ಆತ್ಮಹತ್ಯೆಯ ಬೆದರಿಕೆ ಹಾಕಿದ್ದ ಸಲ್ಮಾನ್ ಸಹೋದರ ಅರ್ಬಾಜ್ ಖಾನ್
ಆತ್ಮಹತ್ಯೆಯ ಬೆದರಿಕೆ ಹಾಕಿದ್ದ ಸಲ್ಮಾನ್ ಸಹೋದರ ಅರ್ಬಾಜ್ ಖಾನ್
Facebook Love: 10 ವರ್ಷ ಫೇಸ್ಬುಕ್ ಪ್ರೇಮ.. ವಿದೇಶಿ ಯುವತಿ ಜತೆ ಸಪ್ತಪದಿ ತುಳಿದ ಉತ್ತರ ಪ್ರದೇಶ ಯುವಕ
Pathaan: ‘ಕೆಜಿಎಫ್:ಚಾಪ್ಟರ್ 2’ ದಾಖಲೆಯನ್ನ ಸರಿಗಟ್ಟಿದ ‘ಪಠಾಣ್’!
‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುತ್ತಿದ್ದು, ‘ಕೆಜಿಎಫ್: ಚಾಪ್ಟರ್ 2’ ದಾಖಲೆಯನ್ನ ಪುಡಿ ಪುಡಿ ಮಾಡಿದೆ.
ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ; ಬೆಂಗಳೂರಿನಿಂದ ಮೈಸೂರಿಗೆ 1000 ವಾಹನಗಳಲ್ಲಿ ಜಾಥಾ ಹೊರಟ ಅಭಿಮಾನಿಗಳು
Kannadathi: 'ಕನ್ನಡತಿ' ಧಾರಾವಾಹಿಯ ಕೊನೇ ವಾರದ ಸಂಚಿಕೆ ಪ್ರಸಾರ; ಅಂತ್ಯ ಹೇಗೆ ಆಗಲಿದೆ?
ರಂಜನಿ ರಾಘವನ್, ಕಿರಣ್ ರಾಜ್, ಚಿತ್ಕಳಾ ಬಿರಾದಾರ್ ನಟನೆಯ 'ಕನ್ನಡತಿ' ಧಾರಾವಾಹಿ ಕೊನೆಯ ವಾರದ ಸಂಚಿಕೆಗಳು ಪ್ರಸಾರ ಆಗಲಿದೆ. ಹಾಗಾದರೆ ಈ ಧಾರಾವಾಹಿಯ ಅಂತ್ಯ ಹೇಗೆ ಆಗಲಿದೆ? ಇದು ಹ್ಯಾಪಿ ಎಂಡಿಂಗ್? ಅಥವಾ ಹೇಗೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ
'ಸಾಹಸ ಸಿಂಹ' ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ; ಇಲ್ಲಿವೆ ಉದ್ಘಾಟನಾ ಸಮಾರಂಭದ ಫೋಟೋಗಳು
'ಸಾಹಸ ಸಿಂಹ' ಡಾ ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿನಲ್ಲಿ ಲೋಕಾರ್ಪಣೆಯಾಗಿದೆ. ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಎಚ್ಡಿ ಕೋಟೆ ರಸ್ತೆಯ ಮಾರ್ಗದಲ್ಲಿರುವ ಹಾಲಾಳು ಗ್ರಾಮದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದೆ. ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ವಿಷ್ಣುವರ್ಧನ್ ಅವರ ಸಾವಿರಾರು ಅಭಿಮಾನಿಗಳು ಹಾಜರಿದ್ದರು. ಡಾ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ, ಪುತ್ರಿ ಕೀರ್ತಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಜಿ ಟಿ ದೇವೇಗೌಡ ಸೇರಿದಂತೆ ಅನೇಕ ರಾಜಕೀಯ ನಾಯಕರು, ವಿಷ್ಣು ಕುಟುಂಬಸ್ಥರು ಹಾಜರಿದ್ದರು. ಸ್ಮಾರಕ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, 'ವಿಷ್ಣುವರ್ಧನ್ ಅವರು ಓರ್ವ ಮೇರು ನಟ. ಹಲವಾರು ಭಾಷೆಗಳಲ್ಲಿ ನಟನೆ ಮಾಡಿರುವ ಬಹುಭಾಷಾ ನಟ. ಅವರನ್ನು ಜನ 'ಸಾಹಸ ಸಿಂಹ' ಎಂದು ಕರೆಯುತ್ತಾರೆ. ಅವರ ಮರಣ ನಂತರ ಸ್ಮಾರಕ ನಿರ್ಮಾಣಕ್ಕೆ ಮೈಸೂರಿನಲ್ಲಿ ಸರ್ಕಾರ ಕಡೆಯಿಂದ ಜಾಗ ನೀಡಲಾಯಿತು. 11 ಕೋಟಿ ರೂ. ವೆಚ್ಚದಲ್ಲಿ ವಿಷ್ಣು ಅವರ ಸ್ಮಾರಕ ನಿರ್ಮಾಣವಾಗಿದೆ. ವಿಷ್ಣುವರ್ಧನ್ ಅವರ ಕುಟುಂಬ ಬಯಸಿದಂತೆ ಎಲ್ಲವೂ ಆಗಿದೆ. ಎಲ್ಲರೂ ಸೇರಿ ಸಂತೋಷದಿಂದ ಸ್ಮಾರಕ ಲೋಕಾರ್ಪಣೆ ಮಾಡಿದ್ದೇವೆ. ವಿಷ್ಣುವರ್ಧನ್ ಅವರ ಈ ಸ್ಮಾರಕವು ಪ್ರವಾಸಿ ತಾಣವಾಗಬೇಕು..' ಎಂದು ಹೇಳಿದರು.
ಶಾರುಖ್ ಇರಬೇಕು / ಲೈಂಗಿಕತೆ ಇರಬೇಕು; 20 ವರ್ಷದ ಹಿಂದಿನ ಮಾತಿಗೆ ನೇಹಾ ಧೂಪಿಯಾ ಈಗಲೂ ಬದ್ಧ
ಬಾಲಿವುಡ್ ನಟ ಶಾರುಖ್ ಖಾನ್ ಸದ್ಯ 'ಪಠಾಣ್' ಸಿನಿಮಾದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಈಗ ನೇಹಾ ಧೂಪಿಯಾ ಅವರು 20 ವರ್ಷಗಳ ಹಿಂದೆ ಶಾರುಖ್ ಖಾನ್ ಬಗ್ಗೆ ಹೇಳಿದ್ದ ಹೇಳಿಕೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ 'ಪಠಾಣ್' ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
IndiGo Airlines: ಇಂಡಿಗೋ ವಿಮಾನದಲ್ಲಿ ಮತ್ತೊಂದು ಘಟನೆ: ಎಮರ್ಜೆನ್ಸಿ ಎಕ್ಸಿಟ್ ತೆರೆಯಲು ಪ್ರಯತ್ನಿಸಿದ ಪ್ರಯಾಣಿಕ
IndiGo Airlines Emergency Exit Incident: ನಾಗಪುರ- ಮುಂಬಯಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್ ಬಾಗಿಲಿನ ಹಿಡಿಕೆಯ ಮುಚ್ಚಳವನ್ನು ತೆರೆದಿರುವುದು ಪತ್ತೆಯಾಗಿದ್ದು, ಆತನ ವಿರುದ್ಧ ಮುಂಬಯಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Narendra Modi: ವಿಭಜನೆ ಸೃಷ್ಟಿಸುವ ಪ್ರಯತ್ನಗಳ ಬಗ್ಗೆ ಎಚ್ಚರ: ಬಿಬಿಸಿ ಸರಣಿ ವಿವಾದದ ನಡುವೆ ಪ್ರಧಾನಿ ಮೋದಿ ಹೇಳಿಕೆ
PM Narendra Modi Cautions Against Division: ಬಿಬಿಸಿ ವಿವಾದಾತ್ಮಕ ಸಾಕ್ಷ್ಯಚಿತ್ರದ ಗದ್ದಲದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನರ ನಡುವೆ ಭಿನ್ನಾಭಿಪ್ರಾಯ ಹಾಗೂ ಒಡಕು ಮೂಡಿಸುವ ಪ್ರಯತ್ನಗಳ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ.
'ವಿಕ್ಟರಿ' ವೆಂಕಟೇಶ್ ಸಿನಿಮಾಗೆ ನಾಯಕಿಯಾದ ಶ್ರೀನಿಧಿ ಶೆಟ್ಟಿ; ಟಾಲಿವುಡ್ಗೆ ಎಂಟ್ರಿ ಕೊಟ್ಟ 'ಕೆಜಿಎಫ್' ನಟಿ
'ರಾಕಿಂಗ್ ಸ್ಟಾರ್' ಯಶ್ ಜೊತೆಗೆ 'ಕೆಜಿಎಫ್' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟವರು ಶ್ರೀನಿಧಿ ಶೆಟ್ಟಿ. 'ಕೆಜಿಎಫ್' ಸಿನಿಮಾದ ನಂತರ ತಮಿಳಿನ 'ಕೋಬ್ರಾ' ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅವರು ತೆಲುಗು ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದಾರೆ. ನಟ 'ವಿಕ್ಟರಿ' ವೆಂಕಟೇಶ್ ಅವರಿಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.
500ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟ ಮನ್ದೀಪ್ ರಾಯ್ ವಿಧಿವಶ
ಶಂಕರ್ ನಾಗ್ & ಅನಂತ್ ನಾಗ್ ಜೋಡಿಯ 'ಮಿಂಚಿನ ಓಟ', 'ಗೀತಾ', 'ಆಕ್ಸಿಡೆಂಟ್' ಮುಂತಾದ ಸಿನಿಮಾ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಮನದೀಪ್ ರಾಯ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬೈನಿಂದ ಬಂದ ಮನ್ದೀಪ್ ರಾಯ್ ಅವರು ಕನ್ನಡ ಕಲಿತು ಡಾ ರಾಜ್ಕುಮಾರ್, ಕಮಲ್ ಹಾಸನ್ ಮುಂತಾದ ದಿಗ್ಗಜರ ಜೊತೆ ಮನ್ದೀಪ್ ರಾಯ್ ನಟಿಸಿದ್ದರು.
ಬಡ್ಡಿ ದರ ಸದ್ಯಕ್ಕೆ ಏರಲ್ಲ, ಇಎಂಐ ಹೊರೆ ಸದ್ಯಕ್ಕೆ ಇಳಿಯಲ್ಲ! ಯಥಾಸ್ಥಿತಿಗೆ ಆರ್ಬಿಐ ಒತ್ತು
ರೆಪೋ ದರ ಏರಿಕೆಯ ಪರಿಣಾಮ ಬಹುತೇಕ ಬ್ಯಾಂಕ್ ಸಾಲಗಳ ಬಡ್ಡಿ ದರಗಳು ಭಾರೀ ಏರಿಕೆ ಕಂಡಿವೆ. ಹೀಗಾಗಿ ಇಎಂಐ ಭಾರದಿಂದ ನಲುಗಿರುವ ಸಾಲಗಾರರು ಬಡ್ಡಿ ದರ ಯಾವಾಗ ಇಳಿಯಬಹುದು ಎಂದು ಕಾಯುತ್ತಿದ್ದಾರೆ. ಆದರೆ, 'ಬಡ್ಡಿ ದರ ಸದ್ಯಕ್ಕೆ ಇಳಿಕೆಯಾಗುವುದಿಲ್ಲ' ಎಂದಿದ್ದಾರೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್.
Haripriya Vasishta Simha Reception: ಹರಿಪ್ರಿಯಾ - ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆಯ ಚಿತ್ರಗಳು
ಕನ್ನಡ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮೊನ್ನೆಯಷ್ಟೇ.. ಅಂದ್ರೆ ಜನವರಿ 26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆಯಾದರು. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಹರಿಪ್ರಿಯಾ ಕೊರಳಿಗೆ ವಸಿಷ್ಠ ಸಿಂಹ ಮಾಂಗಲ್ಯಧಾರಣೆ ಮಾಡಿದರು. ಹರಿಪ್ರಿಯಾ - ವಸಿಷ್ಠ ಸಿಂಹ ಮದುವೆಗೆ ನಟ ಶಿವರಾಜ್ ಕುಮಾರ್, ನಟ ಡಾಲಿ ಧನಂಜಯ್, ನಟಿ ಅಮೃತಾ ಅಯ್ಯಂಗಾರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಇಂದು ಹರಿಪ್ರಿಯಾ - ವಸಿಷ್ಠ ಸಿಂಹ ಅವರ ಗ್ರ್ಯಾಂಡ್ ರಿಸೆಪ್ಷನ್ ನಡೆಯುತ್ತಿದೆ. ತುಮಕೂರು ರಸ್ತೆಯ ಗೋಲ್ಡನ್ ಪಾಮ್ಸ್ & ರೆಸಾರ್ಟ್ನಲ್ಲಿ ಹರಿಪ್ರಿಯಾ - ವಸಿಷ್ಠ ಸಿಂಹ ಆರತಕ್ಷತೆ ಕಾರ್ಯಕ್ರಮ ಜರುಗುತ್ತಿದೆ. ನಟಿ ಶ್ರುತಿ, ನಟ ಶರಣ್, ಅಮೂಲ್ಯ, ರಮೇಶ್ ಅರವಿಂದ್, ಮಾಳವಿಕಾ ಅವಿನಾಶ್, ನಟ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಮಾಲಾಶ್ರೀ ಸೇರಿದಂತೆ ಅನೇಕ ತಾರೆಯರು ರಿಸೆಪ್ಷನ್ನಲ್ಲಿ ಭಾಗವಹಿಸಿ ನವದಂಪತಿ ಹರಿಪ್ರಿಯಾ - ವಸಿಷ್ಠ ಸಿಂಹಗೆ ಶುಭ ಹಾರೈಸಿದ್ದಾರೆ. ಫೋಟೋಗಳು ಇಲ್ಲಿವೆ ನೋಡಿ…
Rakhi Sawant Mother Passes Away: ಬಹು ಅಂಗಾಂಗ ವೈಫಲ್ಯದಿಂದ ರಾಖಿ ಸಾವಂತ್ ತಾಯಿ ನಿಧನ
ರಾಖಿ ಸಾವಂತ್ ತಾಯಿ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್ನಿಂದ ಬಳಲುತ್ತಿದ್ದ ಜಯಾ ಭೇದ ಇಂದು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ.
ಅರಿಶಿನ ನೀರಿನಲ್ಲಿ ಮಿಂದೆದ್ದ ವಧು ಸಿರಿ ರಾಜು
ಅಥಿಯಾ ಶೆಟ್ಟಿ-ಕೆ.ಎಲ್.ರಾಹುಲ್ ಹಳದಿ ಶಾಸ್ತ್ರದ ಚಿತ್ರಪಟ
ಅಥಿಯಾ ಶೆಟ್ಟಿ-ಕೆ.ಎಲ್.ರಾಹುಲ್ ಹಳದಿ ಶಾಸ್ತ್ರದ ಚಿತ್ರಪಟ
ಲೋಕೇಶ್ - ರಚನಾ ಕಲ್ಯಾಣದ ಅದ್ಭುತ ಚಿತ್ರಗಳು
ಲೋಕೇಶ್ - ರಚನಾ ಕಲ್ಯಾಣದ ಅದ್ಭುತ ಚಿತ್ರಗಳು
Pathaan: 3 ದಿನಗಳಲ್ಲಿ 313 ಕೋಟಿ ಕಲೆಕ್ಷನ್! ಹಳೇ ದಾಖಲೆಗಳನ್ನ ಪುಡಿ ಪುಡಿ ಮಾಡಿದ ‘ಪಠಾಣ್’!
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ರಿಲೀಸ್ ಆದ ಮೂರು ದಿನಗಳಲ್ಲಿ 313 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಡಾ ವಿಷ್ಣು ಸ್ಮಾರಕದಲ್ಲಿ ಏನೇನು ಇರಲಿದೆ? ಉದ್ಘಾಟನೆಗೆ ಸಕಲ ತಯಾರಿ, ಭರಪೂರ ಕಾರ್ಯಕ್ರಮ
13 ವರ್ಷಗಳ ಹೋರಾಟದ ಫಲವಾಗಿ ಅಂತೂ ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಡಾ. ವಿಷ್ಣುವರ್ಧನ್ ಸ್ಮಾರಕದ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೀಗಾಗಿ ಅನೇಕ ಕಾರ್ಯಕ್ರಮಗಳನ್ನು ನಾಳೆ ಹಮ್ಮಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಈ ಸ್ಮಾರಕದಲ್ಲಿ ಏನೇನು ಇರಲಿವೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಸರ್ಕಾರ ಬೇರೆ ನಟರಿಗೆ ನೀಡುವ ಮನ್ನಣೆಯನ್ನು ವಿಷ್ಣು ಸ್ಮಾರಕಕ್ಕೆ ನೀಡುತ್ತಿಲ್ಲ, ಯಾಕೆ?: ವೀರಕಪುತ್ರ ಶ್ರೀನಿವಾಸ್
ಜನವರಿ 29ರಂದು ಡಾ ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆ ಆಗ್ತಿದೆ. ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪತ್ರಕಾಗೋಷ್ಠಿ ನಡೆಸಿ ಸರ್ಕಾರದ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಷ್ಣು ಸ್ಮಾರಕ ಆಗಬೇಕು ಎಂದು ಕಳೆದ 13 ವರ್ಷಗಳಿಂದ ಹೋರಾಟ ಮಾಡಲಾಗಿತ್ತು.
Nandamuri Taraka Ratna: ನಂದಮೂರಿ ತಾರಕ ರತ್ನಗೆ ಹೃದಯಸ್ತಂಭನ: ಆರೋಗ್ಯ ಸ್ಥಿತಿ ಚಿಂತಾಜನಕ
ಪಾದಯಾತ್ರೆ ವೇಳೆ ಹೃದಯಸ್ತಂಭನದಿಂದಾಗಿ ನಂದಮೂರಿ ತಾರಕ ರತ್ನ ಕುಸಿದುಬಿದ್ದಿದ್ದರು. ನಂದಮೂರಿ ತಾರಕ ರತ್ನ ಅವರಿಗೆ ಆಂಟೀರಿಯರ್ ವಾಲ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಆಗಿರುವುದು ಕಂಡುಬಂದಿದೆ.
'ರಿಸರ್ಚ್ ಮಾಡ್ಕೊಂಡು ಸಿನಿಮಾ ಮಾಡಿ'; 'ಮಿಷನ್ ಮಜ್ನು' ತಂಡಕ್ಕೆ ಕ್ಲಾಸ್ ತಗೊಂಡ ಪಾಕಿಸ್ತಾನಿ ನಟ
ನಟ ಸಿದ್ದಾರ್ಥ್ ಮಲ್ಹೋತ್ರ, ರಶ್ಮಿಕಾ ಮಂದಣ್ಣ ನಟನೆಯ 'ಮಿಷನ್ ಮಜ್ನು' ಸಿನಿಮಾ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಪಾಕಿಸ್ತಾನಿಗಳನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಪಾಕ್ ನಟ ಅದ್ನಾನ್ ಸಿದ್ಧಿಕಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ದುಡ್ಡಿದೆ, ಹೋಮ್ ವರ್ಕ್ ಮಾಡಿ ಸಿನಿಮಾ ಮಾಡಿ ಎಂದು ಅದ್ನಾನ್ ಸಿದ್ಧಿಕಿ ಅವರು ಹೇಳಿದ್ದಾರೆ.
ಶರಣ್, ಶ್ರುತಿ ಸಹೋದರಿ ಉಷಾ ಪುತ್ರಿ ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪದಾರ್ಪಣೆ: 'ಧರಣಿ' ಚಿತ್ರಕ್ಕೆ ನಾಯಕಿ
ಸ್ಯಾಂಡಲ್ವುಡ್ನ ಖ್ಯಾತ ನಟ ಶರಣ್ ಮತ್ತು ನಟಿ ಶ್ರುತಿ ಅವರ ಮನೆಯಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಈ ಬಗ್ಗೆ ವಿವರ ಇಲ್ಲಿದೆ.
ಪ್ರೇಕ್ಷಕರ ಮನೆಗೆ ಬರಲಿವೆ ವಿಶೇಷ ಪತ್ರಗಳು; ವಿನೂತನ ಶೈಲಿಯಲ್ಲಿ ಆಮಂತ್ರಣ ಕೊಟ್ಟ 'ಹೊಂದಿಸಿ ಬರೆಯಿರಿ' ತಂಡ
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹುತಾರಾಗಣದ 'ಹೊಂದಿಸಿ ಬರೆಯಿರಿ' ಸಿನಿಮಾವು ಫೆ.10ರಂದು ಬಿಡುಗಡೆ ಆಗುತ್ತಿದೆ. ಈಗಾಗಲೆ ಹಾಡುಗಳ ಮೂಲಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಸಿನಿಮಾ, ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದೀಗ ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರಿಗೆ ಸಿನಿಮಾವನ್ನು ತಲುಪಿಸುವ ಕೆಲಸದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಹೌದು, ಈ ಬಾರಿ ಪ್ರೇಕ್ಷಕರ ಮನೆ ಮನೆಗಳಿಗೆ ಪತ್ರಗಳನ್ನು ಬರೆಯುವ ಮೂಲಕ ಚಿತ್ರತಂಡ ಹೊಸ ಮಾರ್ಗವನ್ನು ಅನುಸರಿಸಿದೆ. ಅಂಚೆ ಪತ್ರದಲ್ಲಿ ಸಿನಿಮಾ ಬಗ್ಗೆ ಮಾಹಿತಿಯನ್ನು ಬರೆದು ಅದನ್ನು ಚಿತ್ರತಂಡ ಮನೆ ಮನೆಗೆ ಕೊಡುವ ಮೂಲಕ ತಮ್ಮ ಸಿನಿಮಾಗೆ ಆಮಂತ್ರಣ ನೀಡುತ್ತಿದೆ. ರಾಜ್ಯಾದ್ಯಂತ 15 ಸಾವಿರಕ್ಕೂ ಹೆಚ್ಚು ಮನೆ ವಿಳಾಸಗಳನ್ನು ಸಂಗ್ರಹಿಸಿರುವ ಚಿತ್ರತಂಡ, ಆ ವಿಳಾಸಗಳಿಗೆ ಮನೆಗಳಿಗೆ ಪೋಸ್ಟ್ ಕಾರ್ಡ್ ಕಳಿಸಿಕೊಡುವ ಸಿನಿಮಾವನ್ನು ಕೆಲಸ ಮಾಡಲಾಗುತ್ತಿದೆ. 'ಪತ್ರದ ಜೊತೆಗೆ ಒಂದು ಅವಿನಾಭಾವ, ಆತ್ಮೀಯವಾದ ಸಂಬಂಧವಿದೆ. ಆದ್ದರಿಂದ ನಮ್ಮ ಸಿನಿಮಾವನ್ನು ಪತ್ರದ ಮೂಲಕ ಜನರಿಗೆ ತಲುಪಿಸಲು ತಯಾರಿ ಮಾಡಿಕೊಂಡಿದ್ದೇವೆ. ಈ ಪತ್ರಗಳಲ್ಲಿ ನಮ್ಮ ಸಿನಿಮಾದ ಬಗ್ಗೆ ಬರೆದು ಅದನ್ನು ನಾವು ಕಲೆಕ್ಟ್ ಮಾಡಿಕೊಂಡಿರುವ ವಿಳಾಸಗಳಿಗೆ ಕಳಿಸಿಕೊಡಲಾಗುವುದು. ಗುರುವಾರ (ಜ.26) ಚಿತ್ರತಂಡ ವಿಜಯನಗರದಲ್ಲಿ ಈ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಪತ್ರ ತಲುಪಲಿದೆ..' ಎಂದು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹೇಳುತ್ತಾರೆ.
SpiceJet: ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ ಕಿಡಿಗೇಡಿ: ವಿಮಾನದಿಂದ ಕೆಳಕ್ಕಿಳಿಸಿದ ಸ್ಪೈಸ್ಜೆಟ್
SpiceJet Flight Hijack Tweet: ದುಬೈನಿಂದ ಜೈಪುರಕ್ಕೆ ತೆರಳುವ ವಿಮಾನವನ್ನು ಹವಾಮಾನ ಸಮಸ್ಯೆಯಿಂದಾಗಿ ದಿಲ್ಲಿಯತ್ತ ತಿರುಗಿಸಿ ಅಲ್ಲಿನ ಏರ್ಪೋರ್ಟ್ನಲ್ಲಿ ಇಳಿಸಲಾಗಿತ್ತು. ಈ ವೇಳೆ ಸುಮ್ಮನಿರದೆ ಇರುವೆ ಬಿಟ್ಟುಕೊಂಡಂತೆ ಯುವಕನೊಬ್ಬ, ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾನೆ.
Shah Rukh Khan: ‘ಪಠಾಣ್’ ಸಕ್ಸಸ್ ಮಧ್ಯೆ ಬುದ್ಧಿವಂತಿಕೆಯ ಮಾತುಗಳನ್ನಾಡಿದ ಶಾರುಖ್ ಖಾನ್
ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ‘ಪಠಾಣ್’ ಸಿನಿಮಾ ಬಂಪರ್ ಕಲೆಕ್ಷನ್ ಮಾಡುತ್ತಿದೆ. ಈ ಮಧ್ಯೆ ‘ಕಮ್ ಬ್ಯಾಕ್’ ಕುರಿತಾಗಿ ಶಾರುಖ್ ಖಾನ್ ಬುದ್ಧಿವಂತಿಕೆಯಿಂದ ಟ್ವೀಟ್ ಮಾಡಿದ್ದಾರೆ. ಅದೇನು ಅಂತ ನೀವೇ ನೋಡಿ…
ವಿಚ್ಛೇದನವಾದ್ರೂ ಏರ್ಪೋರ್ಟ್ನಲ್ಲಿ ತಬ್ಬಿಕೊಂಡ ಮಲೈಕಾ ಅರೋರ - ಅರ್ಬಾಜ್ ಖಾನ್; ಕಾಮೆಂಟೋ ಕಾಮೆಂಟ್
ವಿಚ್ಛೇದನ ಪಡೆದಿರುವ ಬಾಲಿವುಡ್ ನಟಿ ಮಲೈಕಾ ಅರೋರ ಹಾಗೂ ಅರ್ಬಾಜ್ ಖಾನ್ ಅವರು ಮುಂಬೈ ಏರ್ಪೋರ್ಟ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಗನನ್ನು ಏರ್ಪೋರ್ಟ್ಗೆ ಬಿಡಲು ಬಂದ ಈ ಜೋಡಿ ಆ ನಂತರದಲ್ಲಿ ಆತ್ಮೀಯತೆಯಿಂದ ತಬ್ಬಿಕೊಂಡಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Lakshana: ನಕ್ಷತ್ರನೇ RJ ಸಖಿ ಅನ್ನೋದು ಭೂಪತಿಗೆ ಗೊತ್ತಾಯ್ತು: ಇಬ್ಬರ ಲವ್ ಸ್ಟೋರಿ ಶುರು!
‘ಲಕ್ಷಣ’ ಧಾರಾವಾಹಿ ದೊಡ್ಡ ತಿರುವಿಗೆ ಸಾಕ್ಷಿಯಾಗಿದೆ. ರಿಯಲ್ RJ ಸಖಿ ಯಾರು ಎಂಬ ಗುಟ್ಟು ಭೂಪತಿ ಮುಂದೆ ರಟ್ಟಾಗಿದೆ.
Lokesh Rachana Marriage: ಹೊಸ ಜೀವನ ಆರಂಭಿಸಿದ ನಟ ಲೋಕೇಶ್ - ನಟಿ ರಚನಾ
ಕನ್ನಡ ನಟ ಲೋಕೇಶ್ ಬಸವಟ್ಟಿ ಹಾಗೂ ರಚನಾ ದಶರಥ್ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ. ನವದಂಪತಿ ಲೋಕೇಶ್ ಬಸವಟ್ಟಿ - ರಚನಾ ದಶರಥ್ಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಹಾಲಿಡೇ ಮೂಡ್ನಲ್ಲಿ 'ಕನ್ನಡತಿ' ನಟಿ ಸಾರಾ ಅಣ್ಣಯ್ಯ
ಹಾಲಿಡೇ ಮೂಡ್ನಲ್ಲಿ 'ಕನ್ನಡತಿ' ನಟಿ ಸಾರಾ ಅಣ್ಣಯ್ಯ
ನಟ ಶರಣ್ ಕುಟುಂಬದ ಮತ್ತೋರ್ವ ಪ್ರತಿಭೆ ಸ್ಯಾಂಡಲ್ವುಡ್ಗೆ ಎಂಟ್ರಿ; ಯಾರಿದು ಕೀರ್ತಿ ಕೃಷ್ಣ?
ನಟಿ ಶ್ರುತಿ ಮತ್ತು ಅವರ ಸಹೋದರ ಶರಣ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಅವರ ಪೋಷಕರು ಕೂಡ ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಚೆಗೆ ಶರಣ್ ಅವರ ಪುತ್ರ ಹೃದಯ್ ಕೂಡ ಗುರು ಶಿಷ್ಯರು ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ನೀಡಿದರು. ಇದೀಗ ಅವರ ಕುಟುಂಬದಿಂದ ಮತ್ತೊಬ್ಬರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಹೌದು, ಶರಣ್ ಮತ್ತು ಶ್ರುತಿ ಅವರ ಸಹೋದರಿ ಉಷಾ ಕೃಷ್ಣ ಅವರ ಪುತ್ರಿ ಕೀರ್ತಿ ಕೃಷ್ಣ ಅವರು ಈಗ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ದೊಡ್ಡಮ್ಮ ಶ್ರುತಿ, ಮಾವ ಶರಣ್ ಅವರು ಈಗಾಗಲೇ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ಕೀರ್ತಿ ಕೃಷ್ಣ ಯಾವ ಸಿನಿಮಾದೊಂದಿಗೆ ಚಿತ್ರರಂಗದಲ್ಲಿ ಲಾಂಚ್ ಆಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಚಿತ್ರರಂಗದಲ್ಲಿ ಸಾಕಷ್ಟು ಜನ ಕೀರ್ತಿ ಕೃಷ್ಣ ಅವರನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಲು ತುದಿಗಾಲಲ್ಲಿ ನಿಂತಿದ್ದರಂತೆ. ಅಂತಿಮವಾಗಿ 'ಧರಣಿ' ಚಿತ್ರದ ಮೂಲಕ ಅವರು ಸಿನಿಮಾರಂಗ ಪ್ರವೇಶ ಮಾಡಿದ್ದಾರೆ. ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆಯೊಂದು 'ಧರಣಿ' ಚಿತ್ರದಲ್ಲಿದೆ ಅಂತ ಚಿತ್ರತಂಡ ಹೇಳಿಕೊಂಡಿತ್ತು. ಮನೋಜ್ ಹೀರೋ ಆಗಿರುವ ಈ ಸಿನಿಮಾಗೆ ಕೀರ್ತಿ ಎಂಟ್ರಿಯಿಂದ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.
Pathaan: ‘ಪಠಾಣ್’ ಅಬ್ಬರಕ್ಕೆ ಬಾಕ್ಸ್ ಆಫೀಸ್ ತತ್ತರ: 2 ದಿನಗಳಲ್ಲಿ 219 ಕೋಟಿ ಕಲೆಕ್ಷನ್!
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಿಡುಗಡೆಯಾದ ಎರಡು ದಿನಗಳಲ್ಲಿ 219 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಟ್ರೇಡ್ ಎಕ್ಸ್ಪರ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
Building Collapses: ಲಖನೌದಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಮುಂದುವರಿದ ಕಾರ್ಯಾಚರಣೆ
ಶಾಕುಂತಲೆಯಾಗಿ ಗಮನಸೆಳೆದ ನಟಿ ಸಮಂತಾ; ಇಲ್ಲಿವೆ 'ಶಾಕುಂತಲಂ' ಚಿತ್ರದ ಕಲರ್ಫುಲ್ ಫೋಟೋಗಳು
ನಟಿ ಸಮಂತಾ ಅಭಿಮಾನಿಗಳು ಈಚೆಗೆ ಬೇಸರಗೊಂಡಿದ್ದರು. ಮಯೋಸೈಟಿಸ್ ಎಂಬ ಕಾಯಿಲೆ ಸಮಂತಾಗೆ ಇದೆ ಎಂದಾಗ ಫ್ಯಾನ್ಸ್ ನೊಂದುಕೊಂಡಿದ್ದರು. ಆದರೆ ಈಗ ಸಮಂತಾ ಪುನಃ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹೌದು, ಕಳೆದ ವರ್ಷ ಸಮಂತಾ ನಟನಯೆ 'ಯಶೋದಾ' ಸಿನಿಮಾ ತೆರೆಕಂಡಿತ್ತು. ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಮಾಡಿದ್ದ ಆ ಸಿನಿಮಾ ಓಟಿಟಿಯಲ್ಲೂ ಒಳ್ಳೊಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ತೆರೆಕಾಣಲು ಸಜ್ಜಾಗಿದೆ. 'ಶಾಕುಂತಲಂ' ಸಿನಿಮಾವು 3ಡಿ ರೂಪದಲ್ಲಿ ಫೆಬ್ರವರಿ 17ರಂದು ರಿಲೀಸ್ ಆಗಲಿದೆ. ಗುಣಶೇಖರ್ ನಿರ್ದೇಶನ ಮಾಡಿದ್ದು, ಅವರ ಪುತ್ರಿ ನೀಲಿಮಾ ಗುಣ ಈ ಸಿನಿಮಾಗೆ ಹಣ ಹಾಕಿದ್ದಾರೆ. ಶಾಕುಂತಲೆಯಾಗಿ ಸಮಂತಾ ನಟಿಸಿದ್ದು, ದುಷ್ಯಂತನಾಗಿ ದೇವ್ ಮೋಹನ್ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಪ್ರಿನ್ಸ್ ಭರತ ಎಂಬ ಪಾತ್ರವನ್ನು ಮಾಡಿದ್ದಾಳೆ. ದೂರ್ವಾಸ ಮಹರ್ಷಿಯಾಗಿ ಮೋಹನ್ ಬಾಬು, ಅನುಸೂಯಾ ಪಾತ್ರದಲ್ಲಿ ಅದಿತಿ ಬಾಲನ್, ಪ್ರಿಯಾಂವದ ಪಾತ್ರದಲ್ಲಿ ಅನನ್ಯಾ ನಗಲ್ಲ ನಟಿಸಿದ್ದಾರೆ. ಪ್ರಕಾಶ್ ರಾಜ್, ಗೌತಮಿ, ಮಧೂ, ಜಿಶ್ಶು ಸೇನ್ಗುಪ್ತಾ, ಕಬೀರ್ ಬೇಡಿ, ಕಬೀರ್ ದುಹಾನ್ ಸಿಂಗ್, ವರ್ಷಿಣಿ ಸೌಂದರರಾಜನ್, ಮಲ್ಹೋತ್ರ ಶಿವರಾಮ್ ಮುಂತಾದವರು ಈ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ.
Nandamuri Taraka Ratna: ಪಾದಯಾತ್ರೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ನಂದಮೂರಿ ತಾರಕ ರತ್ನ: ಆಸ್ಪತ್ರೆಗೆ ದಾಖಲು
ಪಾದಯಾತ್ರೆ ವೇಳೆ ಪ್ರಜ್ಞೆ ತಪ್ಪಿ ಕುಸಿದುಬಿದ್ದ ತೆಲುಗು ನಟ ಕಮ್ ರಾಜಕಾರಣಿ ನಂದಮೂರಿ ತಾರಕ ರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಶರ್ವಾನಂದ್ ನಿಶ್ಚಿತಾರ್ಥದಲ್ಲಿ ಮಿಂಚಿದ ತಾರೆಯರು
ಶರ್ವಾನಂದ್ ನಿಶ್ಚಿತಾರ್ಥದಲ್ಲಿ ಮಿಂಚಿದ ತಾರೆಯರು
Madhya Pradesh: ಮಕ್ಕಳಿಗೆ ಮಾರಕ ಕಾಯಿಲೆ: ಬಿಜೆಪಿ ಮಾಜಿ ಕಾರ್ಪೊರೇಟರ್ ಇಡೀ ಕುಟುಂಬ ಸಾವಿಗೆ ಶರಣು
BJP Ex Councilor Suicide in Madhya Pradesh: ತಮ್ಮ ಇಬ್ಬರು ಗಂಡು ಮಕ್ಕಳನ್ನು ಕಾಡುತ್ತಿದ್ದ ಕಾಯಿಲೆಯಿಂದ ಸಾಕಷ್ಟು ನೋವು ಅನುಭವಿಸಿದ್ದ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಬಿಜೆಪಿಯ ಮಾಜಿ ಕಾರ್ಪೊರೇಟರ್ ಹಾಗೂ ಅವರ ಕುಟುಂಬ ಜೀವ ಕಳೆದುಕೊಂಡಿದೆ.
'ಭೂ ಕೈಲಾಸ' ಚಿತ್ರದ ನಟಿ ಜಮುನಾ ನಿಧನ; ಕಂಬನಿ ಮಿಡಿದ ಟಾಲಿವುಡ್
ತೆಲುಗು, ಹಿಂದಿ, ತಮಿಳು ಸೇರಿದಂತೆ ಕನ್ನಡದ 'ಆದರ್ಶ ಸತಿ', 'ತೆನಾಲಿ ರಾಮಕೃಷ್ಣ', 'ಭೂ ಕೈಲಾಸ', 'ರತ್ನಗಿರಿ ರಹಸ್ಯ' ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಹಿರಿಯ ನಟಿ ಜಮುನಾ ಅವರು ನಿಧನರಾಗಿದ್ದಾರೆ. ಜಮುನಾ ನಿಧನಕ್ಕೆ ಟಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Pakistan Crisis | ದಾಖಲೆ ಕುಸಿತ ಕಂಡ ಪಾಕಿಸ್ತಾನ ರೂಪಾಯಿ, ಭಾರೀ ಸಂಕಷ್ಟದಲ್ಲಿ ನೆರೆಯ ರಾಷ್ಟ್ರ
ಸಾಲ ಪಡೆಯಲು ವಿನಿಮಯ ದರದ ಮೇಲಿನ ತನ್ನ ಹಿಡಿತವನ್ನು ಬಿಟ್ಟು ಬಿಡುವಂತೆ ಪಾಕಿಸ್ತಾನ ಸರಕಾರಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೂಚಿಸಿದ ಬೆನ್ನಲ್ಲೇ ಪಾಕಿಸ್ತಾನ ರೂಪಾಯಿ ಪಾತಾಳಕ್ಕೆ ಕುಸಿದಿದೆ.
ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬರಲಿವೆ ಮತ್ತಷ್ಟು ಚಿರತೆ: ಈ ಬಾರಿ ದಕ್ಷಿಣ ಆಫ್ರಿಕಾ ತಳಿಗಳ ಆಗಮನ
ದಕ್ಷಿಣ ಆಫ್ರಿಕಾದಿಂದ ಮುಂದಿನ ಹತ್ತು ವರ್ಷಗಳಲ್ಲಿ ಚಿರತೆಗಳನ್ನು ತರಿಸಿಕೊಳ್ಳುವ ವಿಚಾರವಾಗಿ ಭಾರತ ಸರ್ಕಾರ ಹಾಗೂ ದಕ್ಷಿಣ ಆಫ್ರಿಕಾ ಸರ್ಕಾರ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಅದರ ಫಲವಾಗಿ, ಮುಂದಿನ ಫೆಬ್ರವರಿಯಲ್ಲಿ ಸುಮಾರು 12 ಚಿರತೆಗಳು ಭಾರತದತ್ತ ಪ್ರಯಾಣ ಬೆಳೆಸಲಿವೆ. ಕಳೆದ ವರ್ಷ ನಮೀಬಿಯಾದಿಂದ ತರಿಸಿಕೊಳ್ಳಲಾಗಿರುವ ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದ್ದು, ದ. ಆಫ್ರಿಕಾದಿಂದ ಬರುವ ಚಿರತೆಗಳನ್ನು ಅಲ್ಲಿಯೇ ಬಿಡಲಾಗುತ್ತದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
'ಪಠಾಣ್' ಗೆದ್ದಿತು ಅಂದ್ರೆ ಪಾಕಿಸ್ತಾನ, ISIS ಯಶಸ್ವಿಯಾಗಿ ಚಾಲನೆಯಲ್ಲಿದೆ ಎಂದರ್ಥ: ಕಂಗನಾ ರಣಾವತ್
'ಕಾಂಟ್ರವರ್ಸಿ ಕ್ವೀನ್', ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಟ್ವಿಟ್ಟರ್ಗೆ ಮರಳಿದ್ದು, 'ಪಠಾಣ್' ಸಿನಿಮಾ ಬಗ್ಗೆ ಮತ್ತೆ ಮಾತನಾಡಿದ್ದಾರೆ. ರಿಲೀಸ್ ಆದ ಮೊದಲನೇ ದಿನಕ್ಕೆ 106 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಚಿತ್ರವನ್ನು ಗೆಲ್ಲಿಸಿದ್ದು ಯಾರು? ಇದೇ ದ್ವೇಷದ ಮೇಲಿನ ಪ್ರೀತಿಯ ವಿಜಯ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಕಂಗನಾ ಯಾಕೆ ಹೀಗೆ ಹೇಳಿದ್ರು? ಏನು ಕಾರಣ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.