ನಿರಂತರ ಮಳೆ ಹಿನ್ನೆಲೆ: ಇಂದು ಸುಳ್ಯ ತಾಲೂಕಿನ ಎಲ್ಲಾ ವಿದ್ಯಾಸಂಸ್ಥೆಗಳಿಗೆ ರಜೆ
ಸುಳ್ಯ: ನಿರಂತರ ಮಳೆಯಾಗುತ್ತಿರುವುದರಿಂದ ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ,ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜು.03 ರಂದು ರಜೆ ಘೋಷಿಸಲಾಗಿದೆ ತಹಶೀಲ್ದಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಿಂಸೆ ನಿಲ್ಲಿಸಿ ಶಾಂತಿಯ ಕಡೆಗೆ ಮರಳುತ್ತಿರುವ ಮಧ್ಯಪ್ರಾಚ್ಯ... ಮುಂದಿನ ಕಥೆ ಏನು?
ಮಧ್ಯಪ್ರಾಚ್ಯ ಪದೇ ಪದೇ ಹಿಂಸೆಯ ಕೂಪದಲ್ಲಿ ಬಿದ್ದು ಒದ್ದಾಡಿದ್ದು, ಕಳೆದ 2 ವರ್ಷಗಳಿಂದ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲೇ ದಿಢೀರ್ ದೊಡ್ಡ ದೊಡ್ಡ ಯುದ್ಧಗಳನ್ನು ಅಮೆರಿಕ ನಿಲ್ಲಿಸಿದ್ದು, ಭಾರಿ ಕುತೂಹಲ ಕೆರಳಿಸಿತ್ತು. ಇಂತಹ ಸಮಯದಲ್ಲೇ ಮತ್ತೊಂದು ಕುತೂಹಲವು ಕೂಡ ಕೆರಳುತ್ತಿದೆ. ಹಾಗಾದ್ರೆ, ಹಿಂಸೆ ನಿಲ್ಲಿಸಿ ಶಾಂತಿಯ ಕಡೆಗೆ ಮರಳುತ್ತಿರುವ ಮಧ್ಯಪ್ರಾಚ್ಯ... ಮುಂದಿನ ಕಥೆ ಏನು?
ಎಜ್ಬಾಸ್ಟನ್ ಟೆಸ್ಟ್: ಭಾರತಕ್ಕೆ ಮೊದಲ ದಿನದ ಗೌರವ
ಬರ್ಮಿಂಗ್ಹ್ಯಾಂ: ಅತಿಥೇಯ ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದ ಮೊದಲ ದಿನ ಭಾರತದ ಬ್ಯಾಟ್ಸ್ಮನ್ಗಳು ಸ್ಥಿರ ಪ್ರದರ್ಶನ ತೋರಿ ಮೊದಲ ದಿನದ ಗೌರವ ಸಂಪಾದಿಸಿದರು. ದಿನದ ಆಟ ಮುಕ್ತಾಯದ ವೇಳೆಗೆ ಭಾರತ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 15 ರನ್ಗಳಾಗುವಷ್ಟರಲ್ಲಿ ಕೆ.ಎಲ್.ರಾಹುಲ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ತಂಡದ ಮೊತ್ತ 95 ರನ್ಗಳಾಗಿದ್ದಾಗ ಕರುಣ್ ನಾಯರ್ (31) ಅವರು ಬ್ರಿಂಡನ್ ಕಾರ್ಸ್ ಅವರಿಗೆ ವಿಕೆಟ್ ಒಪ್ಪಿಸಿದರು. ತಂಡವನ್ನು ಸುಸ್ಥಿತಿಗೆ ಒಯ್ಯುವಲ್ಲಿ ಯಶಸ್ವಿ ಜೈಸ್ವಾಲ್ (87) ಗಣನೀಯ ಕೊಡುಗೆ ನೀಡಿದರು. ರಿಷಭ್ ಪಂತ್ (25) ಮತ್ತು ನಿತೀಶ್ ಕುಮಾರ್ ರೆಡ್ಡಿ (1) ಅವರನ್ನು ಕಳೆದುಕೊಂಡಾಗ ಭಾರತದ ಮೊತ್ತ 5 ವಿಕೆಟ್ ನಷ್ಟಕ್ಕೆ 211 ರನ್ ಆಗಿತ್ತು. ಮುರಿಯದ ಆರನೇ ವಿಕೆಟ್ಗೆ ನಾಯಕ ಶುಭ್ಮನ್ ಗಿಲ್ (ಅಜೇಯ 114) ಮತ್ತು ರವೀಂದ್ರ ಜಡೇಜಾ (ನಾಟೌಟ್ 41) 99 ರನ್ ಗಳಿಸಿ ಭಾರತದ ಮೇಲುಗೈಗೆ ಕಾರಣರಾದರು. ತೀವ್ರ ಒತ್ತಡದ ಸಂದರ್ಭದಲ್ಲೂ ಅದ್ಭುತ ಪ್ರದರ್ಶನ ನೀಡಿದ ಗಿಲ್, 216 ಎಸೆತಗಳಲ್ಲಿ 114 ರನ್ ಸಿಡಿಸಿದ್ದಾರೆ. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ (2/59) ಯಶಸ್ವಿ ಬೌಲರ್ ಎನಿಸಿದರೆ, ಬ್ರಿಂಡನ್ ಕಾರ್ಸ್ , ಬೆನ್ ಸ್ಟೋಕ್ಸ್ ಮತ್ತು ಶೋಯಬ್ ಬಶೀರ್ ತಲಾ ಒಂದು ವಿಕೆಟ್ ಪಡೆದರು. ಭಾರತ ತಂಡ ಎರಡನೇ ಟೆಸ್ಟ್ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದು, ಶಾರ್ದೂಲ್ ಠಾಕೂರ್, ಸಾಯಿ ಸುದರ್ಶನ್ ಮತ್ತು ಜಸ್ಪ್ರೀತ್ ಬೂಮ್ರಾ ಸ್ಥಾನದಲ್ಲಿ ನಿತೀಶ್ ಕುಮಾರ್, ವಾಷಿಂಗ್ಟನ್ ಸುಂದರ್ ಮತ್ತು ಆಕಾಶ್ದೀಪ್ ಅವರನ್ನು ಆಡಿಸಿದೆ.
ಮತ್ತೊಂದು ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ
ಹೊಸದಿಲ್ಲಿ: ಐಪಿಎಲ್ನಲ್ಲಿ ದಾಖಲೆ ಸೃಷ್ಟಿಸುವ ಮೂಲಕ ಬೆಳಕಿಗೆ ಬಂದ ಹದಿಹರೆಯದ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಗುರುವಾರ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. 19 ವರ್ಷ ವಯೋಮಿತಿಯ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 14 ವರ್ಷದ ಪೋರ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಎರಡನೇ ಅತಿವೇಗದ ಅರ್ಧಶತಕ ದಾಖಲಿಸಿದರು. ಒಟ್ಟು ಆರು ಬೌಂಡರಿ ಮತ್ತು ಒಂಬತ್ತು ಸಿಕ್ಸರ್ ಸಿಡಿಸಿ 40 ಓವರ್ಗಳ ಪಂದ್ಯದಲ್ಲಿ 269 ರನ್ ಕಲೆಹಾಕಲು ನೆರವಾದರು. 19ರ ವಯೋಮಿತಿಯ ಏಕದಿನ ಪಂದ್ಯಗಳ ಇತಿಹಾಸದಲ್ಲಿ ರಿಷಭ್ ಪಂತ್, 2016ರಲ್ಲಿ ನೇಪಾಳ ವಿರುದ್ಧ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು, ಅತಿವೇಗದ ಅರ್ಧಶತಕ ಎನಿಸಿದೆ. ಯುವ ಏಕದಿನ ಪಂದ್ಯದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಗೂ ಸೂರ್ಯವಂಶಿ ಪಾತ್ರರಾದರು. 2009ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಮನ್ದೀಪ್ ಸಿಂಗ್ 9 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಸೂರ್ಯವಂಶಿ ಅಳಿಸಿಹಾಕಿದರು. ಭಾರತದ 19ರ ವಯೋಮಿತಿ ತಂಡ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿತು. ಇಡೀ ಸರಣಿಯಲ್ಲಿ ಸೂರ್ಯವಂಶಿ ಅದ್ಭುತ ಪ್ರದರ್ಶನ ತೋರುತ್ತಿದ್ದು, ಆರಂಭಿಕ ಪಂದ್ಯದಲ್ಲಿ 19 ಎಸೆತಗಳಲ್ಲಿ 48 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎರಡನೇ ಪಂದ್ಯದಲ್ಲಿ 34 ಎಸೆತಗಳಲ್ಲಿ 45 ರನ್ ಗಳಿಸಿದರೂ, ಇಂಗ್ಲೆಂಡ್ ಒಂದು ವಿಕೆಟ್ನ ರೋಚಕ ಜಯ ಸಾಧಿಸಿ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಮೂರನೇ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟುವ ವೇಳೆ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸರಣಿಯ ಮೂರು ಪಂದ್ಯಗಳಿಂದ ಸೂರ್ಯವಂಶಿ 179 ರನ್ ಕಲೆ ಹಾಕಿದ್ದಾರೆ.
ಗಾಝಾ ಬಗ್ಗೆ ಮಾತನಾಡಿದ್ದಕ್ಕೆ ಗುರಿ ಮಾಡಲಾಗುತ್ತಿದೆ: ಬಾಬ್ ವೈಲನ್
ಗಸ್ಟನ್ಬರಿ ಉತ್ಸವದ ಕಾರ್ಯಕ್ರಮದಲ್ಲಿ ಯಹೂದಿ ವಿರೋಧಿ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ ಎಂಬ ಆರೋಪವನ್ನು ರ್ಯಾಪ್ ಗಾಯಕ ಬಾಬ್ ವೈಲನ್ ಅಲ್ಲಗಳೆದಿದ್ದಾರೆ. ವೈಲನ್ ಹೇಳಿಕೆ ಬಗ್ಗೆ ಪೊಲೀಸರು ತನಿಖೆಗೆ ಆದೇಶಿಸಿದ್ದು, ರಾಜಕಾರಣಿಗಳು, ಬಿಬಿಸಿ ಮತ್ತು ಉತ್ಸವ ಆಯೋಜಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಗಾಜಾ ಯುದ್ಧದ ಬಗ್ಗೆ ಮಾತನಾಡಿದ ಕಾರಣಕ್ಕೆ ತಂಡವನ್ನು ಗುರಿ ಮಾಡಲಾಗುತ್ತಿದೆ ಎಂದು ಬ್ಯಾಂಡ್ ತಂಡ ಹೇಳಿಕೆ ನೀಡಿದೆ. ನೈರುತ್ಯ ಇಂಗ್ಲೆಂಡ್ನಲ್ಲಿ ಆಯೋಜಿಸಿದ್ದ ಉತ್ಸವದಲ್ಲಿ ಪ್ರೇಕ್ಷಕರಿಂದ ಡೆತ್ ಟೂ ದ ಐಡಿಎಫ್ (ಇಸ್ರೇಲ್ ಡಿಫೆನ್ಸ್ ಫೋರ್ಸಸ್) ಎಂಬ ಘೋಷಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ತಂಡದ ಮುಖ್ಯಸ್ಥ ಬಾಬ್ ವೈಲನ್ ಅವರು ಅಪರಾಧ ಎಸಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಬ್ರಿಟನ್ ಸರ್ಕಾರ ಇದನ್ನು ದ್ವೇಷಭಾಷಣದ ಭೀತಿ ಹುಟ್ಟಿಸುವಂಥದ್ದು ಎಂದು ಕರೆದಿದ್ದು, ಯಹೂದಿವಿರೋಧಿ ಭಾವನೆಗಳನ್ನು ನೇರಪ್ರಸಾರ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಬಿಬಿಸಿ ಹೇಳಿದೆ. ಅಮೆರಿಕದ ಅಧಿಕಾರಿಗಳು ಈ ಸಂಗೀತ ಕಲಾವಿದರ ವೀಸಾ ರದ್ದುಪಡಿಸಿದ್ದಾರೆ. ಹಮಾಸ್ ವಿರುದ್ಧದ ಇಸ್ರೇಲ್ ಯುದ್ಧ ವಿಶ್ವಾದ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳು ಹಲವು ರಾಜಧಾನಿಗಳಲ್ಲಿ ಮತ್ತು ಕ್ಯಾಂಪಸ್ಗಳಲ್ಲಿ ನಡೆಯುತ್ತಿವೆ. ಇಸ್ರೇಲ್ ಹಾಗೂ ಇಸ್ರೇಲ್ ಬೆಂಬಲಿಗರು ಈ ಪ್ರತಿಭಟನೆಯನ್ನು ಯಹೂದಿ ವಿರೋಧಿ ಎಂದು ಕರೆದಿದ್ದರೆ, ವಿರೋಧಿಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಇದು ಎಂದು ಇಸ್ರೇಲ್ ವಿರೋಧಿಗಳು ವಿಶ್ಲೇಷಿಸಿದ್ದಾರೆ.
Srilanka Vs Bangladesh 2nd Odi - ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಹೀನಾಯವಾಗಿ ಸೋತಿದೆ. ಗೆಲ್ಲುವ ಹಾದಿಯಲ್ಲಿದ್ದ ತಂಡವು ಕೇವಲ ಐದು ರನ್ಗಳ ಅಂತರದಲ್ಲಿ ಏಳು ವಿಕೆಟ್ಗಳನ್ನು ಕಳೆದುಕೊಂಡು ಮುಖಭಂಗ ಅನುಭವಿಸಿದೆ. ಬಾಂಗ್ಲಾದೇಶ ತಂಡ ಈ ಕುಸಿತವು ಏಕದಿನ ಇತಿಹಾಸದಲ್ಲಿ ಎರಡನೇ ಅತಿ ಕೆಟ್ಟ ಕುಸಿತವಾಗಿ ದಾಖಲಾಗಿದೆ. ಶ್ರೀಲಂಕಾವೇ ಎದುರಾಳಿ ತಂಡಗಳನ್ನು ಈ ರೀತಿ ಮೂರು ಬಾರಿ ಇಕ್ಕಟ್ಟಿನಲ್ಲಿ ಸಿಲುಕಿಸಿರುವುದು ವಿಶೇಷ. ಇಲ್ಲಿದೆ ಈ ಬಗ್ಗೆ ವಿಶ್ಲೇಷಣೆ.
ಈ ಬಾರಿ ಸೆಪ್ಟೆಂಬರ್ 22ರಿಂದ 11 ದಿನಗಳ ಅದ್ದೂರಿ ದಸರಾ ಉತ್ಸವವನ್ನು ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಕೋವಿಡ್ ಕಾರಣಗಳಿಂದಾಗಿ 2020ರಿಂದ ದಸರಾ ಉತ್ಸವಕ್ಕೆ ಮಂಕು ಕವಿದಿತ್ತು. ಈ ನಿಟ್ಟಿನಲ್ಲಿ 11 ದಿನಗಳ ಅದ್ದೂರಿ ದಸರಾವನ್ನು ಹಿಂದೆಂದಿಗಿಂತ ಭಿನ್ನವಾಗಿ ಆಚರಿಸಲು ಸರಕಾರ ಮುಂದಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, 40 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೆಆರ್ಎಸ್ ಅಣೆಕಟ್ಟು ತುಂಬಿ ತುಳುಕುತ್ತಿರುವುದು ಸರಕಾರದ ಉತ್ಸಾಹಕ್ಕೆ ವಿಶೇಷ ಕಾರಣವಾಗಿದೆ. ದಸರಾದ ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆಯನ್ನು ಎತ್ತಿ ಹಿಡಿಯಲು ಬಗೆ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ. ಶೀಘ್ರದಲ್ಲೇ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ದಸರಾ ಕೇವಲ ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆಯಿಂದಷ್ಟೇ ಅಲ್ಲ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಕರ್ನಾಟಕದ ಪಾಲಿಗೆ ಬಹಳ ಮುಖ್ಯವಾಗಿದೆ. ದಸರಾದ ನೆಪದಲ್ಲಿ ವಿಶ್ವ ಮಟ್ಟದ ಪ್ರೇಕ್ಷಕರನ್ನು ಕರ್ನಾಟಕಕ್ಕೆ ಆಕರ್ಷಿಸಲು ಸಾಧ್ಯವಾಗುತ್ತದೆ. ಮೈಸೂರಿನ ಇತಿಹಾಸದ ಜೊತೆಗೆ ಕರ್ನಾಟಕದ ಇತರ ಪ್ರೇಕ್ಷಣೀಯ ಸ್ಥಳಗಳನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ದಸರಾ ಉತ್ಸವದ ಮೂಲಕ ಸಾಧ್ಯವಾಗಬೇಕು. ಇದೇ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುವ ಸ್ಥಳದಲ್ಲಿ ನೂಕುನುಗ್ಗಲು ಸಂಭವಿಸಿದರೆ ಅದರ ಅಂತಿಮ ಪರಿಣಾಮ ಏನಾಗಬಹುದು ಎನ್ನುವುದನ್ನು ಇತ್ತೀಚೆಗಷ್ಟೇ ನಾಡು ಕಣ್ಣಾರೆ ಕಂಡಿದೆ. ಆರ್ಸಿಬಿ ವಿಜಯೋತ್ಸವ ಅಂತಿಮವಾಗಿ ಹಲವರ ಸಾವು ಮತ್ತು ನೋವುಗಳಲ್ಲಿ ಮುಕ್ತಾಯ ಕಂಡಿತ್ತು. ಇಂತಹ ಯಾವುದೇ ಅನಾಹುತಗಳು ಸಂಭವಿಸದಂತೆ ದಸರಾ ಉತ್ಸವದಲ್ಲಿ ಮುನ್ನೆಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾದಲ್ಲಿ ಆನೆಗಳನ್ನು ಬಳಸುವ ಬಗ್ಗೆ ರಾಜ್ಯ ಸರಕಾರ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗಿದೆ. ಲಕ್ಷಾಂತರ ಜನರು ಸೇರುವಲ್ಲಿ ಮನರಂಜನೆಗಾಗಿ ಆನೆಗಳನ್ನು ಬಳಸುವುದು ಎಷ್ಟು ಸರಿ ಎನ್ನುವ ಕುರಿತಂತೆ ಚರ್ಚೆಗಳು ನಡೆಯುತ್ತಲೇ ಇವೆ. ಕೇರಳದಲ್ಲಿ ಆನೆಗಳನ್ನು ಬಂಧಿಸಿಟ್ಟು ಸಾಕುತ್ತಿರುವ ಬಗ್ಗೆ, ಜಾತ್ರೆಗಳಲ್ಲಿ ಆನೆಗಳು ನಡೆಸಿದ ದಾಂಧಲೆಗಳನ್ನು ಮುಂದಿಟ್ಟುಕೊಂಡು ಅಲ್ಲಿನ ಹೈಕೋರ್ಟ್ 2024ರಲ್ಲಿ ತೀರ್ಪನ್ನು ನೀಡಿದೆ. ದೇವಸ್ಥಾನಗಳಲ್ಲಿ ಆನೆಗಳ ಬಳಕೆಯ ಬಗ್ಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದ್ದ ಹೈಕೋರ್ಟ್, ಆನೆಗಳು ಧಾರ್ಮಿಕ ಅಗತ್ಯವಲ್ಲ. ಆಡಳಿತ ಮಂಡಳಿಯ ಪೈಪೋಟಿಯೇ ಆನೆಯ ಬಳಕೆಗೆ ಮುಖ್ಯ ಕಾರಣ. ಉತ್ಸವಗಳಲ್ಲಿ ಆನೆಗಳನ್ನು ಬಳಸುವ ಸಂದರ್ಭದಲ್ಲಿ ಅವುಗಳಿಗೆ ಗರಿಷ್ಠ ಹಿಂಸೆಯನ್ನು ನೀಡಲಾಗುತ್ತದೆ. ಇದನ್ನು ನಿಲ್ಲಿಸಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಹಲವು ಉತ್ಸವಗಳಲ್ಲಿ ಆನೆಗಳು ನಡೆಸಿದ ದಾಂಧಲೆಗಳ ಕಾರಣದಿಂದ ಅಪಾರ ನಾಶ, ನಷ್ಟವುಂಟಾಗಿರುವುದನ್ನೂ ಹೈಕೋರ್ಟ್ ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿತ್ತು. ಸಾವಿರಾರು ಜನರು ಸೇರುವ ಸ್ಥಳದಲ್ಲಿ ಆನೆಗಳು ದಾಂಧಲೆ ನಡೆಸಿದರೆ ಅದಕ್ಕೆ ಯಾರು ಹೊಣೆ? ಎಂದು ಕೇಳಿತ್ತು. ತಮಿಳುನಾಡಿನಲ್ಲೂ ಆನೆಗಳ ವ್ಯಾಪಕ ಬಳಕೆಯಿದೆ. ಸರ್ಕಸ್ಗಳಲ್ಲಿ ಆನೆಗಳಿಗೆ ನೀಡುವ ಚಿತ್ರ ಹಿಂಸೆಗಳಿಗಿಂತ ಇಲ್ಲಿ ಭಿನ್ನವಾಗಿಯೇನೂ ಇಲ್ಲ. ಆನೆಗಳನ್ನು ಪಳಗಿಸುವ ನೆಪದಲ್ಲಿ ನೀಡುವ ಚಿತ್ರಹಿಂಸೆ, ಸಂಕಲೆಗಳಲ್ಲಿ ಅವುಗಳನ್ನು ಬಂಧಿಸಿಟ್ಟು ನಡೆಸುವ ದೌರ್ಜನ್ಯಗಳ ಬಗ್ಗೆ ಕೇರಳ ಹೈಕೋರ್ಟ್ ತನ್ನ ಆದೇಶದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಇತ್ತೀಚೆಗೆ ಒಡಿಶಾದಲ್ಲಿ ನಡೆದ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ಮೂರು ಜನರು ಮೃತಪಟ್ಟರು. ಈ ಸಂದರ್ಭದಲ್ಲಿ ಪರಿಸ್ಥಿತಿ ಹದಗೆಡಲು ಕೇವಲ ಕಾಲ್ತುಳಿತ ಮಾತ್ರ ಕಾರಣವಲ್ಲ. ಅಲ್ಲಿ ಬಳಸಲ್ಪಟ್ಟ ಆನೆಗಳು ಇದ್ದಕ್ಕಿದ್ದಂತೆ ಹುಚ್ಚೆದ್ದು ಓಡತೊಡಗಿದವು. ಇದರಿಂದ ಇನ್ನಷ್ಟು ಅನಾಹುತಗಳು ಸಂಭವಿಸಿದವು. ಮೈಸೂರಿನ ಜಂಬೂಸವಾರಿಗೆ ತರಬೇತಿ ನೀಡಿರುವ ಆನೆಗಳನ್ನು ಬಳಸಲಾಗುತ್ತದೆ ನಿಜ. ಆದರೆ, ಆನೆಗಳ ಸ್ವಭಾವದ ಬಗ್ಗೆ ಭರವಸೆಯೇನೂ ಇಲ್ಲ. ಒಂದು ವೇಳೆ ಆ ಜನ ಸಮೂಹದ ಮಧ್ಯೆ ಆನೆಗಳು ಯಾವುದೋ ಕಾರಣಕ್ಕೆ ಹುಚ್ಚೆದ್ದು ಬಿಟ್ಟರೆ ಅಲ್ಲಿ ಸಂಭವಿಸಬಹುದಾದ ನೂಕುನುಗ್ಗಲು, ಜನರ ಹಾಹಾಕಾರ, ಕಾಲ್ತುಳಿತ ಇತ್ಯಾದಿಗಳನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಅದಕ್ಕೆ ಯಾರನ್ನು ಹೊಣೆ ಮಾಡುವುದು? ಮಾವುತರನ್ನೇ? ಲಕ್ಷಾಂತರ ಮಾವುತರನ್ನೇ? ಲಕ್ಷಾಂತರ ಜನರು ಸೇರುವಲ್ಲಿ ಆನೆಯಂತಹ ವನ್ಯ ಜೀವಿಯನ್ನು ಬಳಸಿದ ಜಿಲ್ಲಾಡಳಿತ ಮತ್ತು ಸರಕಾರವೇ ಅದರ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಈಗಾಗಲೇ ಸಂಭವಿಸಿರುವ ಬೆಂಗಳೂರಿನ ಕಾಲ್ತುಳಿತ ದುರಂತದ ಆಘಾತಗಳಿಂದ ಕರ್ನಾಟಕ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ, ಲಕ್ಷಾಂತರ ಜನರು ಸೇರುವ ದಸರಾ ಉತ್ಸವದಲ್ಲಿ ಆನೆಗಳನ್ನು ಬಳಸಿ ಮತ್ತೊಮ್ಮೆ ಆನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುವುದು ಎಷ್ಟು ಸರಿ? ಈ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕು. ಭಾರತದಲ್ಲಿ ವನ್ಯಜೀವಿ ಕಾಯ್ದೆ ಹೆಸರಿಗಷ್ಟೇ ಇದೆ. ವನ್ಯ ಜೀವಿ ಕಾಯ್ದೆಯನ್ನು ಬಡ ಆದಿವಾಸಿಗಳನ್ನು ಕರಡಿ, ಕೋತಿಯಾಡಿಸುವವರನ್ನು ಬೆದರಿಸಲು ಬಳಕೆ ಮಾಡಲಾಗುತ್ತಿದೆ. ಅಪರೂಪಕ್ಕೆ ಯಾವನೋ ನಟನ ಕೊರಳಲ್ಲಿ ಹುಲಿಯುಗುರು ಕಂಡರೆ ಮಾಧ್ಯಮಗಳು ಸುದ್ದಿ ಮಾಡುತ್ತವೆ. ಹಾಗೆಯೇ ಇಂದು ಜನರ ಮೌಡ್ಯ, ಬೇಜವಾಬ್ದಾರಿ, ಶೋಕಿಗಳಿಗೆ ಹುಲಿ, ಕರಡಿಗಳು ಬಲಿಯಾಗುತ್ತಿರುವುದನ್ನಷ್ಟೇ ವೈಭವೀಕರಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ, ಉತ್ಸವ, ಜಾತ್ರೆಗಳಲ್ಲಿ ಆನೆಗಳನ್ನು ಬಳಸುವುದನ್ನು ಸಹಜ ಎಂಬಂತೆ ಸ್ವೀಕರಿಸಲಾಗುತ್ತಿದೆ. ಮಾತ್ರವಲ್ಲ ಇದನ್ನು ಬಹಿರಂಗವಾಗಿಯೇ ಸಮರ್ಥಿಸಲಾಗುತ್ತದೆ. ದೇವಸ್ಥಾನಗಳು ತಮ್ಮ ಜಾತ್ರೆಯನ್ನು, ಉತ್ಸವವನ್ನು ಅಂದಗಾಣಿಸಲು ಆನೆಗಳನ್ನು ಬಳಸಬಹುದಾದರೆ, ಕರಡಿಯಾಡಿಸುವವರು, ಕೋತಿ ಆಡಿಸುವವರು ತಮ್ಮ ಹೊಟ್ಟೆಪಾಡಿಗಾಗಿ ವನ್ಯ ಪ್ರಾಣಿಗೆ ತರಬೇತಿ ನೀಡಿ ಅವುಗಳನ್ನು ಯಾಕೆ ಆಡಿಸಬಾರದು? ಭಾರತೀಯರು ಆನೆಗಳನ್ನು ಅತ್ಯಂತ ಪೂಜನೀಯವಾಗಿ ಕಾಣುತ್ತಾರೆ. ಆನೆ ಭಾರತದ ಘನತೆಯಾಗಿದೆ. ಇಂತಹ ಆನೆಗಳನ್ನು ಭಾರತದಷ್ಟು ನಿಕೃಷ್ಟವಾಗಿ ಯಾವ ದೇಶವೂ ನಡೆಸುವುದಿಲ್ಲ ಎಂದು ಅಧ್ಯಯನ ವರದಿ ಹೇಳುತ್ತದೆ. ನಾವೆಲ್ಲರೂ ದಸರಾದಲ್ಲಿ ಜಂಬೂ ಸವಾರಿಯನ್ನು ಸಂಭ್ರಮದಿಂದ ಕಣ್ಣುಂಬಿಕೊಂಡಿದ್ದೇವೆ. ಆದರೆ ಈ ಜಂಬೂ ಸವಾರಿಗೆ ಬಳಕೆಯಾದ ಆನೆಗಳ ಕಣ್ಣಿನಲ್ಲಿ ಆ ಸಂಭ್ರಮಗಳಿದ್ದವೆ? ಆ ಜಂಬೂ ಸವಾರಿ ಸಂದರ್ಭದಲ್ಲಿ ಆನೆಗಳೇನಾದರೂ ಸಿಡಿದೆದ್ದರೆ ನಮ್ಮ ಸಂಭ್ರಮ ಗಳೆಲ್ಲ ನುಚ್ಚು ನೂರಾಗಬಹುದು. ಸುರಕ್ಷತೆಯ ದಸರಾ ಆಚರಣೆ ಇಂದಿನ ಅಗತ್ಯವಾ ಗಿದೆ. ಅದ್ದೂರಿ ಜಂಬೂಸವಾರಿಗಾಗಿ ಜನರ ಪ್ರಾಣವನ್ನು ಒತ್ತೆಯಿಡುವುದು ದುಸ್ಸಾಹಸವೇ ಸರಿ. ಆದುದರಿಂದ ದಸರಾ ಉತ್ಸವದಲ್ಲಿ ಆನೆಗಳ ಬಳಕೆಯನ್ನು ನಿಷೇಧಿಸುವ ಐತಿಹಾಸಿಕ ನಿರ್ಧಾರಕ್ಕೆ ಸರಕಾರ ಇನ್ನಾದರೂ ಮುಂದಾಗಬೇಕು. ಆನೆಗಳ ಮೇಲೆ ನಡೆಯುವ ದೌರ್ಜನ್ಯಗಳಿಗೂ, ಜಂಬೂಸವಾರಿಯ ಹೆಸರಿನಲ್ಲಿ ನಡೆಯುತ್ತಿರುವ ರಾಜ ಪ್ರಭುತ್ವದ ವೈಭವೀಕರಣಕ್ಕೂ ಈ ಮೂಲಕ ಏಕಕಾಲದಲ್ಲಿ ಕೊನೆಹಾಡಬೇಕಾಗಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟದಿಂದ 11 ಜನರು ಮೃತಪಟ್ಟಿದ್ದಾರೆ.
ನಾಯಕನಾಗಿ ಸತತ 2ನೇ ಶತಕ! ಇಂಗ್ಲೆಂಡ್ ನೆಲದಲ್ಲಿ ಇತಿಹಾಸ ಬರೆದ ಶುಭ್ಮನ್ ಗಿಲ್ ಈಗ ಹಲವು ದಾಖಲೆಗಳ ಸರದಾರ!
india Vs England 2nd Test - ಲೀಡ್ಸ್ ನಲ್ಲಿ ನಡೆದ ಪ್ರಥಮ ಟೆಸ್ಟ್ ನಲ್ಲಿ ಶತಕ ಗಳಿಸಿದ್ದ ಟೀ ಇಂಡಿಯಾ ನಾಯಕ ಶುಭ್ಮನ್ ಗಿಲ್ ಅವರು ಇಡೀಗ ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ಮೊದಲನೇ ದಿನವೇ ಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರ ಅಜೇಯ ಶತಕದ ಮುಂದೆ ಘಟಾನುಘಟಿ ಕ್ರಿಕೆಟಿಗರು ಈ ಹಿಂದೆ ರಚಿಸಿದ್ದ ಅನೇಕ ದಾಖಲೆಗಳು ಮೂಲೆ ಗುಂಪಾಗಿವೆ. ಇಂಗ್ಲೆಂಡ್ನಲ್ಲಿ ಹೆಚ್ಚು ಶತಕ ಬಾರಿಸಿದ ಭಾರತದ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಏಷ್ಯಾದ ಮೊದಲ ನಾಯಕ ಎಂಬ ಕೀರ್ತಿ ಸಹ ಅವರದ್ದಾಗಿದೆ.
Explained: ಎಲಾನ್ ಮಸ್ಕ್ ಬೆಂಬಲಕ್ಕೆ ಬಂದ ಚೀನಿಯರು: ಸಮತಾವಾದದ ʻಬಂಡವಾಳʼ ಯಾರು ಬಲ್ಲರು?
ಎಲ್ಲಾ ಮಾಯ ಅಂತಾರಲ್ಲ ಅದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ಪೇಸ್ಎಕ್ಸ್ ಮಾಲೀಕ ಎಲಾನ್ ಮಸ್ಕ್ ನಡುವಿನ ಜಗಳದಲ್ಲಿ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಒನ್ ಬಿಗ್ ಬ್ಯೂಟಿಫುಲ್ ಬಿಲ್ನಿಂದಾಗಿ ದೂರವಾಗಿರುವ ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್, ಇಡೀ ಜಗತ್ತೇ ನೋಡುವಂತೆ ಕಿತ್ತಾಡುತ್ತಿದ್ದಾರೆ. ಈ ಮಧ್ಯೆ ಎಲಾನ್ ಮಸ್ಕ್ ಅವರನ್ನು ಬೆಂಬಲಿಸಿ ಚೀನಿಯರು ವಿಬೋ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದು, ಇದು ಖುದ್ದು ಎಲಾನ್ ಮಸ್ಕ್ ಅವರನ್ನೇ ಆಶ್ಚರ್ಯಚಕಿತಗೊಳಿಸಿದೆ. ಇಲ್ಲಿದೆ ನೋಡಿ ಮಾಹಿತಿ.
Rain: ಮಳೆ.. ಮಳೆ.. ಸುರಿಯಲಿದೆ ಭಾರಿ ಭರ್ಜರಿ ಮಳೆ, ಕೊಡೆ ರೆಡಿ ಮಾಡಿ!
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ... ಹಿಂಗೆ ಮುಂಗಾರು ಮಳೆ ಅಬ್ಬರ ಕಂಡು ಜನರು ಕೂಡ ಫುಲ್ ಖುಷಿ ಖುಷಿಯಾಗಿದ್ದಾರೆ. ಯಾಕಂದ್ರೆ ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿಯಾಗಿ ಇದೀಗ ಮುಂಗಾರು ಮಳೆ ಬೀಳುತ್ತಿದ್ದು, ಜನರು ಕೂಡ ಭಾರಿ ಮಳೆ ಹಿನ್ನೆಲೆಯಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಕೂಡ ಮಾಡುತ್ತಿದ್ದಾರೆ. ಆದರೆ ಜೂನ್ &ಜುಲೈ ತಿಂಗಳಲ್ಲೇ ಮಿತಿಮೀರಿದ ಮಳೆ
Explained: ಸಿಎಂ ರೇಸ್ನಿಂದ ಹಿಂದೆ ಸರಿದರೇ ಡಿಕೆ ಶಿವಕುಮಾರ್?
ರಾಮನಗರ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಕೂಗು ಕೇಳಿಬಂದಿತ್ತು. ಆದರೆ, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ. ಡಿ.ಕೆ.ಶಿ. ಬೆಂಬಲಿಸಿದ ಶಾಸಕರಿಗೂ ನಿರಾಸೆಯಾಗಿದೆ. ರಾಮನಗರದ ಇಕ್ಬಾಲ್ ಹುಸೇನ್ ಮತ್ತು ಮಾಗಡಿಯ ಬಾಲಕೃಷ್ಣ, ಡಿ.ಕೆ.ಶಿ. ಪರ ಬ್ಯಾಟಿಂಗ್ ಮಾಡಿದ್ದರು. ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಮಾತ್ರ ಮೌನವಾಗಿದ್ದಾರೆ. ಸದ್ಯಕ್ಕೆ ಡಿಸಿಎಂ ಸಿಎಂ ರೇಸ್ನಿಂದ ಹಿಂದೆ ಸರಿದಿದ್ದಾರೆ.
ಬೆಂಗಳೂರು ಹಾಲು ಒಕ್ಕೂಟ (ಬಮುಲ್) ಚೆನ್ನೈಗೆ ಹಾಲು ಪೂರೈಸುವಲ್ಲಿ 21 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. 2019 ರಿಂದ 2023 ರವರೆಗೆ ನಡೆದ ಈ ವ್ಯವಹಾರದಲ್ಲಿ, ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಚೆನ್ನೈನ ಆರ್ಕೆಆರ್ ಡೇರಿ ಪ್ರಾಡಕ್ಟ್ಸ್ಗೆ ಗುತ್ತಿಗೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯಸ್ತಂಭನ - ಆಸ್ಪತ್ರೆಗಳಿಗೆ ದಾಂಗುಡಿಯಿಡುತ್ತಿರುವ ಜನ
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಹೃದಯಾಘಾತದಿಂದ 75 ಜನರು ಮೃತಪಟ್ಟಿದ್ದು ಆತಂಕ ಮೂಡಿಸಿದೆ. ಏಪ್ರಿಲ್ನಿಂದ ಜೂನ್ವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 22, 29 ಮತ್ತು 24 ಸಾವುಗಳು ಸಂಭವಿಸಿವೆ. ಜಿಲ್ಲಾಡಳಿತವು ಸಿಜೆ ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಮತ್ತು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 5 ರಿಂದ 10 ಹಾಸಿಗೆಗಳನ್ನು ಮೀಸಲಿಟ್ಟಿದೆ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 10 ಜಾಗತಿಕ ಪ್ರಶಸ್ತಿ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆಹಾರ, ಪಾನೀಯ ಮತ್ತು ಆತಿಥ್ಯ ವ್ಯವಸ್ಥೆಯಲ್ಲಿ ಜಾಗತಿಕ ಮಟ್ಟದಲ್ಲಿ 10 ಪ್ರಶಸ್ತಿಗಳನ್ನು ಗೆದ್ದು ಜಾಗತಿಕ ಮನ್ನಣೆ ಗಳಿಸಿದೆ. ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆದ ವಿಮಾನ ನಿಲ್ದಾಣದ ಆಹಾರ ಮತ್ತು ಪಾನೀಯ ಸಮ್ಮೇಳನದಲ್ಲಿ ಈ ಸಾಧನೆ ಮಾಡಲಾಗಿದೆ. ಒಂದೇ ಬಾರಿಗೆ ಹತ್ತು ಪ್ರಶಸ್ತಿಗಳನ್ನು ಪಡೆದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನೇಮಕಾತಿಯಲ್ಲಿ ತಾರತಮ್ಯ ನೀತಿ: ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ರಾಜೀನಾಮೆ ಎಚ್ಚರಿಕೆ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದಲಿತ ಪ್ರಾಧ್ಯಾಪಕರಿಗೆ ಶಾಸನಬದ್ಧ ಹುದ್ದೆಗಳ ನೇಮಕಾತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ವಿಶ್ವವಿದ್ಯಾಲಯದ ಹಲವು ನಿರ್ದೇಶಕರು ಕುಲಪತಿಗೆ ಪತ್ರ ಬರೆದಿದ್ದಾರೆ. ದಲಿತ ಪ್ರಾಧ್ಯಾಪಕರಿಗೆ ಮನ್ನಣೆ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ನಿರ್ದೇಶಕರು ಎಚ್ಚರಿಸಿದ್ದಾರೆ. ಈ ಹಿಂದೆ ಅನುಸರಿಸುತ್ತಿದ್ದ ನಿಯಮಗಳನ್ನು ಪಾಲಿಸುವಂತೆ ಅವರು ಒತ್ತಾಯಿಸಿದ್ದಾರೆ.
ಬೀದರ್ | ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಚಾಲಕರಿಬ್ಬರಿಗೆ ದಂಡ ವಿಧಿಸಿದ ನ್ಯಾಯಾಲಯ
ಬೀದರ್ : ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಇಬ್ಬರು ಚಾಲಕರಿಗೆ ಬಸವಕಲ್ಯಾಣದ ಜೆ.ಎಮ್.ಎಫ್.ಸಿ ನ್ಯಾಯಾಲಯವು ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ವಿರುದ್ದ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದೇಶ್ವರ್ ಅವರು ಡ್ರಿಂಕ್ & ಡ್ರೈವ್ ಅಡಿಯಲ್ಲಿ ಎರಡು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯವು ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಚಾಲಕರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿದೆ.
ಆಶಾ ಕಿರಣ ಯೋಜನೆಯ ಸಮಗ್ರ ಮೌಲ್ಯಮಾಪನ ನಡೆಸಲು ಮುಂದಾದ WHO
ಬೆಂಗಳೂರು : ಸಾರ್ವತ್ರಿಕ ಕಣ್ಣಿನ ಆರೋಗ್ಯ ಉತ್ತಮಗೊಳಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕರ್ನಾಟಕ ಸರಕಾರ ಜಾರಿಗೆ ತಂದ ಆಶಾ ಕಿರಣ ಯೋಜನೆಯನ್ನು ಸಮಗ್ರ ಮೌಲ್ಯಮಾಪನ ನಡೆಸಲು ಮುಂದಾಗಿದೆ. ಬುಧವಾರದಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿ ಡಾ.ರೊಡಿರಿಕೊ ಎಚ್. ಆಫ್ರಿನ್ ಅವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಪತ್ರ ಬರೆದಿದ್ದು, ರಾಜ್ಯ ಸರಕಾರ ಆಶಾ ಕಿರಣ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೇರೆ ರಾಜ್ಯಗಳಲ್ಲೂ ಈ ಯೋಜನೆ ಅನುಷ್ಠಾನ ಸಂಬಂಧ ಅಧ್ಯಯನಕ್ಕೆ ಅವಕಾಶ ನೀಡಬೇಕು ಎಂದಿದ್ದಾರೆ. ಸಮಗ್ರ ಕಣ್ಣಿನ ಆರೈಕೆಗಾಗಿ ಆಶಾ ಕಿರಣ ಮಾದರಿ ಯೋಜನೆಯಾಗಿದ್ದು, ಮನೆ ಬಾಗಿಲಿನಲ್ಲಿ ಕಣ್ಣಿನ ಆರೈಕೆ ಎಂಬ ಆಶಾ ಕಿರಣ ಪರಿಕಲ್ಪನೆ ಅನುಕರಣೀಯವಾಗಿದೆ. ಈ ನವೀನ ಮಾದರಿಯು, ಕುರುಡುತನವನ್ನು ತೊಡೆದುಹಾಕುವ ಮತ್ತು ರಾಜ್ಯಾದ್ಯಂತ ಸಮಗ್ರ ಕಣ್ಣಿನ ಆರೈಕೆ ಸೇವೆಗಳಿಗೆ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಶ್ಲಾಘಿಸಿದ್ದಾರೆ
ಪ್ರಜ್ವಲ್ ರೇವಣ್ಣಗೆ ಜಾಮೀನು ನೀಡಬಾರದು : ಹೈಕೋರ್ಟ್ನಲ್ಲಿ ರಾಜ್ಯ ಸರಕಾರ ವಾದ
ಬೆಂಗಳೂರು : ಆರೋಪಿ ಪ್ರಜ್ವಲ್ ರೇವಣ್ಣ ಬಹಳ ಬಲಾಢ್ಯ ವ್ಯಕ್ತಿ. ಆದರೆ ಸಂತ್ರಸ್ತೆ ಮನೆ ಕೆಲಸದ ಮಹಿಳೆ ಎಂಬುದನ್ನು ಪರಿಗಣಿಸಬೇಕು. ಆಶ್ರಯ ಯೋಜನೆಯಲ್ಲಿ ಮಂಜೂರಾಗಿದ್ದ ಮನೆಯಿಂದ ಹೊರಹಾಕಿಸಿದ್ದಾರೆ. ಹೀಗಾಗಿ ಜಾಮೀನು ನೀಡಬಾರದು ಎಂದು ರಾಜ್ಯ ಸರಕಾರ ಹೈಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಹೊಳೆನರಸೀಪುರ ಅತ್ಯಾಚಾರ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಜಾಮೀನು ಅರ್ಜಿಗೆ ಎಸ್ಪಿಪಿ ಪ್ರೊ.ರವಿವರ್ಮಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರಕರಣದ ವಿಚಾರಣೆಯನ್ನು ವಿಳಂಬಿಸಲು ಪ್ರಜ್ವಲ್ ರೇವಣ್ಣ ಯತ್ನಿಸಿದ್ದಾರೆ. ಈ ಪ್ರಕರಣದ ಸಾಕ್ಷ್ಯ ವಿಚಾರಣೆ ಆರಂಭವಾಗದಿರಲು ಪ್ರಜ್ವಲ್ ಕಾರಣವಾಗಿದ್ದಾರೆ. ಪ್ರಜ್ವಲ್ ವರ್ತನೆಯನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಒಂದಲ್ಲ ಒಂದು ಕಾರಣ ನೀಡಿ ಸಾಕ್ಷ್ಯ ವಿಚಾರಣೆ ಮುಂದೂಡಲು ಯತ್ನಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇವರ ನಡವಳಿಕೆ ದಾಖಲಿಸಿದೆ. ಹೀಗಾಗಿ ವಿಳಂಬದ ಕಾರಣಕ್ಕೆ ಪ್ರಜ್ವಲ್ಗೆ ಜಾಮೀನು ನೀಡದಂತೆ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.
ಬ್ಯಾಟರಿ ಚಾಲಿತ, ಮಿಥೆನಾಲ್, ಇಥೆನಾಲ್ ಇಂಧನದ ವಾಹನಗಳಿಗೆ ಪರವಾನಿಗೆ ಪಡೆಯುವಂತೆ ಆದೇಶ
ಬೆಂಗಳೂ : ರಾಜ್ಯದಲ್ಲಿ ಸಂಚರಿಸುವ ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೆ ಮೋಟಾರು ವಾಹನಗಳ ಕಾಯ್ದೆ ಅನ್ವಯ ಪರ್ಮಿಟ್ ಪಡೆಯಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬುಧವಾರ ಸರಕಾರ ಆದೇಶ ಹೊರಡಿಸಿದ್ದು, ಕಾನೂನು, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ತೆಗೆದುಕೊಳ್ಳಲಾಗಿದೆ. ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೆ ರಹದಾರಿ ಪಡೆಯುವುದರಿಂದ ವಿನಾಯತಿ ನೀಡಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದಿದೆ. ಹೊಸದಾಗಿ ನೋಂದಣಿಯಾಗುವ ಮತ್ತು ಈಗಾಗಲೇ ನೋಂದಣಿಯಾಗಿರುವ ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಇಥೆನಾಲ್ ಇಂಧನ ಬಳಸಿ ಇದುವರೆಗೆ ರಹದಾರಿ ಪಡೆಯದೆ ಸಂಚರಿಸುತ್ತಿರುವ ಎಲ್ಲ ಸಾರಿಗೆ ವಾಹನಗಳಿಗೆ ಸಂಬಂಧಿಸಿದ ಪರವಾನಿಗೆಯನ್ನು ಶುಲ್ಕರಹಿತವಾಗಿ ವಿತರಿಸಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ
ಗುಂಡ್ಲುಪೇಟೆ | ರಸ್ತೆಯಲ್ಲಿ 25 ಕೋತಿಗಳ ಕಳೇಬರ ಪತ್ತೆ
ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಸಾವಿನ ಪ್ರಕರಣದ ಬೆನ್ನಲ್ಲೇ ಇದೀಗ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಕೊಡಸೋಗೆ ರಸ್ತೆಯಲ್ಲಿ ಕೋತಿಗಳ ಕಳೇಬರ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಸುಮಾರು ಇಪ್ಪತ್ತೈದು ಕೋತಿಗಳು ಮೃತಪಟ್ಟಿದ್ದು, ಕೋತಿಗಳಿಗೆ ವಿಷವಿಕ್ಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಫರ್ ವಲಯದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಸುರತ್ಕಲ್: ಅಕ್ರಮ ಪೆಟ್ರೋಲ್ ದಂಧೆ ಪ್ರಕರಣ; ಓರ್ವ ಆರೋಪಿ ಸೆರೆ
ಸುರತ್ಕಲ್: ಅಕ್ರಮವಾಗಿ ಪೆಟ್ರೋಲ್ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಯಾರ್ಡ್ ಗೆ ದಾಳಿ ಮಾಡಿದ ಸುರತ್ಕಲ್ ಪೊಲೀಸರು ಓರ್ವ ಆರೋಪಿ ಸಹಿತ 450 ಲೀ. ಪೆಟ್ರೋಲ್ ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಉಪ್ಪಿನಂಗಡಿ ನಿವಾಸಿ ರವಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಎಂಬಲ್ಲಿ ಗ್ಯಾಸ್ ಸಾಗಾಟದ ಬುಲೆಟ್ ಟ್ಯಾಂಕರ್ ಗಳ ಯಾರ್ಡ್ ನಲ್ಲಿ ಈ ಅಕ್ರಮ ಪೊಟ್ರೋಲ್ ಮಾರಾಟ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ಆರೋಪಿ ಸಹಿತ ಸುಮಾರು 450ಲೀ. ಪೊಟ್ರೋಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
Vaibhav Suryavanshi: ಸಾಗರದಾಚೆ ಯುವ ಆಟಗಾರನ ಬ್ಯಾಟಿಂಗ್ \ವೈಭವ\: ಇಲ್ಲಿದೆ ದಾಖಲೆಗಳ ಪಟ್ಟಿ
ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಸಾಗರದಾಚೆ ತಮ್ಮ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ನಾರ್ಥಾಂಪ್ಟನ್ ಮೂರನೇ ಯುಥ್ ಏಕದಿನ ಪಂದ್ಯಕ್ಕೆ ಸಾಕ್ಷಯಾಯಿತು. ಈ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ, ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದರು. ಈ ಮೂಲಕ ಭಾರತದ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಸಾರಿ ಹೇಳಿದರು. ಮೊದಲು ಬ್ಯಾಟ್ ಮಾಡಿದ ಆತಿಥೇಯ
ಪಾಕಿಸ್ತಾನದ ಕ್ರಿಕೆಟಿಗರ ಯೂಟ್ಯೂಬ್ ಚಾನೆಲ್ ಗಳಿಗೆ ಮತ್ತೆ ಹಸಿರು ನಿಶಾನೆ: ನಿರ್ಬಂಧ ತೆರವು, ಭಾರತದಲ್ಲಿ ಲಭ್ಯ
ಹೊಸದಿಲ್ಲಿ : ಭಾರತ-ಪಾಕಿಸ್ತಾನ ಸಂಬಂಧಗಳ ನಡುವಿನ ಸಂಘರ್ಷದ ಮಧ್ಯೆ, ಕೆಲವು ಪಾಕಿಸ್ತಾನಿ ಕ್ರಿಕೆಟಿಗರ ಯೂಟ್ಯೂಬ್ ಚಾನೆಲ್ ಗಳು ಭಾರತದಲ್ಲಿ ಮತ್ತೆ ವೀಕ್ಷಣೆಗೆ ಲಭ್ಯವಾಗಿವೆ. ಶೋಯೆಬ್ ಅಖ್ತರ್, ಬಾಸಿತ್ ಅಲಿ ಮತ್ತು ರಶೀದ್ ಲತೀಫ್ ಅವರ ಚಾನೆಲ್ ಗಳಿಗೆ ಮೂರು ತಿಂಗಳ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು indianexpress ವರದಿ ಮಾಡಿದೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ, ಕೇಂದ್ರ ಸರ್ಕಾರ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ ಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಆ ಚಾನೆಲ್ ಗಳು ಸೇನೆ ಹಾಗೂ ದೇಶದ ಭದ್ರತಾ ಸಂಸ್ಥೆಗಳ ವಿರುದ್ಧ ಸುಳ್ಳು ಮಾಹಿತಿ ಹರಡಿದ್ದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿತ್ತು. ಗೃಹ ಸಚಿವಾಲಯದ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. 16 ಯೂಟ್ಯೂಬ್ ಚಾನೆಲ್ಗಳು ಇನ್ನೂ ನಿರ್ಬಂಧಿಸಲಾಗಿದೆ. ಡಾನ್ ನ್ಯೂಸ್ (1.96 ಮಿಲಿಯನ್ ಫಾಲೋವರ್ಸ್), ಸಮಾ ಟಿವಿ (12.7 ಮಿಲಿಯನ್ ಫಾಲೋವರ್ಸ್), ARY ನ್ಯೂಸ್ (14.6 ಮಿಲಿಯನ್ ಫಾಲೋವರ್ಸ್), ಜಿಯೋ ನ್ಯೂಸ್ (18.1 ಮಿಲಿಯನ್ ಫಾಲೋವರ್ಸ್), ಬೋಲ್ ನ್ಯೂಸ್ (7.85 ಮಿಲಿಯನ್ ಫಾಲೋವರ್ಸ್) ಮತ್ತು ಇತರ 11 ಚಾನೆಲ್ ಗಳಿಗೆ ಇನ್ನೂ ನಿಷೇಧಿಸಲಾಗಿದೆ. ಪಾಕಿಸ್ತಾನಿ ನಟಿಯರಾದ ಮಾವ್ರಾ ಹೊಕೇನ್ ಮತ್ತು ಸಬಾ ಕಮರ್ ಅವರ ಇನ್ಸ್ಟಾಗ್ರಾಂ ಖಾತೆಗಳು ಕೂಡಾ ಭಾರತದಲ್ಲಿ ಮತ್ತೆ ಲಭ್ಯವಾಗಿವೆ. ಮಂಗಳವಾರ, ಹಲವಾರು ಇನ್ಸ್ಟಾಗ್ರಾಮ್ ಬಳಕೆದಾರರು ಈ ಪ್ರೊಫೈಲ್ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.ಈ ನಡುವೆ, ದಿಲ್ಜಿತ್ ದೋಸಾಂಜ್ ಅಭಿನಯದ ಸರ್ದಾರ್ ಜಿ 3 ಚಿತ್ರದ ಭಾಗವಾಗಿರುವ ಹನಿಯಾ ಆಮಿರ್ ಅವರ ಪ್ರೊಫೈಲ್ ಗೆ ನಿಷೇಧ ಮುಂದುವರಿದಿದೆ. ಸರ್ದಾರ್ ಜಿ 3 ಚಿತ್ರವು ಭಾರತದಲ್ಲಿ ಬಿಡುಗಡೆಯಾಗದಿದ್ದರೂ, ವಿದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಒಸಾಕಾ: ಚೀನಾದ ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಿಂದ ಜಪಾನ್ ನ ಟೋಕಿಯೊ ನರಿಟಾ ವಿಮಾನ ನಿಲ್ದಾಣದತ್ತ ಹೊರಟಿದ್ದ ಜಪಾನ್ ಏರ್ಲೈನ್ಸ್ ಬೋಯಿಂಗ್ 737 (ಫ್ಲೈಟ್ JL8696) ವಿಮಾನವು ತೀವ್ರ ತಾಂತ್ರಿಕ ದೋಷವನ್ನು ಎದುರಿಸಿ, 26,000 ಅಡಿ ಎತ್ತರದಿಂದ 10,500 ಅಡಿಗೆ ಒಮ್ಮೆಲೇ ಇಳಿದಿರುವ ಭಯಾನಕ ಘಟನೆ ಜೂನ್ 30ರಂದು ನಡೆದಿದೆ ಎಂದು South China Morning Post ವರದಿ ಮಾಡಿದೆ. ವಿಮಾನವು ಜಪಾನ್ ಏರ್ಲೈನ್ಸ್ ಹಾಗೂ ಅದರ ಕಡಿಮೆ ವೆಚ್ಚದ ಅಂಗಸಂಸ್ಥೆ ‘ಸ್ಪ್ರಿಂಗ್ ಜಪಾನ್’ ನಡುವಿನ ಕೋಡ್ಶೇರ್ ಒಪ್ಪಂದದಡಿ ಕಾರ್ಯನಿರ್ವಹಿಸುತ್ತಿತ್ತು. ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಸ್ಥಳೀಯ ಸಮಯ ಸಂಜೆ 6:53ರ ಸುಮಾರಿಗೆ, ವಿಮಾನವು ಯಾನದ ಮಧ್ಯದಲ್ಲಿ ಹಠಾತ್ ತಾಂತ್ರಿಕ ದೋಷವನ್ನು ಎದುರಿಸಿತು. ಪರಿಣಾಮವಾಗಿ ಆಮ್ಲಜನಕ ಮಾಸ್ಕ್ಗಳನ್ನು ಬಿಡುಗಡೆ ಮಾಡಬೇಕಾಯಿತು. ಒಮ್ಮಲೇ ನಡೆದ ಈ ಘಟನೆಯಿಂದ ಪ್ರಯಾಣಿಕರು ಭಯಬೀತರಾದರು. ಕೆಲವರು ನಿದ್ರೆಯಿಂದ ಎಚ್ಚರಗೊಂಡು ನಡುಗಿದರೆ, ಇತರರು ತಮ್ಮ ಪ್ರೀತಿಪಾತ್ರರಿಗೆ ವಿದಾಯ ಸಂದೇಶಗಳನ್ನು, ಬ್ಯಾಂಕ್ ಪಿನ್ಗಳು ಮತ್ತು ವಿಮಾ ಮಾಹಿತಿಯಂತಹ ವೈಯಕ್ತಿಕ ವಿವರಗಳನ್ನು ಕಳುಹಿಸಲು ಪ್ರಾರಂಭಿಸಿದರು. ಈ ಕುರಿತಂತೆ, ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದ, ಆಮ್ಲಜನಕ ಮಾಸ್ಕ್ ಧರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೈಲಟ್ ತಕ್ಷಣ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ವಿಮಾನವನ್ನು ಒಸಾಕಾದ ಕನ್ಸೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಸ್ಥಳೀಯ ಸಮಯ ರಾತ್ರಿ 8:50 ಕ್ಕೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆಯು ಇತ್ತೀಚೆಗೆ ಬೋಯಿಂಗ್ ವಿಮಾನಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳಿಗೆ ಮತ್ತಷ್ಟು ತೀವ್ರತೆಯನ್ನು ನೀಡಿದೆ. ಕಳೆದ ತಿಂಗಳು ಅಹಮದಾಬಾದ್-ಲಂಡನ್ ಮಾರ್ಗದ ಬೋಯಿಂಗ್ ವಿಮಾನ ಅಪಘಾತದಲ್ಲಿ 270 ಮಂದಿ ಮೃತಪಟ್ಟಿದ್ದರು. A #JapanAirlines #flight from #Shanghai to #Tokyo made an emergency landing at Kansai Airport last night after a cabin depressurization alert. The #Boeing 737-800, carrying 191 people, landed safely. No injuries reported. #China #Japan pic.twitter.com/wCneZ3nkk0 — Shanghai Daily (@shanghaidaily) July 1, 2025
ಶರಾವತಿ ಸಂತ್ರಸ್ತರೆಂದು ನಕಲಿ ದಾಖಲೆ ಸೃಷ್ಟಿಸಿದ ಕುಟುಂಬ; 69 ಎಕರೆ ಅರಣ್ಯ ಭೂಮಿ ಅಕ್ರಮವಾಗಿ ಮಂಜೂರು!
ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂತ್ರಸ್ತರ ಸೋಗಿನಲ್ಲಿ ಒಂದೇ ಕುಟುಂಬವು 69 ಎಕರೆ ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. 1960ರಿಂದ 1978ರ ನಡುವೆ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಮೂಲ ಪಹಣಿಗಳನ್ನು ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಕೊಂಡಿರುವುದನ್ನು ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಅವರು ಸಾಗರ ತಾಲೂಕಿನ ಆನಂದಪುರದ ಎಂ.ಆರ್.ಷಣ್ಮುಖಪ್ಪ, ಎಂ.ಆರ್.ಗಣಪತಿ, ಮಂಜಪ್ಪಗೌಡ ಹಾಗೂ ಆನಂದಪುರ ನಾಡ ಕಚೇರಿಯ ಅಧಿಕಾರಿಗಳ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಜೂನ್ 25ರಂದು ದೂರು ಸಲ್ಲಿಸಿದ್ದು, ಅದೇ ದಿನ ಎಫ್ಐಆರ್ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಂಜಪ್ಪಗೌಡ ಅವರ ಮಕ್ಕಳಾದ ಷಣ್ಮುಖಪ್ಪ ಮತ್ತು ಗಣಪತಿ ಅವರು ಸಾಗರ ತಾಲೂಕಿನ ಆನಂದಪುರ ಹೋಬಳಿಯ ಮಲ್ಲಂದೂರು ಗ್ರಾಮದ ಸ.ನಂ.157ರಲ್ಲಿ 69 ಎಕರೆ ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬುದು ಆನಂದಪುರ ನಾಡಕಚೇರಿಯಲ್ಲಿ ಮೂಲ ಕಂದಾಯ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭ ಬೆಳಕಿಗೆ ಬಂದಿದೆ. ಮಲ್ಲಂದೂರು ಗ್ರಾಮದ ಆರ್.ಆರ್. 5 ಮತ್ತು 6ರ ದಾಖಲೆ ಶಿಥಿಲಗೊಂಡಿದ್ದು, ಸ.ನಂ.157ಕ್ಕೆ ಸಂಬಂಧಿಸಿದಂತೆ ಆರ್.ಆರ್. ದಾಖಲೆ ಪುನರ್ ನಿರ್ಮಾಣ ಮಾಡಿ 1960-1970, 1972-73, 1974-75 ಹಾಗೂ 1977-78ರ ಕೈಬರಹದ ಪಹಣಿಗಳನ್ನು ತಿದ್ದಿ ಪುನರ್ ನಿರ್ಮಾಣ ಮಾಡಿ ಎಂ.ಆರ್. 5-311/66-77ನ್ನು ಹೆಚ್ಚುವರಿಯಾಗಿ ನಮೂದಿಸಲಾಗಿದೆ. ಅಲ್ಲದೆ ಅನೇಕ ಕಂದಾಯ ದಾಖಲೆಗಳನ್ನು ತಿದ್ದುಪಡಿ ಮಾಡಿ ಮೂಲ ದಾಖಲೆಗಳನ್ನು ನಕಲಿ ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಎಂದು ನಮೂದಿಸಿ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಿಕೊಂಡಿದ್ದಾರೆ. ಆದರೆ, ಈ ಜಮೀನಿನ ಕಂದಾಯ ದಾಖಲೆಗಳನ್ನು ಯಾವ ಅವಧಿಯಲ್ಲಿ ಮತ್ತು ಯಾವ ಅಧಿಕಾರಿ, ಸಿಬ್ಬಂದಿ ಅವಧಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಹೀಗಾಗಿ ಇದರ ಬಗ್ಗೆ ನಿಖರವಾದ ತನಿಖೆಯ ಅಗತ್ಯ ಇದೆ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಅವರು ದೂರಿನಲ್ಲಿ ನಮೂದಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕ ಸಂಸ್ಥೆಯ 2000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಯತ್ನಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮೂಲಕ ಈ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಎಜೆಎಲ್ ಆರ್ಥಿಕವಾಗಿ ಸದೃಢವಾಗಿದ್ದರೂ, ಕಾಂಗ್ರೆಸ್ ಸಮಿತಿಯಿಂದ 90 ಕೋಟಿ ರೂ. ಸಾಲ ಪಡೆದಿದೆ ಎಂದು ಹೇಳಲಾಗಿದೆ.
ಕಾರ್ಮಿಕ ವಿರೋಧಿ ಕಾನೂನು ರದ್ದತಿಗೆ ಆಗ್ರಹಿಸಿ ಜು.9ಕ್ಕೆ ಅಖಿಲ ಭಾರತ ಮುಷ್ಕರ
ಬೆಂಗಳೂರು : ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜು.9ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕರ್ನಾಟಕದಲ್ಲೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ನಡೆಯಲಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಿಳಿಸಿದೆ. ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಿದೆ. ಶ್ರಮಜೀವಿಗಳ ಜೀವನ-ಜೀವನೋಪಾಯಗಳ ಮೇಲೆ ದಾಳಿ ಮಾಡುತ್ತಿದೆ. ಈ ಪರಿಸ್ಥಿತಿಗಳನ್ನು ಸುಧಾರಿಸಬೇಕಾದಂತಹ ಸರಕಾರ ತದ್ವಿರುದ್ಧವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಇವುಗಳನ್ನು ದುಡಿಯುವ ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿದೆ. ಆ ಮೂಲಕ ಹಾಲಿ ಇರುವ ದುಡಿಯುವ ಜನರ ಹಕ್ಕುಗಳು ಕಸಿಯಲು ಹೊರಟಿದೆ ಎಂದು ತಿಳಿಸಿದರು. ಕೆಲಸದ ಪರಿಸ್ಥಿತಿ, ಕಾರ್ಮಿಕರ ದುಡಿಯುವ ಅವಧಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಸಂಘಟನೆಯ ಹಕ್ಕು, ಹೋರಾಟದ ಹಕ್ಕು ಮತ್ತು ಮುಷ್ಕರಗಳ ಹಕ್ಕುಗಳನ್ನು ದಮನಗೊಳಿಸುವ ನೀತಿಗಳು ಕಾಯ್ದೆಯಲ್ಲಿ ಒಳಗೊಂಡಿದೆ. ಕೇಂದ್ರ ಸರಕಾರ ಕಾರ್ಪೋರೇಟ್ ವ್ಯವಹಾರಗಳನ್ನು ನಡೆಸುವರಿಗೆ ಕಾಯ್ದೆಗಳನ್ನು ಉಲ್ಲಂಘನೆ ಮಾಡಲು ಮುಕ್ತ ಅವಕಾಶ ಕಲ್ಪಿಸುತ್ತಿದೆ. ಅದನ್ನು ವ್ಯಾಪಾರ ಸುಲಭಗೊಳಿಸುವುದಾಕ್ಕಾಗಿ ಎಂದು ಸರಕಾರ ನಾಚಿಕೆಯಿಲ್ಲದೆ ಹೇಳುತ್ತಿದೆ ಎಂದು ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣ, ಆರೋಗ್ಯ ಇತರೆ ಕಲ್ಯಾಣ ಯೋಜನೆಗಳಿಗೆ ಬಜೆಟ್ ಅನುದಾನದಲ್ಲಿ ಕಡಿತ ಮಾಡಲಾಗಿದೆ. ರೈತರಿಗೆ ಸಿ2 ಪ್ಲಸ್ 50 ಆಧಾರಿತ ಕನಿಷ್ಠ ಬೆಂಬಲ ಬೆಲೆಯ ಜಾರಿಗೆ ಯಾವುದೇ ಸೂಚನೆಗಳನ್ನು ನೀಡದೇ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಗೆ ಕೇಂದ್ರ ಸರಕಾರ ಮುಂದಾಗಿದೆ. ಖಾಸಗಿಕರಣ ನೀತಿ ಮುಂದುವರಿಸಿರುವ ಕೇಂದ್ರ ಸರಕಾರ ರಾಷ್ಟ್ರೀಯ ನಗದಿಕರಣ ಪೈಪ್ಲೈನ್ ಯೋಜನೆ ಮುಂದುವರಿಸಿದೆ. ಬಾಹ್ಯಾಕಾಶ, ರಕ್ಷಣಾ ವಲಯ, ವಿದ್ಯುತ್ ವಲಯ ದೂರ ಸಂಪರ್ಕ ಬ್ಯಾಂಕ್ ಮತ್ತು ವಿಮೆ ಕ್ಷೇತ್ರದಲ್ಲಿ ಖಾಸಗಿಕರಣದ ಸುನಾಮಿಯನ್ನೇ ಸೃಷ್ಟಿಸಿದೆ ಎಂದರು. ಈ ಎಲ್ಲ ಬೇಡಿಕೆ ಒತ್ತಾಯಕ್ಕಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ರಾಜ್ಯದಲ್ಲಿಯೂ ಮುಷ್ಕರವನ್ನು ಯಶಸ್ವಿಗೊಳಿಸಲು ಈಗಾಗಲೇ ರಾಜ್ಯ ಸಮಾವೇಶ ಜಿಲ್ಲಾ ಸಮಾವೇಶಗಳನ್ನು ಮಾಡಲಾಗಿದೆ. ಮುಷ್ಕರದ ನೋಟೀಸನ್ನು ನೀಡಲಾಗಿದೆ. ರಾಜ್ಯದಾದ್ಯಂತ ಕೈಗಾರಿಕಾ ಕಾರ್ಮಿಕರಲ್ಲಿ, ಸ್ಕೀಂ ಮತ್ತು ಗಾರ್ಮೆಂಟ್ಸ್ ಕಾರ್ಮಿಕರಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಸಮಿತಿ ಮುಖಂಡರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಐಯುಟಿಯುಸಿ ಕೆ.ವಿ.ಭಟ್, ಐಎನ್ಟಿಯುಸಿ ಶಾಮಣ್ಣ ರೆಡ್ಡಿ, ಸಿಐಟಿಯು ಮಹಾಂತೇಶ್, ಎಐಟಿಯುಸಿ ವಿಜಯ ಭಾಸ್ಕರ್, ಎಐಸಿಸಿಟಿಯು ಅಪ್ಪಣ್ಣ, ಎಸ್ಎಮ್ಎಸ್ ನಾಗನಾಥ್, ಟಿಯುಸಿಸಿ ಜಿ.ಆರ್.ಶಿವಶಂಕರ್, ಎನ್ಸಿಎಲ್ ರವಿ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ | ಹೊನುಗುಂಟ ಗ್ರಾಮಕ್ಕೆ ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ
ಕಲಬುರಗಿ: ಹೊನುಗುಂಟ ಗ್ರಾಮ ಪಂಚಾಯತ್ ಗೆ ಕುಡಿಯುವ ನೀರು ಹಾಗೂ ಶೌಚಾಲಯ ಮೂಲ ಸೌಲಭ್ಯ ಒದಗಿಸಲು ಒತ್ತಾಯಿಸಿ ಬುಧವಾರ ತಹಶೀಲ್ ಕಚೇರಿ ಎದುರುಗಡೆ ಎಐಡಿವೈಓ ಯುವಜನ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್ ಹೆಚ್ ಮಾತನಾಡಿ, ಹೊನಗುಂಟ ಗ್ರಾಮದಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಪಂಚಾಯಿತಿಯಲ್ಲಿ 8 ತಿಂಗಳುಗಳಿಂದ ಪಿಡಿಓ ಇಲ್ಲ ಮತ್ತು ಕಳೆದ ಎರಡು ವಾರಗಳಿಂದ ಕಾರ್ಯದರ್ಶಿ ಇಲ್ಲದೇ ಇರುವುದರಿಂದ ಊರಿನ ಸಮಸ್ಯೆಯನ್ನು ಹೇಳಿಕೊಳ್ಳಲು ಸಾಧ್ಯವಾಗುತಿಲ್ಲ ಎಂದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು. ಸರಿಯಾದ ನೀರಿನ ವ್ಯವಸ್ಥೆ ಮತ್ತು ಬೀದಿ ದೀಪಗಳಿಲ್ಲ , ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ, ರೋಗ ಹರಡುವ ಭಿತ್ತಿಯಲ್ಲಿದ್ದಾರೆ. ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಗ್ರಾಮದಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು. ಗ್ರೇಡ್ 2 ತಶೀಲ್ದಾರರಾದ ಗುರುರಾಜ್ ಸಂಗವಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನೆ ಪತ್ರವನ್ನು ಸ್ವೀಕರಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ್ ರಾವೂರ್ ನಾಳೆ ಹುನುಗುಂಟ ಗ್ರಾಮಕ್ಕೆ ಆಗಮಿಸಿ ಎಲ್ಲ ಸಮಸ್ಯೆಗಳು ಆಲಿಸಿ ಬಗೆಹರಿಸಲು ಪ್ರಯತ್ನ ಮಾಡುವುದಾಗಿ ಭರವಸೆಯನ್ನು ನೀಡಿದರು. ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ, ಕಾರ್ಯದರ್ಶಿಗಳಾದ ರಮೇಶ್ ದೇವಕರ್, ದೇವರಾಜ್ ರಾಜವಾಳ ಮಾತನಾಡಿದರು. ಈ ಹೊರಾಟದಲ್ಲಿ ರಘು ಪವಾರ್ ಸಿದ್ದು ಚೌದರಿ ಗ್ರಾಮದ ಶಿವು ಬುರ್ಲಿ, ಚಂದ್ರಾಮ ಮರಗೋಳ, ದತ್ತು ಪೂಜಾರಿ, ದೀಪಣ್ಣ, ಅಶ್ವಿನಿ, ಮೌನೇಶ್, ರಾಜವಾಳ, ಶಂಕರ್ ಭಜಂತ್ರಿ ಇನ್ನಿತರರು ಭಾಗವಹಿಸಿದ್ದರು.
ಕಲಬುರಗಿ | ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸಿ ತಾಣವನ್ನಾಗಿಸುವ ನಿರ್ಧಾರ ಕಾರ್ಯರೂಪಕ್ಕೆ ತರಲು ಮನವಿ
ಕಲಬುರಗಿ: ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದ ಸೂರ್ಯನಂದಿ ಬೆಟ್ಟದಲ್ಲಿರುವ ಸದ್ಗುರು ರೂಪರಹಿತ ಮಾತಾ ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಿದ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ನಿರ್ಧಾರ ಸ್ವಾಗತಾರ್ಹ, ಈ ಬಗ್ಗೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಗಮನ ಸೆಳೆಯುವಂತೆ ಆಗ್ರಹಿಸಿ ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ ಮಾತಾ ಟ್ರಸ್ಟ್ ನ ಟ್ರಸ್ಟಿಗಳ ನಿಯೋಗವು ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಕಳೆದ ಮಾರ್ಚ್ ತಿಂಗಳಲ್ಲಿ ಬಜೆಟ್ ಅಧಿವೇಶನದಲ್ಲಿ ಮೇಲ್ಮನೆ ಕಲಾಪದಲ್ಲಿ ಎಂಎಲ್ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ಡಾ.ಸೈಬಣ್ಣ ತಳವಾರ ಮತ್ತಿತರರು ಸೇರಿ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸಿ ತಾಣವನ್ನಾಗಿ, ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಬಗ್ಗೆ ಧ್ವನಿ ಎತ್ತಿರುವುದು ಅಭಿನಂದನಾರ್ಹ. ಕಳೆದ ಎರಡ್ಮೂರು ದಶಕಗಳಿಂದಲ್ಲೂ ಭಕ್ತರು ಆಳುವ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಾ ಬಂದಿದ್ದರೂ ಫಲಪ್ರದವಾಗಲಿಲ್ಲ. ಸಚಿವ ಹೆಚ್.ಕೆ. ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾಣಿಕೇಶ್ವರಿಯವರ ಪರಮ ಭಕ್ತರಾಗಿರುವ ಹಿನ್ನೆಲೆಯಲ್ಲಿ ಅತೀವ ಆಸಕ್ತಿವಹಿಸಿ ದಿಟ್ಟ ಕ್ರಮ ಕೈಗೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನಿಯೋಗ ತಿಳಿಸಿದೆ. ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸಿ, ತುಳಿತಕ್ಕೊಳಗಾದ ಸಮಾಜಕ್ಕೆ ನ್ಯಾಯ ಒದಗಿಸಿಕೊಡುತ್ತೇನೆ. ಮಾತಾ ಮಾಣಿಕೇಶ್ವರಿ ಆಶ್ರಮ ಸಮಗ್ರ ಅಭಿವೃದ್ಧಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಒತ್ತಾಯಿಸಿದಲ್ಲದೆ, ಅಭಿವೃದ್ಧಿ ಕಾಮಗಾರಿಗಳಿಗಾಗಿ ಶೀಘ್ರ ಮುಹೂರ್ತ ನಿಗದಿಪಡಿಸಿ ಆಮಂತ್ರಿಸುವುದಾಗಿ ಕಮಕನೂರ ಭರವಸೆ ನೀಡಿದರು. ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಟ್ರಸ್ಟಿಗಳಾದ ಸಿದ್ರಾವಪ್ಪ ಸಣ್ಣೂರಕರ್, ಹಣಮಂತ ಮಡ್ಡಿ, ಕೃಷ್ಣಪ್ಪ ಮಾಸ್ಟರ್, ತುಳಜಪ್ಪ ಡೊಣ್ಣೂರ್, ಸೂರ್ಯಕಾಂತ ಅವರಾದಿ, ಬಾಬುರಾವ ಕೋಬಾಳ, ವಿಜಯಕುಮಾರ ಹದಗಲ್, ರಾಯಪ್ಪ ಹೊನಗುಂಟಿ, ಅರ್ಜುನ ಜಮಾದಾರ್, ಶಿವಾನಂದ ಹೊನಗುಂಟಿ, ಶಿವಕುಮಾರ ತಾವರಗೇರಾ, ಮಾಣಿಕರಾಜ, ರಾಜು ಸೊನ್ನ ಸೇರಿ ಅನೇಕರಿದ್ದರು.
ಜು.4: ಕದ್ರಿ, ಬಂಟ್ಸ್ಹಾಸ್ಟೆಲ್, ಲೈಟ್ಹೌಸ್ ಹಿಲ್ ನಲ್ಲಿ ವಿದ್ಯುತ್ ನಿಲುಗಡೆ
ಮಂಗಳೂರು, ಜು.2: ಕದ್ರಿ ಉಪಕೇಂದ್ರದಿಂದ ಹೊರಡುವ ಬಂಟ್ಸ್ ಹಾಸ್ಟೆಲ್ ಮತ್ತು ಲೈಟ್ಹೌಸ್ ಹಿಲ್ ರೋಡ್ ಫೀಡರ್ಗಳ ವ್ಯಾಪ್ತಿಯಲ್ಲಿ ಜು.4 ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಜಾರ್ಜ್ ಮಾರ್ಟಿಸ್ ರಸ್ತೆ, ಮಲ್ಲಿ ಕಾಂಪೌಂಡ್, ಕ್ರಿಸ್ಟಲ್ ಬಾಗ್, ಸಿಟಿ ಹಾಸ್ಪಿಟಲ್, ಕಾಮತ್ ನರ್ಸಿಂಗ್ ಹೋಂ, ಆರ್ಯ ಸಮಾಜ ರಸ್ತೆ, ಪ್ಲಾಂಟರ್ಸ್ ಲೇನ್, ಬಂಟ್ಸ್ ಹಾಸ್ಟೆಲ್, ಪತ್ರಾವೋ ಲೇನ್, ವುಡ್ ಲ್ಯಾಂಡ್, ಗೋಲ್ಡ್ಫಿಂಚ್, ಜ್ಯೋತಿ ಟಾಕೀಸ್, ಲೈಟ್ ಹೌಸ್ ಹಿಲ್, ಲೇಡಿಸ್ ಕ್ಲಬ್ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಬೀದರ್ | ಪಂಡರಗೇರಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಿದ ಅಬಕಾರಿ ಪೊಲೀಸರು
ಬೀದರ್ : ಹುಮನಾಬಾದ್ ಮತಕ್ಷೇತ್ರ ಮತ್ತು ಬಸವಕಲ್ಯಾಣ ತಾಲೂಕಿನ ಪಂಡರಗೇರಾ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ಅಬಕಾರಿ ಇಲಾಖೆಯ ಪೊಲೀಸರು ತಡೆಗಟ್ಟಿದ್ದಾರೆ. ಪಂಡರಗೇರಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದೆ. ಊರಲ್ಲಿನ ಕೆಲ ಪಾನ್ ಶಾಪ್ ಮತ್ತು ಇತರ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದಾಗಿ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ಹೆಣ್ಣುಮಕ್ಕಳು ಮತ್ತು ಸಾರ್ವಜನಿಕರು ಓಡಾಡುವ ರಸ್ತೆಯ ಪಕ್ಕದಲ್ಲಿಯೇ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದಾಗಿ ಎಲ್ಲರಿಗೂ ಕಿರಿಕಿರಿ ಉಂಟಾಗುತ್ತಿದೆ. ತಕ್ಷಣವೇ ಗ್ರಾಮದಲ್ಲಿನ ಮದ್ಯ ಮಾರಾಟವನ್ನು ತಡೆಗಟ್ಟಬೇಕು ಎಂದು ಮಂಗಳವಾರ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ್ದರು. ಇದರ ಪರಿಣಾಮವಾಗಿ ಇಂದು ಗ್ರಾಮಕ್ಕೆ ಅಬಕಾರಿ ಪೊಲೀಸರು ಆಗಮಿಸಿ ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟವನ್ನು ತಡೆದಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿಯೂ ಕೂಡ ಅಕ್ರಮ ಮದ್ಯ ಮಾರಾಟ ಮಾಡಕೂಡದು ಎಂದು ಗ್ರಾಮದಲ್ಲಿ ಡಂಗುರ ಸಾರಿ ತಿಳಿಸಲಾಗಿದೆ. ಇದರಿಂದಾಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಐಪಿಎಸ್ ಅಧಿಕಾರಿ ಅಮಾನತು ಆದೇಶ ವಿಚಾರ | ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದೇವೆ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಜು.2: ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ಆದೇಶ ಸಂಬಂಧ ಸಿಎಟಿ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸರಕಾರದ ಅಮಾನತು ಆದೇಶ ಸರಿ ಇದೆ ಎನ್ನುವುದು ನಮ್ಮ ವಾದ, ಹೀಗಾಗಿ, ಸಿಎಟಿ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು. ಬಳ್ಳಾರಿ ಜೈಲಿನಲ್ಲಿ ಕೈದಿಗಳ ಗದ್ದಲ, ಫೋಟೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಮತ್ತೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ ಎಂದು ಅವರು ಹೇಳಿದರು. ಸುರ್ಜೇವಾಲ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುರ್ಜೇವಾಲಾ ಅವರು ನಿನ್ನೆ ಬರುವುದಕ್ಕೆ ಹೇಳಿದ್ದರು. ಆದರೆ, ನನಗೆ ನಿನ್ನೆ ಭೇಟಿ ಮಾಡಲು ಆಗಲಿಲ್ಲ. ಅದಕ್ಕಾಗಿ ಇವತ್ತು ಬುಧವಾರ ಸಂಜೆ ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ ಎಂದು ಅವರು ತಿಳಿಸಿದರು. ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಸಿಬಿಐ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದೇ ಸಂಸ್ಥೆಯಿಂದ ತನಿಖೆ ಆಗಲಿ. ಅದಕ್ಕೆ ನಮ್ಮ ತಕರಾರು ಇಲ್ಲ ಎಂದು ಅವರು ಉಲ್ಲೇಖಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ದೂರ ಶಿಕ್ಷಣ: ಅರ್ಜಿ ಅಹ್ವಾನ
ಮಂಗಳೂರು: ಪದವಿ ಶಿಕ್ಷಣದಿಂದ ವಂಚಿತರಾಗಿರುವ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಂದ 2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ದೂರ ಶಿಕ್ಷಣ ಮಾದರಿಯಲ್ಲಿ ಪದವಿ/ಸ್ನಾತ್ತಕೋತ್ತರ ಪದವಿ/ಡಿಪ್ಲೊಮಾ ಸರ್ಟಿಫಿಕೆಟ್ ಕೋರ್ಸ್ಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 25 ಕೊನೆಯ ದಿನವಾಗಿದೆ. ವಿದ್ಯಾರ್ಥಿಯು ನೇರವಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಅಡ್ಮಿಶನ್ ಲಿಂಕ್ (https://minority.ksouportal.com) ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಇಲಾಖೆಯ ವೆಬ್ಸೈಟ್ ಅಥವಾ ಸಹಾಯವಾಣಿ: 9900667916, 9113512565, 9611418726, 9900509959, 9035395137, 9900509959 ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ದ.ಕ.ಜಿಲ್ಲಾ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿ ಯೋಜನೆಗಳ ಪರಿಶೀಲನೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ
ಬೆಂಗಳೂರು : ಅಭಿವೃದ್ಧಿ ಯೋಜನೆಗಳ ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ನಡೆಸಿ ಸರಕಾರಕ್ಕೆ ವರದಿ ನೀಡಲು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಮಮತಾ ಶರ್ಮ ಎಸ್.ಆದೇಶ ಹೊರಡಿಸಿದ್ದಾರೆ. ಹರ್ಷ ಗುಪ್ತ-ಬೆಂಗಳೂರು ನಗರ, ಡಾ.ಪಿ.ಸಿ.ಜಾಫರ್- ಬೆಂಗಳೂರು ಗ್ರಾಮಾಂತರ, ವಿ.ರಶ್ಮಿ ಮಹೇಶ್- ಆಮಲಾನ್ ಆದಿತ್ಯ ಬಿಸ್ವಾಸ್-ಚಿತ್ರದುರ್ಗ, ಡಾ.ಏಕ್ರೂಪ್ ಕೌರ್-ಕೋಲಾರ, ವಿಫುಲ್ ಬನ್ಸಾಲ್-ಬೆಳಗಾವಿ ಹಾಗೂ ಡಾ.ಎನ್.ಮಂಜುಳಾ ಚಿಕ್ಕಬಳ್ಳಾಪುರ. ಬಿ.ಬಿ.ಕಾವೇರಿ-ಶಿವಮೊಗ್ಗ, ಡಾ.ಶಮ್ಲಾ ಇಕ್ಬಾಲ್-ದಾವಣಗೆರೆ, ಡಾ.ಎಸ್.ಸೆಲ್ವ ಕುಮಾರ್-ಮೈಸೂರು, ವಿ.ಅನ್ಬುಕುಮಾರ್-ಮಂಡ್ಯ, ಡಾ.ಎಂ.ವಿ.ವೆಂಕಟೇಶ-ಚಾಮರಾಜನಗರ, ನವೀನ್ ರಾಜ್ ಸಿಂಗ್-ಹಾಸನ, ರಾಜೇಂದ್ರ ಕುಮಾರ್ ಕಟಾರಿಯಾ-ಚಿಕ್ಕಮಗಳೂರು, ಡಾ.ಎನ್.ವಿ.ಪ್ರಸಾದ್-ಕೊಡಗು. ರೋಹಿಣಿ ಸಿಂಧೂರಿ ದಾಸರಿ-ಉಡುಪಿ, ತುಳಸಿ ಮದ್ದಿನೇನಿ-ದಕ್ಷಿಣ ಕನ್ನಡ, ದೀಪ ಚೋಳನ್-ತುಮಕೂರು, ಡಾ.ವಿ.ರಾಮ್ಪ್ರಸಾತ್ ಮನೋಹರ್-ಧಾರವಾಡ, ರಮಣಚೌಧರಿ- ಗದಗ, ಉಜ್ವಲ್ ಕುಮಾರ್ ಘೋಷ್-ವಿಜಯಪುರ, ಸುಷ್ಮಾ ಗೋಡಬೋಲೆ-ಉತ್ತರ ಕನ್ನಡ, ಮೊಹಮ್ಮದ್ ಮೊಹಿಸಿನ್-ಬಾಗಲಕೋಟೆ. ಪಂಕಜ್ ಕುಮಾರ್ ಪಾಂಡೆ-ಕಲಬುರ್ಗಿ, ಮನೋಜ್ ಜೈನ್-ಯಾದಗಿರಿ, ರಿತೇಶ್ ಕುಮಾರ್ ಸಿಂಗ್-ರಾಯಚೂರು, ಕೆ.ಪಿ.ಮೋಹನ್ ರಾಜ್-ಕೊಪ್ಪಳ, ಡಾ.ಕೆ.ವಿ.ತ್ರಿಲೋಕ್ ಚಂದ್ರ-ಬಳ್ಳಾರಿ, ಡಿ.ರಂದೀಪ್- ಬೀದರ್, ಡಾ.ಆರ್.ವಿಶಾಲ್-ಹಾವೇರಿ ಹಾಗೂ ಸಮೀರ್ ಶುಕ್ಲಾ-ವಿಜಯನಗರ.
ಬಳ್ಳಾರಿ | ಪೊಲೀಸ್ ಸಂಚಾರಿ ಜಾಗೃತಿ ವಾಹನಕ್ಕೆ ಎಸ್ಪಿ ಡಾ.ಶೋಭಾರಾಣಿ ವಿ.ಜೆ. ಚಾಲನೆ
ಬಳ್ಳಾರಿ : ಜಿಲ್ಲಾ ಪೊಲೀಸ್ ಮತ್ತು ಮಿನೆರಾ ಸ್ಟೀಲ್ ಆಂಡ್ ಪವರ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಸಿಎಸ್ಆರ್ ಯೋಜನೆಯಡಿ ಜಿಲ್ಲೆಯಾದ್ಯಂತ ಜನಸಂದಣಿ ಇರುವ ಸ್ಥಳಗಳಲ್ಲಿ ಸಂಚರಿಸಿ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಸಂಚಾರಿ ಜಾಗೃತಿ ವಾಹನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಅಪರಾಧಗಳ ನಿಯಂತ್ರಣ ಮತ್ತು ಮಹಿಳಾ ಹಾಗೂ ಮಕ್ಕಳ, ಹಿರಿಯ ನಾಗರಿಕರ ಸುರಕ್ಷತೆ, ರಸ್ತೆ ಸುರಕ್ಷತೆ, ಸ್ವತ್ತಿನ ಅಪರಾಧಗಳ ನಿಯಂತ್ರಣ, ಮಾದಕ ದ್ರವ್ಯ ಸೇವನೆ ದುಷ್ಪರಿಣಾಮ, ಸೈಬರ್ ವಂಚನೆ, ಜಾತಿ ನಿಂದನೆ ಸೇರಿದಂತೆ ಮುಂತಾದ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಸುರಕ್ಷತಾ ಕ್ರಮಗಳ ಕುರಿತು ಸಂಚಾರಿ ಜಾಗೃತಿ ವಾಹನವು ಜಾಗೃತಿ ಮೂಡಿಸಲಿದೆ ಎಂದರು. ಇದೇ ವೇಳೆ ವಾಹನ ಸವಾರರ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿಯವರಿಗೆ ಉಚಿತ ಹೆಲ್ಮೆಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಕುಮಾರ್, ನವೀನ್ ಕುಮಾರ್, ಮಿನೆರಾ ಸ್ಟೀಲ್ಸ್ ಅಂಡ್ ಪವರ್ ಪ್ರೆöÊವೇಟ್ ಲಿಮಿಟೆಡ್ನ ವ್ಯವಸ್ಥಾಪಕ ಟಿ.ಹನುಮಂತರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕಸಾಪ ಕಾರ್ಯ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಲು ಅಧಿಕಾರಿ ನೇಮಕ
ಬೆಂಗಳೂರು : ಕಸಾಪ ಕಾರ್ಯ ಚಟುವಟಿಕೆ ಮತ್ತು ಹಣಕಾಸು ನಿರ್ವಹಣೆಯ ಪಾರದರ್ಶಕತೆಯ ಬಗ್ಗೆ ವಿಚಾರಣೆ ನಡೆಸಲು ಸಹಕಾರ ಸಂಘಗಳ ಉಪನಿಬಂಧಕ ಪಿ.ಶಶಿಧರ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಿ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳು ಆದೇಶ ನೀಡಿದ್ದಾರೆ. ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 9 ಮತ್ತು 10 ರನ್ವಯ 2022-23ರಿಂದ ಇದುವರೆಗೂ ಅನುಮೋದಿಸಿರುವ ತಿದ್ದುಪಡಿಯ ಬಗ್ಗೆ ಪರಿಶೀಲಿಸಬೇಕು. ಸಂಘದ ನಿಯಮ-ನಿಬಂಧನೆಯ ಪ್ರಕಾರ ಆಯ್ಕೆಗೊಂಡಿರುವ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ನಿಯದು ಬಾಹಿರವಾಗಿ ಹಾಲಿ ಅಧ್ಯಕ್ಷರು ನೋಟೀಸ್ ಜಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಬೇಕು. 2022-23ನೇ ಸಾಲಿನಿಂದ ಇದುವರೆಗೂ ಕಸಾಪಕ್ಕೆ ಸರಕಾರ ಮತ್ತು ಇತರೆ ಮೂಲಗಳಿಂದ ಸಂಗ್ರಹವಾಗಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೇ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. 2022-23ನೇ ಸಾಲಿನಿಂದ ಇದುವರೆಗೂ ಕಸಾಪದವರು ವಾಹನಗಳನ್ನು ಖರೀದಿಸಿರುವ ಮತ್ತು ಮಾರಾಟ ಮಾಡಿದಲ್ಲಿ ಮಾಡಿರುವ ಹಣದ ದುರುಪಯೋಗದ ಬಗ್ಗೆ ಪರಿಶೀಲಿಸುವುದು. 2022-23ನೇ ಸಾಲಿನಿಂದ ಇದುವರೆಗೂ ಕಟ್ಟಡ ನಿರ್ಮಾಣ ಮತ್ತು ನವೀಕರಣದಲ್ಲಿನ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸುವುದು ಎಂದು ನಿರ್ದೇಶನ ನೀಡಿದ್ದಾರೆ. ಕಸಾಪದಿಂದ ಹಾವೇರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ಸಲ್ಲಿಸದೇ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸಬೇಕು. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಇಲಾಖೆ ಆಡಿಟ್ ವರದಿಯಲ್ಲಿ ಆಕ್ಷೇಪಿಸಿರುವ ಅಂಶಗಳಿಗೆ ಅನುಪಾಲನಾ ವರದಿ ಸಲ್ಲಿಸದೇ ಇರುವ ಬಗ್ಗೆ ಪರಿಶೀಲಿಸಬೇಕು. ಸಂಘದ ಆಡಳಿತ ಮಂಡಳಿ ನಿರ್ಣಯಗಳನ್ನು ಸಂಘದ ನಿಯಮ ನಿಬಂಧನೆಗೆ ವಿರುದ್ಧವಾಗಿ ತಮ್ಮ ಇಚ್ಛಾನುಸಾರ ದಾಖಲಿಸಿರುವ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಸಂಘದ ಹಣವನ್ನು ಅಧ್ಯಕ್ಷರ ಕುಟುಂಬ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮಬಾಹಿರವಾಗಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಬೇಕು. ಸಂಘದ ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್)ನ್ನು ನೀಡುವಲ್ಲಿ ಆಗಿರುವ ಹಣದ ದುರುಪಯೋಗದ ಬಗ್ಗೆ ಪರಿಶೀಲಿಸಬೇಕು. 2022-23ನೇ ಸಾಲಿನಿಂದ ಇದುವರೆಗೂ ಸಂಘದಲ್ಲಿನ ಸಿಬ್ಬಂದಿ ನೇಮಕಾತಿ ನಿಯಮಬದ್ಧವಾಗಿ ನಡೆದಿರುವ ಬಗ್ಗೆ ಪರಿಶೀಲಿಸುವುದು. 2022-23ನೇ ಸಾಲಿನಿಂದ ಇದುವರೆಗೂ ಸಂಘದಲ್ಲಿ ಸಂಗ್ರಹವಾಗಿರುವ ಸಿ.ಎಸ್.ಆರ್ ಅನುದಾನದ ಹಣ ದುರುಪಯೋಗದ ಬಗ್ಗೆ ಪರಿಶೀಲಿಸುವುದು. ಸಂಘವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 11ರಡಿ ಪ್ರತಿ ವರ್ಷ ನಡೆಸಿರುವ ವಾರ್ಷಿಕ ಸರ್ವ ಸದಸ್ಯರ ಬಗ್ಗೆ ಪರಿಶೀಲಿಸುವುದು ಎಂದು ತಿಳಿಸಿದ್ದಾರೆ.
ದ.ಕ. ಜಿಲ್ಲೆ| 6 ತಿಂಗಳಲ್ಲಿ 85 ಮಂದಿ ಹೃದಯಾಘಾತಕ್ಕೆ ಬಲಿ
ಮಂಗಳೂರು, ಜು.2: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ತಿಂಗಳಲ್ಲಿ 580 ಮಂದಿಗೆ ಹೃದಯಾಘಾತವಾಗಿದ್ದು, ಈ ಪೈಕಿ 85 ಮಂದಿ ಮೃತಪಟ್ಟಿದ್ದಾರೆ. ‘ವಾರ್ತಾಭಾರತಿ’ಗೆ ಮಾಹಿತಿ ನೀಡಿರುವ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಅವರು ಈ ಬಗ್ಗೆ ಆತಂಕಪಡಬೇಕಾಗಿಲ್ಲ. ಜೀವನ ಶೈಲಿಯಲ್ಲಿ ಬದಲಾವಣೆ, ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಹೃದಯಾಘಾತದಿಂದ ಪಾರಾಗಬಹುದು ಎಂದು ಹೇಳಿದ್ದಾರೆ. ಮೃತಪಟ್ಟವರಲ್ಲಿ ಯುವ ಸಮೂಹ ಬಹಳ ಕಡಿಮೆ. ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 2025 ಜನವರಿ 1ರಿಂದ ಜೂನ್ 30ರ ತನಕದ 580 ಮಂದಿಗೆ ಹೃದಯಾಘಾತವಾಗಿದೆ. ಈ ಪೈಕಿ 495 ಮಂದಿ ಚೇತರಿಸಿಕೊಂಡಿದ್ದಾರೆ. ಮೃತಪಟ್ಟಿರುವ 85 ಮಂದಿಯ ಪೈಕಿ ಪುರುಷರು 54 ಮತ್ತು ಮಹಿಳೆಯರು 31 ಮಂದಿ ಎಂದು ತಿಳಿಸಿದ್ದಾರೆ. ಆರು ತಿಂಗಳಲ್ಲಿ 61-85 ವಯಸ್ಸಿನವರು ಹೆಚ್ಚು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 61-85 ವಯಸ್ಸಿನ ಹಿರಿಯ ನಾಗರಿಕರು 47 ಮಂದಿ ಬಲಿಯಾಗಿದ್ದಾರೆ. 30ರ ಹರೆಯದ ಒಬ್ಬರು ಮೃತಪಟ್ಟಿದ್ದಾರೆ, 30-40 ವಯಸ್ಸಿನವರು 3 ಮಂದಿ, 41-50ರ ಹರೆಯದವರು 16 ಮತ್ತು 51-60 ವಯಸ್ಸಿನ 18 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದಾಖಲಿಸಿರುವ ಅಂಕಿ ಅಂಶಗಳು ತಿಳಿಸಿದೆ.
ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಸಿಎಂ ಬದಲಾವಣೆ ಖಚಿತ : ಆರ್.ಅಶೋಕ್
ಬೆಂಗಳೂರು : ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ. ಹೀಗಾಗಿಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದ್ದು, ಎಲ್ಲರೂ ಸಿಎಂ ಆಗಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು. ಬುಧವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಆಗಿಯೇ ಇರುತ್ತಾರೆಂದು ಪಕ್ಷದ ವರಿಷ್ಠರು ಹೇಳಬೇಕು. ಆದರೆ, ಭಯದಿಂದ ಸ್ವತಃ ಸಿದ್ದರಾಮಯ್ಯರೇ ಅದನ್ನು ಪದೇ ಪದೆ ಹೇಳುತ್ತಿದ್ದಾರೆ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎನ್ನುವ ಡಿಕೆಶಿ ಈ ರೀತಿಯ ಸಂದೇಶ ನೀಡುತ್ತಿದ್ದಾರೆ. ಸರಕಾರದಲ್ಲಿ ಹಣವಿಲ್ಲದೆ, ಅಭಿವೃದ್ಧಿ ಶೂನ್ಯವಾಗಿ ಶಾಸಕರು ಬೇಸರಗೊಂಡಿದ್ದಾರೆ ಎಂದರು. 2028ರ ವರೆಗೆ ಸಿದ್ದರಾಮಯ್ಯನವರೇ ಸಿಎಂ ಎಂದು ಡಿ.ಕೆ.ಶಿವಕುಮಾರ್ ಹೇಳಲಿ. ಅದನ್ನು ಆರನೇ ಗ್ಯಾರಂಟಿ ಎಂದು ಅಂದುಕೊಂಡು ಸುಮ್ಮನಾಗುತ್ತೇವೆ ಎಂದ ಅಶೋಕ್, ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಸೂಕ್ತವಲ್ಲ. ಜಿಲ್ಲೆಗಳ ಹೆಸರನ್ನು ಬದಲಿಸಿದಂತೆಯೇ ಏಕಾಏಕಿ ಹೆಸರು ಬದಲಿಸುತ್ತಿದ್ದಾರೆ. ಪೂರ್ವಿಕರು ಇಟ್ಟ ಹೆಸರನ್ನು ಹೀಗೆ ಬದಲಿಸಬಾರದು ಎಂದು ಆಗ್ರಹಿಸಿದರು. ಬೆಂಗಳೂರನ್ನು ಈಗಾಗಲೇ ಒಡೆದುಹಾಕಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರನ್ನು ಒಂದಾಗಿಸಲಿದೆ. ಬೆಂಗಳೂರು ಅಭಿವೃದ್ಧಿ ಮಾಡುವುದು ಬಿಟ್ಟು, ನಾಮಫಲಕ ಬದಲಿಸುವುದರಿಂದ ಕೋಟ್ಯಂತರ ರೂಪಾಯಿ ವ್ಯರ್ಥವಾಗಲಿದೆ. ದಕ್ಷಿಣ, ಉತ್ತರ ಎಂದು ಹೆಸರು ನೀಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಹೋರಾಟಕ್ಕೆ ಜಯ : ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐಗೆ ನೀಡಿರುವುದರಿಂದ ಬಿಜೆಪಿಯ ಹೋರಾಟಕ್ಕೆ ಜಯ ಸಿಕ್ಕಿದೆ. ಕೋರ್ಟ್ ನಮಗೆ ನಿಜವಾದ ನ್ಯಾಯ ನೀಡಿದೆ ಎಂದ ಅವರು, ಆರೆಸ್ಸೆಸ್ ನಿಷೇಧ ಮಾಡಿದರೆ, ಮತ್ತೆ ಸಂಘಟನೆ ಪುಟಿದೇಳುತ್ತದೆ. ನಾನು, ಪ್ರಧಾನಿ ಮೋದಿ, ಅನೇಕ ರಾಜ್ಯಗಳ ರಾಜ್ಯಪಾಲರು, ಹಲವಾರು ಸಂಸದರು, ಶಾಸಕರು ಆರೆಸ್ಸೆಸ್ನಲ್ಲಿದ್ದಾರೆ ಎಂದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಪ್ರಭಾರ ಕುಲಸಚಿವರಾಗಿ ಡಾ.ಜಿ.ಪಿ ದಿನೇಶ್ ನೇಮಕ
ಬಳ್ಳಾರಿ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾಗಿ ನಿರ್ವಹಣಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಪಿ.ದಿನೇಶ್ ಅವರನ್ನು ನೇಮಕ ಮಾಡಲಾಗಿದ್ದು, ಬುಧವಾರ ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಕುಲಸಚಿವರಾಗಿದ್ದ ರುದ್ರೇಶ್.ಎಸ್.ಎನ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಪ್ರೊ.ಜಿ.ಪಿ.ದಿನೇಶ್ ಅವರನ್ನು ಹಂಗಾಮಿ ಕುಲಸಚಿವರಾಗಿ ಆದೇಶಿಸಿ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಕಚೇರಿ ಪತ್ರ ಹೊರಡಿಸಿದ್ದಾರೆ.
ಡಿಸಿಇಟಿ: ಮೊದಲ ಸುತ್ತಿನ ಕೌನ್ಸೆಲಿಂಗ್ ನಾಳೆಯಿಂದ ಆರಂಭ
ಬೆಂಗಳೂರು: ಡಿಪ್ಲೊಮಾ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ನ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ಗೆ ನೇರ ಪ್ರವೇಶ ಕಲ್ಪಿಸುವ ಸಂಬಂಧ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ನಾಳೆಯಿಂದ(ಜು.3) ಆರಂಭಿಸಿದ್ದು, ಫಲಿತಾಂಶವನ್ನು ಜು.9ರಂದು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಬುಧವಾರ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಅಭ್ಯರ್ಥಿಗಳು ತಮಗೆ ಬೇಕಾದ ಕೋರ್ಸ್ ಹಾಗೂ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಆದ್ಯತಾ ಕ್ರಮದಲ್ಲಿ ದಾಖಲಿಸಲು ಜು.5ರಂದು ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಜು.7ರಂದು ಅಣಕು ಸೀಟು ಹಂಚಿಕೆ ಫಲಿತಂಶವನ್ನು ಪ್ರಕಟಿಸಲಾಗುತ್ತದೆ. ಬಳಿಕ ಅಭ್ಯರ್ಥಿಗಳು ತಮ್ಮ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಲು ಜು.8ರಂದು ಸಂಜೆ 4ಗಂಟೆವರೆಗೆ ಅವಕಾಶ ಇರುತ್ತದೆ. ಅಂತಿಮವಾಗಿ ಜು.9ರಂದು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದರು. ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಛಾಯ್ಸ್ ಅನ್ನು ಆಯ್ಕೆ ಮಾಡಲು ಜು.10ರಿಂದ 13ರವರೆಗೆ ಅವಕಾಶ ಇರುತ್ತದೆ. ಛಾಯ್ಸ್-1 ಮತ್ತು 2 ಅನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಚಲನ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಛಾಯ್ಸ್ -1 ಆಯ್ಕೆ ಮಾಡಿ ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡು ಜು.16ರೊಳಗೆ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಪ್ರಸನ್ನ ಅವರು ವಿವರಿಸಿದ್ದಾರೆ.
ಲಿಂಕ್ ಕೆನಾಲ್ ಇದೇ ತಾಲೂಕಿಗೆ ಅಂತ್ಯವಾಗಲೆಂದು ತುಮಕೂರು ರೈತರ ಆಗ್ರಹ - ಯಾವುದು ಆ ತಾಲೂಕು?
ಕುಣಿಗಲ್ನಲ್ಲಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ನೀರನ್ನು ಕುಣಿಗಲ್ ತಾಲೂಕಿಗೆ ಮಾತ್ರ ಸೀಮಿತಗೊಳಿಸುವಂತೆ ಒತ್ತಾಯಿಸಿ ಜೂ. 2ರಂದು ಬೃಹತ್ ಪ್ರತಿಭಟನೆ ನಡೆಯಿತು. ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಹೇಮಾವತಿ ನೀರನ್ನು ಬೇರೆ ತಾಲೂಕುಗಳಿಗೆ ಹರಿಸದಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ತಾಲೂಕಿಗೆ ಹಂಚಿಕೆಯಾಗಿರುವ ನೀರನ್ನು ಸಮರ್ಪಕವಾಗಿ ಬಳಸಲು ಯೋಜನೆ ರೂಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಯೋಜನೆಯ ಕಾಮಗಾರಿ ಶೇ 12ರಷ್ಟು ಮುಗಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಎರಡು ಪ್ರಕರಣಗಳ ತನಿಖೆ ಆರಂಭ
ವಿಜಯನಗರ : ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕಾನೂನು ಬಾಹಿರವಾಗಿ ನಡೆದ ಎರಡು ಪ್ರಕರಣಗಳ ಕುರಿತು ತನಿಖೆಗೆ ನೇಮಿಸಿದ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಡಿ.ಎಸ್.ಶಿಂಧೆ ಅವರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ ಎಂದು ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ತಿಳಿಸಿದ್ದಾರೆ. ಘಟಿಕೋತ್ಸವ ಪ್ರಮಾಣ ಪತ್ರಗಳ ಕಾನೂನು ಬಾಹಿರ ವಿತರಣೆ ಪ್ರಕರಣ ಕುರಿತಂತೆ ಈಗಾಗಲೇ ಮಂಗಳವಾರ ಮತ್ತು ಬುಧವಾರದಂದು ಕೆಲ ದಾಖಲಾತಿಗಳ ಪರಿಶೀಲನೆ ಕೈಗೊಳ್ಳಲಾಗಿದೆ. ಮುಂದಿನ ವಿಚಾರಣೆ ಜು.9 ರಂದು ನಿಗದಿಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವಿದ್ಯಾರ್ಥಿ ಸಾಕ್ಷಿದಾರರ ಹಾಗೂ ಪರೀಕ್ಷಾ ವಿಭಾಗದ ಸಿಬ್ಬಂದಿಗಳ ವಿಚಾರಣೆ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಂದು ಪ್ರಕರಣವಾದ ಡಾ.ಅನಂತ್ ಎಲ್ ಝಂಡೇಕರ್ ಅವರ ಪ್ರಕರಣದ ವಿಚಾರಣೆಯನ್ನು ಸಹ ಕೈಗೆತ್ತಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಎರಡು ಪ್ರಕರಣಗಳ ಕುರಿತಂತೆ ಯಾವುದೇ ಆಂತರಿಕ ಹಾಗೂ ಬಾಹ್ಯ ಒತ್ತಡಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ ತನಿಖೆ ಕೈಗೊಳ್ಳುವಂತೆ ನಿವೃತ್ತ ನ್ಯಾಯಾಧೀಶರಿಗೆ ಬೆಂಬಲ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಕರಣಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಎಂದು ವಿಶ್ವವಿದ್ಯಾಲಯದ ಕುಲಪತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ: ರಜಾ ದಿನದಲ್ಲಿ ಅಂಗನವಾಡಿಯಲ್ಲಿ ವ್ಯಕ್ತಿಗಳ ತಂಡದಿಂದ ಸಭೆ; ತನಿಖೆಗೆ ಒತ್ತಾಯ
ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕ ಅಂಗನವಾಡಿ ಕೇಂದ್ರದಲ್ಲಿ ರವಿವಾರ ಸಂಜೆ ತಂಡವೊಂದು ಅಂಗನವಾಡಿಯ ಒಳಗೆ ನುಗ್ಗಿ ಸಭೆ ನಡೆಸಿದ ಬಗ್ಗೆ ಆರೋಪ ಕೇಳಿ ಬಂದಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ಹಾಗೂ ಗರ್ಭೀಣಿಯರ ಪೌಷ್ಟಿಕ ಆಹಾರ ಸಾಮಗ್ರಿ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ವಸ್ತು ಗಳು ದಾಸ್ತಾನಿರುವ ಕಟ್ಟಡ ದೊಳಗೆ ರಜಾ ದಿನದಲ್ಲಿ ಖಾಸಗಿ ವ್ಯಕ್ತಿಗಳು ಸಭೆ ನಡೆಸಿರುವುದು ಗಂಭೀರ ಪ್ರಕರಣವಾಗಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಮೈಂದಡ್ಕದ ಸರ್ವೇ ನಂ. 88/1ರಲ್ಲಿರುವ 0.5 ಸೆಂಟ್ಸ್ ಜಾಗದಲ್ಲಿ ಅನಧಿಕೃತ ಕಟ್ಟಡವೊಂದಿದ್ದು, ಅಲ್ಲಿ ಈಗ ಅಂಗನವಾಡಿ ಕಾರ್ಯಾಚರಿಸುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ರವಿವಾರ ದಿನ ಅಂಗನವಾಡಿ ಕಟ್ಟಡದೊಳಗೆ ನುಗ್ಗಿದ ಕೆಲವರು ಅಲ್ಲಿದ್ದ ಮೇಜು, ಕಪಾಟು, ಗೋಡೆಗೆ ಸಂಘಟನೆಯೊಂದರ ಸ್ಟಿಕ್ಕರ್ ಅಳವಡಿಸಿ, ಈ ಕಟ್ಟಡ ನಮ್ಮದು ಎಂದು ಸಾಬೀತುಪಡಿಸಲು ಹೊರಟಿದ್ದರು. ಈ ಸಂದರ್ಭದಲ್ಲಿ ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಅಲ್ಲದೇ, 34 ನೆಕ್ಕಿಲಾಡಿ ಗ್ರಾ.ಪಂ.ನ ಅಂದಿನ ಪಿಡಿಒ ಅವರು ಅನಧಿಕೃತ ಕಟ್ಟಡವಾದರೂ ಇದಕ್ಕೆ ಸಂಘಟನೆಯೊಂದರ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ಇಲಾಖೆಗೆ ಎನ್ಒಸಿ ನೀಡಿದ್ದರು. ಇದು ಕೂಡಾ ವಿವಾದಕ್ಕೆ ಕಾರಣವಾದಾಗ ಅದೇ ಪಿಡಿಒ ಅವರು ಈ ಕಟ್ಟಡಕ್ಕೆ ನಿಗದಿತ ದಾಖಲೆಗಳು ಇಲ್ಲದಿರುವುದರಿಂದ ವಿದ್ಯುತ್ ಸಂಪರ್ಕಕ್ಕೆ ನೀಡಿದ ಎನ್ಒಸಿ ಯನ್ನು ರದ್ದುಪಡಿಸಲು ಕೋರಿ ಮೆಸ್ಕಾಂಗೆ ಪತ್ರ ಬರೆದಿದ್ದರು. ಹೀಗೆ ವಿವಾದ ಕೇಂದ್ರವಾಗಿದ್ದ ಈ ಅಂಗನ ವಾಡಿ ಕಟ್ಟಡವು ಈ ಮತ್ತೊಮ್ಮೆ ಸುದ್ದಿಯಾಗಿದ್ದು, ಜೂ.29ರಂದು ಸಂಜೆ ಕೆಲವು ವ್ಯಕ್ತಿಗಳು ಅಂಗನವಾಡಿ ಕೇಂದ್ರದಲ್ಲಿ ಸಭೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿ ಜಿಪಿಎಸ್ ಪೋಟೋ ಕೂಡಾ ಪತ್ರಿಕೆಗೆ ಲಭ್ಯವಾಗಿದೆ. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಸೇರಿದ ಅಂಗನವಾಡಿ ಕೇಂದ್ರದೊಳಗೆ ಅಂಗನವಾಡಿ ಕಾರ್ಯಕರ್ತೆ ಇರದ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳಿಗೆ ಸಭೆ ನಡೆಸಲು ಅನುಮತಿ ನೀಡಿದ್ದು ಯಾರು? ಅವರಿಗೆ ಅಂಗನವಾಡಿಯ ಬೀಗದ ಕೀ ಹೇಗೆ ಸಿಕ್ಕಿತ್ತು. ಅದು ಕೂಡಾ ಅಂಗನವಾಡಿ ಕಾರ್ಯಕರ್ತೆ ಕುಳಿತುಕೊಳ್ಳುವ ಕುರ್ಚಿಯಲ್ಲಿ ಕುಳಿತು ಸಭೆ ನಡೆಸಲು ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡಿದ್ದು ಯಾರು? ಇಲಾಖೆಗೆ ಸಂಬಂಧ ಪಟ್ಟವರಲ್ಲಿ ಅಲ್ಲದೇ, ಇತರ ಖಾಸಗಿ ವ್ಯಕ್ತಿಗಳ ಕೈಯಲ್ಲಿ ಅಂಗನವಾಡಿಯ ಬೀಗದ ಕೀ ಕೊಡಬಹುದೇ? ನಾಳೆ ಏನಾದರೂ ಸಮಸ್ಯೆಯುಂಟಾದರೆ ಯಾರು ಹೊಣೆ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರದ್ದಾಗಿದ್ದು, ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಸೂಕ್ತ ತನಿಖೆ ನಡೆಸಿ, ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ, ಗಭೀಣಿಯರಿಗೆ ಬೇಕಾದ ಪೌಷ್ಟಿಕ ಆಹಾರ ದಾಸ್ತಾನಿಡಲಾ ಗಿರುತ್ತದೆ. ಇದಲ್ಲದೆ, ಮಕ್ಕಳಿಗೆ ಸಂಬಂಧಿಸಿದ ದಾಖಲೆಗಳು ಇರುತ್ತದೆ. ಇಂತಹ ಸೂಕ್ಷತೆ ಇರುವ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಗಳಿಗೆ ಸಭೆ ನಡೆಸಲು ಅನುವು ಮಾಡಿಕೊಟ್ಟಿರುವಂತದ್ದು ಗಂಭೀರವಾದ ಪ್ರಕರಣವಾಗಿದೆ. ರಜಾ ದಿನಗಳಲ್ಲಿ, ಅಂಗನವಾಡಿ ಕಾರ್ಯಕರ್ತೆ ಇರದ ಸಂದರ್ಭದಲ್ಲಿ ಹೀಗೆ ಸಾರ್ವಜನಿ ಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದರೆ ನಾಳೆ ಮಕ್ಕಳ ಪೌಷ್ಟಿಕ ಆಹಾರದಲ್ಲಿ ಏನಾದರೂ ವ್ಯತ್ಯಾಸಗಳಾದರೆ ಆಗ ಇದಕ್ಕೆ ಯಾರು ಹೊಣೆಗಾರರು ? ಈ ಹಿಂದೆಯೂ ಕೆಲವರು ರವಿವಾರ ಅಂಗವನಾಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಕಟ್ಟಡದೊಳಗೆ ಸಂಘಟನೆಯ ಸ್ಟಿಕ್ಕರ್ ಅಂಟಿಸಿದ ಘಟನೆಯೂ ನಡೆದಿತ್ತು. ಈಗ ಮತ್ತೊಮ್ಮೆ ಇಂತದ್ದೇ ಘಟನೆ ಪುನಾರವರ್ತನೆಯಾದಂತಾಗಿದೆ. ಅದು ಕೂಡಾ ಮೈಂದಡ್ಕ ಪರಿಸರದಲ್ಲಿ ಈಗಾಗಲೇ ಒಂದು ಪೋಕ್ಸೋ ಹಾಗೂ ಒಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಅಂಗನವಾಡಿ ಇರುವುದು ನಿರ್ಜನ ಪ್ರದೇಶದಲ್ಲಿ. ಹೀಗೆ ಸಿಕ್ಕವರಲ್ಲಿ ಎಲ್ಲಾ ಅಂಗನವಾಡಿಯ ಬೀಗದ ಕೀ ಕೊಟ್ಟರೆ ಇಲ್ಲಿ ಅನೈತಿಕ ಚಟುವಟಿಕೆ ನಡೆಯುವ ಸಾಧ್ಯತೆಗಳು ಇದೆ. ಈ ಪ್ರಕರಣವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಲಾಗುವುದು. - ಕಲಂದರ್ ಶಾಫಿ, ಸಾಮಾಜಿಕ ಹೋರಾಟಗಾರರು. ಈ ಬಗ್ಗೆ ಮಾಧ್ಯಮವು ಇಲಾಖೆಯ ಸಿಡಿಪಿಒ ಅವರನ್ನು ಪ್ರಶ್ನಿಸಿದಾಗ ಉತ್ತರಿಸಿದ ಸಿಡಿಪಿಒ ಹರೀಶ್ ಅವರು, ಈ ಬಗ್ಗೆ ನಿಮ್ಮ ಮೂಲಕವಷ್ಟೇ ನನ್ನ ಗಮನಕ್ಕೆ ಬಂದಿದೆ. ನಾನು ಅಂಗನವಾಡಿ ಕಾರ್ಯಕರ್ತೆಯವರನ್ನು ವಿಚಾರಿಸಿದಾಗ ಅಂಗನವಾಡಿಯ ಹಿಂದೆ ಧರೆ ಬಿದ್ದಿತ್ತು. ಈ ಬಗ್ಗೆ ಚರ್ಚಿಸಲು ಬಾಲವಿಕಾಸ ಸಮಿತಿಯ ಅಧ್ಯಕ್ಷರೂ ಸೇರಿದಂತೆ ಇತರರು ಸಭೆ ನಡೆಸಿದ್ದರು ಎಂದು ತಿಳಿಸಿದ್ದಾರೆ. ಆದರೆ ಧರೆ ಕುಸಿದ ಬಗ್ಗೆ ಗ್ರಾಮಕರಣಿಕರಿಗೆ ಮಾಹಿತಿ ನೀಡಲಾಗಿದೆಯೇ? ರಜಾ ದಿನದಲ್ಲಿ, ಅಂಗನವಾಡಿ ಕಾರ್ಯಕರ್ತೆ ಇರದ ಸಮಯದಲ್ಲಿ ಈ ರೀತಿ ಖಾಸಗಿ ವ್ಯಕ್ತಿಗಳಿಗೆ ಸಭೆ ನಡೆಸಲು ಅವಕಾಶವಿದೆಯಾ ಎಂದು ಸಿಡಿಪಿಒ ಅವರನ್ನು ಮರು ಪ್ರಶ್ನಿಸಿದಾಗ, ನಾನು ಹೊಸದಾಗಿ ಬಂದಿದ್ದೇನೆ. ಈ ಬಗ್ಗೆ ಮತ್ತೊಮ್ಮೆ ವಿಚಾರಿಸ್ತೇನೆ. ಇನ್ನು ಮುಂದೆ ನನ್ನ ವ್ಯಾಪ್ತಿಯ ಯಾವುದೇ ಅಂಗನವಾಡಿ ಕೇಂದ್ರಗಳಲ್ಲಿ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಬೆಳಪು ವಿವಿ ಕಟ್ಟಡ ನಿರ್ಮಾಣದಲ್ಲಿ ಭ್ರಷ್ಟಾಚಾರ: ದೇವೀಪ್ರಸಾದ್ ಶೆಟ್ಟಿ ಆರೋಪ
ಪಡುಬಿದ್ರಿ: ಬೆಳಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹತ್ವಾಕಾಂಕ್ಷಿ ಯೋಜನೆ ವಿಜ್ಞಾನ ಸಂಶೋಧನಾ ಕೇಂದ್ರ ಹಾಗೂ ಪಿ.ಜಿ. ಸೆಂಟರ್ ಕಾಮಗಾರಿ ಕೋಟ್ಯಾಂತರ ಹಣ ಸರಕಾರದಿಂದ ಮಂಜೂರುಗೊಂಡರೂ, ಮಂಗಳೂರು ವಿಶ್ವವಿದ್ಯಾಲಯದವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೀಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ. ಬೆಳಪುವಿನಲ್ಲಿ ಮಹತ್ವಾಕಾಂಕ್ಷಿ ಯೋಜನೆ 2014ರಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯವರಿಂದ ಚಾಲನೆಗೊಂಡಿತ್ತು. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, 9 ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಯಾವುದೇ ತರಗತಿ ಪ್ರಾರಂಭಗೊಂಡಿಲ್ಲ. ಕೋಟ್ಯಾಂತರ ಹಣ ಸರಕಾರದಿಂದ ಮಂಜೂರುಗೊಂಡರೂ ಮಂಗಳೂರು ವಿಶ್ವವಿದ್ಯಾಲಯದವರು ದುರುಪಯೋಗಪಡಿಸಿಕೊಂಡಿದ್ದಾರೆ. ಕೆಲವೊಂದು ಭ್ರಷ್ಟಾಚಾರಗಳು ನಡೆದಿದೆ. ಯಾರು ಯಾರಿಗೆ ಎಷ್ಟೆಷ್ಟು ಪಾಲು ಎಂದು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ. ಎಲ್ಲಾ ದಾಖಲೆಗಳನ್ನು ಮಾಹಿತಿ ಹಕ್ಕಿನಿಂದ ಪಡೆದುಕೊಂಡಿರುತ್ತೇವೆ. ಬಡ ವಿದ್ಯಾರ್ಥಿಗಳ ಆಶಾ ಕಿರಣವಾಗ ಬೇಕೆಂದು 10 ವರ್ಷಗಳ ನಿರಂತರ ಹೋರಾಟದಿಂದ ಕಾಲೇಜು ಸ್ಥಾಪನೆಯ ಕನಸು ನನಸಾದರೂ ಅದು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿಲ್ಲ. ಸರಕಾರದ ಹಣ ದುರುಪಯೋಗವಾಗಿದೆ. ಉನ್ನತ ಮಟ್ಟದ ತನಿಖೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗಬಹುದೆಂದು ಶೆಟ್ಟಿ ತಿಳಿಸಿದ್ದಾರೆ.
ಕೇರಳದಲ್ಲಿ ನಿಂತಿರುವ ಬ್ರಿಟಿಷ್ ಫೈಟರ್ ಜೆಟ್ ಎಫ್-35 ಅನ್ನೇ ಬಳಸಿಕೊಂಡು ಅಭಿಯಾನ ಆರಂಭಿಸಿದ ಪ್ರವಾಸೋದ್ಯಮ ಇಲಾಖೆ!
ತಿರುವನಂತಪುರಂ: ಜೂನ್ 14ರಂದು ಪ್ರತಿಕೂಲ ಹವಾಮಾನದ ಕಾರಣಕ್ಕೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಬ್ರಿಟನ್ ನ ಎಫ್-35ಬಿ ಲೈಟನಿಂಗ್ II ಯುದ್ಧ ವಿಮಾನವು ಕೇರಳ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿರುವ ಸ್ವಾರಸ್ಯಕರ ಘಟನೆ ವರದಿಯಾಗಿದೆ. ಎಕ್ಸ್ ನಲ್ಲಿ ಪೋಸ್ಟೊಂದನ್ನು ಮಾಡಿರುವ ಕೇರಳ ಪ್ರವಾಸೋದ್ಯಮ ಇಲಾಖೆ, “ಕೇರಳ ನೀವು ಎಂದಿಗೂ ತೊರೆಯಲು ಬಯಸದ ಗಮ್ಯ ಸ್ಥಳವಾಗಿದೆ. ಧನ್ಯವಾದ ಫಾಕ್ಸಿ’ ಎಂಬ ವಿನೋದಮಯ ಸಂದೇಶವನ್ನು ಹಂಚಿಕೊಂಡಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಮತ್ತಷ್ಟು ಹಾಸ್ಯಮಯ ಚರ್ಚೆಗೆ ನಾಂದಿ ಹಾಡಿದೆ. “ಕೇರಳ ಅದೆಂಥ ವಿಸ್ಮಯಕಾರಿ ಸ್ಥಳವೆಂದರೆ, ನನಗೆ ಇಲ್ಲಿಂದ ತೆರಳುವ ಬಯಕೆಯೇ ಇಲ್ಲ. ಖಂಡಿತ ಇದನ್ನು ನಾನು ಶಿಫಾರಸು ಮಾಡುತ್ತೇನೆ” ಎಂದು ಬ್ರಿಟಿಷ್ ಯುದ್ಧ ವಿಮಾನ ಶಿಫಾರಸು ಮಾಡುತ್ತಿರುವಂತೆ, ಅದರ ಚಿತ್ರದ ಕೆಳಗೆ ನಕಲಿ ವಿಮರ್ಶೆಯ ಅಡಿ ಬರಹವನ್ನು ಮುದ್ರಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ನಗೆಗಡಲಲ್ಲಿ ಮುಳುಗಿಸಿದೆ. ಸುಮಾರು 110 ದಶಲಕ್ಷ ಡಾಲರ್ ಗೂ ಹೆಚ್ಚು ಮೌಲ್ಯದ ಲಾಕ್ ಹೀಡ್ ಮಾರ್ಟಿನ್ ಅಭಿವೃದ್ಧಿಪಡಿಸಿರುವ ಐದನೆ ತಲೆಮಾರಿನ ಎಫ್-35ಬಿ ಲೈಟನಿಂಗ್ II ಸೂಪರ್ ಸಾನಿಕ್ ಸ್ಟೀಲ್ತ್ ಯುದ್ಧ ವಿಮಾನವು ಭಾರತೀಯ ನೌಕಾಪಡೆಯೊಂದಿಗಿನ ಜಂಟಿ ಸಮರಾಭ್ಯಾಸದ ಭಾಗವಾಗಿ ಬ್ರಿಟನ್ ನ ಎಚ್ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಪರವಾಗಿ ಭಾಗವಹಿಸಿತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣಕ್ಕೆ ಅದರ ಮಾರ್ಗವನ್ನು ಕೇರಳಕ್ಕೆ ಬದಲಿಸಲಾಗಿತ್ತು. ವಿಮಾನಕ್ಕೆ ಇಂಧನವನ್ನು ಮರುಭರ್ತಿ ಮಾಡಿದ ನಂತರ, ಅದು ಟೇಕಾಫ್ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾಗ, ನೆಲದ ಮೇಲೆಯೇ ಅದರಲ್ಲಿ ಯಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಅಂದಿನಿಂದ ಇಲ್ಲಿಯವರೆಗೆ ಆ ವಿಮಾನವನ್ನು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಾಲ್ಕನೆ ಬೇಯಲ್ಲಿ ನಿಲುಗಡೆ ಮಾಡಲಾಗಿದೆ.
ಅಣಕು ಪ್ರದರ್ಶನದಲ್ಲಿ AI-171 ವಿಮಾನದ ಕೊನೆಯ ಕ್ಷಣಗಳನ್ನು ಮರು ಸೃಷ್ಟಿಸಿದ ಪೈಲಟ್ ಗಳು: ಪತ್ತೆಯಾಗಿದ್ದೇನು?
ಹೊಸದಿಲ್ಲಿ: ಜೂನ್ 12ರಂದು AI-171 ವಿಮಾನ ಅಪಘಾತಕ್ಕೀಡಾಗಿ ಒಂದು ವಾರದ ನಂತರ, ಸುಮಾರು 270ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಆ ವಿಮಾನ ಅಪಘಾತದ ಕೊನೆಯ ಕ್ಷಣಗಳನ್ನು ಏರ್ ಇಂಡಿಯಾ ವಿಮಾನ ಸಂಸ್ಥೆಯ ಬೋಯಿಂಗ್ 787 ವಿಮಾನಗಳ ಮೂಲಕ ಮರು ಸೃಷ್ಟಿಸುವ ಪ್ರಯತ್ನವನ್ನು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಕನಿಷ್ಠ ಮೂರು ಮಂದಿ ತರಬೇತಿ ನಿರತ ಪೈಲಟ್ ಗಳು ಮಾಡಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಈ ವೇಳೆ ಟೇಕಾಫ್ ಆದ ನಂತರ, ಅವಳಿ ಇಂಜಿನ್ ಗಳಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡು ವಿಮಾನವು ಮೇಲೇರಲು ಅಸಮರ್ಥವಾಗುವಂತಹ ಸನ್ನಿವೇಶವನ್ನು ಸೃಷ್ಟಿಸಲು ಪೈಲಟ್ ಗಳು ಎಲೆಕ್ಟ್ರಿಕಲ್ ವೈಫಲ್ಯಗಳ ಅಣಕು ಪ್ರದರ್ಶನ ನಡೆಸಿದ್ದರು. ಆದರೆ, ಅವರು ಅದರಲ್ಲಿ ವಿಫಲಗೊಂಡಿದ್ದರು ಎನ್ನಲಾಗಿದೆ. ವಿಮಾನದ ಬ್ಲಾಕ್ ಬಾಕ್ಸ್ ನಿಂದ ಈಗಾಗಲೇ ದತ್ತಾಂಶಗಳನ್ನು (ವಿಮಾನ ದತ್ತಾಂಶ ರೆಕಾರ್ಡರ್ ಗಳು ಹಾಗೂ ಕಾಕ್ ಪಿಟ್ ಧ್ವನಿ ರೆಕಾರ್ಡರ್ ಗಳು) ಡೌನ್ ಲೋಡ್ ಮಾಡಿರುವ ಅಪಘಾತದ ತನಿಖಾಧಿಕಾರಿಗಳು, 787 ವಿಮಾನದ ಇಂಧನ ಸ್ವಿಚ್ ಗಳ ಸ್ಥಿತಿಗತಿಗಳನ್ನೂ ಪರೀಕ್ಷಿಸಲಿದ್ದಾರೆ. ನಂತರ ಅವರು ಆ ದತ್ತಾಂಶಗಳನ್ನು ಪತ್ತೆಯಾಗಿರಬಹುದಾದ ಇಂಧನ ಸ್ವಿಚ್ ಗಳ ಅವಶೇಷಗಳೊಂದಿಗೆ ಅವನ್ನು ಹೋಲಿಕೆ ಮಾಡಲಿದ್ದಾರೆ. ಇದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಮೇಲೇರಿದಾಗ ಕೂಡಲೇ ಅಥವಾ ಟೇಕಾಫ್ ಗಾಗಿ ಚಲಿಸುವಾಗಿನ ಮಹತ್ವದ ಘಟ್ಟದಲ್ಲಿ ಪೈಲಟ್ ಗಳೇನಾದರೂ ಆಕಸ್ಮಿಕವಾಗಿ ಇಂಧನ ಸ್ವಿಚ್ ಗಳನ್ನು ಆಫ್ ಮಾಡಿದ್ದಾರೆಯೇ ಎಂಬುದನ್ನು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಅಣಕು ಸನ್ನಿವೇಶಗಳನ್ನು ನಿರ್ವಹಿಸುವಾಗ ನಿಖರವಾಗಿರುವುದನ್ನು ಖಾತರಿಗೊಳಿಸಿಕೊಳ್ಳಲು, AI-171 ವಿಮಾನದ ನಿಖರ ಟ್ರಿಮ್ ಶೀಟ್ ದತ್ತಾಂಶವನ್ನು ಪುನರಾವರ್ತಿಸಿದ್ದರು ಎನ್ನಲಾಗಿದೆ. ವಿಮಾನಗಳು ಟೇಕಾಫ್ ಆಗುವಾಗ ಹಾಗೂ ಭೂಸ್ಪರ್ಶ ಮಾಡುವಾಗ ಅವುಗಳ ಗುರುತ್ವಾಕರ್ಷಣೆ ಕೇಂದ್ರವು ಸುರಕ್ಷಿತವಾಗಿರುವುದನ್ನು ಖಾತರಿಪಡಿಸಿಕೊಳ್ಳಲು ಹಾಗೂ ವಿಮಾನದ ತೂಕ ಹಾಗೂ ಸಮತೋಲನವನ್ನು ಲೆಕ್ಕ ಮಾಡಲು ವಿಮಾನ ಯಾನ ಸೇವೆಯಲ್ಲಿ ಈ ಟ್ರಿಮ್ ಶೀಟ್ ಗಳನ್ನು ಬಳಸಲಾಗುತ್ತದೆ. ಈ ತರಬೇತಿ ನಿರತ ಪೈಲಟ್ ಗಳು ಒಂದು ಇಂಜಿನ್ ವೈಫಲ್ಯದ ಅಣಕು ಪ್ರದರ್ಶನವನ್ನೂ ಮಾಡಿದ್ದು, ವಿಮಾನದ ಚೌಕಟ್ಟು ಕೆಳಗೆ ಕುಸಿಯಲೂ ಅವಕಾಶ ನೀಡಿದ್ದಾರೆ ಹಾಗೂ 787 ವಿಮಾನದ ತೂಗಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯ ಟೇಕಾಫ್ ಗಳಿಗೆ ಅಸುರಕ್ಷಿತ ಹಾಗೂ ಅಸಮರ್ಪಕ ಎಂದೇ ಪರಿಗಣಿಸಲಾಗಿರುವ ಈ ಸಂಯೋಜನೆಯು ವಿಮಾನದ ತಳಭಾಗದಲ್ಲಿ ನಿಯೋಜಿಸಲಾಗಿರುವ ಈ ಭಾರಿ ತೂಕದ ಚೌಕಟ್ಟು ಸಾಮರ್ಥ್ಯ ಹೀನ ವಿಮಾನದ ಟೇಕಾಫ್ ಉತ್ಕಷ್ಕಕ್ಕೆ ಮೀಸಲಾಗಿದೆ. ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅದು ಗಾಳಿಯಲ್ಲಿ ಸುಲಭವಾಗಿ ಚಲಿಸುವುದು ಹಾಗೂ ದಕ್ಷವಾಗಿ ಮೇಲೇರುವುದನ್ನು ಖಾತರಿಪಡಿಸಲು, ವಿಮಾನದ ಈ ಚೌಕಟ್ಟನ್ನು ಸಾಮಾನ್ಯವಾಗಿ ವಿಮಾನದ ಮೈಕಟ್ಟಿನಲ್ಲಿ ಹುದುಗಿಸಿರುತ್ತಾರೆ. ಇದಲ್ಲದೆ, ಅಣಕು ಪ್ರದರ್ಶನದ ವೇಳೆ, ಅಸಮರ್ಪಕ ಟೇಕಾಫ್ ತೂಗಾಟ ಸಂಯೋಜನೆಯನ್ನೂ ಆಯ್ದುಕೊಳ್ಳಲಾಗಿದೆ. ಇದು 787 ವಿಮಾನವು ಒಂದೇ ಇಂಜಿನ್ ನಲ್ಲಿ ಮೇಲೇರುವುದನ್ನು ಮತ್ತಷ್ಟು ಸವಾಲನ್ನಾಗಿಸುತ್ತದೆ. ಟೇಕಾಫ್ ತೂಗಾಟವು ವಿಮಾನದ ರೆಕ್ಕೆಗಳ ಮೇಲೆ ಹೊಂದಾಣಿಕೆ ಮಾಡಬಹುದಾದ ಮೇಲ್ಮೈ ಆಗಿದ್ದು, ಇದರ ನೆರವಿನಿಂದ ವಿಮಾನವು ಟೇಕಾಫ್ ಆಗುವಾಗ ಅದರ ಮೇಲೇರುವ ಸಾಮರ್ಥ್ಯ ಅಧಿಕವಾಗುತ್ತದೆ ಅಥವಾ ವಿಮಾನದ ಹಾರಾಟ ಸಾಮರ್ಥ್ಯ ವೃದ್ಧಿಯಾಗುತ್ತದೆ. ಇಲ್ಲಿ ವಿವರಿಸಲಾಗಿರುವ ಎಲ್ಲ ಸನ್ನಿವೇಶಗಳಲ್ಲಿ AI-171 ವಿಮಾನವು ಒಂದೇ ಇಂಜಿನ್ ನಲ್ಲಿ ಸುರಕ್ಷಿತ ಎತ್ತರವನ್ನು ಗಳಿಸುವ ಸಾಮರ್ಥ್ಯ ಹೊಂದಿತ್ತು. ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಬೋಯಿಂಗ್ 787-8ರ ಜನರಲ್ ಎಲೆಕ್ಟ್ರಿಕ್ ಜೆನ್ ಎಕ್ಸ್ 1ಬಿ67-ಕೆ ಟರ್ಬೊ ಫ್ಯಾನ್ ಗಳನ್ನು ತಲಾ 70,000 ಪೌಂಡ್ ನೂಕಾಟದ ಸಾಮರ್ಥ್ಯಕ್ಕೆ ಏರಿಕೆ ಮಾಡಲಾಗಿದೆ. ಇವು ಬೋಯಿಂಗ್ 787 ವರ್ಗದಲ್ಲಿನ ನಾಗರಿಕ ವಿಮಾನಗಳಿಗಾಗಿ ಅಭಿವೃದ್ಧಿ ಪಡಿಸಲಾಗಿರುವ ಅತ್ಯಂತ ಶಕ್ತಿಶಾಲಿ ಇಂಜಿನ್ ಗಳಾಗಿವೆ. ಆದರೆ, ವ್ಯಾಪಕ ಊಹಾಪೋಹಕ್ಕೀಡಾಗಿರುವ ಅವಳಿ ಇಂಜಿನ್ ವೈಫಲ್ಯವು ಮಹಾ ದುರಂತವಾಗಿದೆ. ಅಕ್ಟೋಬರ್ 2011ರಲ್ಲಿ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನವು ಸೇವೆಗೆ ಪದಾರ್ಪಣೆ ಮಾಡಿದಾಗಿನಿಂದ, AI-171 ವಿಮಾನ ಅಪಘಾತವು ಈ ವಿಮಾನದ ಸರಣಿಯಲ್ಲಿ ಸಂಭವಿಸಿರುವ ಮೊಟ್ಟಮೊದಲ ಅಪಘಾತವಾಗಿದೆ. ಸೌಜನ್ಯ: ndtv.com
ಆರ್ ಕಾಮ್ ಸಾಲ ಖಾತೆಯನ್ನು ವಂಚನೆ ಎಂದು ವರ್ಗೀಕರಿಸಲಿರುವ ಎಸ್ಬಿಐ: ಆರ್ ಬಿ ಐ ಗೆ ವರದಿಯಲ್ಲಿ ಅನಿಲ್ ಅಂಬಾನಿ ಹೆಸರು
ಹೊಸದಿಲ್ಲಿ: ಆಗಸ್ಟ್ 2015ರಷ್ಟು ಹಿಂದಿನ ಪ್ರಕರಣದಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್(ಆರ್ಕಾಮ್)ನ ಸಾಲಖಾತೆಯನ್ನು ‘ವಂಚನೆ’ ಎಂದು ಆರ್ಬಿಐಗೆ ವರದಿಯನ್ನು ಸಲ್ಲಿಸಲು ಮತ್ತು ಅದರ ಹಿಂದಿನ ನಿರ್ದೇಶಕ ಅನಿಲ ಅಂಬಾನಿಯವರನ್ನು ವರದಿಯಲ್ಲಿ ಹೆಸರಿಸಲು ಎಸ್ ಬಿ ಐ ನಿರ್ಧರಿಸಿದೆ ಎಂದು ಕಂಪನಿಯು ಬಾಂಬೆ ಶೇರು ವಿನಿಮಯ ಕೇಂದ್ರ(ಬಿಎಸ್ಇ)ಕ್ಕೆ ಮಾಹಿತಿಯನ್ನು ಸಲ್ಲಿಸಿದೆ. ಈ ಸಂಬಂಧ ತಾನು ಎಸ್ ಬಿ ಐ ನಿಂದ ಜೂನ್ 23, 2025ರಂದು ಪತ್ರವನ್ನು ಸ್ವೀಕರಿಸಿದ್ದೇನೆ ಎಂದು ಆರ್ ಕಾಮ್ ತಿಳಿಸಿದೆ. ಬ್ಯಾಂಕಿನ ವಂಚನೆ ಗುರುತಿಸುವಿಕೆ ಸಮಿತಿ(ಎಫ್ ಐ ಸಿ)ಯ ಏಕಪಕ್ಷೀಯ ಆದೇಶ ಆಘಾತಕಾರಿಯಾಗಿದೆ ಎಂದು ಅಂಬಾನಿ ಹೇಳಿದ್ದಾರೆ. ಅಂಬಾನಿಯವರನ್ನು ಪ್ರತಿನಿಧಿಸಿರುವ ಕಾನೂನು ಸಂಸ್ಥೆಯು ಎಸ್ ಬಿ ಐ ಗೆ ನೀಡಿರುವ ಉತ್ತರದಲ್ಲಿ, ಎಫ್ ಐ ಸಿ ಯ ಏಕಪಕ್ಷೀಯ ಆದೇಶವು ಆಘಾತಕಾರಿಯಾಗಿದೆ. ಅಂಬಾನಿಯವರ ಹಿಂದಿನ ಪತ್ರಕ್ಕೆ ಬ್ಯಾಂಕು ಒಂದು ವರ್ಷ ಕಾಲ ಉತ್ತರಿಸಿರಲಿಲ್ಲ. ಅಂಬಾನಿ ಕಂಪನಿಯ ಪೂರ್ಣಕಾಲಿಕ ನಿರ್ದೇಶಕರಾಗಿರಲಿಲ್ಲ,ಕಾರ್ಯ ನಿರ್ವಾಹಕೇತರ ನಿರ್ದೇಶಕರಾಗಿದ್ದರು. ಆರ್ ಕಾಮ್ ನ ದೈನಂದಿನ ವ್ಯವಹಾರಗಳು ಮತ್ತು ಕಾರ್ಯಾಚರಣೆಗೆ ಅವರು ಹೊಣೆಗಾರರಲ್ಲ ಎಂದು ಹೇಳಿದೆ. ಅಂಬಾನಿಯವರು ವೈಯಕ್ತಿಕವಾಗಿ ಅಹವಾಲು ಸಲ್ಲಿಸಲು ಬ್ಯಾಂಕು ಅವರಿಗೆ ಅವಕಾಶ ನೀಡಿರಲಿಲ್ಲ ಮತ್ತು ಸಂಬಂಧಿತ ದಾಖಲೆಗಳನ್ನು ಅವರಿಗೆ ಒದಗಿಸಲಾಗಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿರುವ ಕಾನೂನು ಸಂಸ್ಥೆಯು, ವಂಚನೆ ವರ್ಗೀಕರಣವನ್ನು ಹಿಂದೆಗೆದುಕೊಳ್ಳುವಂತೆ ಬ್ಯಾಂಕನ್ನು ಆಗ್ರಹಿಸಿದೆ. ಪ್ರಸ್ತುತ ದಿವಾಳಿತನ ಪ್ರಕ್ರಿಯೆಯಲ್ಲಿರುವ ಆರ್ಕಾಮ್ ಅಂಬಾನಿ ನೇತೃತ್ವದ ಅನಿಲ ಧೀರುಭಾಯಿ ಅಂಬಾನಿ ಗ್ರೂಪ್ನ ಅಂಗಸಂಸ್ಥೆಯಾಗಿದೆ. ಬಿ ಎಸ್ ಇ ಗೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಆರ್ಕಾಮ್ ಮತ್ತು ಅದರ ಅಂಗಸಂಸ್ಥೆಗಳು ಒಟ್ಟು 31,580 ಕೋ.ರೂ.ಸಾಲ ಪಡೆದಿದ್ದವು. ಸಾಲದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗಿದೆ ಎನ್ನುವುದನ್ನು ಎಫ್ಐಸಿ ಕಂಡುಕೊಂಡಿದೆ. ಸಾಲದ ನಿಬಂಧನೆಗಳ ಉಲ್ಲಂಘನೆಯ ಬಗ್ಗೆ ವಿವರಿಸುವಲ್ಲಿ ಕಂಪನಿಯು ವಿಫಲಗೊಂಡಿದೆ. ಖಾತೆಯ ನಿರ್ವಹಣೆಯಲ್ಲಿ ಅಕ್ರಮಗಳ ಕುರಿತು ತನ್ನ ಪ್ರಶ್ನೆಗಳಿಗೆ ಆರ್ ಕಾಮ್ ತೃಪ್ತಿಕರ ಉತ್ತರಗಳನ್ನು ನೀಡಿಲ್ಲ ಎಂದು ಎಸ್ಬಿಐ ಹೇಳಿದೆ. ತನ್ನ ದಿವಾಳಿತನ ಪ್ರಕ್ರಿಯೆ ಯೋಜನೆಯನ್ನು ತನ್ನ ಸಾಲದಾತರ ಸಮಿತಿಯು ಈಗಾಗಲೇ ಅನುಮೋದಿಸಿದೆ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ ಎಂದು ಆರ್ಕಾಮ್ ಬಿ ಎಸ್ಇ ಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ. ಎಸ್ಬಿಐ ಡಿಸೆಂಬರ್ 2023,ಮಾರ್ಚ್ 2024 ಮತ್ತು ಸೆಪ್ಟಂಬರ್ 2024ರಲ್ಲಿ ಆರ್ ಕಾಮ್ ಗೆ ಶೋಕಾಸ್ ನೋಟಿಸ್ಗಳನ್ನು ಹೊರಡಿಸಿತ್ತು.
ಕನ್ವರ್ ಯಾತ್ರೆಯ ದಾರಿಯಲ್ಲಿ ಗುಂಪುಗಳಿಂದ ಢಾಬಾ ಮಾಲಕರ ‘ಪ್ಯಾಂಟ್ ತಪಾಸಣೆ’: ಉವೈಸಿ ಆಕ್ರೋಶ
ಹೊಸದಿಲ್ಲಿ: ಉತ್ತರಪ್ರದೇಶ ಹಾಗೂ ಉತ್ತರಾಖಂಡದ ವಿವಿಧೆಡೆ ನಡೆಯುವ ಕನ್ವರ್ ಯಾತ್ರೆಯ ದಾರಿಯುದ್ದಕ್ಕೂ ಇರುವ ಢಾಬಾ ಹಾಗೂ ಉಪಹಾರಗೃಹಗಳ ಮಾಲಕರ ಧರ್ಮವನ್ನು ದೃಢಪಡಿಸಿಕೊಳ್ಳಲು ಅವರಿಗೆ ಪ್ಯಾಂಟ್ ಗಳನ್ನು ಬಿಚ್ಚುವಂತೆ ಕೆಲವು ಕೇಸರಿ ಗುಂಪುಗಳು ಹೇಳಿದ್ದವು ಎಂಬ ವರದಿಗಳ ಬಗ್ಗೆ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ಹಾಗೂ ಸಮಾಜವಾದಿ ಪಕ್ಷದ ಮಾಜಿ ಸಂಸದ ಟಿ.ಹಸನ್ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ಹೊಟೇಲ್ ಮಾಲಕರನ್ನು ಪ್ಯಾಂಟ್ ಬಿಚ್ಚುವಂತೆ ಹೇಳುವ ಈ ಗುಂಪುಗಳು ಯಾವುವು? ಅವರೇನು ಸರಕಾರ ನಡೆಸುತ್ತಿದ್ದಾರೆಯೇ ಅಥವಾ ಆಡಳಿತದ ಉಸ್ತುವಾರಿಯನ್ನು ಹೊಂದಿದ್ದಾರೆಯೇ?’’ ಎಂದು ಉವೈಸಿ ಪ್ರಶ್ನಿಸಿದರು. ಕೂಡಲೇ ಈ ಗುಂಪುಗಳನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದರು. ಮುಝಾಫರ್ ನಗರದ ಹೆದ್ದಾರಿಯ ಸಮೀಪ ಅನೇಕ ಹೊಟೇಲ್ ಗಳು ಹಲವು ವರ್ಷಗಳಿಂದಲೂ ನಡೆಯುತ್ತಾ ಬಂದಿವೆ. 10 ವರ್ಷಗಳಿಂದ ಇಲ್ಲದ ಸಮಸ್ಯೆ ಈಗ ಯಾಕೆ ಬಂತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕನ್ವರ್ ಯಾತ್ರೆ ಹಿಂದೆಯೂ ಶಾಂತಿಯುತವಾಗಿ ನಡೆಯುತ್ತಿರಲಿಲ್ಲವೇ? ಎಂದವರು ಪ್ರಶ್ನಿಸಿದ್ದಾರೆ. ಉತ್ತರಪ್ರದೇಶ ಹಾಗೂ ಉತ್ತರಾಖಂಡದ ವಿವಿಧೆಡೆ ಕನ್ವರ್ ಯಾತ್ರಾ ಸಾಗುವ ದಾರಿಯುದ್ದಕ್ಕೂ ಇರುವ ಢಾಬಾಗಳು ಹಾಗೂ ಖಾನಾವಳಿಗಳ ಮಾಲಕರನ್ನು ಧರ್ಮದ ಆಧಾರದಲ್ಲಿ ಗುರುತಿಸುವುದನ್ನು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಅವರು ಖಂಡಿಸಿದ್ದು, ಇದೊಂದು ಬಗೆಯ ಭಯೋತ್ಪಾದನೆಯೆಂದು ಕಿಡಿಕಾರಿದ್ದಾರೆ.
ಪುತ್ತೂರು| ಅತ್ಯಾಚಾರ, ವಂಚನೆ ಪ್ರಕರಣ: ವಿದ್ಯಾರ್ಥಿನಿ ಮನೆಗೆ ಮಹಿಳಾ ಸಂಘಟನೆಗಳ ನಿಯೋಗ ಭೇಟಿ
ಪುತ್ತೂರು: ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆಗೆ ಒಳಗಾದ ಪುತ್ತೂರಿನ ವಿದ್ಯಾರ್ಥಿನಿಯ ಮನೆಗೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದರು. ಮದುವೆಯಾಗುವ ಭರವಸೆ ನೀಡಿ, ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ನಂತರ ರಾಜಕೀಯ ಬೆಂಬಲ ದಿಂದ ತಲೆ ಮರೆಸಿಕೊಂಡಿರುವ ಕೃಷ್ಣ ರಾವ್ ನನ್ನು ತಕ್ಷಣ ಬಂಧಿಸಬೇಕು. ಗರ್ಭಪಾತಕ್ಕೆ ಒತ್ತಾಯಿಸಿ ಹಣದ ಆಮಿಷ ಒಡ್ಡಿದ ಸಂಘಟನೆಗಳ ಪ್ರಮುಖರನ್ನು ತನಿಖೆಗೆ ಒಳಪಡಿಸಬೇಕು ಎಂದು ಮಹಿಳಾ ನಾಯಕರು ಈ ಸಂದರ್ಭ ಆಗ್ರಹಿಸಿದರು. ಈ ಕುರಿತು ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲೆಯ ಜನಪರ ಮಹಿಳಾ ಸಂಘಟನೆಗಳನ್ನು ಜೊತೆ ಸೇರಿಸಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಿಯೋಗ ಎಚ್ಚರಿಸಿತು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ನ್ಯಾಯವಾದಿ ಶೈಲಜಾ ಅಮರನಾಥ್, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕಾವೂರು, ಅಸುಂತಾ ಡಿ ಸೋಜಾ, ಪ್ರಮೀಳಾ ದೇವಾಡಿಗ, ಪ್ಲೇವಿ ಕ್ರಾಸ್ತಾ ನಿಯೋಗದಲ್ಲಿ ಇದ್ದರು.
ಮಣಿಪಾಲ: ಆ.10ರಂದು ನಾಲ್ಕನೇ ಫ್ರೀಡಂ ರನ್
ಉಡುಪಿ, ಜು.2: ಕೆನರಾ ಬ್ಯಾಂಕಿನ ಮಣಿಪಾಲ ವೃತ್ತ ಕಚೇರಿಯ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುಂದಿನ ಆ.10ರಂದು ರವಿವಾರ ‘ಫ್ರೀಡಂ ರನ್’ನ ನಾಲ್ಕನೇ ಆವೃತ್ತಿ ಮಣಿಪಾಲದಲ್ಲಿ ನಡೆಯಲಿದೆ ಎಂದು ಸ್ಪರ್ಧೆಯ ಸಂಯೋಜಕರಲ್ಲಿ ಒಬ್ಬರಾದ ಸಚಿನ್ ಶೆಟ್ಟಿ ತಿಳಿಸಿದ್ದಾರೆ. ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾರಥಾನ್ನ ನಾಲ್ಕನೇ ಆವೃತ್ತಿ ದೇಶದ ವೀರಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ನಡೆಯಲಿದೆ. ಸ್ಪರ್ಧೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ ಎಂದ ಅವರು 21ಕಿ.ಮೀ.ನ ಹಾಫ್ ಮ್ಯಾರಥಾನ್ ಅಲ್ಲದೇ 10ಕಿಮೀ, 5ಕಿ.ಮೀ ಹಾಗೂ 3ಕಿ.ಮೀ.ನಲ್ಲಿ ನಡೆಯಲಿದೆ ಎಂದರು. ಸ್ಪರ್ಧೆ ಆ.10ರ ರವಿವಾರ ಮುಂಜಾನೆ 5ಗಂಟೆಗೆ ಮಣಿಪಾಲದ ಕೆನರಾ ಬ್ಯಾಂಕ್ನ ವೃತ್ತಕಚೇರಿ ಬಳಿಯಿಂದ ಪ್ರಾರಂಭಗೊಳ್ಳಲಿದೆ. ಸಮಾರೋಪ ಸಮಾರಂಭ 8:30ರಿಂದ 9ರ ನಡುವೆ ನಡೆಯಲಿದೆ ಎಂದು ಸಚಿನ್ ಶೆಟ್ಟಿ ವಿವರಿಸಿದರು. ಒಟ್ಟು ಐದು ಲಕ್ಷ ರೂ.ಬಹುಮಾನ ಮೊತ್ತ ಇರುವ ಈ ಮ್ಯಾರಥಾನ್ ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಿಂದ ಟ್ಯಾಪ್ಮಿ, ಪರ್ಕಳ, ಆತ್ರಾಡಿಯಿಂದ ಮತ್ತೆ ಮಣಿಪಾಲದವರೆಗೆ ನಡೆಯಲಿದೆ. ಇದರೊಂದಿಗೆ 8ರಿಂದ 10ವರ್ಷದೊಳಗಿನ ವಿದ್ಯಾರ್ಥಿಗಳಿಗೆ, ಮಾಹೆಯ ವಿದ್ಯಾರ್ಥಿಗಳಿಗೆ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಗೆ ಪ್ರತ್ಯೇಕವಾದ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು. ಶಾಲಾ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲರೂ ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಆನ್ಲೈನ್ ಮೂಲಕ ಅಥವಾ ಕೆನರಾ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ನೊಂದಣಿ ಮಾಡಿಕೊಳ್ಳಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸ್ಪರ್ಧೆಯ ಸಂಯೋಜಕರಾದ ವಿಶಾಲ್ ಸಿಂಗ್,, ರೋಹಿತ್, ಸೂರಜ್ ಉಪ್ಪೂರು, ದುರ್ಗಾಪ್ರಸಾದ್ ಉಪಸ್ಥಿತರಿದ್ದರು.
‘ಡಿಜಿಟಲ್ ಎರೆಸ್ಟ್’; ಉತ್ತರ ಪ್ರದೇಶ ವ್ಯಕ್ತಿಗೆ 1 ಕೋಟಿ ರೂ. ವಂಚನೆ
ಶಾಹಜಹಾನ್ಪುರ (ಉ.ಪ್ರ.): ಶಾಹಜಹಾನ್ ಪುರದ ನಿವಾಸಿಯೋರ್ವರನ್ನು ಡಿಜಿಟಲ್ ಎರೆಸ್ಟ್ ಮಾಡಲು ಜಾರಿ ನಿರ್ದೇಶನಾಲಯ (ಈಡಿ) ಹಾಗೂ ಸಿಬಿಐ ಅಧಿಕಾರಿಗಳ ಸೋಗು ಹಾಕಿದ ಹಾಗೂ ನಕಲಿ ಆನ್ಲೈನ್ ನ್ಯಾಯಾಲಯದ ಮೂಲಕ 1 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದ ಆರೋಪದಲ್ಲಿ 7 ಮಂದಿಯನ್ನು ಉತ್ತರಪ್ರದೇಶ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2.8 ಕೋಟಿ ರೂ. ಕಾನೂನುಬಾಹಿರ ವರ್ಗಾವಣೆಯ ಆರೋಪದ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು 60 ವರ್ಷದ ಶರದ್ ಚಂದ್ ಅವರಿಗೆ ಮನವರಿಕೆ ಮಾಡಲಾಗಿತ್ತು. ಇದು ಈ ಗುಂಪಿನ ಕಾರ್ಯಾಚರಣೆ ವಿಧಾನವಾಗಿತ್ತು. ವಂಚಕರು ಮೊದಲು ಈಡಿ ಹಾಗೂ ಸಿಬಿಐ ಅಧಿಕಾರಿಗಳ ಸೋಗು ಹಾಕಿ ಮೇ 6ರಂದು ಫೋನ್ ಮೂಲಕ ಅವರನ್ನು ಸಂಪರ್ಕಿಸಿದರು. ಅನಂತರ ನ್ಯಾಯಾಧೀಶರಂತೆ ಸೋಗು ಹಾಕುವ ಮೂಲಕ ವಂಚನೆಯನ್ನು ಮುಂದುವರಿಸಿದರು. ಅಲ್ಲದೆ ಸರಿಸುಮಾರು ತಿಂಗಳು ಕಾಲ ವ್ಯಾಟ್ಸ್ಆ್ಯಪ್ ಮೂಲಕ ನಕಲಿ ವರ್ಚುವಲ್ ವಿಚಾರಣೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಚುವಲ್ ವಿಚಾರಣೆ ಸಂದರ್ಭ ನಕಲಿ ವಕೀಲರು, ನ್ಯಾಯಾಧೀಶರು ಚಾಂದ್ ಅವರನ್ನು ಬೆದರಿಸಿದರು. ಅಂತಿಮವಾಗಿ ವಕೀಲರೆಂದು ಹೇಳಲಾದ 9 ವ್ಯಕ್ತಿಗಳಿಗೆ ಸೇರಿದ 40 ಖಾತೆಗಳಿಗೆ 1.04 ಕೋಟಿ ರೂ. ವರ್ಗಾಯಿಸುವಂತೆ ಅವರನ್ನು ಬಲವಂತಪಡಿಸಿದರು. ಸರಕಾರೇತರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಚಾಂದ್ ಡಿಜಿಟಲ್ ಎರೆಸ್ಟ್ ಸಂದರ್ಭ ಯಾರೊಬ್ಬರಿಗೂ ಮಾಹಿತಿ ನೀಡಿರಲಿಲ್ಲ. ಆದರೆ ತನ್ನನ್ನು ವಂಚಿಸಲಾಗುತ್ತಿದೆ ಎಂದು ಅರಿವಾದ ಬಳಿಕ ಅವರು ಈ ವಿಷಯದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಶಾಹಜಹಾನ್ ಪುರ ಪೊಲೀಸ್ ವರಿಷ್ಠ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ. ವಿಚಾರಣೆ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್ ಖಾತೆಗಳಿಗೆ 9 ಕೋಟಿ ರೂ. ಸಂದೇಹಾಸ್ಪದ ವರ್ಗಾವಣೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಖಾತೆ ಕೂಡ ಪರಿಶೀಲನೆಯಲ್ಲಿದೆ ಎಂದು ದ್ವಿವೇದಿ ತಿಳಿಸಿದ್ದಾರೆ. ಬಂಧಿತರನ್ನು ಸಚಿನ್, ಪ್ರಶಾಂತ್, ಗೌತಮ್ ಸಿಂಗ್, ಸಂದೀಪ್ ಕುಮಾರ್, ಸೈಯದ್ ಸೈಫ್, ಆರ್ಯನ್ ಶರ್ಮಾ ಹಾಗೂ ಪವನ್ ಯಾದವ್ ಎಂದು ಗುರುತಿಸಲಾಗಿದೆ. ಎಲ್ಲರೂ 20ರಿಂದ 28 ವರ್ಷಗಳ ನಡುವಿನ ವಯಸ್ಸಿನವರು. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಐಟಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾಲ್ಕಿ, ಔರಾದ್ ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ ; ಅವ್ಯವಸ್ಥೆ ವಿರುದ್ಧ ಅಸಮಾಧಾನ
ಬೀದರ್ : ಭಾಲ್ಕಿ ಹಾಗೂ ಔರಾದ್ ನ ಅಂಗನವಾಡಿ, ಸರಕಾರಿ ಶಾಲೆ, ವಸತಿ ಶಾಲೆ, ವಸತಿ ನಿಲಯ, ಗ್ರಾಮ ಪಂಚಾಯಿತಿ ಸೇರಿ ವಿವಿಧೆಡೆ ಶಶಿಧರ್ ಕೋಸಂಬೆ ಅವರ ನೇತೃತ್ವದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಇಂದು ಭೇಟಿ ನೀಡಿ ಅವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದರು. ಭಾಲ್ಕಿಯ ತಳವಾಡ(ಕೆ) ಗ್ರಾಮದ ಅಂಗನವಾಡಿ, ಸರಕಾರಿ ಶಾಲೆ, ಕೋನ ಮೇಳಕುಂದಾ ಮೊರಾರ್ಜಿ ವಸತಿ ಶಾಲೆ, ನಿಟ್ಟೂರ(ಬಿ) ಗ್ರಾಮ ಪಂಚಾಯತಿಗೆ ತಂಡ ಭೇಟಿ ನೀಡಿ ಮೊಟ್ಟೆ, ಆಹಾರ ಧಾನ್ಯ ಪೂರೈಕೆ ಸೇರಿ ಶಾಲಾ, ಮಕ್ಕಳ ಗ್ರಾಮ ಸಭೆ ನಡಾವಳಿಯ ದಾಖಲೆ ಪರಿಶೀಲನೆ ನಡೆಸಿತು. ಅಂಗನವಾಡಿ ಕೇಂದ್ರದ ಭೇಟಿ ನೀಡಿದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಇಲ್ಲದಿರುವುದನ್ನು ಕಂಡು ಆಯೋಗದ ಸದಸ್ಯರು ಗರಂ ಆದರು. 23 ಮಕ್ಕಳ ದಾಖಲಾತಿಯಲ್ಲಿ ಕೇವಲ 2 ಮಕ್ಕಳು ಹಾಜರಿ ಇದದ್ದು ಕಂಡು ಉಳಿದ ಮಕ್ಕಳು ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ ಅವರು, ಸಣ್ಣ ಗಾತ್ರದ ಮೊಟ್ಟೆ ವಿತರಣೆ ಮಾಡುತ್ತಿರುವುದನ್ನು ಗಮನಿಸಿ ಒಂದು ಮಗುವಿಗೆ ಕನಿಷ್ಠ 50 ಗ್ರಾಂ. ನಷ್ಟು ಮೊಟ್ಟೆ ನೀಡಬೇಕು ಎಂದು ಎಚ್ಚರಿಸಿದರು. ಸಣ್ಣ ಗಾತ್ರದ ಮೊಟ್ಟೆ ಪೂರೈಕೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸದ ಅಂಗನವಾಡಿ ಕಾರ್ಯಕರ್ತೆ ಮತ್ತು ಮೊಟ್ಟೆ ಪೂರೈಕೆದಾರರಿಗೆ ನೋಟಿಸ್ ನೀಡಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸಿಡಿಪಿಓಗೆ ಸೂಚನೆ ನೀಡಿದರು. ಔರಾದ್ ತಾಲ್ಲೂಕಿನಲ್ಲಿ ಬೀದಿ ಬದಿ ಇರುವ ಅಂಗಡಿಗಳಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಾವೇ ಮೂವರು ಬಾಲ ಕಾರ್ಮಿಕರನ್ನು ಹಿಡಿದು ಕಾರ್ಮಿಕ ಇಲಾಖೆಗೆ ಒಪ್ಪಿಸಿದ್ದೇವೆ. ಇಲ್ಲಿನ ಕಾರ್ಮಿಕ ಇಲಾಖೆ ಏನು ಮಾಡುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಇದು ಅಘಾತಕಾರಿ ಸಂಗತಿಯಾಗಿದೆ ಎಂದು ತಂಡದ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕವಾಗಿ ಸಿಎಂರಿಂದ ಅವಮಾನ : ಸ್ವಯಂ ನಿವೃತ್ತಿಗೆ ಮುಂದಾದ ಧಾರವಾಡ ಎಎಸ್ಪಿ
ಧಾರವಾಡ : ಇತ್ತೀಚೆಗೆ ಬೆಳಗಾವಿಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾದ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಸ್ವಯಂ ನಿವೃತ್ತಿಯಾಗಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿ ಕೋರಿ ಸರಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳು ನಾರಾಯಣ ಭರಮನಿ ಅವರ ಮನವೊಲಿಕೆ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಏನಿದು ಘಟನೆ?: ಎಪ್ರಿಲ್ನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದ ವೇಳೆ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗಲೇ ಕೆಲ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, ‘ಏಯ್.. ಯಾರಿಲ್ಲಿ ಎಸ್ಪಿ? ಬಾರಯ್ಯ ಇಲ್ಲಿ” ಎಂದು ವೇದಿಕೆ ಮೇಲೆ ಕರೆದು ಕರ್ತವ್ಯದಲ್ಲಿದ್ದ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿದ್ದರು. ಸಿದ್ದರಾಮಯ್ಯ ಅವರ ಈ ವರ್ತನೆಗೆ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯನ್ನು ಅವಮಾನಿಸುವುದು, ಅವಹೇಳನ ಮಾಡುವುದು ಸರಿಯಲ್ಲ ಎಂಬುದಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ನಾರಾಯಣ ಭರಮನಿ ಅವರು ಪತ್ರದಲ್ಲಿ ತಮಗಾದ ಅವಮಾನದ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
Karnataka Weather Forecast : ರಾಜ್ಯದಲ್ಲಿ ಜುಲೈ 3 ರಿಂದ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಲಮಟ್ಟಿ ಜಲಾಶಯದಿಂದ 1 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದ್ದು, ತುಂಗಭದ್ರಾ ಜಲಾಶಯದ 6 ಕ್ರಸ್ಟ್ಗೇಟ್ಗಳನ್ನು ತೆರೆಯಲಾಗಿದೆ.
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದಲಿತ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಹತ್ತು ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾಧ್ಯಾಪಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ವಿವಿಯ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಿ.ಸೋಮಶೇಖರ್, ಬಾಬು ಜಗಜೀವನರಾಂ ಸಂಶೋಧನಾ ಕೇಂದ್ರದ ಪ್ರೊ. ವಿಜಯಕುಮಾರ್ ಎಚ್. ದೊಡ್ಡಮನಿ, ವಿದ್ಯಾರ್ಥಿಗಳ ಕಲ್ಯಾಣ ನಿರ್ದೇಶಕ ಪ್ರೊ.. ನಾಗೇಶ್ ಪಿ.ಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೋಶದ ವಿಶೇಷಾಧಿಕಾರಿ ಪ್ರೊ.. ಕೃಷ್ಣಮೂರ್ತಿ ಜಿ, ಪಿಎಂ-ಉಷಾ ಸಂಯೋಜನಕ ಪ್ರೊ.. ಸುದೇಶ್ ವಿ, ದೂರ ಮತ್ತು ಆನ್ಲೈನ್ ಶಿಕ್ಷಣ ಕೇಂದ್ರದ ನಿರ್ದೇಶಕ ಪ್ರೊ.. ಮುರಳೀಧರ ಬಿ.ಎಲ್. ಮಾಳವೀಯ ಶಿಕ್ಷಕರ ತರಬೇತಿ ಸಂಸ್ಥೆ ನಿರ್ದೇಶಕ ಪ್ರೊ.. ಶಶಿಧರ್ ಎಂ., ಪ್ರಸಾರಾಂಗ ನಿರ್ದೇಶಕ ಪ್ರೊ.. ರಮೇಶ, ಸಮಾನ ಅವಕಾಶ ಕೋಶದ ನಿರ್ದೇಶಕ ಡಾ. ಸುರೇಶ್ ಆರ್, ಬ್ರೇಲ್ ಸೆಂಟರ್ ನಿರ್ದೇಶಕ ಡಾ. ಕುಂಬಿನರಸಯ್ಯ ಎಸ್. ಪತ್ರಕ್ಕೆ ಸಹಿ ಹಾಕಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸುಮಾರು ವರ್ಷಗಳಿಂದ ದಲಿತ ಶಿಕ್ಷಕರು ತಮ್ಮ ಶೈಕ್ಷಣಿಕ ಜವಾಬ್ದಾರಿ ಹೊರತುಪಡಿಸಿ, ಹಲವಾರು ಆಡಳಿತ ಹುದ್ದೆಗಳ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಾ ಆಡಳಿತ ವರ್ಗಕ್ಕೆ ಹೊರೆಯನ್ನು ಕಡಿಮೆಗೊಳಿಸಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಶಾಸನಬದ್ಧ ಹುದ್ದೆಗಳ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯದ ಬಹುಸಂಖ್ಯಾತ ದಲಿತರಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ. ನಮಗೆ ನೀಡಿದ ಎಲ್ಲ ಹಚ್ಚುವರಿ ಜವಾಬ್ದಾರಿಯನ್ನು ಕೇವಲ ಉಸ್ತುವಾರಿ ಎಂದು ಆದೇಶ ನೀಡಿ, ಈ ಜವಾಬ್ದಾರಿಗಳಿಗೆ ಈ ಹಿಂದೆ ಅನುಸರಿಸಿದಂತೆ ಸಹಜವಾಗಿ ನಮ್ಮ ಖಾತೆಗಳಿಗೆ ಸಂದಾಯವಾಗಬೇಕಿದ್ದ ಇಎಲ್ಅನ್ನು ತಪ್ಪಿಸುವ ವ್ಯವಸ್ಥೆ ನಡೆದಿದೆ. ಈ ಬಗ್ಗೆ ನಮ್ಮ ಹಿಂದಿನ ಮನವಿಗಳಿಗೆ ಆಡಳಿತ ವರ್ಗದಿಂದ ಯಾವುದೇ ರೀತಿಯ ಮನ್ನಣೆ ದೊರೆಯುತ್ತಿರುವುದಿಲ್ಲ. ಆದುದರಿಂದ ನಮ್ಮ ಬೇಡಿಕೆಗೆ ಕೂಡಲೇ ಪುರಸ್ಕಾರ ನೀಡದಿದ್ದಲ್ಲಿ ನಮ್ಮ ಜವಾಬ್ದಾರಿಗಳಿಗೆ ನಾವು ರಾಜೀನಾಮೆ ಸಲ್ಲಿಸಿದ್ದೇವೆಂದು ಭಾವಿಸಬಹುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿದ್ದಾರೆ.
ಕಲಬುರಗಿ | ಕರ್ನಾಟಕ ನವನಿರ್ಮಾಣ ಸೇನೆಯ ಅಧ್ಯಕ್ಷರಾಗಿ ವಿಕಾಸ ಚವ್ಹಾಣ್ ನೇಮಕ
ಕಲಬುರಗಿ: ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷರಾದ ಭೀಮಾಶಂಕರ ಪಾಟೀಲ ಅವರ ಆದೇಶದ ಮೇರೆಗೆ ಕಲಬುರಗಿ ನಗರ ಘಟಕದ ಅಧ್ಯಕ್ಷರನ್ನಾಗಿ ವಿಕಾಸ ಚವ್ಹಾಣ್ ಅವರನ್ನು ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ರವಿ ದೇಗಾಂವ ಅವರು ನೇಮಕ ಮಾಡಿದರು. ಜಿಲ್ಲಾಧ್ಯಕ್ಷ ರವಿ ದೇಗಾಂವ ಮಾತನಾಡಿ, ನಾಡು, ನುಡಿ, ಗಡಿ, ಜಲ ಭಾಷೆಯ ವಿಷಯದಲ್ಲಿ ಯಾವತ್ತೂ ಯಾರೊಂದಿಗೂ ರಾಜಿಯಾಗದೇ ಕೆಚ್ಚೆದೆಯ ಹೋರಾಟ ಮಾಡುವುದರ ಮೂಲಕ ಕನ್ನಡ ತಾಯಿಯ ಸೇವೆಯನ್ನು ಮಾಡೋಣ ಎಂದರು. ಜಿಲ್ಲೆಯ ಜಲ್ವಂತ ಸಮಸ್ಯೆಗಳ ಬಗ್ಗೆ ಹೋರಾಟ ಕೈಗೆತ್ತಿಕೊಂಡು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆದು ಬಗೆಹರಿಸಲು ಪ್ರಯತ್ನಿಸೋಣ. ಸೇನೆಯ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಎಲ್ಲರೂ ಕಾಯಕದ ಜೊತೆಗೆ ನಾಡಿನ ಸೇವೆಗೆ ಕಂಕಣ ಬದ್ಧರಾಗಿ ಕನ್ನಡದ ಕರ್ನಾಟಕದ ಋಣ ತಿರಿಸೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಂಬು ಕಂಬಾರ್, ರಾಜು ಕಮಲಾಪುರೆ, ಚಂದ್ರು ಸಲಗರ, ಜಯಾನಂದ ಬಿರಾದಾರ್, ಶೇಖರ್ ವಗರಗಿ ಸೇರಿದಂತೆ ಸೇನೆಯ ಪದಾಧಿಕಾರಿಗಳು ಇದ್ದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ
ಮಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ / ಕೆಎಎಸ್ ಗೆಜೆಟೆಡ್ ಪ್ರೋಬೆಶನರಿ ವಸತಿಸಹಿತ ಪರೀಕ್ಷಾ ಪೂರ್ವ ತರಬೇತಿ ಯನ್ನು ಬೆಂಗಳೂರಿನ ಹಜ್ ಭವನದಲ್ಲಿ ನೀಡಲಾಗುತ್ತಿದ್ದು, ಕೆಪಿಎಸ್ಸಿ ಗ್ರೂಪ್ ಸಿ , ಆಆರ್ಬಿ ಮತ್ತು ಎಸ್ಎಸ್ಸಿ ವಸತಿರಹಿತ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲಾಗುತ್ತಿದ್ದು, ಈ ತರಬೇತಿಗೆ ಅರ್ಹ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆ.2 ಆಗಿದ್ದು, ಅಭ್ಯರ್ಥಿಗಳು https://sevasindhu.karnataka.gov.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸುವ ವಿಧಾನ ಮತ್ತು ಮಾರ್ಗಸೂಚಿಗಳ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ಜಾಲತಾಣ https://dom.karnataka.gov.in ದಲ್ಲಿ ವೀಕ್ಷಿಸಿ ಹಾಗೂ ಹತ್ತಿರದ ಜಿಲ್ಲಾ ಮತ್ತು ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ದ.ಕ. ಜಿಲ್ಲಾ ಅಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
ಕಲಬುರಗಿ | ಫ.ಗು.ಹಳಕಟ್ಟಿಯವರ 146ನೇ ಜನ್ಮ ದಿನಾಚರಣೆ
ಕಲಬುರಗಿ: ವಚನಗಳನ್ನು ಸಂರಕ್ಷಣೆ ಮಾಡಿ ನಮಗೆ ಶರಣ ಸಾಹಿತ್ಯವನ್ನು ಓದಲು ಮಹತ್ವದ ಕಾರ್ಯ ಮಾಡಿದ ಡಾ.ಫ.ಗು. ಹಳ್ಳಕಟ್ಟಿ ಅವರು ಸೇವೆ ಅವಿಸ್ಮರಣೀಯ ಎಂದು ಕಲಬುರಗಿ ಚೇಂಬರ್ ಆಫ್ ಕಾರ್ಮಸ್ನ ಅಧ್ಯಕ್ಷ ಶರಣು ಪಪ್ಪಾ ಹೇಳಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಸುವರ್ಣ ಸಭಾ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಡಾ.ಫ.ಗು. ಹಳಕಟ್ಟಿಯವರ 146ನೇ ಜನ್ಮದಿನ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಯ ಕಾರ್ಯಕ್ರಮದಲ್ಲಿ ಫ.ಗು ಹಲಕಟ್ಟಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿದರು. ಕಲ್ಯಾಣದ ಕ್ರಾಂತಿಯಿಂದ ಚದುರಿ ಹೋದ ಶರಣರ ವಚನಗಳನ್ನು ಸಂರಕ್ಷಣೆ ಮಾಡಿ ಇಂದು ನಮಗೆ ನೀಡಿದ್ದಾರೆ. ಶರಣರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಮಾದನ ಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವ ಪಾಟೀಲ ಜವಳಿ ಮಾತನಾಡಿ, ಕತ್ತಲೆಯಲ್ಲಿ ಕಳೆದು ಹೋಗಿದ್ದ ವಚನಗಳನ್ನು ಸಂರಕ್ಷಣೆ ಮಾಡಿ ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶಿಯಾಗಬೇಕೆಂಬ ಕಾರಣಕ್ಕೆ ತಮ್ಮ ಇಡೀ ಬದುಕು ಸವೆಸಿದ ಫ.ಗು. ಹಳಕಟ್ಟಿಯವರು ಈ ನೆಲದ ಬೆಳಕ್ಕಾಗಿ ಈ ನೆಲದ ದಾರ್ಶನಿಕರಾಗಿ ಗಮನ ಸೆಳೆಯುತ್ತಾರೆ ಎಂದರು. ರಾಷ್ಟ್ರಪತಿ ಪದಕ ಪುರಸ್ಕೃತರಾದ ಹಾಗೂ ನಿವೃತ್ತ ಡಿ.ವೈ.ಎಸ್.ಪಿ. ಸಮಿತಿ ಅಧ್ಯಕ್ಷರಾದ ಆರ್.ಸಿ.ಫಾಳೆ ಅವರು ಮಾತನಾಡಿದರು. ವೀರಶೈವ ಮಹಾಸಭಾದ ಕಾರ್ಯಾಧ್ಯಕ್ಷರು ರವಿಂದ್ರ ಶಾಹಬಾದಿ, ಜಿಲ್ಲಾಧಿಕಾರಿಗಳ ಕಚೇರಿ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ಸಹಾಯಕ ನಿರ್ದೇಶಕ ಶಿವಶರಣಪ್ಪ ದನ್ನಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಕನ್ನಡದ ಭವನ ಸಾಂಸ್ಕೃತಿಕ ಮೆರವಣಿಗೆಯನ್ನು ಸಾಮಾಜಿಕ ಚಿಂತಕರಾದ ಜಾಹ್ನವಿ, ಶರಣಕುಮಾರ ಮೋದಿ ಚಾಲನೆ ನೀಡಿದರು. ವೇದಿಕೆ ಮೇಲೆ ಜಿಲ್ಲಾಧಿಕಾರಿಗಳ ಶಿಷ್ಟಾಚಾರದ ತಹಶೀಲ್ದಾರ್ ಪಂಪಯ್ಯ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಗಡಿ, ಸಮಾಜದ ಮುಖಂಡರಾದ ಅಪ್ಪಾರಾವ ಅಕ್ಕೋಣೆ, ಶಿವಪುತ್ತಪ್ಪ ಭಾವಿ, ವಿನೋದಕುಮಾರ, ಜೇನವೇರಿ , ಶಿವಲಿಂಗಪ್ಪ ಅಷ್ಟಗಿ, ಡಾ.ಬಸವರಾ ಚೆನ್ನಾ ಸೇರಿದಂತೆ ಹಲವರು ಇದ್ದರು.
ಎಚ್ಸಿಜಿ ಆಸ್ಪತ್ರೆ ವಿರುದ್ಧ ತನಿಖೆಗೆ ಆದೇಶಿಸಿದ ಸರಕಾರ
ಬೆಂಗಳೂರು : ಇಲ್ಲಿನ ಎಚ್ಸಿಜಿ(ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್) ಆಸ್ಪತ್ರೆಯಲ್ಲಿ ನಡೆಸಲ್ಪಟ್ಟ ಕ್ಲಿನಿಕಲ್ ಪ್ರಯೋಗಗಳಲ್ಲಿ ಬಡ ರೋಗಿಗಳನ್ನು ಬಳಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಮಂಡಳಿಯು ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದೆ. ಸಹಾಯಕ ಡ್ರಗ್ಸ್ ಕಾಂಟ್ರೋಲಾರ್ ಡಾ. ಬಿಕಾಶ್ ರಾಯ್, ಡ್ರಗ್ಸ್ ಇನ್ಸ್ ಪೆಕ್ಟರ್ ಸುನೀತಾ ಜೋಶಿ ಸೇರಿದಂತೆ ಮತ್ತಿತರ ಅಧಿಕಾರಿಗಳು ತನಿಖಾ ತಂಡದಲ್ಲಿದ್ದು, ಇದೇ ತಿಂಗಳಿನಲ್ಲಿ ತನಿಖೆಯನ್ನು ನಡೆಸಿ ವರದಿ ನೀಡಲಿದ್ದಾರೆ. ಜು.3, ಜು.4 ಮತ್ತು ಜು.5ರಂದು ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ. ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಎಂಬುದು ಹಗರಣ ರೀತಿಯಲ್ಲಿ ನಡೆಯುತ್ತಿದೆ ಎಂದು ಇದೇ ಸಂಸ್ಥೆಯ ನೈತಿಕ ಸಮಿತಿ ಮುಖ್ಯಸ್ಥ ನ್ಯಾ.ಪಿ. ಕೃಷ್ಣಭಟ್ ಆರೋಪಿಸಿದ್ದರು. ಈ ಬಗ್ಗೆ ಕಂಪನಿಯ ಉನ್ನತ ಆಡಳಿತ ವರ್ಗಕ್ಕೆ ಪತ್ರ ಹಾಗೂ ಖುದ್ದಾಗಿ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಅದನ್ನು ಸರಿಪಡಿಸುವ ಬದಲು ಎಚ್ಸಿಜಿ ಆಡಳಿತ ಅಕ್ರಮವನ್ನೇ ಮುಚ್ಚಿ ಹಾಕಲು ಯತ್ನಿಸಿತು ಎಂಬ ಆರೋಪ ಕೇಳಿಬಂದಿತ್ತು.
ಹದಿಹರೆಯದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಮುಂಬೈನ ಶಿಕ್ಷಕಿಯ ಬಂಧನ
ಮುಂಬೈ: ಹದಿನಾರು ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಮುಂಬೈನ ಪ್ರತಿಷ್ಠಿತ ಶಾಲೆಯೊಂದರ 40 ವರ್ಷ ವಯಸ್ಸಿನ ಶಿಕ್ಷಕಿಯನ್ನು ಬುಧವಾರ ಬಂಧಿಸಲಾಗಿದೆ. ಆಕೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕಿಯ ಲೈಂಗಿಕ ಕಿರುಕುಳದ ಕುರಿತು ಸಂತ್ರಸ್ತ ವಿದ್ಯಾರ್ಥಿಯು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆಬಳಿಕ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಿಕರು ದೂರು ದಾಖಲಿಸಿದ್ದರು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಮೂಹಿಕ ನೃತ್ಯ ಕಲಿಸುತ್ತಿದ್ದ ಸಂದರ್ಭದಲ್ಲಿ ಸಂತ್ರಸ್ತ ಬಾಲಕನೊಂದಿಗೆ ಆರೋಪಿ ಶಿಕ್ಷಕಿಗೆ ಸಂಪರ್ಕವಾಗಿತ್ತು. ಈ ಶಿಕ್ಷಕಿಯು ಬಾಲಕನನ್ನು ಮುಂಬೈನ ವಿವಿಧ ಪಂಚತಾರಾ ಹೋಟೆಲ್ಗಳಿಗೆ ಕರೆದೊಯ್ಯುತ್ತಿದ್ದಳೆಂದು ಮೂಲಗಳು ತಿಳಿಸಿವೆ. ಕಳೆದೊಂದು ವರ್ಷದಿಂದ ಶಿಕ್ಷಕಿಯು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಳು. 2023ರ ಡಿಸೆಂಬರ್ನಲ್ಲಿ ಶಿಕ್ಷಕಿಗೆ ಸಂತ್ರಸ್ತ ವಿದ್ಯಾರ್ಥಿಯ ಸಂಪರ್ಕವಾಗಿತ್ತು ಮತ್ತು 2024ರಲ್ಲಿ ಆಕೆಯ ಆತನೊಂದಿಗೆ ಮೊದಲ ಬಾರಿಗೆ ಲೈಂಗಿಕ ಪೀಡನೆ ನೀಡಿದ್ದಳೆಂದು ಆರೋಪಿಸಲಾಗಿದೆ. ಆರೋಪಿ ಶಿಕ್ಷಕಿಯು ಬಾಲಕನನ್ನು ತನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಲೈಂಗಿಕ ದೌರ್ಜನ್ಯವೆಸಗುತ್ತಿದ್ದಳು. ಅದಕ್ಕೆ ಮುನ್ನ ಆತನಿಗೆ ಮದ್ಯವನ್ನು ಕುಡಿಸುತ್ತಿದ್ದಳೆಂದು ಪೊಲೀಸರು ಆರೋಪಿಸಿದ್ದಾರೆ. ಇದರಿಂದಾಗಿ ಬಾಲಕನಲ್ಲಿ ತೀವ್ರ ಉದ್ವೇಗದ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು. ಆಗ ಶಿಕ್ಷಕಿಯು ಆತನಿಗೆ ಉದ್ವೇಗನಿವಾರಕ ಮಾತ್ರೆಗಳನ್ನು ನೀಡುತ್ತಿದ್ದಳೆಂದು ಅವರು ಹೇಳಿದ್ದಾರೆ. ಬಾಲಕನ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿದ ಆತನ ಕುಟುಂಬಿಕರು, ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ನೈಜ ಸಂಗತಿ ಬಯಲಿಗೆ ಬಂದಿತು. ಆದರೆ ಬಾಲಕನು ಶೀಘ್ರದಲ್ಲೇ ಶಾಲೆಯಿಂದ ತೇರ್ಗಡೆಗೊಳ್ಳಲಿರುವುದರಿಂದ ಘಟನೆಯ ಬಗ್ಗೆ ದೂರು ನೀಡದಿರಲು ಅವರು ನಿರ್ಧರಿಸಿದ್ದರು. ಆದರೆ ಬಾಲಕ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಬಳಿಕವೂ ಆತನನ್ನು ಸಂಪರ್ಕಿಸಲು ಯತ್ನಿಸಿದ್ದಳು. ಆಗ ಬಾಲಕನ ಕುಟುಂಬಿಕರು ಪೊಲೀಸರಿಗೆ ದೂರು ನೀಡಿದ್ದರು.
ಜರ್ಮನಿ ಪ್ರವಾಸ ಕೈಗೊಂಡಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಬೆಂಗಳೂರು : ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ನಿಯೋಗ ಜರ್ಮನಿ ಪ್ರವಾಸ ಕೈಗೊಂಡಿದೆ. ಸಚಿವರ ನೇತೃತ್ವದ ನಿಯೋಗವು ಜರ್ಮನಿಯ ನಾರ್ತ್ ರೈನ್-ವೆಸ್ಟ್ಫಾಲಿಯಾ(ಎನ್ಆರ್ಡಬ್ಲ್ಯೂ), ಡಸೆಲ್ಡಾರ್ಫ್ ಸೇರಿದಂತೆ ಜರ್ಮನಿಯ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ, ಕೌಶಲ್ಯಾಭಿವೃದ್ಧಿ ಹಾಗೂ ಕೌಶಲ್ಯ ವಿನಿಮಯ, ಉದ್ಯೋಗವಾಕಾಶ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಲ್ಲಿನ ನಿಯೋಗಮಟ್ಟದ ಸಮಾಲೋಚನೆ ಸಭೆ ನಡೆಸುತ್ತಿದೆ. ಯಾಂತ್ರೀಕೃತ ಕೈಗಾರಿಕೆ, ಮೆಕಾಟ್ರಾನಿಕ್ಸ್ ಮತ್ತು ಸ್ಮಾರ್ಟ್ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಅಪ್ರೆಂಟಿಸ್ಶಿಪ್, ಕೌಶಲ್ಯ ಸಹಯೋಗದ ಕುರಿತು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದ ನಿಯೋಗ ಅಧ್ಯಯನ ನಡೆಸಿ ಕೆಲವು ಮಹತ್ವದ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ. ಬೆಂಗಳೂರಿನ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕರು ವೈ.ಕೆ.ದಿನೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳ ನಿಯೋಗ ಡಸೆಲ್ಡಾರ್ಫ್ನಲ್ಲಿ ಜರ್ಮನ್ ನಸಿರ್ಂಗ್ ಅಪ್ರೆಂಟಿಶಿಪ್, ಕರ್ನಾಟಕ ಮತ್ತು ಎನ್ಆರ್ಡಬ್ಲ್ಯೂ ನಡುವೆ ರಚನಾತ್ಮಕ ಕೌಶಲ್ಯ ವಲಸೆ ಮಾರ್ಗವನ್ನು ರೂಪಿಸುವ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಜಿಟಿಟಿಸಿಯ ತಾಂತ್ರಿಕ ಪಠ್ಯಕ್ರಮವನ್ನು ಜರ್ಮನ್ ತರಬೇತಿ ಮಾನದಂಡಗಳೊಂದಿಗೆ ಅಳವಡಿಸಿಕೊಳ್ಳುವುದು. ಕರ್ನಾಟಕದ ಯುವಕರಿಗೆ ರಚನಾತ್ಮಕ ಪೂರ್ವ-ನಿರ್ಗಮನ ತರಬೇತಿಯನ್ನು ಪ್ರಾಯೋಗಿಕವಾಗಿ ನೀಡುವ ಬಗ್ಗೆ ಅಧಿಕಾರಿಗಳು ಈಗಾಗಲೇ ಸಮಾಲೋಚನೆ ನಡೆಸಿದರು. ಕರ್ನಾಟಕ ಮತ್ತು ನಾರ್ತ್ ರೈನ್-ವೆಸ್ಟ್ ಫಾಲಿಯಾ ನಡುವೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ದೀರ್ಘಕಾಲೀನ ಕೌಶಲ್ಯಣ ಪಾಲುದಾರಿಕೆ, ಕರ್ನಾಟಕದ ಸಾವಿರಾರು ಯುವಕರು ಜರ್ಮನಿಯಲ್ಲಿ ಉತ್ತಮ ಗುಣಮಟ್ಟದ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುವ ಕುರಿತು ಡಾ.ಪಾಟೀಲ್ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು ಎಂದು ಪ್ರಕಟನೆ ತಿಳಿಸಿದೆ.
ಬಿತ್ತಿ ಪತ್ರಿಕೆಯೇ ಬರಹಕ್ಕೆ ಮೂಲ: ಡಾ.ಸುಬ್ರಹ್ಮಣ್ಯ
ಕೊಣಾಜೆ: ಇಂದು ಕನ್ನಡದಲ್ಲಿ ಬರೆಯುತ್ತಿರುವ ಹೆಚ್ಚಿನೆಲ್ಲಾ ಬರಹಗಾರರಿಗೆ ಅವರ ಬಾಲ್ಯದ ದಿನಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಇದ್ದ ಬಿತ್ತಿ ಪತ್ರಿಕೆಗಳೇ ಮೂಲ ಪ್ರೇರಣೆ. ಅಲ್ಲಿ ಬರವಣಿಗೆ ಆರಂಭಿಸಿ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು ಲೇಖಕರಾಗಿದ್ದಾರೆ. ಆರಂಭಿಕ ಬರವಣಿಗೆಗೆ ಬಿತ್ತಿ ಪತ್ರಿಕೆಯೇ ಮೂಲ ಎಂದು ಲೇಖಕ, ಕಾವೂರು ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಸಿ ಕುಂಜೂರು ಹೇಳಿದರು. ಅವರು ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪತ್ರಿಕಾ ದಿನಾಚರಣೆಯ ದಿನ ಏರ್ಪಡಿಸಿದ್ದ ಬಿತ್ತಿ ಗೋಡೆ ಬರಹ ಪತ್ರಿಕೆಯ ಬಿತ್ತಿ ದಿನಾಚರಣೆಯಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬರಹಗಾರರಾಗಬೇಕಾದವರು ನಿರಂತರ ಓದಿನ ಮೂಲಕ ಸ್ವಂತ ಆಲೋಚನ ಕ್ರಮವನ್ನು ರೂಢಿಸಿಕೊ ಳ್ಳಬೇಕು ಹಾಗೂ ನನ್ನ ಬರವಣಿಗೆ ಸಮಾಜಕ್ಕೆ, ಮಾನವತೆಗೆ ಏನು ನೀಡುತ್ತದೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಹೊಂಗಳ್ಳಿ, ಡಾ.ಧನಂಜಯ ಕುಂಬ್ಳೆ, ಡಾ.ಯಶುಕುಮಾರ್ ಬರವಣಿಗೆಯ ಭಾವ, ಸಂವೇದನೆ, ಜವಾಬ್ದಾರಿ ಮತ್ತು ಕೌಶಲದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ ಮಾತನಾಡಿ ವಿವಿಯಲ್ಲಿ ಕನ್ನಡ ವಿಭಾಗದ ಬಿತ್ತಿ ಪತ್ರಿಕೆಗೆ ಶ್ರೀಮಂತ ಪರಂಪರೆಯಿದೆ. ಹೊಸ ಬರಹಗಾ ರರನ್ನು ರೂಪಿಸುವಲ್ಲಿ ಭಿತ್ತಿಪತ್ರಿಕೆಗೆ ಮಹತ್ವದ ಪಾತ್ರವಿದೆ ಎಂದರು. ಸಮಾರಂಭದಲ್ಲಿ ದಿ.ಗುಂಡ್ಮಿ ಚಂದ್ರಶೇಖರ ಐತಾಳ ನೆನಪಿನ ಬಹುಭಾಷಾ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿ ಗಳು ಕವಿತಾ ವಾಚನ ಮಾಡಿದರು. ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ವೀಕ್ಷಿತಾ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಬಿತ್ತಿ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಿತ್ತಿ ಸಂಪಾದಕಿ ಸಂಧ್ಯಾ ಎನ್ ಸ್ವಾಗತಿಸಿದರು. ಉಪ ಸಂಪಾದಕಿ ಪ್ರತೀಕ್ಷಾ ವಂದಿಸಿದರು. ಸೌಮ್ಯ ಪಿ. ಪಿ ನಿರೂಪಿಸಿದರು.
ನ್ಯಾಯಾಂಗ ನಿಂದನೆ; ಶೇಖ್ ಹಸೀನಾಗೆ 6 ತಿಂಗಳು ಜೈಲು ಶಿಕ್ಷೆ
ಹೊಸದಿಲ್ಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಂಗಳವಾರ ಬುಧವಾರ ಬಾಂಗ್ಲಾದ ನ್ಯಾಯಾಲಯ ಆರು ತಿಂಗಳುಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ. ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ಗುಲಾಮ್ ಮುರ್ತಾಝಾ ಮುಜುಂದಾರ್ ನೇತೃತ್ವದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧೀಕರಣ-1(ಐಸಿಟಿ) ಈ ತೀರ್ಪನ್ನು ಪ್ರಕಟಿಸಿದೆ. ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧೀಕರಣದ ಬಗ್ಗೆ ಹಸೀನಾ ನೀಡಿದ್ದಾರೆನ್ನಲಾದ ಕೆಲವು ಹೇಳಿಕೆಗಳು ನ್ಯಾಯಾಧೀಕರಣದ ಘನತೆ ಹಾಗೂ ಅಧಿಕಾರವನ್ನು ದುರ್ಬಲಗೊಳಿಸುವಂತಿವೆ ಎಂದು ನ್ಯಾಯಾಧೀಶರು ಬಾಂಗ್ಲಾದ ಪದಚ್ಯುತ ಪ್ರಧಾನಿಗೆ ಶಿಕ್ಷೆಯನ್ನು ಪ್ರಕಟಿಸುತ್ತಾ ತಿಳಿಸಿದರು. 1971ರ ಬಾಂಗ್ಲಾ ವಿಮೋಚನಾ ಸಮರದಲ್ಲಿ ಯುದ್ಧಪರಾಧಗಳನ್ನು ಎಸಗಿದ ವ್ಯಕ್ತಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಕ್ಕಾಗಿ ಶೇಖ್ ಹಸೀನಾ ಸರಕಾರವು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧೀಕರಣವನ್ನು ಸ್ಥಾಪಿಸಿತ್ತು. ಆದಾಗ್ಯೂ, ಕಳೆದ ವರ್ಷ ನಡೆದ ವಿದ್ಯಾರ್ಥಿ ಬಂಡಾಯದ ಬಳಿಕ ಅವರು ಬಾಂಗ್ಲಾದಿಂದ ಪರಾರಿಯಾಗಿ, ಭಾರತದಲ್ಲಿ ಆಶ್ರಯ ಪಡೆದ ಬಳಿಕ, ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರವು ಐಸಿಟಿಗೆ ಹಲವಾರು ತಿದ್ದುಪಡಿಗಳನ್ನು ತಂದಿತ್ತು ಹಾಗೂ ಹೊಸತಾಗಿ ಸಮಿತಿಗಳನ್ನು, ನ್ಯಾಯಪೀಠಗಳನ್ನು ಹಾಗೂ ಮುಖ್ಯ ಪ್ರಾಸಿಕ್ಯೂಟರ್ ಅವರನ್ನು ನೇಮಿಸಿತ್ತು. ಇಂದು ಪ್ರಕಟಿಸಲಾದ ಶಿಕ್ಷೆಯು, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ಕೈಗೊಳ್ಳಲಾದ ಮೊದಲ ಕಾನೂನು ಕ್ರಮವಾಗಿದೆ. ಹಸೀನಾ ಅವರ ವಿರುದ್ಧ ಸಾಮೂಹಿಕ ನರಮೇಧಕ್ಕೆ ಪ್ರಚೋದನೆ, ಸಹಕಾರ,ಶಾಮೀಲು,ಸಂಚು ಮತ್ತು ಹತ್ಯಾಕಾಂಡ ತಡೆಯುವಲ್ಲಿ ವೈಫಲ್ಯ ಸೇರಿದಂತೆ ಐದು ಆರೋಪಗಳನ್ನು ಪ್ರಾಸಿಕ್ಯೂಟರ್ಗಳು ಹೊರಿಸಿದ್ದು, ಇದು ಬಾಂಗ್ಲಾದೇಶದ ಕಾನೂನಿನಡಿಯಲ್ಲಿ ಮಾನವತೆಯ ವಿರುದ್ದ ಅಪರಾಧವೆಂದು ಪರಿಗಣಿಸಲಾಗುತ್ತದೆ. ಶೇಖ್ ಹಸೀನಾ ಅವರಿಗೆ ಐಸಿಟಿ ಶಿಕ್ಷೆ ಘೋಷಿಸಿರುವುದನ್ನು ಅವರ ನೇತೃತ್ವದ ಪಕ್ಷವಾದ ನಿಷೇಧಿತ ಅವಾಮಿಲೀಗ್ ಖಂಡಿಸಿದೆ. ಲಂಡನ್ ನಿಂದ ಈ ಬಗ್ಗೆ ಹೇಳಿಕೆ ನೀಡಿರುವ ಪಕ್ಷವು ಇದೊಂದು ಡಂಭಾಚಾರದ ವಿಚಾರಣೆಯಾಗಿದೆ ಹಾಗೂ ಆರೋಪಿಗಳು ತಮ್ಮ ಮೇಲೆ ಹೊರಿಸಲಾದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆಂದು ಅದು ಹೇಳಿದೆ. ವಿಚಾರಣೆಯ ನೆಪದಲ್ಲಿ ಸಾವಿರಾರು ಮಂದಿಯ ವಿರುದ್ಧ ಸುಳ್ಳು ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಮಾನವಹಕ್ಕುಗಳ ಮೂಲಭೂತ ತತ್ವಗಳನ್ನು ಉಲ್ಲಂಘಿಸಿ ಸಾರಾಸಗಟಾಗಿ ಬಂಧನಗಳು ನಡೆಯುತ್ತಿವೆ ಎಂದು ಅವಾಮಿ ಲೀಗ್ ಆಪಾದಿಸಿದೆ. ಯೂನುಸ್ ಅವರನ್ನು ಅಧಿಕಾರಕ್ಕೆ ತರುವುದಕ್ಕಾಗಿ ಹಿಂಸಾಚಾರವೆಸಗಿದ ಹಾಗೂ ಪೊಲೀಸರನ್ನು ಕೊಲೆಗೈದ ವ್ಯಕ್ತಿಗಳಿಗೆ ಸಾಮೂಹಿಕವಾಗಿ ಕ್ಷಮಾದಾನ ನೀಡಲಾಗಿದೆಯೆಂದು ಅವಾಮಿ ಲೀಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇನ್ನೊಂದು ಹೇಳಿಕೆಯಲ್ಲಿ ತಿಳಿಸಿದೆ.
ಹೊಸದಿಲ್ಲಿ ಈಗ ಸ್ಥಗಿತಗೊಂಡಿತಗೊಂಡಿರುವ ನ್ಯಾಶನಲ್ ಹೆರಾಲ್ಡ್ ಸುದ್ದಿಪತ್ರಿಕೆಗೆ ಸಂಬಂಧಿಸಿದ ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ತನಗೆ ಸಮರ್ಪಕ ಪುರಾವೆಗಳು ದೊರೆತಲ್ಲಿ ತಾನು ಕಾಂಗ್ರೆಸ್ ಪಕ್ಷವನ್ನು ಆರೋಪಿಯಾಗಿಸುವುದಾಗಿ ಜಾರಿ ನಿರ್ದೇಶನಾಲಯವು ಬುಧವಾರ ತಿಳಿಸಿದೆ. ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿ.ರಾಜು ಅವರು ನ್ಯಾಶನಲ್ ಹೆರಾಲ್ಡ್ ಪ್ರಕರಣದ ದೈನಂದಿನ ಆಲಿಕೆಯನ್ನು ನಡೆಸುತ್ತಿರುವ ದಿಲ್ಲಿಯ ವಿಶೇಷ ನ್ಯಾಯಾಲಯದ ಮುಂದೆ ಈ ಹೇಳಿಕೆಯನ್ನು ನೀಡಿದ್ದಾರೆ. ‘‘ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನು ನಾನು ಆರೋಪಿಯಾಗಿ ಮಾಡಿಲ್ಲ. ಹಾಗೆಂದು ಭವಿಷ್ಯದಲ್ಲಿ ಅದನ್ನು ಆರೋಪಿಯಾಗಿ ಮಾಡಲು ನನಗಿರುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ನಮಗೆ ಸಮರ್ಪಕ ಪುರಾವೆ ಲಭಿಸಿದಲ್ಲಿ ನಾವು ಅವರನ್ನು ಆರೋಪಿಯಾಗಿ ಮಾಡಬಹುದಾಗಿದೆ’’ ಎಂದು ಎಎಸ್ಐ ರಾಜು ತಿಳಿಸಿದ್ದಾರೆ. ನ್ಯಾಶನಲ್ ಹೆರಾಲ್ಡ್ ಸುದ್ದಿಪತ್ರಿಕೆಯ ಪ್ರಕಾಶನ ಸಂಸ್ಥೆಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ಗೆ ಸೇರಿದ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಕಬಳಿಸಲು ನಡೆದ ಸಂಚಿನ ಹಿಂದೆ ಕಾಂಗ್ರೆಸ್ ಪಕ್ಷದ ಸಂಸದೀಯ ಸಮಿತಿಯ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಲೋಕಸಭಾದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇದ್ದರೆಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತು. ಎಜೆಎಲ್ ಪ್ರಕಾಶನಸಂಸ್ಥೆಯು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಸ್ಥಾಪಿಸಿದ್ಧ ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ಕಾಂಗ್ರೆಸ್ ಪಕ್ಷದಿಂದ ಎಜೆಎಲ್ ಪಡೆದುಕೊಂಡಿದ್ದ 90 ಕೋಟಿ ರೂ. ಸಾಲಕ್ಕಾಗಿ, ಸಂಸ್ಥೆಯ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ವರ್ಗಾಯಿಸಿಕೊಳ್ಳಲು ಯಂಗ್ ಇಂಡಿಯನ್ ಎಂಬ ಸಂಸ್ಥೆಯನ್ನು ರೂಪಿಸಲಾಗಿತ್ತು. ಇದರಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಶೇ.76ರಷ್ಟು ಶೇರುಗಳನ್ನು ಹೊಂದಿದ್ದರು ಎಂದು ರಾಜು ತಿಳಿಸಿದರು. ಹಿರಿಯ ಕಾಂಗ್ರೆಸ್ ನಾಯಕರ ಸೂಚನೆಯ ಮೇರೆಗೆ ಜಾಹೀರಾತು ಹಣವನ್ನು ಕೂಡಾ ಎಜೆಎಲ್ಗೆ ಪಾವತಿಸಲಾಗಿತ್ತು ಎಂದು ಈ.ಡಿ. ತಿಳಿಸಿದೆ. ಇದಕ್ಕೂ ಮುನ್ನ ಮೇ 21ರಂದು ನಡೆದ ಆಲಿಕೆಯಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನ್ಯಾಶನಲ್ ಹೆರಾಲ್ಡ್ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿದ 142 ಕೋಟಿ ರೂ.‘ಅಪರಾಧಿಕ ಆದಾಯವನ್ನು’ ಗಳಿಸಿದ್ದರು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸದೇ ಇರುವ ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗೆದು ಹಾಕಲು ಭಾರತ ಚುನಾವಣಾ ಆಯೋಗ ನಿರ್ಧರಿಸಿದ್ದು, ಈ ಬಗ್ಗೆ ವಿಚಾರಣೆಯನ್ನು ಜುಲೈ 18ರಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ. ಬುಧವಾರ ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಭಾರತ ಚುನಾವಣಾ ಆಯೋಗವು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕರಣ 29(ಎ)ರಡಿ ನೋಂದಣಿ ಮಾಡಿಕೊಂಡಿದ್ದರೂ ಸಕ್ರಿಯವಾಗಿ ಕಾರ್ಯನಿರ್ವಹಿಸದ ಹಾಗೂ ವಿಳಾಸ ಪತ್ತೆ ಹಚ್ಚಲು ಸಾಧ್ಯವಿಲ್ಲದ, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಕಾರಣ ಕೇಳಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ನೋಟಿಸ್ ಅನ್ನು ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳಾದ ನಮ್ಮ ಕಾಂಗ್ರೆಸ್, ಪ್ರಜಾ ರೈತ ರಾಜ್ಯ ಪಕ್ಷ, ಕಲ್ಯಾಣ ಕ್ರಾಂತಿ ಪಾರ್ಟಿ, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ, ರಕ್ಷಕ ಸೇನೆ, ಮಹಿಳಾ ಪ್ರಧಾನ ಪಕ್ಷ, ಅಂಬೇಡ್ಕರ್ ಜನತಾ ಪಾರ್ಟಿ ಹಾಗೂ ಕರ್ನಾಟಕ ಪ್ರಜಾ ವಿಕಾಸ ಪಾರ್ಟಿಗಳು 6 ವರ್ಷಗಳಿಂದ ಯಾವುದೇ ಲೋಕಸಭೆ, ವಿಧಾನಸಭೆ ಹಾಗೂ ಉಪ ಚುನಾವಣೆಗಳಲ್ಲಿ ಸ್ಪರ್ಧಿಸದೇ ಇರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗೆದು ಹಾಕಲು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಕಾರಣ ಕೇಳಿ ನೋಟಿಸ್ಅನ್ನು ಜಾರಿಗೊಳಿಸಿದ್ದಾರೆ ಎಂದು ಜಿ.ಜಗದೀಶ ಹೇಳಿದ್ದಾರೆ. ನೋಂದಣಿಯಾದ ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗದು ಹಾಕುವ ಮುನ್ನ ಈ ರಾಜಕೀಯ ಪಕ್ಷಗಳಿಗೆ ತಮ್ಮ ಹೇಳಿಕೆ ದಾಖಲಿಸಲು ಒಂದು ಅವಕಾಶವನ್ನು ಕಲ್ಪಿಸಿದ್ದು, ಜು.18 ರಂದು ಪಕ್ಷದ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳ ಪ್ರಮಾಣ ಪತ್ರ, ಇತರೆ ದಾಖಲೆಗಳು ಹಾಗೂ ಮನವಿಯೊಂದಿಗೆ ವಿಚಾರಣೆಗೆ ಪಕ್ಷದ ಮುಖ್ಯಸ್ಥರು/ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಜಿ.ಜಗದೀಶ ತಿಳಿಸಿದ್ದಾರೆ. ಒಂದು ವೇಳೆ ನಿಗದಿತ ಸಮಯದೊಳಗೆ ಪಕ್ಷದಿಂದ ಯಾವುದೇ ಲಿಖಿತ ಮನವಿ ಸ್ವೀಕೃತವಾಗದೇ ಇದ್ದಲ್ಲಿ ಪಕ್ಷದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಪರಿಗಣಿಸಿ, ಪಕ್ಷವನ್ನು ಸಂಪರ್ಕಿಸದೇ ಚುನಾವಣಾ ಆಯೋಗದಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿ.ಜಗದೀಶ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನ ಸೌಲಭ್ಯ: ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀ ಕರಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರಕಾರದ ವಿದ್ಯಾರ್ಥಿವೇತನ ಯೋಜನೆಯಡಿ ಪ್ರೀ-ಮೆಟ್ರಿಕ್ ಮತ್ತು ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನ ಸೌಲಭ್ಯ ಪಡೆಯಲು ವಿಕಲಚೇತನ ವಿದ್ಯಾರ್ಥಿಗಳಿಂದ ಎಸ್.ಎಸ್.ಪಿ ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಂದನೇ ತರಗತಿಯಿಂದ ಎಸೆಸೆಲ್ಸಿವರೆಗಿನ ವಿದ್ಯಾರ್ಥಿಗಳು ವೆಬ್ಸೈಟ್ - https://ssp.postmatric.karnataka.gov.in/ssppre/- ನಲ್ಲಿ ಹಾಗೂ ಪ್ರಥಮ ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳು ವೆಬ್ಸೈಟ್ -https://ssp.postmatric.karnataka.gov.in/post_sa/signin.aspx-ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳ ಅಂತಸ್ತು, ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820- 2574810, 2574811ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವಚನ ಸಾಹಿತ್ಯ ಪ್ರಚಾರಕ್ಕೆ ಬದುಕನ್ನೇ ಮುಡಿಪಿಟ್ಟ ಡಾ.ಫ.ಗು.ಹಳಕಟ್ಟಿ: ಎಡಿಸಿ ಅಬೀದ್ ಗದ್ಯಾಳ್
ಉಡುಪಿ: ತತ್ವಸಿದ್ಧಾಂತಗಳನ್ನು ಅತ್ಯಂತ ಸರಳವಾಗಿ ಜನಸಾಮಾನ್ಯ ರಿಗೆ ಮನದಟ್ಟು ಮಾಡುವಲ್ಲಿ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಪ್ರಮುಖ ಅಂಗವಾಗಿದೆ. ಕನ್ನಡದ ಶರಣರ ಇಂಥ ವಚನಗಳನ್ನು ಸಂಗ್ರಹಿಸಿ, ಪ್ರಚಾರ ಮಾಡಲು ಡಾ.ಫ.ಗು.ಹಳಕಟ್ಟಿ ಅವರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದ್ದಾರೆ. ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎವಿ ಸಭಾಂಗಣದಲ್ಲಿ ಬುಧವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ, ಡಾ.ಫ.ಗು.ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಫಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ವಚನ ಸಾಹಿತ್ಯಗಳು ಸಮಾಜದಲ್ಲಿ ಅನೇಕ ರೀತಿಯ ಸುಧಾರಣೆಯನ್ನು ತಂದಿದ್ದು, ಇಂತಹ ವಚನ ಗಳನ್ನು ಸಂಶೋಧಿಸಿ ಅವುಗಳ ಕುರಿತು ಸಮಾಜ ದಲ್ಲಿ ಜಾಗೃತಿ ಮೂಡಿಸುವ ಅದ್ಭುತ ಕೆಲಸವನ್ನು ಮಾಡಿದ ಡಾ.ಫ.ಗು. ಹಳಕಟ್ಟಿ ಅವರನ್ನು ನೆನೆಯುವ ಉದ್ದೇಶದಿಂದ ಅವರ ಜನ್ಮ ದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ವಚನ ಸಾಹಿತ್ಯವು ಪ್ರಜಾಪ್ರಭುತ್ವವಾದಿ ನಿಲುವಿನ ಸಾಹಿತ್ಯ. ಇದು ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡ ಸಾಹಿತ್ಯವಾಗಿದೆ. ಬಸವಾದಿ ಶಿವಶರಣೆಯರ ವಚನಗಳನ್ನು ವಿದ್ಯಾರ್ಥಿಗಳು ಓದಿ ಅವುಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಡಾ.ಫ.ಗು.ಹಳಕಟ್ಟಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಡಾ. ಮಹಾಬಲೇಶ್ವರ ರಾವ್, ಅತ್ಯಂತ ಸರಳ ಜೀವನ ಸಾಗಿಸಿದ ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ತಮ್ಮ ಸ್ವಂತ ಹಣದಿಂದ ಮುದ್ರಣ ಮಾಡುವುದರೊಂದಿಗೆ, ವಚನ ಗಳಿಗೆ ಬಿಡುಗಡೆ ಭಾಗ್ಯ ಒದಗಿಸಿದರು. ಕನ್ನಡ ಸಾಹಿತ್ಯದ ಏಳಿಗೆಗಾಗಿ ಶ್ರಮಿಸುವ ಜೊತೆಗೆ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸಿ, ಕನ್ನಡಿಗರಲ್ಲಿ ಕವಿದಿದ್ದ ವಿಸ್ಮತಿ ಪೊರೆಯನ್ನು ಕಳಚಿ, ಕನ್ನಡ ಸಾಹಿತ್ಯದ ಮಹತ್ವದ ಕುರಿತು ಅರಿವು ಮೂಡಿಸಿದರು ಎಂದರು. ವಚನಗಳು ಅಧ್ಯಾತ್ಮಿಕ ಸಾಹಿತ್ಯ. ಯುವ ಪೀಳಿಗೆ ವಚನಗಳನ್ನು ಓದಿ ಜೀವನ ಪಾಠಗಳನ್ನು ಅಳವಡಿ ಸುವ ಮೂಲಕ ವಚನ ಸಾಹಿತ್ಯವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಇಂದಿನ ಪೀಳಿಗೆ ಅವರು ತೋರಿದ ಬದುಕಿನ ಆದರ್ಶಗಳ ದಾರಿಯಲ್ಲಿ ಮುನ್ನಡೆಯಬೇಕು ಎಂದರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ನಿತ್ಯಾನಂದ ವಿ.ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ.ನಿರಂಜನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಹಾಗೂ ಇತರರು ಉಪಸ್ಥಿತ ರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ವಂದಿಸಿದರು.
ಚಿಹ್ನೆ ಬಳಸಲು ಅನುಮತಿ ಕೋರಿ ಶಿವಸೇನೆ (ಯುಬಿಟಿ) ಬಣ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘‘ಶಿವಸೇನೆ’’ ಹೆಸರು ಮತ್ತು ಅದರ ‘‘ಬಿಲ್ಲು ಮತ್ತು ಬಾಣ’’ ಚಿಹ್ನೆಯನ್ನು ಬಳಸಲು ಅನುಮತಿ ಕೋರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಚುನಾವಣೆ ಇನ್ನೂ ಘೋಷಣೆಯಾಗಿಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಎಮ್.ಎಮ್. ಸುಂದರೇಶ್ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವೊಂದು, ಅರ್ಜಿಯ ವಿಚಾರಣೆಯನ್ನು ಜುಲೈ 14ಕ್ಕೆ ನಿಗದಿಪಡಿಸಿತು. ‘‘ಈಗ ತುರ್ತು ಏನಿದೆ? ಒಂದು ವೇಳೆ ಚುನಾವಣೆ ಘೋಷಣೆಯಾದರೂ ಬಾಕಿಯಾಗಿರುವ ಅರ್ಜಿಗೆ ಸಂಬಂಧಿಸಿ ನೀವು ನಿರ್ದೇಶನಗಳನ್ನು ಕೋರಬಹುದು’’ ಎಂದು ನ್ಯಾಯಾಲಯ ಹೇಳಿತು. ಏಕನಾಥ ಶಿಂದೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂಬುದಾಗಿ ಮಾನ್ಯಮಾಡಿ ಭಾರತೀಯ ಚುನಾವಣಾ ಆಯೋಗವು 2023 ಫೆಬ್ರವರಿ 17ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಾಗಿದೆ. ಅದರ ಆಧಾರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣವು ನೂತನ ಅರ್ಜಿಯನ್ನು ಸಲ್ಲಿಸಿದೆ. ಶಿವಸೇನೆ (ಉದ್ಧವ್ ಠಾಕ್ರೆ) ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಹಿರಿಯ ವಕೀಲ ದೇವದತ್ತ ಕಾಮತ್, 27 ಮುನಿಸಿಪಲ್ ಕಾರ್ಪೊರೇಶನ್ಗಳು, 232 ಮುನಿಸಿಪಲ್ ಕೌನ್ಸಿಲ್ ಗಳು ಮತ್ತು 125 ನಗರ ಪಂಚಾಯತ್ ಗಳ ಚುನಾವಣೆಗೆ ಶೀಘ್ರವೇ ಅಧಿಸೂಚನೆ ಹೊರಡಲಿದ್ದು, ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಹೇಳಿದರು.
Sovereign Gold Bond : ರಿಡೆಂಪ್ಷನ್ ಬೆಲೆಯನ್ನು ಪ್ರಕಟಿಸಿದ RBI , ಹೂಡಿಕೆದಾರರಿಗೆ ಸಿಹಿಯೋ ಸಿಹಿ
SGB redemption price : ಭಾರತೀಯ ರಿಸರ್ವ್ ಬ್ಯಾಂಕ್ ಎರಡು ಚಿನ್ನದ ಬಾಂಡ್ ಸರಣಿಗಳ ಮುಕ್ತಾಯ ಬೆಲೆಯನ್ನು ಪ್ರಕಟಿಸಿದೆ. ಅದರ ಅನ್ವಯ ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗಲಿದೆ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಮುಖವಾಗಿ 2017 ಮತ್ತು 2018 ರಲ್ಲಿ SGB ಖರೀದಿಸಿದವರಿಗೆ ಸಿಹಿ ಸುದ್ದಿಯಾಗಲಿದೆ.
ಹಿಮಾಚಲ ಪ್ರದೇಶ: ಭಾರೀ ಮಳೆಗೆ 51 ಬಲಿ, 22 ಮಂದಿ ನಾಪತ್ತೆ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕನಿಷ್ಠ 51 ಮಂದಿ ಮೃತಪಟ್ಟಿದ್ದಾರೆ. 22 ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯಾದ್ಯಂತ ಮಳೆಯಿಂದಾಗಿ ದಿಢೀರ್ ಪ್ರವಾಹಗಳು ಹುಟ್ಟಿಕೊಂಡಿವೆ ಮತ್ತು ಭೂಕುಸಿತಗಳು ಸಂಭವಿಸುತ್ತಿವೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ)ವು, ಜೂನ್ 20ರಿಂದ ಜುಲೈ 1ರವರೆಗಿನ ಮಳೆ ಹಾನಿ ಅಂದಾಜು ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಮಾನವ ಜೀವಗಳು, ಖಾಸಗಿ ಸೊತ್ತುಗಳು, ಜಾನುವಾರುಗಳು ಮತ್ತು ಸಾರ್ವಜನಿಕ ಆಸ್ತಿಗಳಿಗೆ ಭಾರೀ ಹಾನಿಯಾಗಿದೆ ಎಂದು ವರದಿ ಹೇಳಿದೆ. ‘‘ದಿಢೀರ್ ಪ್ರವಾಹ, ಭೂಕುಸಿತ, ಸಿಡಿಲು ಪ್ರಹಾರ ಮತ್ತು ರಸ್ತೆ ಅಪಘಾತ ಮುಂತಾದ ವಿವಿಧ ಕಾರಣಗಳಿಂದಾಗಿ ಈವರೆಗೆ ಒಟ್ಟು 51 ಸಾವುಗಳು ಸಂಭವಿಸಿವೆ. 22 ಮಂದಿ ನಾಪತ್ತೆಯಾಗಿದ್ದಾರೆ. ಮಂಡಿ ಜಿಲ್ಲೆಯಲ್ಲಿ ಗರಿಷ್ಠ ಸಾವು-ನೋವು ಸಂಭವಿಸಿದೆ. ಈ ಜಿಲ್ಲೆಯಲ್ಲಿ ದಿಢೀರ್ ಪ್ರವಾಹ ಮತ್ತು ಮೇಘ ಸ್ಫೋಟಗಳಿಂದಾಗಿ 10 ಮಂದಿ ಮೃತಪಟ್ಟಿದ್ದಾರೆ’’ ಎಂದು ಎಸ್ ಇ ಒ ಸಿ ತನ್ನ ವರದಿಯಲ್ಲಿ ತಿಳಿಸಿದೆ. ಮಳೆಗಾಲ ಸಂಬಂಧಿ ಘಟನೆಗಳಲ್ಲಿ 103 ಜನರು ಗಾಯಗೊಂಡಿದ್ದಾರೆ ಎಂಬುದಾಗಿಯೂ ವರದಿ ತಿಳಿಸಿದೆ. 204 ಮನೆಗಳು, 84 ಅಂಗಡಿಗಳು, ದನದ ಕೊಟ್ಟಿಗೆಗಳು ಮತ್ತು ಕಾರ್ಮಿಕರ ಗುಡಿಸಲುಗಳಿಗೆ ಹಾನಿಯಾಗಿದೆ.
ಹುಲಿ ಮೂಳೆಗಳ ಪತ್ತೆ | ಹೆಚ್ಚುತ್ತಿರುವ ರಣಥಂಬೋರ್ ಅಭಯಾರಣ್ಯದ ಹುಲಿಗಳ ಬೇಟೆ
ಜೈಪುರ: ರಾಜಸ್ಥಾನದ ರಣಥಂಬೋರ್ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಬೇಟೆ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಅಂತರ್ ರಾಜ್ಯ ಬೇಟೆಗಾರರ ತಂಡವೊಂದರಿಂದ ಕೊಲ್ಲಲ್ಪಟ್ಟಿರುವ ಮೂರು ಹುಲಿಗಳು ರಣಥಂಬೋರ್ ಅಭಯಾರಣ್ಯಕ್ಕೆ ಸೇರಿದ ಹುಲಿಗಳಾಗಿರುವ ಸಾಧ್ಯತೆ ಇದೆ ಎನ್ನುವುದು ಇತ್ತೀಚೆಗೆ ಬೆಳಕಿಗೆ ಬಂದ ನಂತರ, ಅಲ್ಲಿನ ಹುಲಿಗಳ ಸುರಕ್ಷತೆ ಬಗ್ಗೆ ಆತಂಕ ತಲೆದೋರಿದೆ. ಮಧ್ಯಪ್ರದೇಶದ ರಾಜ್ಯ ಹುಲಿ ಪ್ರಹಾರ ಪಡೆ, ರಾಜಸ್ಥಾನ ಅರಣ್ಯ ಇಲಾಖೆ ಮತ್ತು ಸವಾಯ್ ಮಾಧೋಪುರದಲ್ಲಿರುವ ಸರಕಾರೇತರ ಸಂಘಟನೆ ‘ಟೈಗರ್ ವಾಚ್’ ಕಳೆದ ತಿಂಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಬೇಟೆಗಾರರನ್ನು ಬಂಧಿಸಲಾಗಿತ್ತು. ಆ ಪೈಕಿ ಮೂವರು ರಾಜಸ್ಥಾನದವರು. ಜೂನ್ 5ರಂದು, ಮಧ್ಯಪ್ರದೇಶದ ಶೇವ್ ಪುರ್ ಸಮೀಪ 225ಕ್ಕೂ ಅಧಿಕ ಹುಲಿ ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಳ್ಳಲಾಗಿರುವ ಮೂಳೆಗಳೊಂದಿಗೆ ಹೋಲಿಸಲು ರಣಥಂಬೋರ್ ಹುಲಿಗಳ ಡಿಎನ್ಎ ಮಾದರಿಗಳನ್ನು ಕಳುಹಿಸುವಂತೆ ಮಧ್ಯಪ್ರದೇಶ ಅರಣ್ಯ ಇಲಾಖೆಯ ಅಧಿಕಾರಿಗಳು ರಾಜಸ್ಥಾನ ಅರಣ್ಯ ಅಧಿಕಾರಿಗಳನ್ನು ಕೋರಿದ್ದಾರೆ. ವಶಪಡಿಸಿಕೊಳ್ಳಲಾಗಿರುವ ಮೂಳೆಗಳು ಮೂರು ಹುಲಿಗಳು ಮತ್ತು ಒಂದು ಚಿರತೆಗೆ ಸೇರಿದ್ದಾಗಿವೆ ಎನ್ನುವುದು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆಸಲಾದ ಡಿಎನ್ಎ ಪರೀಕ್ಷೆಯಲ್ಲಿ ಖಚಿತವಾಗಿದೆ. ರಣಥಂಬೋರ್ ಹುಲಿಗಳ ದತ್ತಾಂಶಗಳೊಂದಿಗೆ ನಿಖರ ಹೋಲಿಕೆಗಾಗಿ ಮಾದರಿಗಳನ್ನು ಈಗ ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಆರು ತಿಂಗಳುಗಳ ಹಿಂದೆ ಒಂದು ಹುಲಿಯನ್ನು ಮತ್ತು ಮೂರು ತಿಂಗಳ ಹಿಂದೆ ಒಂದು ಚಿರತೆಯನ್ನು ಕೊಲ್ಲಲಾಗಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಅವೆರಡನ್ನೂ ರಾಜಸ್ಥಾನದಲ್ಲೇ ಕೊಂದಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ: ಎತ್ತು, ಟ್ರ್ಯಾಕ್ಟರ್ಗೆ ಹಣವಿಲ್ಲದೆ ಕೃಷಿಗಾಗಿ ಜಮೀನನ್ನು ಸ್ವತಃ ಉಳುಮೆ ಮಾಡಿದ ವೃದ್ಧ ದಂಪತಿ!
ಮುಂಬೈ: ಮಹಾರಾಷ್ಟ್ರದ ಲಾತೂರಿನಲ್ಲಿ 75ರ ಹರೆಯದ ವೃದ್ಧರೋರ್ವರು ತನ್ನ ವಯಸ್ಸಾದ ಪತ್ನಿಯೊಂದಿಗೆ ಸೇರಿಕೊಂಡು ಜಮೀನನ್ನು ಉಳುಮೆ ಮಾಡುತ್ತಿರುವ ಹೃದಯವಿದ್ರಾವಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ರೈತರು ಬೆಳೆಗಳನ್ನು ಬೆಳೆಯಲು ಹೇಗೆ ಕಷ್ಟ ಪಡುತ್ತಿದ್ದಾರೆ ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ. ಮರಾಠವಾಡಾ ಪ್ರದೇಶದ ಲಾತೂರು ಜಿಲ್ಲೆಯ ಹಾಡೋಳ್ತಿ ಗ್ರಾಮದ ನಿವಾಸಿ ಅಂಬಾದಾಸ ಪವಾರ್ ಅವರು 2.5 ಎಕರೆ ಜಮೀನು ಹೊಂದಿದ್ದಾರೆ. ಜಮೀನನ್ನು ಉತ್ತು ಅದನ್ನು ಕೃಷಿಗೆ ಹದ ಮಾಡಲು ಎತ್ತುಗಳು ಅಥವಾ ಟ್ರ್ಯಾಕ್ಟರ್ ಪಡೆಯಲು ಅಗತ್ಯ ಸಂಪನ್ಮೂಲಗಳು ಅವರ ಬಳಿಯಿಲ್ಲ. ಉಳುಮೆಗಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲೂ ಅವರು ಶಕ್ತರಲ್ಲ. ಬೇರೆ ಆಯ್ಕೆಯಿಲ್ಲದೆ ಅಂಬಾದಾಸ ಮತ್ತು ಅವರ ಪತ್ನಿ ಮುಕ್ತಾಬಾಯಿ ಹಲವಾರು ವರ್ಷಗಳಿಂದಲೂ ನೇಗಿಲನ್ನು ಬಳಸಿ ಜಮೀನನ್ನು ಉಳುಮೆ ಮಾಡುತ್ತಿದ್ದಾರೆ. ಅವರ ಮಗ ನಗರದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಇಲ್ಲಿ ಉಳುಮೆಯಿಂದ ಹಿಡಿದು ಬೆಳೆ ಕೊಯ್ಲಿನವರೆಗೆ ಎಲ್ಲ ಕೃಷಿಕಾರ್ಯಗಳನ್ನು ವೃದ್ಧ ದಂಪತಿಯೇ ಸ್ವತಃ ಮಾಡುತ್ತಿದ್ದಾರೆ. ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಅವರೊಂದಿಗೇ ವಾಸವಾಗಿದ್ದಾರೆ. ಮಗಳನ್ನು ಮದುವೆ ಮಾಡಿಕೊಟ್ಟಿದ್ದು, ಆಕೆ ಗಂಡನ ಮನೆಯಲ್ಲಿದ್ದಾಳೆ. महाराष्ट्र : जेव्हा त्याला शेतात नांगरणी करण्यासाठी बैल सापडले नाहीत तेव्हा त्याने स्वतःला बैल बनवले... लातूर जिल्ह्यातील हाडोलती गावातून एक हृदयद्रावक चित्र समोर आले आहे. #farmer #latur #Agriculture #Maharashtra #India #Mumbai pic.twitter.com/8GKDVSlq2H — Mumbai Congress (@INCMumbai) July 1, 2025 ಕಳೆದ ಎರಡು ವರ್ಷಗಳಿಂದ ಭಾರೀ ಮಳೆಯಿಂದಾಗಿ ಕಷ್ಟ ಪಟ್ಟು ಬೆಳದಿದ್ದ ಬೆಳೆ ಹಾನಿಗೀಡಾಗಿದ್ದು ತಾನು ಸಾಲ ಪಡೆದುಕೊಳ್ಳುವಂತೆ ಮಾಡಿದೆ ಎಂದು ಅಂಬಾದಾಸ ವಿಷಾದಿಸಿದರು. ವೈರಲ್ ಆಗಿರುವ ವೀಡಿಯೊದಲ್ಲಿ ಭೂಮಿಯನ್ನು ಹದ ಮಾಡುತ್ತಿರುವಾಗ ವೃದ್ಧ ದಂಪತಿ ದಣಿದಂತೆ ಕಂಡು ಬರುತ್ತಿದ್ದಾರೆ.‘ ‘ನಾನು ಇದನ್ನು ನಿಲ್ಲಿಸುವಂತಿಲ್ಲ. ನನ್ನ ತೋಳುಗಳು ನಡುಗುತ್ತವೆ. ಭಾರದಿಂದಾಗಿ ನನ್ನ ಕಾಲುಗಳು ಬಾಗುತ್ತವೆ ಮತ್ತು ಕೆಲವೊಮ್ಮೆ ಕುತ್ತಿಗೆ ನೋಯುತ್ತಿರುತ್ತದೆ. ಆದರೆ ಜೀವನವು ನಮಗೆ ಬೇರೆ ಆಯ್ಕೆಯನ್ನು ನೀಡಿಲ್ಲ’ ಎಂದು ಅಂಬಾದಾಸ ಹೇಳಿದರು. ಹೆಚ್ಚುತ್ತಿರುವ ಕೃಷಿ ವೆಚ್ಚಗಳು ಮತ್ತು ನಂಬಲು ಸಾಧ್ಯವಿಲ್ಲದ ಹವಾಮಾನವು ಜೀವನೋಪಾಯಕ್ಕೆ ಅಪಾಯಗಳನ್ನು ಹೆಚ್ಚಿಸುತ್ತಿರುವುದರಿಂದ ತುತ್ತು ಕೂಳಿಗಾಗಿ ಸಣ್ಣ ರೈತರ ಹೋರಾಟದ ಮೇಲೆ ಈ ವಿಡಿಯೊ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಕೇವಲ ಮೂರು ತಿಂಗಳುಗಳಲ್ಲಿ ಮರಾಠವಾಡಾ ಪ್ರದೇಶದಲ್ಲಿ 269 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ 204 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು,ಈ ವರ್ಷ ಶೇ.30ರಷ್ಟು ಏರಿಕೆಯಾಗಿದೆ.
ಬೆಂಗಳೂರು | ಶೌಚಾಲಯದಲ್ಲಿ ಮಹಿಳೆಯ ವಿಡಿಯೋ ಚಿತ್ರೀಕರಣ ಪ್ರಕರಣ: ಇನ್ಫೋಸಿಸ್ ಉದ್ಯೋಗಿ ಬಂಧನ
ಬೆಂಗಳೂರು : ಬೆಂಗಳೂರಿನ ಇನ್ಫೋಸಿಸ್ನ ಕಚೇರಿಯ ಶೌಚಾಲಯದೊಳಗೆ ಮಹಿಳೆಯೊಬ್ಬರ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದಡಿ ಟೆಕ್ಕಿಯೊಬ್ಬರನ್ನು ಎಲೆಕ್ರ್ಟಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಉದ್ಯೋಗಿ ಸ್ವಪ್ನಿಲ್ ನಾಗೇಶ್ಮಲಿ(28) ಎಂದು ಗುರುತಿಸಲಾಗಿದೆ. ಆರೋಪಿ ನಾಗೇಶ್ ಸ್ವಪ್ನಿಲ್ ಮಲಿ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಯ ವಿಡಿಯೋ ಚಿತ್ರೀಕರಣ ಮಾಡುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಆರೋಪಿಯು ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರಹಸ್ಯವಾಗಿ ತನ್ನ ಮೊಬೈಲ್ನಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದ ವಿಡಿಯೋ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಮಹಿಳೆ ಕಿರುಚಾಡಿದ್ದು, ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ಎಚ್ಆರ್ ಸಿಬ್ಬಂದಿ ಬಂದು ಪರಿಶೀಲನೆ ಮಾಡಿದಾಗ ವಿಡಿಯೋ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಆರೋಪಿಯ ಮೊಬೈಲ್ನಲ್ಲಿ ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋ ಪತ್ತೆಯಾಗಿದೆ ಎಂದು ತಿಳಿದಿಬಂದಿದ್ದು, ಸದ್ಯ ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯು ಇನ್ಫೋಸಿಸ್ ಕಂಪೆನಿಯ ಹೀಲೀಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ | ವಿಚಾರಣೆ ಜು.14ಕ್ಕೆ ಮುಂದೂಡಿಕೆ
ಸುಲ್ತಾನ್ಪುರ(ಉ.ಪ್ರ.): ಇಲ್ಲಿಯ ಜನಪ್ರತಿನಿಧಿಗಳ ನ್ಯಾಯಾಲಯವು ಕೇಂದ್ರ ಗೃಹಸಚಿವ ಅಮಿತ್ ಶಾ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿದೆ. ಬಿಜೆಪಿ ನಾಯಕ ವಿಜಯ ಮಿಶ್ರಾ ಅವರು 2018ರಲ್ಲಿ ರಾಹುಲ್ ವಿರುದ್ಧ ಮಾನನಷ್ಟ ದೂರನ್ನು ದಾಖಲಿಸಿದ್ದರು. ಬುಧವಾರ ನ್ಯಾಯಾಲಯವು ಸಾಕ್ಷಿಯೋರ್ವರ ವಿಚಾರಣೆಯನ್ನು ನಡೆಸಲಿತ್ತು. ಆದರೆ ಸಾಕ್ಷಿಯ ಗೈರುಹಾಜರಿಯಿಂದಾಗಿ ಜು.14ಕ್ಕೆ ಮುಂದೂಡಲಾಗಿದೆ ಎಂದು ಮಿಶ್ರಾ ಪರ ವಕೀಲರು ತಿಳಿಸಿದರು. ಫೆ.2024ರಲ್ಲಿ ತನ್ನ ಮುಂದೆ ಶರಣಾಗಿದ್ದ ರಾಹುಲ್ಗೆ ನ್ಯಾಯಾಲಯವು ತಲಾ 25,000 ರೂ.ಗಳ ಎರಡು ಭದ್ರತೆಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಿತ್ತು. ಜು.26,2024ರಂದು ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿದ್ದ ರಾಹುಲ್, ತಾನು ನಿರಪರಾಧಿ ಎಂದು ಪ್ರತಿಪಾದಿಸಿದ್ದರಲ್ಲದೆ ಪ್ರಕರಣವು ತನ್ನ ವಿರುದ್ಧ ಷಡ್ಯಂತ್ರದ ಭಾಗವಾಗಿದೆ ಎಂದು ತಿಳಿಸಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಗಳ ಪ್ರಚಾರದ ಸಂದರ್ಭ ರಾಹುಲ್ ಅವರು ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮಿಶ್ರಾ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ರಾಧಿಕಾ ಅವರು ಮಂಡಿಸಿದ ' ಇಂಡಿಯನ್ ಟ್ರೇಡ್ ಪರ್ಮೋಮೆನ್ಸ್ ಇನ್ ದಿ ಪೋಸ್ಟ್ ರಿಫಾರ್ಮ್ ಪಿರೆಡ್'(Indian trade performance in the post reform period) ಎಂಬ ಮಹಾಪ್ರಬಂಧ ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ( ಪಿಎಚ್ ಡಿ)ಪದವಿ ಪ್ರದಾನ ಮಾಡಿದೆ. ಇವರಿಗೆ ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಜಯವಂತ್ ನಾಯಕ್ ಮಾರ್ಗದರ್ಶನ ನೀಡಿದ್ದರು. ಕ್ಯಾಂಪ್ಕೋ ದಲ್ಲಿ ಉದ್ಯೋಗಿ ಯಾಗಿದ್ದ ಸುಳ್ಯ ದ ಗೋಪಾಲಕೃಷ್ಣ. ಕೆ ಮತ್ತು ಜಲಜಾಕ್ಷಿ ದಂಪತಿಗಳ ಪುತ್ರಿ ಯಾಗಿದ್ದು, ಪ್ರಸ್ತುತ ಇವರು ಮಂಗಳೂರಿನ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪತ್ರಕರ್ತರ ಭವಿಷ್ಯದ ಸವಾಲುಗಳಿಗೆ ಸೃಜನಶೀಲತೆಯೇ ಪರಿಹಾರ: ವಾಲ್ಟರ್ ನಂದಳಿಕೆ
ಮಂಗಳೂರು, ಜು.2: ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ,ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನದ ಪ್ರವೇಶವಾಗಿದ್ದರೂ ಪತ್ರಕರ್ತರು ಭವಿಷ್ಯದ ಸವಾಲುಗಳ ಬಗ್ಗೆ ಹೆದರಬೇಕಾಗಿಲ್ಲ. ಸೃಜನಶೀಲತೆ ಇದ್ದರೆ ಯಾವುದೇ ಸವಾಲನ್ನು ಎದುರಿಸಲು ಸಾಧ್ಯ ಎಂದು ದೈಜಿ ವರ್ಲ್ಡ್ ಮೀಡಿಯಾದ ಸಂಪಾದಕ ವಾಲ್ಟರ್ ನಂದಳಿಕೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾಧ್ಯಮದ ಸವಾಲು ಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಾಧ್ಯಮಗಳು ಜನರಲ್ಲಿ ವಿಶ್ವಾಸಾರ್ಹತೆಯನ್ನು ಮೂಡಿಸುವ ಬಗ್ಗೆ ಹೆಚ್ಚು ಕಾರ್ಯ ಪ್ರವೃತ್ತ ವಾಗಬೇಕಾ ಗಿದೆ. ಮಾಧ್ಯಮಗಳ ಬೆಳವಣಿಗೆಯಿಂದಾಗಿ ಪತ್ರಿಕಾ ಓದುಗರ ಸಂಖ್ಯೆ ಕಡಿಮೆಯಾಗಿದ್ದರೂ, ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಯ ಬಗ್ಗೆ ಜನರಿಗೆ ಹೆಚ್ಚು ವಿಶ್ವಾಸ ಇನ್ನೂ ಉಳಿದಿದೆ ಎನ್ನುವುದು ಅಧ್ಯಯನ ವರದಿ ತಿಳಿಸಿದೆ ಎಂದು ಹೇಳಿದರು ಇತ್ತೀಚೆಗೆ ಸಮೀಕ್ಷೆಯೊಂದರ ಪ್ರಕಾರ ಶೇ.60ರಷ್ಟು ಜನರು ಮುದ್ರಣ ಮಾಧ್ಯಮವನ್ನು ನಂಬುತ್ತಾರೆ. ಶೇ.63ರಷ್ಟು ಜನರು ಟಿ.ವಿ ನ್ಯೂಸ್ ನ್ನು ನಂಬುವುದಿಲ್ಲ.ಶೇ 89 ರಷ್ಟು ಮಂದಿ ಸಾಮಾಜಿಕ ಮಾಧ್ಯಮ ಗಳನ್ನು ಆನ್ಲೈನ್ ವೆಬ್ ಸೈಟ್ಗಳನ್ನು ನಂಬುವುದಿಲ್ಲ ಎಂದವರು ಹೇಳಿದರು. ಪತ್ರಿಕೋದ್ಯಮ ಶಿಕ್ಷಣ ನೀಡುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಮುಚ್ಚುತ್ತಿದ್ದರೂ, ವಿದ್ಯಾರ್ಥಿಗಳು ಆತಂಕಪಡಬೇಕಾಗಿಲ್ಲ. ಮಾಧ್ಯಮ ರಂಗದಲ್ಲಿ ಇನ್ನಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದೆ. ಪತ್ರಕರ್ತರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ನುಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮ್ಮರ್ ಯು.ಎಚ್. ಮಾತನಾಡಿ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ.ಈ ನಡುವೆ ಮಾಧ್ಯಮ ಕ್ಷೇತ್ರದ ತಳ ಮಟ್ಟದಲ್ಲಿ ಪತ್ರಿಕಾವಿತರಣೆ ನಡೆಸುತ್ತಿರುವವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕ ರಘುರಾಮ.ಕೆ ಅವರನ್ನು ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ,ದಕ್ಷಿಣ ಕನ್ನಡ ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ, ಕುಮಾರನಾಥ್, ಕೆ.ವಿ.ಜಾರ್ಜ್ ದ.ಕ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.
ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ
ಕೊಣಾಜೆ: ಸಮಾಜದಲ್ಲಿ ವೈದ್ಯರ ಪಾತ್ರ ಪ್ರಮುಖವಾದುದು. ಯೆನೆಪೋಯ ಆಸ್ಪತ್ರೆಯಲ್ಲಿ ಕಳೆದ ವರ್ಷ 15,000 ಕ್ಕೂ ಹೆಚ್ಚು ರೋಗಿಗಳಿಗೆ, ವಿವಿಧ ಸರ್ಕಾರ ಮತ್ತು ಅರೆಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ, ಆಸ್ಪತ್ರೆಯಲ್ಲಿ ತಂತ್ರಜ್ಞಾನಪೂರ್ಣ, ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೂರೈಸುವುದರ ಹಿಂದಿನ ಶಕ್ತಿ ನಮ್ಮ ವೈದ್ಯರೇ ಆಗಿದ್ದಾರೆ ಎಂದು ಎಂದು ಯೆನೆಪೋಯಾ ವಿಶ್ವವಿದ್ಯಾನಿಲಯದ ಸಹಾಯಕ ವೈದ್ಯಕೀಯ ಅಧ್ಯಕ್ಷರು ಡಾ.ನಾಗರಾಜ ಶೆಟ್ ಹೇಳಿದರು. ಅವರು ಮಂಗಳವಾರ ನಗರದ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ರಾಷ್ಟೀಯ ವೈದ್ಯರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ. ವಿಜಯಕುಮಾರ್ ಮಾತನಾಡಿ, ವೈದ್ಯ ವೃತ್ತಿಯಲ್ಲಿ ಮಾನಸಿಕ ಆರೋಗ್ಯ ಬಹಳ ಮುಖ್ಯ,ಸಂತೋಷ ಮತ್ತು ತೃಪ್ತಿದಾಯಕವಾಗಿ ರೋಗಿಗಳ ಸೇವೆ ಮಾಡಿ ಎಂದು ಉತ್ತೇಜಿಸಿದರು ಯೆನೆಪೋಯಾ ವೈದ್ಯಕೀಯ ಕಾಲೇಜು ಪ್ರಾಂಶುಪಾಲರು ಎಂ.ಎಸ್. ಮೂಸಬ್ಬ, ಮಾತನಾಡಿ ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಕಾರಣರಾಗಿರುವ ಡಾ. ಬಿಧಾನ್ ಚಂದ್ರ ರಾಯ್ ಅವರ ವೃತ್ತಿ ಸೇವೆಯನ್ನು ನೆನಪಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯೆನೆಪೋಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧ್ಯಕ್ಷರು ಡಾ. ಹಬೀಬ್ ರಹ್ಮಾನ್ ಎ.ಎ ಅಧ್ಯಕ್ಷೀಯ ಭಾಷಣ ಮಾಡಿ ವೈದ್ಯರನ್ನು ಬಹುತೇಕ ಜನರು ದೇವರಂತೆ ನೋಡುತ್ತಾರೆ,ಆದರೆ ಅವರು ಸಹ ಮಾನವರೆಂಬ ವಿಷಯವನ್ನು ಮರೆಯಬಾರದು ಎಂದರು. ಸಹಾನುಭೂತಿಯೊಂದಿಗೆ ಸೇವೆ: ಪ್ರಾಪ್ಯವಾದ ಆರೋಗ್ಯ ಸೇವೆಗಳು ವೈದ್ಯರ ಉದ್ಯೋಗ ತೃಪ್ತಿಗೆ ಹೇಗೆ ಪ್ರಭಾವ ಬೀರುತ್ತವೆ ಎಂಬ ವಿಷಯದ ಮೇಲೆ ಆಯೋಜಿಸಲಾದ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಡಾ. ಚಾಂದ್ನಿ ಎಸ್, ಡಾ. ಉಮಾ ಕುಲಕರ್ಣಿ ಮತ್ತು ಡಾ. ಸೌರಭಾ ಭಟ್ ರನ್ನು ಗೌರವಿಸಲಾಯಿತು ಹಾಗೂ ಡಾ. ಅಬುಸಾಲಿ ಎ.ಪಿ ಮತ್ತು ಡಾ. ಸಿ.ಪಿ. ಅಬ್ದುಲ್ ರಹ್ಮಾನ್ ಅವರನ್ನು ಅವರ ದೀರ್ಘಕಾಲದ ನಿಷ್ಠಾವಂತ ಸೇವೆಗಾಗಿ ಗೌರವಿಸಲಾಯಿತು. ಡಾ. ಬಿ.ಟಿ. ನಂದೀಶ್, ಡಾ. ಪ್ರಕಾಶ್ ಸಲ್ದಾನ್ಹಾ,ಡಾ. ಮಾಜಿ ಜೋಸ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ನರ್ಸಿಂಗ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ರುಬೈಬ್ ಪ್ರಾರ್ಥಿಸಿ, ನೆಲ್ವಿನ್ ನೆಲ್ಸನ್ ಸ್ವಾಗತಿಸಿ,ಡಾ. ಮುಕ್ತಾರ್ ಅಬ್ದುಲ್ಲಾ, ವಂದಿಸಿದರು.
ಕಸಾಪ ಅವ್ಯವಹಾರದ ತನಿಖೆಗೆ ಆದೇಶ 45 ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ; ಆರೋಪ ಪಟ್ಟಿಯಲ್ಲಿ ಏನೇನಿದೆ?
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದ ಕೆಲಸಕ್ಕೆ ಮೀಸಲಾದ ಅನುದಾನದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ತನಿಖೆಗೆ ಜಿಲ್ಲಾ ಉಪ ನೋಂದಣಾಧಿಕಾರಿ ಆದೇಶಿಸಿದ್ದಾರೆ. 2022-23 ರಿಂದ ಈವರೆಗೆ ಅನುದಾನ ದುರ್ಬಳಕೆ, ಲೆಕ್ಕಪತ್ರ ಸಲ್ಲಿಸದಿರುವುದು, ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ಸೇರಿದಂತೆ ಹಲವು ಆರೋಪಗಳ ಬಗ್ಗೆ ತನಿಖೆ ನಡೆಯಲಿದೆ. ಸಂಘದಲ್ಲಿಸಂಗ್ರಹವಾದ ಸಿಎಸ್ಆರ್ ಅನುದಾನ ದುರುಪಯೋಗ, ಕಂಪ್ಯೂಟರ್ ಖರೀದಿ, ಸಿಸಿಟಿವಿ ಅಳವಡಿಕೆ, ಪುಸ್ತಕಗಳ ಮುದ್ರಣ ಹೀಗೆ ಸಂಘವು ಮಾಡಿದ ಖರ್ಚು-ವೆಚ್ಚಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ 45 ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಮಾಡಿದ ಇಟಲಿ ಕಂಪನಿ ವಿರುದ್ಧ ಕೇಸ್ ಹಾಕಿದ ಲಿಡ್ಕರ್! 500 ಕೋಟಿ ರೂ. ನಷ್ಟ ದಾವೆ
ಪಾರಂಪರಿಕ ಕೊಲ್ಹಾಪುರಿ ಚಪ್ಪಲಿ ವಿನ್ಯಾಸವನ್ನು ನಕಲು ಮಾಡಿರುವ ಆರೋಪದ ಮೇಲೆ ಇಟಲಿಯ ಪ್ರಾಡಾ ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಲಿಡ್ಕರ್ ಮುಂದಾಗಿದೆ. ಪ್ರಾಡಾ ಕಂಪನಿಯು ಜಿಐಜಿ ಕಾಯಿದೆಯನ್ನು ಉಲ್ಲಂಘಿಸಿದ್ದು, 500 ಕೋಟಿ ರೂ. ನಷ್ಟದ ದಾವೆ ಹೂಡಲು ತೀರ್ಮಾನಿಸಲಾಗಿದೆ. ಈ ಹೋರಾಟದ ಉದ್ದೇಶವು ಪಾರಂಪರಿಕ ಚರ್ಮ ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ನೀಡುವುದು.
ಸಜಿಪನಡು : ಅಲ್ ಬಿರ್ರ್ ಶಾಲೆಯ ಪೋಷಕರಿಗೆ ಕಾರ್ಯಾಗಾರ
ಬಂಟ್ವಾಳ: ಅಲ್ ಬಿರ್ರ್ ಶಿಕ್ಷಣ ಸಂಸ್ಥೆಯು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅಲ್ಬಿರ್ರ್ ಪೇರೆಂಟಿಂಗ್ ತರಬೇತುದಾರ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಹೇಳಿದರು. ಸಜಿಪನಡು ನೂರಿಯ್ಯ ಪಬ್ಲಿಕ್ ಸ್ಕೂಲ್ ಅಲ್ ಬಿರ್ರ್ ಶಾಲೆಯ ಪೋಷಕರಿಗೆ ಆಯೋಜಿಸಲಾದ ಕಾರ್ಯಾ ಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಈ ಶಿಕ್ಷಣ ವ್ಯವಸ್ಥೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತದೆ. ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ, ಕಲೆ,ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ನಾಯಕತ್ವದ ಗುಣಗಳು ಬೆಳೆಯುತ್ತವೆ. ಎಂದು ಉಮರ್ ದಾರಿಮಿ ಹೇಳಿದರು. ಸಜಿಪನಡು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕಾರ್ಯಾಗಾರ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ನಾಸಿರ್ ಅನ್ಸಾರಿ ಸ್ವಾಗತಿಸಿದರು. ಸಂಸ್ಥೆಯ ಕೋಆರ್ಡಿನೇಟರ್ ಆಸಿಫ್ ಕುನಿಲ್, ಮ್ಯಾನೇಜ್ಮೆಂಟ್ ಕಮಿಟಿಯ ಸದಸ್ಯ ಅಲ್ತಾಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ರಶೀಕ ಕಾರ್ಯಕ್ರಮ ನಿರೂಪಿಸಿದರು. ರುಮಿಝ ವಂದಿಸಿದರು.
ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕುಟುಂಬಕ್ಕೆ ಚೆಕ್ ಹಸ್ತಾಂತರ
ಮಂಗಳೂರು: ಬೆಂಗಳೂರಿನ ಮರ್ಕಝ್ ದಾರುಲ್ ಖಝಾ ವತಿಯಿಂದ ಕುದ್ರೋಳಿಯ ಜಾಮಿಯಾ ಮಸೀದಿಯ ಖಾಜಿ ಶೈಖುನಾ ಮುತಹರ್ ಹುಸೇನ್ ಹಾಗೂ ಜಾಮಿಯಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ರ ಸಮ್ಮುಖ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲಿನ ಅಬ್ದುಲ್ ರಹ್ಮಾನ್ರ ತಂದೆ ಅಬ್ದುಲ್ ಖಾದರ್ಗೆ 50,000 ರೂ. ಮೊತ್ತದ ಚೆಕ್ಕನ್ನು ಮಂಗಳವಾರ ಹತ್ತಾಂತರಿಸಲಾಯಿತು. ಮರ್ಕಝ್ನ ದಾರುಲ್ ಖಝಾದ ಅಧ್ಯಕ್ಷ ಸಗೀರ್ ಸಾಹೇಬ್ ರಶಾದಿಯ ನಿರ್ದೇಶನದಂತೆ ನಡೆದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಎಸ್.ಎ. ಖಲೀಲ್ ಅಹ್ಮದ್, ಉಪಾಧ್ಯಕ್ಷ ಹಾಜಿ ಮಕ್ಬೂಲ್ ಅಹ್ಮದ್, ಸದಸ್ಯರಾದ ಡಾ.ಮುಹಮ್ಮದ್ ಆರಿಫ್ ಮಸೂದ್, ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಜಾಮಿಯಾ ಮಸೀದಿಯ ಜೊತೆ ಕಾರ್ಯದರ್ಶಿ ಆಸಿಫ್ ಸರ್ಫುದ್ದೀನ್ ಉಪಸ್ಥಿತರಿದ್ದರು.
ಬಿಹಾರ: ಜಾತಿ ಕೇಳಿ, ಉಗುಳು ನೆಕ್ಕಿಸಿದ ಪೊಲೀಸ್ ಅಧಿಕಾರಿ
ಶೇಖ್ಪುರ (ಬಿಹಾರ): ಪೊಲೀಸ್ ಅಧಿಕಾರಿಯೊಬ್ಬ ಇ-ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿದ ಹಾಗೂ ಆತನ ಜಾತಿ ಕೇಳಿದ ಬಳಿಕ ಉಗುಳು ನೆಕ್ಕಿಸಿದ ಘಟನೆ ಬಿಹಾರದಲ್ಲಿ ಗುರುವಾರ ನಡೆದಿದೆ. ಚಾಲಕ ಪ್ರದುಮಾನ್ ಕುಮಾರ್ ಪ್ರಯಾಣಿಕರನ್ನು ಶೇಖ್ಪುರ ಜಿಲ್ಲೆಯ ಮೆಹುಸ್ ಗ್ರಾಮದಲ್ಲಿ ಬಿಟ್ಟ ಬಳಿಕ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘‘ನಾನು ಇಂಟರ್ಸೆಕ್ಷನ್ಲ್ಲಿ ಇದ್ದಾಗ ಮೆಹುಸ್ ಪೊಲೀಸ್ ಠಾಣೆಯ ಉಸ್ತುವಾರಿ ಪ್ರವೀಣ್ ಚಂದ್ರ ದಿವಾಕರ್ ಅವರು ನನ್ನ ರಿಕ್ಷಾವನ್ನು ತಡೆದರು ಹಾಗೂ ನಿಂದಿಸಲು ಆರಂಭಿಸಿದರು’’ ಎಂದು ಪ್ರದುಮಾನ್ ಕುಮಾರ್ ತಿಳಿಸಿದ್ದಾರೆ. ‘‘ದಿವಾಕರ್ ಅವರು ಬೈಕ್ ಚಲಾಯಿಸುತ್ತಿದ್ದರು. ಸಾಮಾನ್ಯ ಉಡುಪು ಧರಿಸಿದ್ದರು. ಆದುದರಿಂದ ನನಗೆ ಆರಂಭದಲ್ಲಿ ಅವರನ್ನು ಪೊಲೀಸ್ ಅಧಿಕಾರಿ ಎಂದು ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ವಾಗ್ವಾದದ ಬಳಿಕ ಅವರು ಪೊಲೀಸ್ ವಾಹನಕ್ಕೆ ಕರೆ ನೀಡಿದರು ಹಾಗೂ ನನ್ನನ್ನು ಬಂಧಿಸಿದರು’’ ಎಂದು ಅವರು ಆರೋಪಿಸಿದ್ದಾರೆ. ‘‘ನನ್ನನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುವ ಮುನ್ನ ದಿವಾಕರ್ ನನಗೆ ರಸ್ತೆಯಲ್ಲೇ ಲಾಠಿಯಲ್ಲಿ ಕನಿಷ್ಠ 50ರಿಂದ 60 ಬಾರಿ ಥಳಿಸಿದ್ದಾರೆ. ಇದರಿಂದ ನಾನು ಗಾಯಗೊಂಡೆ. ನಾನು ಮದ್ಯಪಾನ ಮಾಡಿರುವುದಾಗಿ ಕೂಡ ಅವರು ಆರೋಪಿಸಿದರು. ಆದರೆ, ಯಾವುದೇ ವಾಸನೆ ಬರದೇ ಇದ್ದಾಗ, ಅವರು ನನಗೆ ಥಳಿಸಿದರು ಹಾಗೂ ಪೊಲೀಸ್ ಠಾಣೆಗೆ ಕರೆದೊಯ್ದರು’’ ಎಂದು ಕುಮಾರ್ ಹೇಳಿದ್ದಾರೆ. ಪೊಲೀಸ್ ಠಾಣೆಗೆ ತಲುಪಿದ ಬಳಿಕ ದಿವಾಕರ್ ಅವರು ತನ್ನನ್ನು ನಿಂದಿಸಿದರು ಹಾಗೂ ಮತ್ತಷ್ಟು ಥಳಿಸಿದರು. ಅನಂತರ ತನ್ನ ಜಾತಿ ಕೇಳಿದರು. ತಾನು ಬ್ರಾಹ್ಮಣ ಎಂದು ಹೇಳಿದ. ಅದಕ್ಕೆ ದಿವಾಕರ್, ‘‘ನನಗೆ ಬ್ರಾಹ್ಮಣ ಸಮುದಾಯದ ಜನರನ್ನು ನೋಡಲು ಕೂಡ ಇಷ್ಟಪಡುವುದಿಲ್ಲ’’ ಎಂದು ಹೇಳಿದರು. ಅನಂತರ ಅವರು ನೆಲದಲ್ಲಿ ಉಗುಳಿದರು ಹಾಗೂ ಅದನ್ನು ನೆಕ್ಕಿಸಿದರು ಎಂದು ಕುಮಾರ್ ಆರೋಪಿಸಿದ್ದಾರೆ.
ಕಲಬುರಗಿ | ದರ್ಗಾದಲ್ಲಿ ಇಟ್ಟಿದ್ದ ಬಂಗಾರದ ಆಭರಣ ಕಳ್ಳತನ
ಕಲಬುರಗಿ: ದರ್ಗಾದಲ್ಲಿ ಇಟ್ಟಿದ್ದ 14 ತೊಲ (140 ಗ್ರಾಂ) ಬಂಗಾರದ ಆಭರಣ ಕಳವಾದ ಘಟನೆ ಅಫಜಲಪುರ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿರುವ ಹಜರತ್ ಲಾಲಸಾಹೆಬ್ ಮೌಲಾಲಿ ದರ್ಗಾದಲ್ಲಿ ನಡೆದಿದೆ. ಮೊಹರಂ ಹಬ್ಬದ ಸಂಭ್ರಮ ಇರುವುದರಿಂದ ದೇವರಿಗಾಗಿ ಮೀಸಲಿಟಿದ್ದ ಆಭರಣವನ್ನು ಕಳ್ಳತನ ಮಾಡಲಾಗಿದ್ದು, ಆಭರಣ ಇಟ್ಟಿದ್ದ ಲಾಕರ್ ಮುರಿದು ಕಳ್ಳರು ಬಂಗಾರ ಕಳ್ಳತನ ಮಾಡಿದ್ದಾರೆ. ದೇವಲ ಗಾಣಗಾಪೂರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೋಲಿಸ್, ಶ್ವಾನದಳ, ಬೆರಳಚ್ಚು ತಜ್ಞರು ಆಗಿಮಿಸಿ ಪರಿಶೀಲನೆ ನಡೆಸಿದ್ದಾರೆ.
ವಳಚ್ಚಿಲ್: ಕಾರಿನಲ್ಲಿ ಸ್ಟಂಟ್; ವಿದ್ಯಾರ್ಥಿಗಳಿಗೆ ದಂಡ
ಮಂಗಳೂರು, ಜು.2: ನಗರ ಹೊರವಲಯದ ವಳಚ್ಚಿಲ್ ಸಮೀಪ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಚಲಿಸುತ್ತಿದ್ದ ಕಾರಿನ ಬಾಗಿಲ ಬಳಿ ನಿಂತು ಸ್ಟಂಟ್ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ದಂಡ ವಿಧಿಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಅಪಾಯಕಾರಿಯಾಗಿ ಸ್ಟಂಟ್ ಮಾಡುತ್ತಿದ್ದುದನ್ನು ಸಾರ್ವಜನಿಕರು ವೀಡಿಯೋ ಚಿತ್ರೀಕರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರು ಮತ್ತು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ 6,500 ರೂ. ದಂಡ ವಸೂಲಿ ಮಾಡಿದ್ದಾರೆ.
ಸಂಸದ ಚಂದ್ರಶೇಖರ್ ಆಝಾದ್ಗೆ ಜೀವ ಬೆದರಿಕೆ
ಬಿಜ್ನೋರ್ (ಉ.ಪ್ರ.): ಅಝಾದ್ ಸಮಾಜ ಪಕ್ಷ (ಕಾನ್ಶಿರಾಮ್)ದ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಅವರಿಗೆ ವ್ಯಾಟ್ಸ್ ಆ್ಯಪ್ ಮೂಲಕ ಜೀವ ಬೆದರಿಕೆ ಸಂದೇಶ ಕಳುಹಿಸಿದ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಚಂದ್ರಶೇಖರ್ ಅಝಾದ್ ಅವರನ್ನು 10 ದಿನಗಳ ಒಳಗೆ ಹತ್ಯೆಗೈಯಲಾಗುವುದು ಎಂಬ ಬೆದರಿಕೆಯ ಸಂದೇಶವನ್ನು ಪಕ್ಷದ ಸಹಾಯವಾಣಿಯ ವ್ಯಾಟ್ಸ್ ಆ್ಯಪ್ ಸಂಖ್ಯೆ ಸ್ವೀಕರಿಸಿತ್ತು ಎಂದು ಪ್ರತಿಪಾದಿಸಿ ಪಕ್ಷದ ಕಾರ್ಯಕರ್ತ ಶೇಖ್ ಪರ್ವೇಝ್ ದೂರು ಸಲ್ಲಿಸಿದ್ದಾರೆ ಎಂದು ನಾಗಿನಾ ಎಸ್ಎಚ್ ಒ ತೇಜ್ಪಾಲ್ ಸಿಂಗ್ ತಿಳಿಸಿದ್ದಾರೆ. ಅಝಾದ್ ಅವರು ಉತ್ತರಪ್ರದೇಶದ ನಾಗಿನಾ ಲೋಕಸಭೆಯ ಸದಸ್ಯರು ಕೂಡ ಆಗಿದ್ದಾರೆ. ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಸಂಬಂಧಿತ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಹಾಗೂ ತನಿಖೆ ಆರಂಭಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಈ ಬೆದರಿಕೆ ಪಕ್ಷದ ರಾಷ್ಟ್ರಾಧ್ಯಕ್ಷರು ಹಾಗೂ ಹಾಲಿ ಸಂಸದರ ಜೀವಕ್ಕೆ ಗಂಭೀರ ಅಪಾಯ ಒಡ್ಡಿದೆ ಎಂದು ಪಕ್ಷದ ಮುಸ್ಲಿಂ ಭಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ದೂರುದಾರ ಪರ್ವೇಝ್ ಹೇಳಿದ್ದಾರೆ.
ಜಪಾನ್ ಗೆ 35% ಸುಂಕ; ಡೊನಾಲ್ಡ್ ಟ್ರಂಪ್ ಬೆದರಿಕೆ
ವಾಷಿಂಗ್ಟನ್: ಜಪಾನ್ ನಿಂದ ಅಮೆರಿಕಕ್ಕೆ ರಫ್ತಿನ ಪ್ರಮಾಣ ಆಮದಿಗಿಂತ ಬಹಳ ಹೆಚ್ಚಿರುವುದರಿಂದ ಜಪಾನ್ ವಿರುದ್ಧ 35%ದವರೆಗೆ ಸುಂಕ ವಿಧಿಸಬಹುದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಜಪಾನಿನೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ನನಗೆ ಖಾತರಿಯಿಲ್ಲ. ಅವರು ಕಠಿಣ ನಿಲುವು ತಳೆದಿದ್ದಾರೆ. ಆದ್ದರಿಂದ ಅವರು 30% ಅಥವಾ 35% ಸುಂಕ ಪಾವತಿಸಬೇಕು' ಎಂದು ಟ್ರಂಪ್ ಹೇಳಿದ್ದು ಜಪಾನ್ ವಿರುದ್ಧ ಈಗ ಚಾಲ್ತಿಯಲ್ಲಿರುವ 24% ಸುಂಕದ ಪ್ರಮಾಣ ಹೆಚ್ಚುವ ಸುಳಿವು ನೀಡಿದ್ದಾರೆ. ಈ ಮಧ್ಯೆ, ಜಪಾನ್ ವ್ಯಾಪಾರ ಮಾತುಕತೆಗೆ ಸಿದ್ಧ. ಎರಡೂ ದೇಶಗಳಿಗೆ ಸಮಾಧಾನಕರ ರೀತಿಯಲ್ಲಿ ವ್ಯಾಪಾರ ಒಪ್ಪಂದ ಏರ್ಪಡಬೇಕು ಎಂದು ಪ್ರಧಾನಿ ಶಿಗೆರು ಇಷಿಬಾ ಸರಕಾರ ಹೇಳಿದೆ.
ಚಿಕ್ಕಬಳ್ಳಾಪುರ(ನಂದಿಬೆಟ್ಟ) : ಬೆಂಗಳೂರು ನಗರದ ಹೆಬ್ಬಾಳ ನಾಗವಾರ ಕಣಿವೆಯ ದ್ವಿತೀಯ ಹಂತದ ಸಂಸ್ಕರಿತ ನೀರನ್ನು ಶಿಡ್ಲಘಟ್ಟ ಅಮಾನಿ ಕೆರೆಯಿಂದ ಶಿಡ್ಲಘಟ್ಟದ 45 ಕೆರೆಗಳಿಗೆ, ಚಿಂತಾಮಣಿ ತಾಲೂಕಿನ 119 ಕೆರೆಗಳಿಗೆ ಸೇರಿದಂತೆ ಒಟ್ಟು 164 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲು 237 ಕೋಟಿ ರೂ. ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಬುಧವಾರ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಚಿಂತಾಮಣಿಯ ಭಕ್ತರಹಳ್ಳಿ ಅರಸಿಕೆರೆಯ ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ರೂ.36 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ನಾಡಪ್ರಭು ಕೆಂಪೇಗೌಡ ಕೋಟೆ ನವೀಕರಣ, ಸಮಗ್ರ ಅಭಿವೃದ್ಧಿ ಕಾಮಗಾರಿಗೆ ರೂ.103 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಪಾತುಪಾಳ್ಯ ಹೋಬಳಿಯ ಮಲ್ಲಮ್ಮ ಕಣಿವೆಯಲ್ಲಿ ಜಲಾಶಯ ನಿರ್ಮಾಣಕ್ಕೆ ಜಲಸಂಪನ್ಮೂಲ ಇಲಾಖೆಯಿಂದ 189 ಕೋಟಿ ರೂ.ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣವನ್ನು ಭಾಗ್ಯನಗರವಾಗಿ ಮರುನಾಮಕಾರಣ ಮಾಡಲು ಕೇಂದ್ರ ಗೃಹ ಮಂತ್ರಾಲಯದ ನಿರಪೇಕ್ಷಣ ಪತ್ರ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಗಣಿಗಾರಿಕೆಯಲ್ಲಿ ನಡೆದ ಅಕ್ರಮ ತನಿಖೆ ನಡೆಸಿದ ಲೋಕಾಯುಕ್ತ ವಿಶೇಷ ತಂಡದ ವರದಿ ಅಧ್ಯಯನ ಮಾಡಿ ಂಗಳಲ್ಲಿ ವರದಿ ಸಲ್ಲಿಸಲು ಕಾನೂನು ಸಚಿವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಹಿಂದೆ ರಚಿಸಲಾಗಿದ್ದ ಉಪಸಮಿತಿಯಲ್ಲಿ ಅನೇಕ ನ್ಯೂನ್ಯತೆ ಕಂಡುಹಿಡಿಯಲಾಗಿತ್ತು. ಆದರೆ, ನಂತರ ನಮ್ಮ ಸರಕಾರ ಪತನಗೊಂಡಿತ್ತು. ಈ ಅಕ್ರಮದಿಂದ ಆಗಿರುವ ನಷ್ಟವನ್ನು ಹೇಗೆ ಭರಿಸಬೇಕು ಎಂಬ ಸಲಹೆ ಬಂದಿತ್ತು. ಮುಂದೆ ನಮ್ಮ ರಾಜ್ಯದ ಸಂಪತ್ತನ್ನು ಹೇಗೆ ಕಾಪಾಡಬೇಕು ಎಂಬ ಉದ್ದೇಶದಿಂದ ಈಗ ಈ ಉಪಸಂಪುಟ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದರು. ‘ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಹೋಟೆಲ್ ಹಾಗೂ ಇತರೆ ಸೌಲಭ್ಯಕ್ಕಾಗಿ 50 ಕೋಟಿ ರೂ. ನೀಡಲಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪುರಸಭೆ ಹಾಗೂ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕೊಪ್ಪಳ ಜಿಲ್ಲೆ ಹನುಮಸಾಗರ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ವಿವರಿಸಿದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಹಿಂದುಳಿದ ವರ್ಗದ 14 ವಸತಿ ಶಾಲೆ ನಿರ್ಮಾಣಕ್ಕೆ 306 ಕೋಟಿ ರೂ.ಅನುದಾನ ನೀಡಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ಮೊರಾರ್ಜಿ ವಸತಿ ಶಾಲೆ ಪ್ರಾರಂಭಕ್ಕೆ ಅನುಮೋದನೆ. ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ 141 ಕೋಟಿ ರೂ.ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ. ಜಿಲ್ಲೆಯ ನಂದಿ ಹಾಗೂ ಚಿಂತಾಮಣಿಯ ಕೈವಾರದಲ್ಲಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ತೀರ್ಮಾನ. ಚಿಂತಾಮಣಿ ಹಾಗೂ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು 60 ಹಾಸಿಗೆಗಳ ಮೇಲ್ದರ್ಜೆಗೆ ಏರಿಸಿ ನವೀಕರಣ ಮಾಡಲು ರೂ.36 ಕೋಟಿ ಅನುದಾನ ನೀಡಿದ್ದೇವೆ ಎಂದು ಹೇಳಿದರು. ಕೋಲಾರದಲ್ಲಿ ಬಾಲಕರ ಸರಕಾರಿ ಕಾಲೇಜು ಮೂಲಭೂತ ಸೌಕರ್ಯಕ್ಕಾಗಿ 40 ಕೋಟಿ ರೂ.ಹಾಗೂ ಬಾಲಕಿಯರ ಕಾಲೇಜಿನ ಮೂಲಭೂತ ಸೌಕರ್ಯಕ್ಕೆ 20 ಕೋಟಿ ರೂ.ನೀಡಲು ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಬೆಂಗಳೂರು ಉತ್ತರ ವಿವಿಯ ನೂತನ ಕ್ಯಾಂಪಸ್ ಎರಡನೇ ಹಂತದ ಕಾಮಗಾರಿಗೆ 123 ಕೋಟಿ ರೂ.ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜು ಹಾಗೂ ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಎಂಆರ್ಐ ಯಂತ್ರಗಳ ಖರೀದಿಗೆ 21 ಕೋಟಿ ರೂ.ನೀಡಲು ಅನುಮೋದನೆ ಎಂದು ತಿಳಿಸಿದರು.
ಅನಧಿಕೃತ ವ್ಯಕ್ತಿಗಳ ಬೇಡಿಕೆ ಪರಿಗಣಿಸಲಾಗದು: ಚುನಾವಣಾ ಆಯೋಗ
ಹೊಸದಿಲ್ಲಿ: ತನ್ನೊಂದಿಗೆ ಮಾತುಕತೆ ನಡೆಸಲು ವಿವಿಧ ಪಕ್ಷಗಳ ಪರವಾಗಿ ಅನಧಿಕೃತ ವ್ಯಕ್ತಿಗಳು ಸಲ್ಲಿಸುವ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಇರಲು ಹಾಗೂ ಆಯಾ ರಾಜಕೀಯ ಪಕ್ಷಗಳ ವರಿಷ್ಠರ ಮನವಿಯನ್ನು ಮಾತ್ರ ಪರಿಗಣಿಸಲು ಚುನಾವಣಾ ಆಯೋಗ ಬುಧವಾರ ನಿರ್ಧರಿಸಿದೆ. ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆ ಕುರಿತು ಚುನಾವಣಾ ಆಯೋಗದೊಂದಿಗೆ ಚರ್ಚಿಸಲು ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಹಲವು ವ್ಯಕ್ತಿಗಳು ಸಮಯ ನಿಗದಿಪಡಿಸುವಂತೆ ಕೋರುತ್ತಿದ್ದಾರೆ ಎಂದು ಅದು ತಿಳಿಸಿದೆ. ಇನ್ನು ಮುಂದೆ ಚುನಾವಣಾ ಆಯೋಗ ಅನಧಿಕೃತ ವ್ಯಕ್ತಿಗಳ ಅಂತಹ ಮನವಿಗಳನ್ನು ತಿರಸ್ಕರಿಸುತ್ತದೆ ಎಂದು ಅದು ಹೇಳಿದೆ. ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ಹಲವು ರಾಜಕೀಯ ಪಕ್ಷಗಳ ಪರವಾಗಿ ಕಾಂಗ್ರೆಸ್ ನ ಕಾನೂನು ಸಲಹೆಗಾರರು ಚುನಾವಣಾ ಆಯೋಗದೊಂದಿಗೆ ಜುಲೈ 2ರಂದು ತುರ್ತು ಸಭೆ ನಡೆಸುವಂತೆ ಕೋರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 30ರಂದು ಸ್ವೀಕರಿಸಿದ ಈ ಮೇಲ್ನಲ್ಲಿ ಅವರು ತಾವು ಬಹುಪಕ್ಷ ನಿಯೋಗವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟದ ಎಲ್ಲಾ ಪಕ್ಷಗಳ ಹೆಸರನ್ನು ಉಲ್ಲೇಖಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಆದರೆ, ಸಿಪಿಐ (ಎಂಎಲ್) ಲಿಬರೇಷನ್ ಹಾಗೂ ಸಿಪಿಐ (ಎಂ) ಮಾತ್ರ ಸಭೆಯಲ್ಲಿ ಭಾಗವಹಿಸುವ ಬಗ್ಗೆ ದೃಢಪಡಿಸಿವೆ ಎಂದು ಮೂಲಗಳು ತಿಳಿಸಿವೆ.
ಜು.3 ರಂದು ಆಳಂದದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕಲಬುರಗಿ: ಆಳಂದ ತಾಲೂಕಾಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಕ್ಕಳ ಸಹಾಯವಾಣಿ-1098/112 ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜು.3 ರಂದು ಗುರುವಾರ ಬೆಳಿಗ್ಗೆ 10.30 ಗಂಟೆಗೆ ಆಳಂದ ತಾಲೂಕು ನ್ಯಾಯಾಲಯ ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಳಂದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಕಾನೂನು ಅರಿವು ಕುಮಾರಿ ಸುಮನ್ ಚಿತ್ತರಗಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಆಳಂದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಆಳಂದ ಪ್ರಧಾನ ಸಿವಿಲ್ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಇಸ್ಮಾಯಿಲ್ ಪಟೇಲ್, ಅಪರ ಸಿವಿಲ್ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಜ್ಯೋತಿ ವಿ.ಬಂದಿ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲಾಕರ ವಿ. ರಾಠೋಡ, ಕಾರ್ಯದರ್ಶಿ ಬಲಭೀಮ ಟಿ. ಶಿಂಧೆ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಅರವಿಂದ ಭಾಸಗಿ, ಕಲಬುರಗಿ 2ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ್, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕ ವಿಠ್ಠಲ ಚಿಕಣಿ, ಜಿಲ್ಲಾಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಬಸವರಾಜ ಟೇಂಗಳಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.