ಮೊದಲ ಬಿಗ್​​ಬಾಸ್​​ನ ಸ್ಪರ್ಧಿಯಾಗಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ಬಿಗ್​​ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಬಾರಿ ಕನ್ನಡ ಬಿಗ್​​ಬಾಸ್​​ಗೆ ಬಂದಿಲ್ಲ ಬದಲಿಗೆ ತೆಲುಗು ಬಿಗ್​​ಬಾಸ್​​ನ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ ಸಂಜನಾ ಗಲ್ರಾನಿ.

ಟಿವಿ 9 ಕನ್ನಡ 7 Sep 2025 10:49 pm

ಬಸವಣ್ಣ ವಚನ ಹೇಳುತ್ತಲೇ, ನಿಮ್ಮ ಜಾತಿ ಯಾವುದು ಅಂತ ಕೇಳ್ತಾರೆ: ಸಿದ್ದರಾಮಯ್ಯ ಬೇಸರ

CM Siddaramaiah speaks at Narayana Guru jayanthi function: ಸಮಾನತೆ ಸಾಧಿಸಬೇಕಾದರೆ ಎಲ್ಲರೂ ವಿದ್ಯೆ ಕಲಿಯಬೇಕು. ನಿಮ್ಮ ನಿಮ್ಮ ಕುಲಕಸುಬಿಗೆ ಕಟ್ಟುಬೀಳಬೇಕೆಂದಿಲ್ಲ. ನೀವೂ ಕೂಡ ಡಾಕ್ಟರಾಗಬಹುದು, ಎಂಜಿನಿಯರಾಗಬಹುದು, ವಿಜ್ಞಾನಿಯಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ಅವರು ಬಸವಣ್ಣನ ತತ್ವಗಳು ಬಾಯಿ ಮಾತಿಗಷ್ಟೇ ಸೀಮಿತವಾಗಿರುವುದನ್ನು ಎತ್ತಿ ತೋರಿಸಿದ್ದಾರೆ.

ಟಿವಿ 9 ಕನ್ನಡ 7 Sep 2025 10:43 pm

ಡಿಎ ಮತ್ತು ಡಿಆರ್ ಶೇ. 3 ಹೆಚ್ಚಳ ಸಾಧ್ಯತೆ; ಸಂಬಳ ಏರಿಕೆ ಎಷ್ಟಾಗಬಹುದು?

3% DA hike likely: ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಜುಲೈನ ಡಿಎ ಮತ್ತು ಡಿಆರ್ ಏರಿಕೆಯನ್ನು ಸದ್ಯದಲ್ಲೇ ಪ್ರಕಟಿಸಬಹುದು. ವರದಿಗಳ ಪ್ರಕಾರ ಈ ಬಾರಿ ಶೇ. 3ರಷ್ಟು ಡಿಎ ಮತ್ತು ಡಿಆರ್ ಹೆಚ್ಚಬಹುದು. ಡಿಎ ಅಥವಾ ಡಿಯರ್ನೆಸ್ ಅಲೋಯನ್ಸ್ ಅನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ. ಡಿಆರ್ ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ.

ಟಿವಿ 9 ಕನ್ನಡ 7 Sep 2025 10:19 pm

ಶಿವಣ್ಣ ಜೊತೆ ನಟಿಸುವುದು ನನ್ನ ಕನಸಾಗಿತ್ತು: ಹಾಸ್ಯನಟ ಜಾಕ್

comedy actor Palani Swamy: ‘ಭೀಮ’ ಸಿನಿಮಾದ ನಟ ಜಾಕ್ ಅಲಿಯಾಸ್ ಪಳನಿ ಸ್ವಾಮಿ ಅವರಿಗೆ ಅತ್ಯುತ್ತಮ ಹಾಸ್ಯನಟ ವಿಭಾಗದಲ್ಲಿ ಸೈಮಾ ಪ್ರಶಸ್ತಿ ಬಂದಿದೆ. ಪ್ರಶಸ್ತಿ ಬಂದ ಖುಷಿಯನ್ನು ಹಂಚಿಕೊಂಡಿರುವ ಜಾಕ್ ಅವರು ತಮಗೆ ಶಿವಣ್ಣ ಜೊತೆಗೆ ನಟಿಸುವ ಆಸೆ ಇತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ‘ಭೀಮ’ ಯಶಸ್ಸಿನ ಬಳಿಕ ಕೈಯಲ್ಲಿ ಈಗ 10 ಸಿನಿಮಾಗಳು ಇವೆ ಎಂದು ಸಹ ಅವರು ಹೇಳಿಕೊಂಡಿದ್ದಾರೆ.

ಟಿವಿ 9 ಕನ್ನಡ 7 Sep 2025 9:52 pm

Hockey Asia Cup 2025: ದಕ್ಷಿಣ ಕೊರಿಯಾವನ್ನು ಮಣಿಸಿ ಏಷ್ಯಾಕಪ್ ಗೆದ್ದ ಭಾರತ ಹಾಕಿ ತಂಡ

India Wins Hockey Asia Cup 2025: ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025ರ ಹಾಕಿ ಏಷ್ಯಾ ಕಪ್ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ದಕ್ಷಿಣ ಕೊರಿಯಾವನ್ನು 4-1 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ. ನಾಲ್ಕನೇ ಬಾರಿಗೆ ಏಷ್ಯಾ ಕಪ್ ಗೆದ್ದ ಭಾರತ, 2026ರ FIH ಪುರುಷರ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ.

ಟಿವಿ 9 ಕನ್ನಡ 7 Sep 2025 9:38 pm

ENG vs SA: ಬೆಟ್ಟದಂತಹ ಟಾರ್ಗೆಟ್ ನೀಡಿ ಭಾರತದ ದಾಖಲೆ ಸರಿಗಟ್ಟಿದ ಇಂಗ್ಲೆಂಡ್‌

England's Record-Breaking 414: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಹಿನ್ನಡೆಯಲ್ಲಿದ್ದ ಇಂಗ್ಲೆಂಡ್, ಮೂರನೇ ಪಂದ್ಯದಲ್ಲಿ 414 ರನ್ ಗಳಿಸಿ ದಾಖಲೆ ಬರೆದಿದೆ. ತಂಡದ ಪರ ರೂಟ್ (100) ಮತ್ತು ಬೆಥೆಲ್ (110) ಶತಕ, ಬಟ್ಲರ್ (62) ಮತ್ತು ಸ್ಮಿತ್ (62) ಅರ್ಧಶತಕ ಬಾರಿಸಿದರು. ಇಂಗ್ಲೆಂಡ್ 7ನೇ ಬಾರಿ 400+ ರನ್ ಗಳಿಸಿ ಟೀಂ ಇಂಡಿಯಾ ದಾಖಲೆಯನ್ನು ಸರಿಗಟ್ಟಿದೆ.

ಟಿವಿ 9 ಕನ್ನಡ 7 Sep 2025 9:20 pm

Power Yoga: ಬಾಬಾ ರಾಮದೇವ್ ಅವರ 5 ನಿಮಿಷಗಳ ಪವರ್ ಯೋಗ; ಅದ್ಭುತ ಪ್ರಯೋಜನಗಳನ್ನು ತಿಳಿದಿರಿ

Baba Ramdev shows Power Yoga: ಬಾಬಾ ರಾಮದೇವ್ ಅವರು ಪ್ರತಿ ಮನೆಗೆ ಯೋಗವನ್ನು ಹರಡಲು ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಯೋಗವು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಕೆಲವರು ಸಮಯದ ಅಭಾವದಿಂದ ಅದನ್ನು ಪ್ರಯತ್ನಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಬಾಬಾ ರಾಮದೇವ್ ಅವರು 5 ನಿಮಿಷಗಳ ಪವರ್ ಯೋಗದ ಬಗ್ಗೆ ಹೇಳಿದ್ದಾರೆ. ಇದು ಕಡಿಮೆ ಸಮಯದಲ್ಲಿ ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಟಿವಿ 9 ಕನ್ನಡ 7 Sep 2025 9:03 pm

ನಿಮ್ಮ ಜೀವನದಲ್ಲಿ ಇಂತಹ ಜನರಿದ್ದರೆ ಅವರಿಂದ ಆದಷ್ಟು ದೂರವಿರಿ; ಯಾಕೆ ಗೊತ್ತಾ?

ಪ್ರತಿಯೊಬ್ಬರ ಜೀವನದಲ್ಲೂ ಹೊಸ ಹೊಸ ಜನರ ಪರಿಚಯವಾಗುತ್ತಲೇ ಇರುತ್ತಾರೆ. ಆದರೆ ಇಂತಹ ಕೆಲವೊಂದಿಷ್ಟು ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಬಂದರೆ ಅಥವಾ ಇದ್ದರೆ ಅವರ ಸಹವಾಸದಿಂದ ಆದಷ್ಟು ದೂರವಿರಬೇಕಂತೆ. ಏಕೆಂದರೆ ಇದರಿಂದ ನಿಮಗೆ ಬಹಳಷ್ಟು ತೊಂದರೆಯಾಗುತ್ತದೆ. ಹಾಗಿರುವಾಗ ಎಂತಹ ಜನರಿಂದ ದೂರವಿದ್ದಷ್ಟು ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಟಿವಿ 9 ಕನ್ನಡ 7 Sep 2025 8:26 pm

ENG vs SA: ಆಫ್ರಿಕಾ ವಿರುದ್ಧ ಸಿಡಿಲಬ್ಬರದ ಶತಕ ಬಾರಿಸಿದ ಆರ್​ಸಿಬಿ ಸ್ಟಾರ್ ಜಾಕೋಬ್ ಬೆಥೆಲ್

Jacob Bethell's Maiden ODI Century: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಜಾಕೋಬ್ ಬೆಥೆಲ್ ಅವರು ಅದ್ಭುತವಾದ 110 ರನ್‌ಗಳ ಸ್ಫೋಟಕ ಶತಕ ಗಳಿಸಿದರು. ಇದು ಅವರ ಏಕದಿನ ಮತ್ತು ವೃತ್ತಿಪರ ಕ್ರಿಕೆಟ್‌ನ ಮೊದಲ ಶತಕ. 76 ಎಸೆತಗಳಲ್ಲಿ ಈ ಶತಕ ಗಳಿಸಿದ ಬೆಥೆಲ್, 48 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿ ನಂತರ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಶತಕದ ಗಡಿ ದಾಟಿದರು.

ಟಿವಿ 9 ಕನ್ನಡ 7 Sep 2025 8:16 pm

ಆರೆಸ್ಸೆಸ್ ಸಮನ್ವಯ ಬೈಠಕ್: ಶಿಕ್ಷಣ, ಸಮಾಜ, ರಾಷ್ಟ್ರೀಯ ಜೀವನದ ವಿವಿಧ ಆಯಾಮಗಳ ಚರ್ಚೆ

RSS Samanvay Baithak concludes on Sep 7th: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಮನ್ವಯ್ ಬೈಠಕ್ ಸೆಪ್ಟೆಂಬರ್ 5ರಂದು ಆರಂಭವಾಗಿ ಇವತ್ತು 7ರಂದು ಮುಗಿದಿದೆ. ಮೂರು ದಿನಗಳ ಸಭೆಯಲ್ಲಿ ಶಿಕ್ಷಣ, ಸಮಾಜ ಮತ್ತು ರಾಷ್ಟ್ರೀಯ ಜೀವನದ ವಿವಿಧ ಆಯಾಮಗಳ ಚರ್ಚೆ ಮಾಡಲಾಯಿತು. ಅಖಿಲ ಭಾರತ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಟಿವಿ 9 ಕನ್ನಡ 7 Sep 2025 8:09 pm

ತೆಲುಗು ಬಿಗ್​​ಬಾಸ್ ಸೇರಿದ ಕನ್ನಡದ ನಟಿ, ಯಾರು ಈ ತನುಜಾ ಗೌಡ?

Bigg Boss Telugu season 09: ತೆಲುಗು ಬಿಗ್​​ಬಾಸ್ ಸೀಸನ್ 9 ಇಂದಿನಿಂದ (ಸೆಪ್ಟೆಂಬರ್ 07) ಪ್ರಾರಂಭ ಆಗುತ್ತಿದೆ. ನಟ ಅಕ್ಕಿನೇನಿ ನಾಗಾರ್ಜುನ ಅವರು ಬಿಗ್​​ಬಾಸ್ ಸೀಸನ್ 9ರ ಪ್ರಾರಂಭ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ತೆಲುಗು ಬಿಗ್​​ಬಾಸ್​​ನಲ್ಲಿ ಕನ್ನಡದ ನಟಿಯರು ಸೀಸನ್​​ಗೆ ಒಬ್ಬರಾದರೂ ಕಾಣಿಸಿಕೊಳ್ಳುತ್ತಾರೆ. ಈ ಸೀಸನ್​​ನ ಮೊದಲ ಸ್ಪರ್ಧಿಯಾಗಿ ಕನ್ನಡದ ನಟಿಯೇ ಬಿಗ್​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ.

ಟಿವಿ 9 ಕನ್ನಡ 7 Sep 2025 8:06 pm

IND vs PAK: ಒಂದೇ ಮೈದಾನದಲ್ಲಿ ಅಭ್ಯಾಸ; ಆದರೂ ಮಾತಿಲ್ಲ, ಕೈಕೂಡ ಕುಲುಕಲಿಲ್ಲ

India-Pakistan Asia Cup 2025: 2025ರ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದರೂ, ಪರಸ್ಪರ ಕೈ ಕೂಡ ಕುಲುಕದೆ ಇರುವುದು ವರದಿಯಾಗಿದೆ. ಪಾಕಿಸ್ತಾನ ತಂಡವು ತ್ರಿಕೋನ ಸರಣಿಯ ಫೈನಲ್‌ನಲ್ಲಿದ್ದು, ಏಷ್ಯಾಕಪ್‌ಗೆ ಸಿದ್ಧತೆ ನಡೆಸುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಟಿ20 ಏಷ್ಯಾಕಪ್‌ನ ಹಿಂದಿನ ದಾಖಲೆಗಳನ್ನು ಕೂಡ ಲೇಖನ ಉಲ್ಲೇಖಿಸುತ್ತದೆ

ಟಿವಿ 9 ಕನ್ನಡ 7 Sep 2025 7:29 pm

ಲಾಸ್ಟ್ ಬೆಂಚ್ ಮೋದಿ; ಬಿಜೆಪಿ ಕಾರ್ಯಾಗಾರದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ಕೊನೆ ಸಾಲಿನಲ್ಲಿ ಕುಳಿತ ಪ್ರಧಾನಿ

Narendra Modi sits in last bench during a party workshop: ಮಂಗಳವಾರ (ಸೆ. 9) ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಸಂಸದರನ್ನು ಸಿದ್ಧಗೊಳಿಸಲು ಕಾರ್ಯಾಗಾರ ನಡೆಸಲಾಯಿತು. ಇದರಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಸಾಮಾನ್ಯ ಸಂಸದರ ಜೊತೆ ಕೊನೆಯ ಸಾಲಿನಲ್ಲಿ ಕೂತಿದ್ದರು. ಬಿಜೆಪಿ ಸಂಸದ ರವಿ ಕಿಶನ್ ಈ ಫೋಟೋ ಹಂಚಿಕೊಂಡು, ಬಿಜೆಪಿಯ ಶಕ್ತಿ ಎಂದು ಬಣ್ಣಿಸಿದ್ದಾರೆ.

ಟಿವಿ 9 ಕನ್ನಡ 7 Sep 2025 7:26 pm

‘ಏಳುಮಲೆ’ ಸಿನಿಮಾ ನೋಡಿ ಕೊಂಡಾಡಿದ ನಟ ಕೋಮಲ್

Elumale Kannada Movie: ‘ಏಳುಮಲೈ’ ಸಿನಿಮಾ ಇದೇ ವಾರ ಬಿಡುಗಡೆ ಆಗಿದೆ. ಒಂದೇ ರಾತ್ರಿಯಲ್ಲಿ ನಡೆಯುವ ಕತೆ ಒಳಗೊಂಡಿರುವ ಈ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ. ಇದೀಗ ಸಿನಿಮಾದ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿದ್ದು, ಸಿನಿಮಾ ನೋಡಿದ ಸೆಲೆಬ್ರಿಟಿಗಳು ಸಿನಿಮಾದ ಕತೆಯನ್ನು, ನಟರ ಅಭಿನಯವನ್ನು ಕೊಂಡಾಡಿದ್ದಾರೆ.

ಟಿವಿ 9 ಕನ್ನಡ 7 Sep 2025 7:16 pm