SENSEX
NIFTY
GOLD
USD/INR

Weather

24    C
... ...View News by News Source

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಚಿಕ್ಕಮಗಳೂರು : ಮನೆ ಮೇಲೆ ಮರಬಿದ್ದು ಸಾವನ್ನಪ್ಪಿರುವ ಮಹಿಳೆಯರು ಈ ಹಿಂದೆ ಮರ ತೆರವಿಗೆ ಅಧಿಕಾರಿಗಳಿಗೆ ಮಾಡಿದ ಮನವಿಯ ವಿಡಿಯೋ ಈಗ ವೈರಲ್‌ ಆಗಿದೆ. ಘಟನೆ ಹಿನ್ನೆಲೆ: ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಕೆ. ತಲಗೂರು ಗ್ರಾಮದ ಚಂದ್ರಮ್ಮ ಎಂಬವರ ಮನೆಯಲ್ಲಿ ಚಂದ್ರಮ್ಮ, ಸರಿತಾ ಹಾಗೂ ಸರಿತಾ ಅವರ ಮಕ್ಕಳಾದ ಸುನಿಲ್ ಹಾಗೂ ದೀಕ್ಷಿತ್ ಮಲಗಿದ್ದ ವೇಳೆ ಮನೆಯ ಪಕ್ಕದಲ್ಲೇ ಇದ್ದ ಭಾರಿ ಗಾತ್ರದ ಮರವೊಂದು ಚಂದ್ರಮ್ಮ ಅವರ ಮನೆಯ ಮೇಲೆ ಬಿದ್ದು ಸರಿತಾ ಹಾಗೂ ಚಂದ್ರಮ್ಮ ಮೃತಪಟ್ಟಿದ್ದರು. ಘಟನೆಯಲ್ಲಿ ಸರಿತಾ ಅವರ ಮಕ್ಕಳಾದ ಸುನಿಲ್ ಹಾಗೂ ದೀಕ್ಷಿತ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಎರಡು ತಿಂಗಳ ಹಿಂದೆ ಚಂದ್ರಮ್ಮ ಹಾಗೂ ಸರಿತಾರವರು ಮನೆ ಮುಂದಿದ್ದ ಬೃಹತ್‌ ಗಾತ್ರದ ಮರವನ್ನು ತೆರವಗೊಳಿಸಿ, ಇದರಿಂದ ಅಪಾಯಯಿದೆ ಎಂದು, ಜನಪ್ರತಿನಿಧಿಗಳಿಗೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ತಹಶೀಲ್ದಾರ್ ಗೆ ಮನವಿ ಮಾಡಿದ್ದರು. ಸದ್ಯ ಈ ವಿಡಿಯೋ ಈಗ ಹೊರ ಬಿದ್ದಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹಾಕುತ್ತಿದ್ದಾರೆ. ಮೊದಲೇ ಮರ ತೆರವಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದಲೇ ಈ ದುರಂತ ನಡೆದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಮೃತರು ಹಿಂದೆ ಮನವಿ ಮಾಡಿರುವ ವಿಡಿಯೋ ಗ್ರಾಮದಾದ್ಯಂತ ವಿಡಿಯೋ ವೈರಲ್ ಆಗಿದೆ.

ಉದಯವಾಣಿ 10 Aug 2022 4:27 pm

ನಿತೀಶ್ ಕುಮಾರ್ ರಾಜಕೀಯ ಸಿದ್ಧಾಂತ ಯಾವುದು? ಭವಿಷ್ಯವೇನು?

ಇತ್ತೀಚಿಗಿನ ಬಿಹಾರದ ಪ್ರಮುಖ ರಾಜಕಾರಣಿಗಳ ಹೆಸರನ್ನು ನೆನಪಿಸಿಕೊಂಡರೆ ಕೇಳಿ ಬರುವ ಹೆಸರೇ ಲಾಲು ಪ್ರಸಾದ್ ಯಾದವ್, ಅವರನ್ನು ಬಲವಾಗಿ ವಿರೋಧಿಸಿ ಸಮಾಜವಾದಿ ಸಿದ್ಧಾಂತದಲ್ಲಿ ರಾಜಕೀಯ ಮಾಡಿಕೊಂಡು ಬಂದ ಇನ್ನೋರ್ವ ಪ್ರಮುಖ ರಾಜಕಾರಣಿಯೇ ನಿತೀಶ್ ಕುಮಾರ್. ಬಿಹಾರದ ಪ್ರಮುಖ ಕೂರ್ಮಿ ಸಮುದಾಯದ ನಾಯಕರಾಗಿರುವ ನಿತೀಶ್ 8 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೂ ರಾಜಕಾರದಲ್ಲಿ ಒಂದು ದಾಖಲೆಯೇ. ಸದ್ಯ 71 ರ ಹರೆಯದಲ್ಲಿರುವ ನಿತೀಶ್ ಕುಮಾರ್ ಅವರ ರಾಜಕೀಯ ನಡೆ ಕಳೆದೊಂದು ದಶಕದಿಂದ ಪರಸ್ಪರ ವೈರುಧ್ಯಗಳಿಂದಲೇ ಕೂಡಿ ಜನತೆಗೆ ಗೊಂದಲ ಹುಟ್ಟಿಸುವಂತಹ ದಾರಿಯಲ್ಲಿ ಸಾಗಿದೆ. ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿಯನ್ನು ಗಳಿಸಿದ ಬಳಿಕ ಬಿಹಾರ ರಾಜ್ಯ ವಿದ್ಯುತ್ ಮಂಡಳಿಗೆ ಸೇರಿ, ಅಲ್ಲಿ ಒಲ್ಲದ ಮನಸ್ಸಿನಿಂದ ಕೆಲಸ ಮಾಡುವುದು ಸಾಧ್ಯವಾಗದೆ ರಾಜಕಾರಣಕ್ಕೆ ಧುಮುಕಿದವರು. ರಾಜಕಾರಣದ ಆರಂಭದಲ್ಲಿ ರಾಮ್ ಮನೋಹರ್ ಲೋಹಿಯಾ, ಎಸ್.ಎನ್. ಸಿನ್ಹಾ, ಕರ್ಪುರಿ ಠಾಕೂರ್, ಮತ್ತು ವಿ.ಪಿ. ಸಿಂಗ್ ಅವರೊಂದಿಗೆ ಹೋರಾಟದಲ್ಲಿ ತೊಡಗಿಕೊಂಡಿದ್ದ ನಿತೀಶ್ 1974 ಮತ್ತು 1977 ನಡುವೆ ಜಯಪ್ರಕಾಶ್ ನಾರಾಯಣ್ ಅವರ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಮತ್ತು ಸತ್ಯೇಂದ್ರ ನಾರಾಯಣ್ ಸಿನ್ಹಾ ನೇತೃತ್ವದ ಜನತಾ ಪಕ್ಷಕ್ಕೆ ಸೇರಿ ರಾಜಕಾರಣದ ಒಂದೊಂದೆ ಮೆಟ್ಟಿಲು ಏರಿದವರು. ಜನತಾದಳ ವಿಭಜನೆಯಾದ ವೇಳೆ 1994 ರಲ್ಲಿ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ‘ಸಮತಾ ಪಾರ್ಟಿ’ ಯನ್ನು ಕಟ್ಟಿ ಹೊಸ ಸಾಹಸಕ್ಕೆ ನಿತೀಶ್ ಕುಮಾರ್ ಕೈ ಹಾಕಿದವರು. 2003 ರಲ್ಲಿ ಶರದ್ ಯಾದವ್ ನೇತೃತ್ವದ ಜನತಾ ದಳದ ಭಾಗ, ಜಾರ್ಜ್ ಫೆನಾಂಡಿಸ್ ಮತ್ತು ನಿತೀಶ್ ಅವರ ಸಮತಾ ಪಾರ್ಟಿ ಮತ್ತು ಲೋಕ ಶಕ್ತಿ ಪಕ್ಷ ಒಂದಾಗಿ ಜನತಾ ದಳ ಸಂಯುಕ್ತ (ಜೆಡಿಯು) ಪಕ್ಷವನ್ನು ಹುಟ್ಟು ಹಾಕಿ ಹೊಸ ಶಕ್ತಿಯನ್ನಾಗಿ ಬೆಳೆಸಿದರು. ಪಕ್ಷವನ್ನು ನಿತೀಶ್ ಮುನ್ನೆಡಿಸಿಕೊಂಡು ಬಂದು ಪ್ರಭಾವಿ ನಾಯಕನಾಗಿ ಬೆಳೆದರು. 2003 ರಲ್ಲಿ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿದ ನಿತೀಶ್ 2013ರ ವರೆಗೆ ಎನ್ ಡಿಎಯ ಪ್ರಮುಖ ಮಿತ್ರ ಪಕ್ಷವಾಗಿದ್ದು, ಅಧಿಕಾರವನ್ನು ಅನುಭವಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದಲ್ಲಿ ರೈಲ್ವೆಯಂತಹ ಪ್ರಮುಖ ಖಾತೆಯನ್ನು ನಿಭಾಯಿಸಿದ್ದರು. 2013 ರಲ್ಲಿ ಬಿಜೆಪಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುವುದಾಗಿ ಘೋಷಿಸಿದಾಗ ಸಮಾಜವಾದಿ ಸಿದ್ದಾಂತ ಪ್ರತಿಪಾದಕರಾಗಿದ್ದ ನಿತೀಶ್ ಬಹಿರಂಗವಾಗಿ ವಿರೋಧಿಸಿ ಎನ್ ಡಿಎ ಮೈತ್ರಿಕೂಟದಿಂದ ಹೊರ ನಡೆದರು. ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಒಟ್ಟು 40 ಸ್ಥಾನಗಳ ಪೈಕಿ ಬಿಜೆಪಿ 22 ಸ್ಥಾನಗಳನ್ನು ಗೆದ್ದರೆ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ 6 ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ 3 ಸ್ಥಾನಗಳನ್ನು ಗೆದ್ದಿದ್ದವು. 20 ಸ್ಥಾನಗಳನ್ನು ಹೊಂದಿದ್ದ ಜೆಡಿಯು ಮೋದಿ ಅಲೆಯ ಹೊಡೆತಕ್ಕೆ ಸಿಲುಕಿ 18 ಸ್ಥಾನಗಳನ್ನು ಕಳೆದುಕೊಂಡು ಕೇವಲ 2 ಸ್ಥಾನಗಳನ್ನು ಗಳಿಸಿ ಭಾರಿ ಮುಖಭಂಗ ಅನುಭವಿಸಿತು. ಸೋಲಿನ ಆಘಾತಕ್ಕೆ ಸಿಲುಕಿದ ನಿತೀಶ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಜಿತನ್ ರಾಮ್ ಮಾಂಝಿ ಅವರಿಗೆ ಅಧಿಕಾರ ನೀಡಿದ್ದರು. ಭವಿಷ್ಯದ ರಾಜಕಾರಣದ ಬಗ್ಗೆ ಚಿಂತಿಸಿದ ನಿತೀಶ್ ಹೊಸ ಮಾರ್ಗ ಕಂಡು ಕೊಂಡು ”ಮಹಾ ಘಟ್ ಬಂಧನ್” ಮೂಲಕ ವಿರೋಧಿಗಳ ಕೈ ಜೋಡಿಸಿದರು. ಆರ್ ಜೆಡಿ ಮತ್ತು ಕಾಂಗ್ರೆಸ್ ಜತೆ ಸೇರಿ 2015 ರ ವಿಧಾನಸಭಾ ಚುನಾವಣೆ ಎದುರಿಸಿ ಭರ್ಜರಿ ಜಯ ಸಾಧಿಸಿ ಮತ್ತೆ ಸಿಎಂ ಆದರು. ಜೆಡಿಯು+ಆರ್‌ಜೆಡಿ+ಕಾಂಗ್ರೆಸ್‌ 243 ಸ್ಥಾನಗಳಲ್ಲಿ 178ರಲ್ಲಿ ಜಯಭೇರಿ ಬಾರಿಸಿತು. ಬಿಜೆಪಿ ಮಿತ್ರಪಕ್ಷಗಳು ಕೇವಲ 58 ಸ್ಥಾನಗಳನ್ನು ಮಾತ್ರ ಗಳಿಸಲು ಯಶಸ್ವಿಯಾಗಿದ್ದವು. 2017 ರಲ್ಲಿ ಮಹಾ ಘಟ್ ಬಂಧನ್ ನಿಂದ ಹೊರ ಬಂದ ನಿತೀಶ್ ಬಿಜೆಪಿಯೊಂದಿಗೆ ಮತ್ತೆ ಸಖ್ಯ ಮಾಡಿಕೊಂಡರು. ಎನ್ ಡಿಎ ಭಾಗವಾದ ಅವರು ರಾಜಕೀಯ ಲಾಭ ಪಡೆದುಕೊಂಡರು. ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಮೋಡಿ ಮಾಡಿದ್ದ ಎನ್ ಡಿಎ 40 ಸ್ಥಾನಗಳ ಪೈಕಿ 39 ನ್ನು ಬಾಚಿಕೊಂಡಿತ್ತು. ಬಿಜೆಪಿ 17, ಜೆಡಿಯು 16 ಮತ್ತು ಎಲ್ ಜೆಪಿ 6 ಸ್ಥಾನಗಳನ್ನು ಗೆದ್ದಿದ್ದವು. 2020 ರಲ್ಲಿ ಎನ್ ಡಿಎ ಮೈತ್ರಿ ಕೂಟದ ಹಲವು ಗೊಂದಲದ ನಡುವೆ ಚುನಾವಣೆ ಎದುರಿಸಿ ಪ್ರಯಾಸಕರ ಗೆಲುವು ಸಾಧಿಸಿ ನಿತೀಶ್ ಮತ್ತೆ ಸಿಎಂ ಆಗಿದ್ದರು. 243 ವಿಧಾನಸಭಾ ಸ್ಥಾನಗಳ ಪೈಕಿ ಜೆಡಿಯು ನಿತೀಶ್ ನಾಯಕತ್ವದಲ್ಲಿ 43 ಸ್ಥಾನಗಳನ್ನು ಮಾತ್ರ ಗೆದ್ದು ಕೊಂಡಿತ್ತಾದರೂ ಬಿಜೆಪಿ ಆಡಿದ ಮಾತಿನಂತೆ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿತ್ತು. ಬಿಜೆಪಿ 19.5% ಮತ ಪ್ರಮಾಣ ಗಳಿಸಿದ್ದರೆ ಜೆಡಿಯು 15.4%, ಆರ್ ಜೆ ಡಿ 23.1% ಮತ ಗಳಿಸಿದ್ದವು. ಮತ್ತೆ ಮಹಾ ಘಟ”ಬಂಧನ ”ದ ಮೂಲಕ ಹೊಸ ಮಾದರಿಯ ಆಡಳಿತಕ್ಕೆ ಹೊರಟಿರುವ ನಿತೀಶ್ ರಾಜಕೀಯ ಹಾದಿಯಲ್ಲಿ ಸವಾಲುಗಳೇ ಹೆಚ್ಚಿರುವುದರಲ್ಲಿ ಅನುಮಾನವಿಲ್ಲ. ಹತ್ತಿರ ಚುನಾವಣೆ ಇಲ್ಲದೆ ಹೋದರೂ ಬಿಜೆಪಿ ಪಕ್ಷ ಸಂಘಟಿಸಿ ಇತರ ಮಿತ್ರ ಪಕ್ಷಗಳೊಂದಿಗೆ ಹೋರಾಟಕ್ಕೆ ವೇದಿಕೆ ಸೃಷ್ಟಿಸುವ ಎಲ್ಲಾ ಲಕ್ಷಣಗಳಿವೆ. ಈ ಹಿಂದೆ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಮೈತ್ರಿ ಕಡಿದುಕೊಂಡಿದ್ದ ನಿತೀಶ್ ಮುಂದೆ ಯಾವ ರೀತಿ ಪಕ್ಷ ಮತ್ತು ಆಡಳಿತ ಮುಂದುವರಿಸುತ್ತಾರೆ ಎನ್ನುವ ಕುತೂಹಲವೂ ರಾಜಕೀಯವಲಯದಲ್ಲಿ ಹುಟ್ಟಿಕೊಂಡಿದೆ. ವಿಷ್ಣುದಾಸ್ ಪಾಟೀಲ್

ಉದಯವಾಣಿ 10 Aug 2022 4:27 pm

ಆಗಸ್ಟ್ 15 ರಂದು ಮೆಟ್ರೋ ಪ್ರಯಾಣಿಕರಿಗೆ ಶೇ 50ರಷ್ಟು ಡಿಸ್ಕೌಂಟ್​ಗೆ ಮನವಿ…ಸಿಎಂ ಮತ್ತು BMRCL ಗೆ ಪತ್ರ ಬರೆದ ಡಿಕೆ ಶಿವಕುಮಾರ್​…

ಬೆಂಗಳೂರು: ಆಗಸ್ಟ್ 15 ರಂದು ಮೆಟ್ರೋ ದರದಲ್ಲಿ ಶೇ 50ರಷ್ಟು ಡಿಸ್ಕೌಂಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು​ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಎಂಆರ್​ಸಿಎಲ್​ಗೆ ಪತ್ರ ಬರೆದು ಮನವಿ ಮಾಡಿದ್ಧಾರೆ. ಕಾಂಗ್ರೆಸ್ ಫ್ರೀಡಂ ಮಾರ್ಚ್ ನಡೆಸಲಿದೆ. ಈ ಹಿನ್ನೆಲೆ ಟ್ರಾಫಿಕ್ ಜಾಮ್ ಆಗದಂತೆ ತಡೆಯಲು ಓಡಾಟಕ್ಕೆ ವಾಹನದ ಬದಲು ಮೆಟ್ರೋ ಸಂಚಾರಕ್ಕೆ ಒತ್ತು ನೀಡಲಾಗುತ್ತಿದೆ. ಆದ್ದರಿಂದ 75ನೇ ಸ್ವಾತಂತ್ರ್ಯೋತ್ಸವಂದು ಮೆಟ್ರೋ ದರದಲ್ಲಿ ಶೇಕಡ 50 ರಷ್ಟು ಡಿಸ್ಕೌಂಟ್ ನೀಡುವಂತೆ ಡಿಕೆಶಿ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ […]

ಬಿಟಿವಿ ನ್ಯೂಸ್ ಲೈವ್ 10 Aug 2022 4:25 pm

ಏಷ್ಯಾಕಪ್​​ 2022: ಫ್ಯಾನ್ಸ್​​ಗೆ ಗುಡ್​​ನ್ಯೂಸ್​ ಕೊಟ್ಟ ವಿರಾಟ್​​ ಕೊಹ್ಲಿ

ಕಳೆದೊಂದು ತಿಂಗಳಿಂದ ಟೀಮ್ ಇಂಡಿಯಾದಿಂದ ಹೊರುಗಳಿದಿರೋ ವಿರಾಟ್​ ಕೊಹ್ಲಿ, ಏಷ್ಯಾಕಪ್​ ಟೂರ್ನಿಗಾಗಿ ಈ ವಾರದಿಂದ ಅಭ್ಯಾಸ ಶುರು ಮಾಡಲು ರೆಡಿಯಾಗಿದ್ದಾರೆ. ಇಂಗ್ಲೆಂಡ್​ ಪ್ರವಾಸದ ನಂತರ ತಂಡದಿಂದ ರೆಸ್ಟ್​ ಪಡೆದಿದ್ದ ಕೊಹ್ಲಿ, ಒಂದು ತಿಂಗಳ ಕಾಲ ಕುಟುಂಬದೊಂದಿಗೆ ಕಾಲ ಕಳೆದಿದ್ರು. ಇದರಿಂದ ವೆಸ್ಟ್ ಇಂಡೀಸ್​ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯನ್ನ ಕೊಹ್ಲಿ ಆಡಿರಲಿಲ್ಲ. ಆದ್ರೀಗ ಏಷ್ಯಾಕಪ್​ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್​​ T20 ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ರೋಹಿತ್​ ಶರ್ಮಾ ನೇತೃತ್ವದ 15 ಆಟಗಾರರ […] The post ಏಷ್ಯಾಕಪ್​​ 2022: ಫ್ಯಾನ್ಸ್​​ಗೆ ಗುಡ್​​ನ್ಯೂಸ್​ ಕೊಟ್ಟ ವಿರಾಟ್​​ ಕೊಹ್ಲಿ appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 4:25 pm

ವರುಣನ ಆರ್ಭಟಕ್ಕೆ ಕೃಷಿಕರು ಕಂಗಾಲು

ಸೇಡಂ: ವರುಣನ ಆರ್ಭಟಕ್ಕೆ ಅನ್ನದಾತ ಕಂಗಾಲಾಗಿದ್ದು, ಈ ಹಿಂದೆ ಸುರಿದ ಜಿಟಿ-ಜಿಟಿ ಮಳೆಗೆ ಮುಂಗಾರು ಬಿತ್ತನೆ ಮಾಡಿದ ಹೆಸರು, ಉದ್ದು ಹಾಳಾದರೆ, ಇದೀಗ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಮಾಡಿದ ತೊಗರಿ ಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಹಿಂದೆ ಮುಂಗಾರು ಬಿತ್ತನೆ ಮಾಡಿದ್ದ ರೈತರಿಗೆ ಜಿಟಿ-ಜಿಟಿ ಮಳೆ, ಬಸವನ ಹುಳು, ಕಾಂಡ ನೊಣ, ಮ್ಯಾಕ್ರೋಫೋಮಿನಾ ಶಿಲೀಂಧ್ರ ರೋಗಗಳಿಂದ ಬೆಳೆ ನಷ್ಟ ಉಂಟಾಗಿತ್ತು. ತಾಲೂಕಿನ ಆಡಕಿ ವಲಯದಲ್ಲಿ 9985 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, 2185 ಹೆಕ್ಟೇರ್‌ ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1580 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 155 ಹೆಕ್ಟೇರ್‌ ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 650 ಹೆ. ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, 15 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಕೋಡ್ಲಾ ವಲಯದಲ್ಲಿ 20250 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, 5630 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1830 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 255 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1850 ಹೆ. ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, 30 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಮುಧೋಳ ವಲಯದಲ್ಲಿ 18325 ಹೆ. ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, 5325 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1895 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 295 ಹೆ.ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1350 ಹೆ. ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, 25 ಹೆ. ಪ್ರದೇಶದಲ್ಲಿ ನಷ್ಟ , ಸೇಡಂ ವಲಯದಲ್ಲಿ 20850 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, 4350 ಹೆ. ಪ್ರದೇಶದಲ್ಲಿ ನಷ್ಟ, 2530 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 250 ಹೆಕ್ಟೇರ್‌ ಪ್ರದೇಶದಲ್ಲಿ ನಷ್ಟ, 1750 ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, 35 ಹೆಕ್ಟೇರ್‌ ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಒಟ್ಟಾರೆ 18550 ಹೆಕ್ಟೇರ್‌ ಪ್ರದೇಶದಲ್ಲಿ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬೆಳೆಹಾನಿ ಕುರಿತು ಈಗಾಗಲೇ ಸಮೀಕ್ಷೆ ಕಾರ್ಯ ಆರಂಭ ಮಾಡಲಾಗಿದೆ. ಸತತವಾಗಿ ಮಳೆ ಬರುತ್ತಿರುವ ಕಾರಣಕ್ಕೆ ಸಮೀಕ್ಷೆ ಕಾರ್ಯ ವಿಳಂಬವಾಗುತ್ತಿದೆ. ಸರ್ವೇ ಕಾರ್ಯ ತ್ವರಿತವಾಗಿ ಮಾಡಲು ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಈ ಎಲ್ಲ ಇಲಾಖೆಗಳ ತಂಡ ಪ್ರತಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ನಿಖರ ವರದಿ ಸಿದ್ಧಪಡಿಸಿ ನೀಡಲಿವೆ. -ಬಸವರಾಜ ಬೆಣ್ಣೆಶಿರೂರ, ತಹಶೀಲ್ದಾರ್‌ ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಹಲವೆಡೆ ಬೆಳೆ ನಷ್ಟ ಉಂಟಾಗಿದ್ದು, 26276 ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ. ವಿಮೆ ಮಾಡಿಸಿದ ರೈತರು ಬೆಳೆ ನಷ್ಟವಾದ 72 ಗಂಟೆಯಲ್ಲಿ ವಿಮಾ ಕಂಪನಿಯ ಟೋಲ್‌ ಫ್ರೀ ಸಂಖ್ಯೆಗೆ ದೂರು ನೀಡಬೇಕು. ವಿಮಾ ಕಂಪನಿ ಹಾಗೂ ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ ಹಾನಿಯ ಪ್ರಮಾಣವನ್ನು ಆಧರಿಸಿ ಪರಿಹಾರ ನೀಡಲಾಗುತ್ತದೆ. -ವೈ.ಎಲ್‌ ಹಂಪಣ್ಣ, ಸಹಾಯಕ ಕೃಷಿ ನಿರ್ದೇಶಕ ಸುಧೀರ ಎಸ್‌. ಬಿರಾದಾರ

ಉದಯವಾಣಿ 10 Aug 2022 4:24 pm

BIG BREAKING ನುಪೂರ್ ಶರ್ಮಾಗೆ ರಿಲೀಫ್; ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿಚಾರಣೆ ದೆಹಲಿಗೆ

ಬಿಜೆಪಿಯ ರಾಷ್ಟ್ರೀಯ ಮಾಜಿ ವಕ್ತಾರೆ ನುಪೂರ್ ಶರ್ಮಾ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್​ಐಆರ್​ಗಳ ವಿಚಾರಣೆಯು ದೆಹಲಿಯಲ್ಲಿ ನಡೆಸುವಂತೆ ಸುಪ್ರೀಂಕೋರ್ಟ್​ ಮಹತ್ವದ ಆದೇಶವನ್ನ ನೀಡಿದೆ. ಪ್ರವಾದಿ ಮೊಹಮ್ಮದ್ ಕುರಿತ ಹೇಳಿಕೆಗೆ ಸಂಬಂಧಿಸಿ ದೇಶದ ವಿವಿಧ ಭಾಗಗಳಲ್ಲಿ ನುಪೂರ್ ಶರ್ಮಾ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳ ವಿಚಾರಣೆಯನ್ನ ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಜೊತೆಗೆ ಎಫ್‌ಐಆರ್ ದಾಖಲಾದ ಯಾವುದೇ ರಾಜ್ಯದ ಪೊಲೀಸರು, ತನಿಖೆಯ ಸಮಯದಲ್ಲಿ ಸಲಹೆಗಳನ್ನ ನೀಡಲು ಬಯಸಿದರೆ ಖಂಡಿತವಾಗಿಯೂ ನೀಡಬಹುದು ಎಂದು ಕೋರ್ಟ್ ಹೇಳಿದೆ. […] The post BIG BREAKING ನುಪೂರ್ ಶರ್ಮಾಗೆ ರಿಲೀಫ್; ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿಚಾರಣೆ ದೆಹಲಿಗೆ appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 4:17 pm

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಪಾಟ್ನಾ: ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ಬುಧವಾರ( ಆಗಸ್ಟ್ 10) ದಾಖಲೆಯ 8ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗವರ್ನರ್ ಪಾಗು ಚೌಹಾಣ್ ಅವರು ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ತೇಜಸ್ವಿ ಯಾದವ್ ಸಿಎಂ ನಿತೀಶ್ ಕುಮಾರ್ ಅವರ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಕಳೆದ 22 ವರ್ಷಗಳಲ್ಲಿ ನಿತೀಶ್ ಕುಮಾರ್ ಅವರು 8ನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದಂತಾಗಿದೆ. ನಿತೀಶ್ ಕುಮಾರ್ ಮಂಗಳವಾರ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಆರ್ ಜೆಡಿ ಸೇರಿದಂತೆ ಮಿತ್ರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು. 2000ನೇ ಇಸವಿಯಲ್ಲಿ ಜೆಡಿಯು ಮುಖಂಡ ನಿತೀಶ್ ಕುಮಾರ್ ಮೊದಲ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಭರ್ಜರಿ ಜಯಗಳಿಸಿತ್ತು. ನಂತರ 2014ರಲ್ಲಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ನಿರೀಕ್ಷಿತ ಸ್ಥಾನ ಗಳಿಸದಿರುವುದಕ್ಕೆ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಅಧಿಕಾರದಿಂದ ಕೆಳಗಿಳಿದಿದ್ದರು. ಬಳಿಕ ಒಂದು ವರ್ಷದೊಳಗೆ ಬದಲಾದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ನಿತೀಶ್ ಮತ್ತೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು.

ಉದಯವಾಣಿ 10 Aug 2022 4:02 pm

ಸಿಎಂ ಬದಲಾವಣೆ ಕಪೋಲ ಕಲ್ಪಿತ…ಕಾಂಗ್ರೆಸ್​ ಕೇಳಿ ನಾವು ಸಿಎಂ ಬದಲಾವಣೆ ಮಾಡೋಕಾಗುತ್ತಾ: ಸಿ.ಟಿ. ರವಿ ಕಿಡಿ…

ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಕಪೋಲ ಕಲ್ಪಿತ. ಕಾಂಗ್ರೆಸ್​ ಪಕ್ಷವನ್ನು ಕೇಳಿ ನಾವು​ ಸಿಎಂ ಬದಲಾವಣೆ ಮಾಡೋಕಾಗುತ್ತಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ ಆಸ್ಪತ್ರೆಯಲ್ಲಿದ್ದ ವೀರೇಂದ್ರ ಪಾಟೀಲ್ ರನ್ನು ಹೇಗೆ ಕಿತ್ತಾಕಿದ್ರು. ಅಂಥಾ ಸಂಸ್ಕೃತಿ ನಮ್ಮದಲ್ಲ. ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ಧಾರೆ. ಅವರನ್ನು ಬದಲಾವಣೆ ಮಾಡೋ ಯಾವುದೇ ನಿರ್ಧಾರವನ್ನು ಹೈಕಮಾಂಡ್ ಮಾಡಿಲ್ಲ ಎಂದು ಸಿ.ಟಿ. ರವಿ ತಿಳಿಸಿದ್ಧಾರೆ. ಇದನ್ನೂ ಓದಿ :ತಮಿಳುನಾಡಿನಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನ […]

ಬಿಟಿವಿ ನ್ಯೂಸ್ ಲೈವ್ 10 Aug 2022 4:01 pm

ಹರ್‌ ಘರ್‌ ತಿರಂಗಾ ಅಭಿಯಾನ : ಮಕ್ಕಳಿಂದ ಪಾಲಕ, ಪೋಷಕರಿಗೆ ಪತ್ರ!

ಉಡುಪಿ/ಮಂಗಳೂರು : ಹರ್‌ ಘರ್‌ ತಿರಂಗಾ ಕಾರ್ಯ ಕ್ರಮದ ಕುರಿತು ಪಾಲಕ, ಪೋಷಕರಿಗೂ ಮಾಹಿತಿ ನೀಡಲು ಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಂದ ಪತ್ರ ಅಭಿಯಾನ ನಡೆಸಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಆಗಸ್ಟ್‌ 13ರಿಂದ 15ರ ವರೆಗೆ ನಡೆಯಲಿರುವ ಹರ್‌ ಘರ್‌ ತಿರಂಗಾ ಕಾರ್ಯಕ್ರಮಕ್ಕೆ ಜಿಲ್ಲಾಡ ಳಿತ, ಜಿ.ಪಂ.ನಿಂದ ಎಲ್ಲ ರೀತಿಯ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಗ್ರಾ.ಪಂ. ಜಿಲ್ಲಾಡಳಿತ ಕಚೇರಿ, ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ ಮಾರಾಟ ಆರಂಭಗೊಂಡಿದೆ. ಖರೀದಿ ಪ್ರಕ್ರಿಯೆಯೂ ಭರದಿಂದಲೇ ಸಾಗುತ್ತಿದೆ. ಪತ್ರದ ಜತೆ ಕರಪತ್ರ ವಿದ್ಯಾರ್ಥಿಗಳು ಪಾಲಕ, ಪೋಷಕರಿಗೆ ಹರ್‌ಘರ್‌ ತಿರಂಗಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬರೆಯುವ ಪತ್ರದ ಜತೆಗೆ ಜಿಲ್ಲಾಡಳಿತದಿಂದ ಸಿದ್ಧ ಪಡಿಸಿರುವ ಕರಪತ್ರವೊಂದನ್ನು ನೀಡಲಾಗುತ್ತದೆ. ಮುದ್ರಣ ಕಾರ್ಯ ಪೂರ್ಣಗೊಂಡಿದ್ದು, ವಲಯ ವಾರು ಕ್ಷೇತ್ರಶಿಕ್ಷಣಾಧಿಕಾರಿಗಳ ಮುಖೇನ ಶಾಲೆಗಳಿಗೆ ತಲುಪಿಸಿ ಪ್ರತೀ ವಿದ್ಯಾರ್ಥಿಗೂ ನೀಡಲಾಗುತ್ತದೆ. ಪತ್ರದ ಜತೆಗೆ ಕರಪತ್ರವನ್ನು ಪಾಲಕ, ಪೋಷಕರಿಗೆ ಮಕ್ಕಳು ನೀಡಲಿದ್ದಾರೆ. ಕರಪತ್ರದಲ್ಲಿ ಏನಿದೆ? ಕರಪತ್ರದ ಒಂದು ಭಾಗದಲ್ಲಿ ಹರ್‌ಘರ್‌ ತಿರಂಗಾ ಅಭಿಯಾನದ ಪರಿಚಯ, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಮಾಹಿತಿ, ಧ್ವಜಾರೋಹಣ ಹೇಗೆ ಮತ್ತು ಧ್ವಜ ಮಹತ್ವ, ಹರಿದಿರುವ ಅಥವಾ ಹಾಳಾಗಿರುವ ಧ್ವಜ ಹಾರಿಸಬಾರದು, ಧ್ವಜ ನೆಲಕ್ಕೆ ತಾಗದಂತೆ ಎಚ್ಚರವಹಿಸಬೇಕು, ಕೇಸರಿ ಬಣ್ಣ ಮೇಲಿರಬೇಕು. ಈ ಅಭಿಯಾನದ 3 ದಿನ ರಾತ್ರಿಯೂ ಧ್ವಜ ಹಾರಿಸಲು ಅವಕಾಶವಿದೆ. ಸಂಭ್ರಮಾಚರಣೆ ಮುಗಿದ ಅನಂತರ ಧ್ವಜವನ್ನು ಗೌರವ ಪೂರ್ವಕವಾಗಿ ಸುರಕ್ಷಿತವಾಗಿ ಇಡಬೇಕು ಎಂಬ ಮಾಹಿತಿ ಕರಪತ್ರದ ಒಂದು ಭಾಗದಲ್ಲಿದೆ. ಇನ್ನೊಂದು ಭಾಗದಲ್ಲಿ ಸ್ವತ್ಛ ಭಾರತ್‌ ಮಿಷನ್‌ಗೆ ಸಂಬಂಧಿಸಿದ ವಿವರ ನೀಡಲಾಗಿದೆ. ಮನೆ ಮನೆಯಲ್ಲೂ ರಾರಾಜಿಸಲಿ ರಾಷ್ಟ್ರಧ್ವಜ ರಾಷ್ಟ್ರಧ್ವಜ ಬರಿಯ ಬಟ್ಟೆಯಲ್ಲ. ಅದು ನಮ್ಮೆಲ್ಲರ ಆತ್ಮಗೌರವದ ಪ್ರತೀಕ. ನಮ್ಮ ಕರ್ತವ್ಯಗಳನ್ನು, ದೇಶದ ಕುರಿತು ಹೆಮ್ಮೆ ಮತ್ತು ಗೌರವದ ಭಾವವನ್ನು ಮೂಡಿಸುವ ಸಂಕೇತವಾಗಿದೆ. ಇದನ್ನು ಮೂರು ದಿನಗಳ ಕಾಲ ನಮ್ಮ ಮನೆ ಮೇಲೂ ಹಾರಿಸಬೇಕು. ನೆರೆಕರೆಯವರಿಗೂ ತಿಳಿಸಬೇಕು ಎನ್ನುವ ಮಾಹಿತಿಯನ್ನು ಪತ್ರದಲ್ಲಿ ಉಲ್ಲೇಖೀಸಿ ಪಾಲಕ, ಪೋಷಕರಿಗೆ ಮಕ್ಕಳು ಪತ್ರ ಬರೆಯಲಿದ್ದಾರೆ. ಹರ್‌ ಘರ್‌ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಮಕ್ಕಳ ಮೂಲಕ ಪಾಲಕ, ಪೋಷಕರಿಗೆ ರಾಷ್ಟ್ರಧ್ವಜಾರೋಹಣ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಲು ಪತ್ರ ಅಭಿಯಾನ ಶಾಲೆಗಳಲ್ಲಿ ನಡೆಸಲಿದ್ದೇವೆ. – ಶಿವರಾಜ್‌, ಡಿಡಿಪಿಐ ಉಡುಪಿ ಹರ್‌ಘರ್‌ ತಿರಂಗಾ ಹೇಗೆ ನಡೆಯಬೇಕು ಎಂಬ ಬಗ್ಗೆ ಈಗಾಗಲೇ ಮಕ್ಕಳಿಗೆ ಮಾಹಿತಿ ನೀಡಲು ಶಿಕ್ಷಕರಿಗೆ ತರಬೇತಿ ಕೊಡಲಾಗಿದೆ. ಸಂಬಂಧ ಪಟ್ಟ ವಿವರಗಳನ್ನು ಮಕ್ಕಳ ನೋಟ್‌ಪುಸ್ತಕದಲ್ಲಿ ಬರೆಸಿ ಪಾಲಕರಿಗೆ ರವಾನಿಸಲಾಗುವುದು. – ಸುಧಾಕರ್‌, ಡಿಡಿಪಿಐ, ದಕ್ಷಿಣ ಕನ್ನಡ

ಉದಯವಾಣಿ 10 Aug 2022 3:58 pm

ಅಯ್ಯಯ್ಯೋ.. ಮದುವೆ ವೇಳೆ ನವದಂಪತಿ ಡಿಶುಂ ಡಿಶುಂ.. Video

ಮದುವೆ ಸಂಪ್ರದಾಯಗಳು ಜಗತ್ತಿನೆಲ್ಲೆಡೆ ವಿಭಿನ್ನವಾಗಿವೆ. ಒಂದೊಂದು ಸಮುದಾಯದಲ್ಲಿ, ಒಂದೊಂದು ಪ್ರದೇಶಗಳಲ್ಲಿ ಮದುವೆಗಳು ತುಂಬಾ ಡಿಫ್ರೆಂಟ್ ಆಗಿ ನಡೆಯುತ್ತವೆ. ಅದರಂತೆ ನೇಪಾಳದಲ್ಲಿ ಇತ್ತೀಚೆಗೆ ನಡೆದ ಮದುವೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮದುವೆ ಸಂಭ್ರಮದಲ್ಲಿ ಮದುಮಗ ಮತ್ತು ಮದುವಣಗಿತ್ತಿ ಶಾಸ್ತ್ರ ಸಂಬಂಧ ಕೂತಿರುತ್ತಾರೆ. ಶಾಸ್ತ್ರಗಳು ನಡೆಯುತ್ತಿದ್ದಾಗ ಮದುಮಕ್ಕಳು ಉದ್ದೇಶಪೂರ್ವಕವಾಗಿ ಪರಸ್ಪರ ಹೊಡೆದಾಡಿಕೊಳ್ತಾರೆ. ಇಬ್ಬರ ಹೊಡೆದಾಟ ತಮಾಷೆಯಾಗಿರುವುದಿಲ್ಲ. ತುಂಬಾ ಗಂಭೀರವಾಗಿಯೇ ಇಬ್ಬರ ನಡುವೆ ಡಿಶುಂ ಡಿಶುಂ ನಡೆಯುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ […] The post ಅಯ್ಯಯ್ಯೋ.. ಮದುವೆ ವೇಳೆ ನವದಂಪತಿ ಡಿಶುಂ ಡಿಶುಂ.. Video appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 3:55 pm

ಪ್ರಧಾನಿ ಮೋದಿ ಆಸ್ತಿ ವಿವರ ಘೋಷಿಸಿದ PMO… ನರೇಂದ್ರ ಮೋದಿ ಆಸ್ತಿ ಮೌಲ್ಯ 26 ಲಕ್ಷ ರೂ. ಏರಿಕೆ…

ನವದೆಹಲಿ: ಪ್ರಧಾನ ಮಂತ್ರಿಗಳ ಕಾರ್ಯಾಲಯವು ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ವಿವರವನ್ನು ಘೋಷಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅವರ ಆಸ್ತಿ ಮೌಲ್ಯ 26.13 ಲಕ್ಷ ರೂ ಏರಿಕೆಯಾಗಿದೆ. ಇನ್ನು ನರೇಂದ್ರ ಮೋದಿ ಅವರಿಗೆ ಯಾವುದೇ ಸ್ಥಿರಾಸ್ತಿ ಇಲ್ಲ. ಗುಜರಾತ್‌ ನಲ್ಲಿ ಇದ್ದ ತನ್ನ ಪಾಲಿನ ನಿವೇಶನವನ್ನು ಅವರ ದಾನ ಮಾಡಿದ್ದಾರೆ. ಹೀಗಾಗಿ ಮೋದಿ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ಇನ್ನು ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಬ್ಯಾಲೆನ್ಸ್, ರಾಷ್ಟ್ರೀಯ ಉಳಿತಾಯ ಯೋಜನೆ, ವಿಮೆ, ಆಭರಣ, […]

ಬಿಟಿವಿ ನ್ಯೂಸ್ ಲೈವ್ 10 Aug 2022 3:51 pm

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಭಾರತ 72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ..ಈ ಸಂದರ್ಭದಲ್ಲಿ ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ಸ್ವಾತಂತ್ರ್ಯ ಸಂಗ್ರಾಮದ ಅಂದಿನ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ. ದೇಶವನ್ನು ಪ್ರೀತಿಸುತ್ತಿದ್ದ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ಜನರ ಹೆಸರು, ತ್ಯಾಗ, ದೇಶಭಕ್ತಿ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಈ ಹತ್ತು ಮಂದಿ ಮಹಿಳೆಯರನ್ನು ನೆನಪಿಸಿಕೊಳ್ಳಬೇಕಾಗಿದೆ. ರಾಣಿ ಲಕ್ಷ್ಮೀಬಾಯಿ: ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ ಭಾರತದ ಸ್ವಾತಂತ್ರ್ಯ ಹೋರಾಟದ ಹೆಸರುಗಳಲ್ಲಿ ಪ್ರಮುಖವಾದದ್ದು. 1857ರ ಸಿಪಾಯಿ ದಂಗೆ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಝಾನ್ಸಿಯ ಆಳ್ವಿಕೆಯನ್ನು ಬ್ರಿಟಿಷರು ಲಕ್ಷ್ಮಿಬಾಯಿಗೆ ವಹಿಸಿದ್ದರು. 1858ರ ಮಾರ್ಚ್ 25ರಂದು ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ಬಗ್ಗೆ ಇದ್ದ ನಿಲುವು ಬದಲಾಯಿಸಲು ಕಾರಣವಾಯಿತು. ಸುಮಾರು 2 ವಾರಗಳ ಉಗ್ರ ಹೋರಾಟ ನಡೆಸಿ..ದಂಗೆಕೋರ ತಾತ್ಯಾಟೋಪಿ ಮುಖಂಡನಾಗಿ ಯುದ್ಧ ಮಾಡಿ ಝಾನ್ಸಿ ಸ್ವತಂತ್ರವಾಗಲು ಸಹಕರಿಸಿದ್ದ. ಹೀಗೆ ದಿಟ್ಟತನದಿಂದ ಹೋರಾಡಿದ್ದ ಝಾನ್ಸಿ ಲಕ್ಷ್ಮೀಬಾಯಿ 1858, ಜೂನ್ 18ರಂದು ಸಾವನ್ನಪ್ಪಿದ್ದಳು. ರಾಣಿಯ ತಂದೆ ಮೊರೋಪಂತ್ ತಂಬೆ ಅವರನ್ನು ಝಾನ್ಸಿಯ ಸೋಲಿನ ನಂತರ ಸೆರೆಹಿಡಿದು, ಗಲ್ಲಿಗೇರಿಸಿದ್ದರು. ಸರೋಜಿನಿ ನಾಯ್ಡು: ಉರ್ದು, ತೆಲುಗು, ಇಂಗ್ಲಿಷ್, ಬೆಂಗಾಲಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಸರೋಜಿನಿ ನಾಯ್ಡು ಭಾರತದ ಕೋಗಿಲೆ ಎಂದು ಹೆಸರು ಪಡೆದಿದ್ದರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಉತ್ತರಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. 1949ರ ಮಾರ್ಚ್ 2ರಂದು ನಿಧನರಾಗಿದ್ದರು. ಬೇಗಂ ಹಝರತ್ ಮಹಲ್: 1857ರ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಬೇಗಂ ಹಝರತ್ ಬೇಗಂ ಮಹಲ್ ಅವರ ಹೋರಾಟ ಪ್ರಮುಖವಾಗಿತ್ತು. ಈಕೆ ನವಾಬ್ ವಾಜಿದ್ ಅಲಿ ಷಾ ಅವರ 2ನೇ ಪತ್ನಿ.ಕೋಲ್ಕತಾದಿಂದ ಷಾನನ್ನು ಗಡಿಪಾರು ಮಾಡಲಾಗಿತ್ತು. ಬಳಿಕ ಹಝರತ್ ಬೇಗಂ ಅವಾಧ್ ಆಡಳಿತ ನೋಡಿಕೊಳ್ಳುವುದರ ಜೊತೆಗೆ ಲಕ್ನೋವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಳು. ತದನಂತರ ಲಕ್ನೋ ಹಾಗೂ ಔಧ್ ಅನ್ನು ಬ್ರಿಟಿಷರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಹಝರತ್ ಳನ್ನು ಬಲವಂತದಿಂದ ಅಧಿಕಾರದಿಂದ ಕೆಳಗಿಳಿಸಿದ್ದರು. ಕೊನೆಗೆ ಈಕೆ ನೇಪಾಳದಲ್ಲಿ ಆಶ್ರಯ ಪಡೆದಿದ್ದು, 1879ರಲ್ಲಿ ಕಾಠ್ಮುಂಡುವಿನಲ್ಲಿ ಸಾವನ್ನಪ್ಪಿದ್ದಳು. ಕಿತ್ತೂರು ರಾಣಿ ಚೆನ್ನಮ್ಮ: ಸ್ವಾತಂತ್ಯಕ್ಕಾಗಿ ಬ್ರಿಟಿಷರ ಬೃಹತ್ ಸೈನ್ಯದ ವಿರುದ್ಧ ಸೆಟೆದು ನಿಂತು ಹೋರಾಟ ನಡೆಸಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಆಕೆಯ ಧೈರ್ಯ, ಸಾಹಸ, ಕೆಚ್ಚು ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕ. ದಿಟ್ಟ ಹೋರಾಟದ ನಂತರ 1824ರ ಡಿಸೆಂಬರ್ 5ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಹಾಗೂ ಜಾನಕಿಬಾಯಿಯರ ಜೊತೆ ಕೈದಿಯಾಗುತ್ತಾಳೆ. ಡಿಸೆಂಬರ್ 12ರಂದು ಚೆನ್ನಮ್ಮ ಹಾಗೂ ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ 4 ವರ್ಷ ಸೆರೆಮನೆವಾಸ ಅನುಭವಿಸಿ 1829ರ ಫೆಬ್ರುವರಿ 2ರಂದು ನಿಧನ ಹೊಂದಿದ್ದಳು. ಮೇಡಂ ಭಿಕಾಜಿ ಕಾಮಾ: ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಧ್ರುವತಾರೆಯಾಗಿರುವ ಮಹಿಳೆಯರಲ್ಲಿ ಮುಂಬೈನ ಮೇಡಂ ಭಿಕಾಜಿ ಕಾಮಾ ಒಬ್ಬರಾಗಿದ್ದಾರೆ. ಓ ಮಹನೀಯರೇ ಏಳಿ, ಈ ಧ್ವಜಕ್ಕೊಂದಿಸಿ. ಈ ಧ್ವಜದ ಪ್ರತಿನಿಧಿಯಾಗಿ ಪ್ರಾರ್ಥಿಸುತ್ತೇನೆ. ಓ ವಿಶ್ವದೆಲ್ಲ ಸ್ವತಂತ್ರ್ಯರಾಧಕರೇ ಈ ಧ್ವಜದೊಡನೆ ಸಹಕರಿಸಿ, ಹೀಗೆಂದು ಜರ್ಮನಿಯ ಸ್ಟುವರ್ಟ್ ನಲ್ಲಿ 1907ರಲ್ಲಿ ನಡೆದಿದ್ದ ಸಮಾಜವಾದಿ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದ ಧ್ವಜಾರೋಹಣ ಮಾಡಿದ್ದರು. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕಾಮಾ ಅವರು 1935ರಲ್ಲಿ ಬಾಂಬೆಗೆ ಆಗಮಿಸಿದ್ದರು. 1936ರ ಆಗಸ್ಟ್ 13ರಂದು ಪಾರ್ಸಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಸುಚೇತಾ ಕೃಪಾಲಾನಿ: ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು ಸುಚೇತಾ ಕೃಪಾಲಾನಿ. ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಉತ್ತರಪ್ರದೇಶದ ಸಿಎಂ ಆಗಿ 1963ರಿಂದ 67ರವರೆಗೆ ಕಾರ್ಯನಿರ್ವಹಿಸಿದ್ದರು. ಗಾಂಧಿ ಅನುಯಾಯಿಯಾಗಿದ್ದ ಕೃಪಾಲಾನಿ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದ್ದರು. 1971ರಲ್ಲಿ ರಾಜಕೀಯದಿಂದ ದೂರ ಸರಿದಿದ್ದರು. 1974ರಲ್ಲಿ ನಿಧನರಾಗಿದ್ದರು. ಅರುಣಾ ಅಸಾಫ್ ಅಲಿ: ಅರುಣಾ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ದಿಟ್ಟ ಮಹಿಳೆ. 1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಮುಂಬೈಯ ಗೌವಾಲಿಯಾ ಟ್ಯಾಂಕ್ ಮೈದಾನದಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಫ್ಲ್ಯಾಗ್ ಅನ್ನು ಹಾರಿಸಿದ್ದರು. ಸ್ವಾತಂತ್ರ್ಯ ನಂತರ ರಾಜಕೀಯ ಪ್ರವೇಶಿಸಿದ್ದರು. 1958ರಲ್ಲಿ ದೆಹಲಿಯ ಮೊದಲ ಮೇಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1960ರಲ್ಲಿ ಮೀಡಿಯಾ ಪಬ್ಲಿಷಿಂಗ್ ಹೌಸ್ ಅನ್ನು ಆರಂಭಿಸಿದ್ದರು. ಭಾರತ ರತ್ನ ಪುರಸ್ಕಾರ ಪಡೆದಿದ್ದ ಅರುಣಾ ಗಂಗೂಲಿ ಅವರು 1996ರ ಜುಲೈ 29ರಂದು ನಿಧನರಾಗಿದ್ದರು. ದುರ್ಗಾಬಾಯ್ ದೇಶ್ ಮುಖ್: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದುರ್ಗಾಬಾಯಿ ದೇಶಮುಖ್ ತೊಡಗಿಸಿಕೊಂಡಿದ್ದರು. 12ನೇ ವಯಸ್ಸಿನಲ್ಲಿಯೇ ಇಂಗ್ಲಿಷ್ ಭಾಷೆ ಕಲಿಕೆಯ ವಿರುದ್ಧ ಸೆಟೆದು ವಿದ್ಯಾಭ್ಯಾಸ ಮೊಟಕುಗೊಳಿಸಿ ಹೊರಬಂದಿದ್ದರು. ಬಳಿಕ ರಾಜಮಂಡ್ರಿಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಬಾಲಿಕಾ ಹಿಂದಿ ಪಾಠಶಾಲೆಯನ್ನು ರಾಜಮಂಡ್ರಿಯಲ್ಲಿ ಆರಂಭಿಸಿದ್ದರು. ಮಹಾತ್ಮಗಾಂಧಿಯ ಅನುಯಾಯಿಯಾಗಿದ್ದ ದೇಶಮುಖ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಬಾರಿ ಜೈಲುವಾಸ ಅನುಭವಿಸಿದ್ದರು. ಈಕೆ ಯಾವತ್ತೂ ಚಿನ್ನಾಭರಣ ಧರಿಸಿರಲಿಲ್ಲ. 1981ರಲ್ಲಿ ದೇಶ್ ಮುಖ್ ಶ್ರೀಕಾಕುಳಂ ಜಿಲ್ಲೆಯ ನರಸಣ್ಣಾಪೇಟೆಯಲ್ಲಿ ನಿಧನರಾಗಿದ್ದರು. ಆ್ಯನಿ ಬೆಸೆಂಟ್: ಮಹಿಳೆಯರ ಹಕ್ಕುಗಳು, ಸ್ವಾತಂತ್ರ್ಯ ಹೋರಾಟ, ಜನನ ನಿಯಂತ್ರಣ, ಫ್ಯಾಬಿಯನ್ ಸಮಾಜವಾದ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ದಿಟ್ಟೆ ಆ್ಯನಿ ಬೆಸೆಂಟ್. ಹೋಮ್ ರೂಲ್ ಚಳವಳಿಯಲ್ಲಿ ಭಾಗವಹಿಸಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1933ರಲ್ಲಿ ಆ್ಯನಿ ಬೆಸೆಂಟ್ ನಿಧನರಾದರು. ಮಾತಂಗಿನಿ ಹಜ್ರಾ: ಪಶ್ಚಿಮಬಂಗಾಳದ ಮಿಡ್ನಾಪುರ ಜಿಲ್ಲೆಯ ಮಾತಂಗಿನಿ ಸ್ವಾತಂತ್ರ್ಯ ಹೋರಾಟದ ದಿಟ್ಟ ಮಹಿಳೆ. ಕ್ವಿಟ್ ಇಂಡಿಯಾ ಹಾಗೂ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರನ್ನು ಮಹಿಳಾ ಗಾಂಧಿ ಎಂದೇ ಕರೆಯುತ್ತಿದ್ದರು. ತನ್ನ 73ನೇ ವಯಸ್ಸಿನಲ್ಲೂ 1942ರ ಸೆಪ್ಟೆಂಬರ್ 29ರಂದು ತಮ್ಲುಕ್ ಪೊಲೀಸ್ ಠಾಣೆ ವಶಪಡಿಸಿಕೊಳ್ಳಲು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದಾಗಲೇ ಗುಂಡೇಟು ಬಿದ್ದಿತ್ತು. ಆದರೂ ವಂದೇ ಮಾತರಂ ಎಂದು ಕೂಗುತ್ತಾ ಹೋರಾಟಗಾರರನ್ನು ಹುರಿದುಂಬಿಸಿ ಪ್ರಾಣ ತ್ಯಾಗ ಮಾಡಿದ ಧೀರ ಮಹಿಳೆ ಮಾತಂಗಿನಿ.

ಉದಯವಾಣಿ 10 Aug 2022 3:45 pm

‘ಗಣೇಶ ಕೂರಿಸೋಕೆ ಬಿಡಲ್ಲ’ಎಂದಿದ್ದ ಜಮೀರ್​​​- ‘ಅವನೊಬ್ಬ ಗುಜರಿ’ಎಂದ MP ರೇಣುಕಾಚಾರ್ಯ

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸಲು ಅವಕಾಶ ಇಲ್ಲ ಎಂದಿದ್ದ ಕಾಂಗ್ರೆಸ್​ ಶಾಸಕ ಜಮೀರ್​​ ಅಹ್ಮದ್​ ಖಾನ್​​ ಹೇಳಿಕೆಗೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಮಾತಾಡಿದ ರೇಣುಕಾಚಾರ್ಯ, ಗಣೇಶ ಕೂರಿಸೋಕೆ ಜಮೀರ್​​ ಅಪ್ಪಣೆ ಬೇಕಾಗಿಲ್ಲ ಎಂದಿದ್ದಾರೆ. ಇನ್ನು, ಅವನೊಬ್ಬ ಗುಜರಿ ಜಮೀರ್​​​. ಭಾರತದ ಪ್ರತೀ ಇಂಚಿಂಚೂ ಜಾಗವೂ ಹಿಂದುಗಳದ್ದು. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಬಾಳಬೇಕು. ಇದು ಭಾರತ ದೇಶ, ಇಲ್ಲಿ ಗಣೇಶನನ್ನು ಕೂರಿಸಲು ಯಾರ […] The post ‘ಗಣೇಶ ಕೂರಿಸೋಕೆ ಬಿಡಲ್ಲ’ ಎಂದಿದ್ದ ಜಮೀರ್​​​- ‘ಅವನೊಬ್ಬ ಗುಜರಿ’ ಎಂದ MP ರೇಣುಕಾಚಾರ್ಯ appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 3:41 pm

ಚಂದ್ರಂಪಳ್ಳಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಚಂದ್ರಂಪಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ಹೆಚ್ಚುತ್ತಿದೆ. ಚಂದ್ರಂಪಳ್ಳಿ ಜಲಾಶಯ ಗರಿಷ್ಠಮಟ್ಟದ ನಂತರ ಬಂದ ಒಳ ಹರಿವಿನ ನೀರನ್ನು ಅಣೆಕಟ್ಟಿನ ಕೋಡಿ ಮುಖಾಂತರ ನದಿಗೆ ನೀರು ಹರಿ ಬಿಡಲಾಗುತ್ತಿದೆ ಎಂದು ಎಇಇ ಚೇತನ ಕಳಸ್ಕರ ತಿಳಿಸಿದ್ದಾರೆ. ಚಂದ್ರಂಪಳ್ಳಿ ನದಿ ಸುತ್ತಮುತ್ತಲಿನ ಗ್ರಾಮಗಳು ನದಿ ಪ್ರವಾಹದಿಂದ ತೊಂದರೆ ಉಂಟಾಗಬಹುದು. ನದಿ ಅಕ್ಕಪಕ್ಕದ ಜನರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜಾಡುವುದಾಗಲಿ, ಬಟ್ಟೆ ಒಗೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಕ್ಕಾಗಲಿ ಹಾಗೂ ಇನ್ನಿತರ ಯಾವುದೇ ಕಾರಣಕ್ಕೂ ನದಿಯಲ್ಲಿ ಇಳಿಯಬಾರದು. ನದಿ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಇನ್ನಿತರ ಯಾವುದೇ ಇಲಾಖೆಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತವಾಗಿ ಸುರಕ್ಷಿತ ಕ್ರಮ ಕೈಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದಯವಾಣಿ 10 Aug 2022 3:36 pm

ತೆಂಗಿನ ಕಾಯಿ ಕೀಳುವ ಕಾರ್ಮಿಕರಿಗೆ ಕೇರಾ ವಿಮೆ

ಕೋಟ : ತೆಂಗಿನ ಕಾಯಿ ಕೀಳುವಾಗ ಅಥವಾ ನೀರಾ ತೆಗೆಯುವ ಸಂದರ್ಭ ಮರ ದಿಂದ ಬಿದ್ದು ಮೃತಪಟ್ಟರೆ, ಗಾಯ ಅಥವಾ ಅಂಗವೈಕಲ್ಯಕ್ಕೊಳಗಾದರೆ ಪರಿಹಾರದ ಜತೆಗೆ ಆಸ್ಪತ್ರೆ ವೆಚ್ಚ ಮುಂತಾದ ಸೌಕರ್ಯಗಳನ್ನು ನೀಡುವ “ಕೇರಾ ಸುರಕ್ಷ ವಿಮೆ’ ಎನ್ನುವ ಯೋಜನೆಯೊಂದು ತೆಂಗು ಅಭಿವೃದ್ಧಿ ಮಂಡಳಿ ಮೂಲಕ ಚಾಲ್ತಿಯಲ್ಲಿದೆ. ಆದರೆ ಬಹುತೇಕ ಕಾರ್ಮಿಕರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲದೆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಯೋಜನೆಯನ್ನು ತೆಂಗು ಅಭಿವೃದ್ಧಿ ಮಂಡಳಿ ಮತ್ತು ಖಾಸಗಿ ವಿಮಾ ಕಂಪೆನಿಯ ಸಹಯೋಗ ದಲ್ಲಿ ರೂಪಿಸಲಾಗಿದೆ. ವಿಮೆಯ ವಾರ್ಷಿಕ ಮೊತ್ತ 398.65 ರೂ. ಆದರೆ ಇದಕ್ಕೆ ರೈತರಿಂದ ಕೇವಲ 99 ರೂ. ಪಡೆಯಲಾಗುತ್ತದೆ. ಉಳಿದ 299.65 ರೂ. ಮೊತ್ತವನ್ನು ಮಂಡಳಿ ಭರಿಸುತ್ತದೆ. ವಿಮೆಗೆ ಒಳಪಟ್ಟ ಕಾರ್ಮಿಕ ತೆಂಗಿನ ಮರದಿಂದ ಬಿದ್ದು ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ 5 ಲಕ್ಷ ರೂ., ಭಾಗಶಃ ಅಂಗವಿಕಲರಾದರೆ 2.50 ಲಕ್ಷ ರೂ., ಗಾಯಾಳುವಾದರೆ ಆಸ್ಪತ್ರೆ ವೆಚ್ಚ 1 ಲಕ್ಷ ರೂ., ಆ್ಯಂಬುಲೆನ್ಸ್‌ ವೆಚ್ಚ 3 ಸಾವಿರ ರೂ. ಹಾಗೂ ಪೂರ್ಣ ಅಂಗವೈಕಲ್ಯಕ್ಕೆ ಆರು ವಾರಗಳಿಗೆ 18 ಸಾವಿರ ರೂ., ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಜತೆಗಾರರಿಗೆ ಸೇವಾ ಶುಲ್ಕವಾಗಿ ಮೂರು ಸಾವಿರ ರೂ. ಮತ್ತು ಅಂತ್ಯಸಂಸ್ಕಾರ ಪರಿಹಾರ ಐದು ಸಾವಿರ ರೂ.ವನ್ನು ನೀಡಲಾಗುತ್ತಿದೆ. ಕಾರ್ಮಿಕರಿಗೆ ಮಾಹಿತಿ ಕೊರತೆ ತೆಂಗಿನ ಕಾಯಿ ಕೀಳುವ ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡುವ ಉದ್ದೇಶದಿಂದ ವಿಮಾ ಸೌಲಭ್ಯ ಇದೆ. ಆದರೆ ಬಹುತೇಕ ಕಾರ್ಮಿಕರಿಗೆ ಇದರ ಮಾಹಿತಿ ಇಲ್ಲ. ಆ ಕಾರಣದಿಂದ ಇಂತಹ ಕಾರ್ಮಿಕರು ಎಷ್ಟು ಜನ ಇದ್ದಾರೆ ಎಂಬ ಅಧಿಕೃತ ಮಾಹಿತಿಯೂ ಇಲಾಖೆಯ ಬಳಿ ಇಲ್ಲ. ಕಾರ್ಮಿಕರು ತಾವಾಗಿಯೇ ಮುಂದೆ ಬಂದು ನೋಂದಾಯಿಸಿಕೊಂಡರೆ ಮಾತ್ರ ಫ‌ಲಾನುಭವಿಗಳಾಗಬಹುದು. ಪ್ರಸ್ತುತ ದಾಖಲೆಗಳ ಪ್ರಕಾರ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಕೇವಲ 337 ಮಂದಿ ಮಾತ್ರ ಯೋಜನೆಗೆ ಒಳಪಟ್ಟಿದ್ದಾರೆ. ಉಡುಪಿ ಜಿಲ್ಲೆಯವರು 77 ಮಂದಿ ಮಾತ್ರ. ಪ್ರಸ್ತುತ ಗ್ರಾಮಸಭೆಗಳಲ್ಲಿ ತೋಟಗಾರಿಕೆ ಇಲಾಖೆಯವರು ಈ ಕುರಿತು ಕಿರು ಮಾಹಿತಿ ನೀಡುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೆವಿಕೆ ವತಿಯಿಂದ ತೆಂಗಿನ ಮರ ಏರುವ ತರಬೇತಿ ಪಡೆಯುವವರಿಗೆ ವಿಮೆ ಮಾಡಿಸಲಾಗುತ್ತಿದೆ. ಸೌಲಭ್ಯಕ್ಕೆ ಪಡೆಯುವ ವಿಧಾನ ತೆಂಗಿನ ಕಾಯಿ ಕೀಳುವ ಅಥವಾ ನೀರಾ ಕಾರ್ಮಿಕ ಎನ್ನುವುದಕ್ಕೆ ದಾಖಲೆಯಾಗಿ ಗ್ರಾ.ಪಂ. ಅಧ್ಯಕ್ಷರ ದೃಢೀಕರಣ ಪತ್ರವೊಂದಿದ್ದರೆ ಸಾಕು. ಅನಂತರ www.coconutboard.gov.in ನಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ, ವಿಮಾ ಕಂತಿನ ಮೊತ್ತ 99 ರೂ.ಗಳನ್ನು ತೆಂಗು ಅಭಿವೃದ್ಧಿ ಮಂಡಳಿಗೆ ಪಾವತಿಯಾಗುವಂತೆ ಡಿಡಿ/ನೆಲ್‌/ಭೀಮ್‌/ಫೋನ್‌ ಪೇ /ಗೂಗಲ್‌ ಪೇ /ಪೇಟಿಎಂ ಮೂಲಕ ಪಾವತಿಸಿ ದಾಖಲೆಯನ್ನು ತೋಟಗಾರಿಕೆ ಇಲಾಖೆಯ ತಾಲೂಕು ಕಚೇರಿಗೆ ಹಸ್ತಾಂತರಿಸಿ ಸ್ವೀಕೃತಿ ಪಡೆಯಬೇಕು ಮತ್ತು ಪಾಲಿಸಿ ಬಾಂಡ್‌ ಪಡೆಯಬೇಕು. ಅಪಘಾತ ಸಂಭವಿಸಿ ಸಾವು ಸಂಭವಿಸಿದಲ್ಲಿ ಅಥವಾ ಅಂಗವೈಕಲ್ಯ ಹೊಂದಿದಲ್ಲಿ 7 ದಿನಗಳ ಒಳಗಾಗಿ ಮಂಡಳಿಗೆ ತಿಳಿಸಿ ಯೋಜನೆಯ ಪ್ರಯೋಜನ ಪಡೆಯಬಹುದು. ಕೇರಾ ವಿಮೆ ಬಗ್ಗೆ ಗ್ರಾಮಸಭೆಗಳಲ್ಲಿ ಹಾಗೂ ಕೆವಿಕೆ ಮೂಲಕ ಮಾಹಿತಿ ನೀಡಲಾಗುತ್ತಿದೆ. ಅರ್ಹ ಕಾರ್ಮಿಕರು ಇಲಾಖೆ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದು. – ಭುವನೇಶ್ವರೀ, ಎಚ್‌.ಆರ್‌. ನಾಯ್ಕ , ಉಪ ನಿದೇರ್ಶಕರು ತೋಟಗಾರಿಕೆ ಇಲಾಖೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ – ರಾಜೇಶ್‌ ಗಾಣಿಗ ಅಚ್ಲಾಡಿ

ಉದಯವಾಣಿ 10 Aug 2022 3:33 pm

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್‌ ಘರ್‌ ತಿರಂಗಾ(ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ) ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರಧಾನಿ ಮೋದಿ ಅವರು ಜುಲೈ 22ರಂದು ಕರೆ ನೀಡಿದ್ದಾರೆ. ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳಿದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಶೋಭೆ ತರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅದಕ್ಕೆ ಕಾರಣವಾದ ಎಲ್ಲರನ್ನು ಸದಾ ಸ್ಮರಿಸುವುದು ಹಾಗೂ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ದೇಶಾದ್ಯಂತ ಭಾರತ ಸ್ವಾತಂತ್ರದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಭಾರತ ಸರಕಾರವು ಹರ್‌ ಘರ್‌ ತಿರಂಗಾ ಎಂಬ ಘೋಷವಾಕ್ಯದೊಂದಿಗೆ 2022ರ ಆಗಸ್ಟ್ 13ರಿಂದ 15ರ ವರೆಗೆ ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿ ಅಭಿಯಾನ ಹಮ್ಮಿಕೊಂಡಿದೆ. ಜನರ ಹೃದಯದಲ್ಲಿ ದೇಶಭಕ್ತಿಯನ್ನು ಪ್ರಚೋದಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಹಿಂದಿನ ಆಲೋಚನೆಯಾಗಿದೆ. ವಿವಿಧೆಡೆ ಹರ್‌ ಘರ್‌ ತಿರಂಗಾ ಅಭಿಯಾನ ಜನರ ಹೃದಯದಲ್ಲಿ ದೇಶಭಕ್ತಿಯನ್ನು ಪ್ರೇರೇಪಿಸುವ ಸಲುವಾಗಿ ಮತ್ತು ಆಜಾದಿ ಕಾ ಅಮೃತ ಮಹೋತ್ಸವದ ಪರಿಕಲ್ಪನೆಯನ್ನು, ಉತ್ಸಾಹದಲ್ಲಿ ಸ್ಮರಿಸುವ ಸಲುವಾಗಿ ಪ್ರಚಾರ ಮಾಡಲಾಗುತ್ತಿದೆ. *ಹೆಚ್ಚಿನ ಸಂಖ್ಯೆಯ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಚಿವಾಲಯಗಳು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. *ಈಗಾಗಲೇ ಭಾರತೀಯ ಕೋಸ್ಟ್ ಗಾರ್ಡ್‌ ಸಮುದ್ರದೊಳಗೆ ಧ್ವಜದ ಡೆಮೊವನ್ನು(ಪೂರ್ವ ಸಿದ್ಧತಾ ಕಾರ್ಯ ಚಟುವಟಿಕೆ)ಪ್ರದರ್ಶಿಸಿದೆ. *ಕರ್ನಾಟಕದಲ್ಲಿ ಒಂದು ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅನೇಕ ಕಾರ್ಯಕ್ರಮಗಳನ್ನು ಗ್ರಾ. ಪಂ. ಮೂಲಕ, ಶಾಲಾ ಕಾಲೇಜುಗಳ ಮೂಲಕ ಹಮ್ಮಿಕೊಳ್ಳಲಾಗಿದೆ. * ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಆಯ್ದ ಗ್ರಾಮಗಳ ಸುಮಾರು 500 ಕೆರೆಗಳ ಬಳಿ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಾಡಲಿದೆ. ಈ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಕಿಕೊಂಡಿದೆ. *ಇತ್ತೀಚೆಗೆ ಬಂಗಾಲ ಕೊಲ್ಲಿಯಲ್ಲಿ ಭಾರತೀಯ ನೌಕಾಪಡೆಯು, ಪಶ್ಚಿಮ ಬಂಗಾಲದ ಮೀನುಗಾರರೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಧ್ವಜ ಸಾಗಾಣಿಕೆಗೆ ಪಾಲುದಾರಿಕೆ ಧ್ವಜ ಪೂರೈಕೆಯನ್ನು ತ್ವರಿತಗೊಳಿಸಲು ಇ-ಕಾಮರ್ಸ್‌ ಸಂಸ್ಥೆಗಳು ಮತ್ತು ಸ್ವ-ಸಹಾಯ ಸಂಸ್ಥೆಗಳು ಕೂಡ ಸರಕಾರದೊಂದಿಗೆ ಪಾಲುದಾರಿಕೆ ಹೊಂದಿವೆ.ಗ್ರಾ. ಪಂ.ಗಳು ಮತ್ತು ಸ್ವಸಹಾಯ ಗುಂಪುಗಳು ಆಸಕ್ತಿಯಿಂದ ಸಕ್ರೀಯವಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಎಲ್ಲೆಲ್ಲಿ ಧ್ವಜ ಹಾರಾಟ ಪಂ. ವ್ಯಾಪ್ತಿಯ ರಾಜ್ಯ ಸರಕಾರದ ಎಲ್ಲ ಕಚೇರಿಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಹಕಾರ ಸಂಘ ಗಳು, ಅಂಚೆ ಕಚೇರಿ, ಶಾಲೆಗಳು, ವಸತಿ ಶಾಲೆ/ಹಾಸ್ಟೆಲ್‌ಗ‌ಳು, ಗ್ರಾ. ಪಂ. ಗ್ರಂಥಾಲಯಗಳು, ಅರೆ ಸರಕಾರಿ ಕಚೇರಿಗಳು, ನಿಗಮ-ಮಂಡಳಿಗಳು, ಸಾರ್ವಜನಿಕ ಉದ್ಯಮಗಳು, ಪಶು ಪಾಲನಾ ಕೇಂದ್ರ ಸೇರಿದಂತೆ ಇತರ ಸರಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಾಡಲಿದೆ. ಇದರ ಜತೆಗೆ ಸ್ವಸಹಾಯ ಗುಂಪುಗಳು, ಸಾರ್ವಜನಿಕರು, ಶಾಲಾ, ಕಾಲೇಜು ಮಕ್ಕಳು, ಇತರ ಎಲ್ಲ ಸಿಬಂದಿ ಹಾಗೂ ಅವರ ಕುಟುಂಬ ವರ್ಗದವರು ಸೇರಿ ಸ್ವತಃ ತಾವೇ ಕ್ರಿಯಾಶೀಲವಾಗಿ ಭಾಗವಹಿಸುವಂತೆ ಕೋರಲಾಗಿದೆ. ಧ್ವಜ ತಯಾರಿಕೆ ಹೇಗೆ ಪಿಂಗಲಿ ವೆಂಕಯ್ಯ ಅವರ ರಾಷ್ಟ್ರಧ್ವಜದ ವಿನ್ಯಾಸ ಮತ್ತು 1931ರ ಸ್ವರಾಜ್‌ ಧ್ವಜದಂತೆ, ಕೇಂದ್ರ ಸರಕಾರ ನಿಗದಿಪಡಿಸಿದ 3:2ರಂತೆ ‘32’ ‘64′ ಮತ್ತು ’2114’ ಅಳತೆಗಳಲ್ಲಿ ಕೈಮಗ್ಗ ಅಥವಾ ವಿದ್ಯುತ್‌ ಮಗ್ಗದಿಂದ ನೇಯ್ದ ಪಾಲಿಸ್ಟರ್‌ ಬಟ್ಟೆಯಲ್ಲಿ ಧ್ವಜಗಳನ್ನು ತಯಾರಿಸಲಾಗುತ್ತದೆ. ಧ್ವಜಾರೋಹಣಕ್ಕೆ ಪ್ಲಾಸ್ಟಿಕ್‌ ಹೊರತುಪಡಿಸಿ ಖಾದಿ, ನೂಲು, ಪಾಲಿಸ್ಟರ್‌, ಉಣ್ಣೆ, ರೇಷ್ಮೆ ಹತ್ತಿಯಿಂದ ತಯಾರಿಸಿದ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ತಯಾರಿಸಿದ ಸುಸ್ಥಿತಿಯಲ್ಲಿರುವ ಧ್ವಜವನ್ನು ಹಾರಿಸಬಹುದು. ಪ್ರತಿಧ್ವಜಕ್ಕೆ 22 ರೂ. ನಿಗದಿ ಕೇಂದ್ರ ಸರಕಾರ ಪೂರೈಸುತ್ತಿರುವ ರಾಷ್ಟ್ರಧ್ವಜಕ್ಕೆ ಬದಲಾಗಿ ರಾಜ್ಯ ಸರಕಾರ ಹಣ ಪಾವತಿಸುತ್ತಿರುವ ಕಾರಣ ಜಿಲ್ಲಾ ಮಟ್ಟದಲ್ಲಿ ರಾಷ್ಟ್ರಧ್ವಜವನ್ನು ಪಡೆಯುವ ಸಾರ್ವಜನಿಕರು ಹಣ ಪಾವತಿಸಬೇಕಿದೆ. ಆ ಪ್ರಕಾರ ಪ್ರತಿ ರಾಷ್ಟ್ರಧ್ವಜಕ್ಕೆ 22 ರೂ. ನಿಗದಿಪಡಿಸಲಾಗಿದೆ. ರಾಷ್ಟ್ರದಾದ್ಯಂತ ಎಲ್ಲ ಅಂಚೆ ಕಚೇರಿಗಳಲ್ಲಿ ಆಗಸ್ಟ್ 01ರಿಂದ ಧ್ವಜಗಳ ಮಾರಾಟ ಪ್ರಾರಂಭವಾಗಿದೆ. ಯಾರಿಂದ ಪೂರೈಕೆ ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆ (ಎನ್‌ಆರ್‌ಎಲ…ಎಂ)ಯ ಸಹಯೋಗದೊಂದಿಗೆ ಧ್ವಜಗಳನ್ನು ಸ್ಥಳೀಯವಾಗಿ ತಯಾರಿಸುವ ಮೂಲಕ ದೇಸಿತನಕ್ಕೆ ಉತ್ತೇಜನ ನೀಡುವ ಉದ್ದೇಶವೂ ಇದರ ಹಿಂದಿದೆ. ಹೀಗಾಗಿ ಸ್ವಸಹಾಯ ಗುಂಪುಗಳು ತಯಾರಿಸಿದ ಧ್ವಜವನ್ನು ಖರೀದಿಸಿ ಗ್ರಾಮ ಪಂಚಾಯತ್‌ಗಳು ಉಚಿತವಾಗಿ ಹಂಚಿಕೆ ಮಾಡಲಿದೆ. ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಇದರ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಈ ಅಭಿಯಾನ ಯಶಸ್ವಿಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಭಾರತ ಸ್ವಾತ್ರಂತ್ರ್ಯ ಅಮೃತ ಮಹೋತ್ಸವದ ಸಂಸ್ಮರಣೆಯ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೇ ಮೂರು ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ‘ಹರ್‌ ಘರ್‌ ತಿರಂಗಾ’ ಅಭಿಯಾನ ನಡೆಸಲು ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ ಈ ಅಭಿಯಾನಕ್ಕೆ ಕರ್ನಾಟದಲ್ಲೂ ಪೂರ್ಣ ಪ್ರಮಾಣದ ಸ್ಪಂದನೆ ದೊರೆಯಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದೆ. ತ್ರಿವರ್ಣ ಧ್ವಜವು ನಮ್ಮಲ್ಲಿ ಆಳವಾದ ಬೇರೂರಿರುವ ರಾಷ್ಟ್ರೀಯ ಸಿದ್ಧಾಂತವನ್ನು ನೆನಪಿಸುತ್ತದೆ. ಪ್ರತಿಯೊಬ್ಬ ಭಾರತೀಯನ ಮನೆಯ ಮನದಲ್ಲಿ ತ್ರಿವರ್ಣಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವ ಮಹದಾಶಯವಾಗಬೇಕಾಗಿದೆ. ಅಭಿಯಾನ ಯಶಸ್ವಿಗೊಳಿಸುವ ಘೋಷಣೆಗಳು 1)ಮನೆ ಮನೆ ಮೇಲೆ ತಿರಂಗಾ ಹಾರಿಸಿ ದೇಶಪ್ರೇಮ ಮೆರೆಯಿರಿ. 2)ರಾಷ್ಟ್ರಧ್ವಜದ ಮುಂದೆ ನಿಂತು ಸೆಲ್ಫಿ ತೆಗೆದು ಸಂಭ್ರಮಿಸಿ. 3)ಮನೆಯ ಮನಗಳಲ್ಲಿ ಹರ್‌ ಘರ್‌ ತಿರಂಗಾ ಧ್ವಜ ಹಾರಿಸಿ; ಜಯಘೋಷ ಮೊಳಗಿಸಿ. 4)ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕನ್ನಡದಾರತಿ. 5)ಹೆಸರಾಯಿತು ಭಾರತ; ಉಸಿರಾಗಲಿ ದೇಶಪ್ರೇಮದ ದೇಶಭಕ್ತಿ. 6)ಬನ್ನಿ ಸ್ವಾತಂತ್ರ್ಯ ಸಮರದ ಅಮರ ವೀರರನ್ನು ಸ್ಮರಿಸೋಣ. ಬಸವರಾಜ ಎಮ್‌ ಯರಗುಪ್ಪಿ ಬಿ ಆರ್‌ ಪಿ ಶಿರಹಟ್ಟಿ ಸಾ.ಪೊ ರಾಮಗೇರಿ

ಉದಯವಾಣಿ 10 Aug 2022 3:30 pm

ದೇವಲ ಗಾಣಗಾಪುರದಲ್ಲಿ “ಹರ್‌ ಘರ್‌ ತಿರಂಗಾ’

ಅಫಜಲಪುರ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹರ್‌ಘರ್‌ ತಿರಂಗಾ ಅಭಿಯಾನ ಶುರು ಮಾಡಿದ್ದು ಆ. 13ರಂದು ದೇವಲ ಗಾಣಗಾಪುರದಲ್ಲಿ ಪಾದಯಾತ್ರೆ ನಡೆಸುವ ಮೂಲಕ “ಹರ್‌ಘರ್‌ ತಿರಂಗಾ’ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು. ಪಟ್ಟಣದ ಮಳೇಂದ್ರ ಮಠದಲ್ಲಿ ಮನೆ ಮನೆಗೆ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿನಲ್ಲಿ ಭಾರತದಂತ ದೇಶ ಇನ್ನೊಂದಿಲ್ಲ. ಇಂತ ದೇಶದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ. ಅದರಲ್ಲೂ ದೇಶಕ್ಕೆ ಸ್ವಾತಂತ್ರ್ಯ ಬಂದ ಇಷ್ಟು ವರ್ಷದ ಬಳಿಕ ಬಲಿಷ್ಠ ನಾಯಕತ್ವದಲ್ಲಿ ದೇಶ ಉನ್ನತಿಯತ್ತ ಸಾಗುತ್ತಿದೆ. ನಾನು ಕಾಂಗ್ರೆಸ್‌ ಪಕ್ಷದಲ್ಲಿದ್ದಾಗ ಕಾಂಗ್ರೆಸ್‌ ಪಕ್ಷಕ್ಕೆ, ಸೊನೀಯಾ ಗಾಂಧಿ, ರಾಹುಲ್‌ ಗಾಂಧಿ ಅವರಿಗೆ ಜೈಕಾರ ಹಾಕುವಂತೆ ಹೇಳಲಾಗುತ್ತಿತ್ತು. ಆದರೆ ಬಿಜೆಪಿಯಲ್ಲಿ ದೇಶಕ್ಕೆ ಜೈಕಾರ ಹಾಕುವುದನ್ನು ಕಲಿಸುತ್ತಿದ್ದಾರೆ. ಇದೇ ಕಾಂಗ್ರೆಸ್‌ ಬಿಜೆಪಿ ನಡುವಿನ ವ್ಯತ್ಯಾಸವಾಗಿದೆ ಎಂದರು. ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯವಿಲ್ಲ. ದೇಶದ ತುಂಬ ಜಾಗ ಕಳೆದುಕೊಂಡಿರುವ ಕಾಂಗ್ರೆಸ್‌ ಸಿದ್ದರಾಮಯ್ಯನವರಿಂದಾಗಿ ರಾಜ್ಯದಲ್ಲಿ ಸ್ವಲ್ಪ ಉಳಿದಿದೆ. ಆದರೆ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರನ್ನು ಅವರ ಪಕ್ಷದವರೇ ಸೋಲಿಸುತ್ತಾರೆ. ನಾನು ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ರಾಜಕೀಯ ಬಿಟ್ಟು ಹೋಗುವುದಿಲ್ಲ ಎಂದಿದ್ದೇನೆ. ಪಕ್ಷದ ವರಿಷ್ಟರು ತಾಲೂಕಿನಲ್ಲಿ ಸರ್ವೇ ನಡೆಸಿದ್ದಾರೆ. ಜನ ಬಯಸಿದರೆ, ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಇಲ್ಲವಾದರೆ ಯಾರಿಗೆ ಟಿಕೇಟ್‌ ನೀಡುತ್ತಾರೋ, ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು. ಹರ್‌ ಘರ್‌ ತಿರಂಗಾ ಅಭಿಯಾನವನ್ನು ಬಿಜೆಪಿ ಪಕ್ಷ ಮಾಡಲು ಶುರು ಮಾಡಿದಾಗ ಕಾಂಗ್ರೆಸ್‌ ಪಕ್ಷಕ್ಕೆ ಜನ ಛೀಮಾರಿ ಹಾಕುತ್ತಾರೆ, ಬಿಜೆಪಿಗೆ ಶ್ರೇಯ ಹೋಗುತ್ತದೆ ಎಂದು ಅರಿತು ತಾನು ಕೂಡ ಧ್ವಜ ವಿತರಣೆ ಮಾಡಿ ನಾವೇ ದೇಶಭಕ್ತಿಯನ್ನು ಜನರಲ್ಲಿ ಮೂಡಿಸುತ್ತಿದ್ದೇವೆ ಎನ್ನುವ ರೀತಿಯಲ್ಲಿ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಇದು ಅವರ ನೈತಿಕ ದೀವಾಳಿತನ ತೋರಿಸುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್‌ ಪಾಟೀಲ ರದ್ದೇವಾಡಗಿ, ತಾಲೂಕು ಅಧ್ಯಕ್ಷ ಶೈಲೇಶ ಗುಣಾರಿ ಮಾತನಾಡಿ, ಎಲ್ಲರೂ ನಿಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜಗಳನ್ನು ಬಹಳ ಜಾಗರೂಕತೆಯಿಂದ ಹಾರಿಸಿ. ಧ್ವಜಕ್ಕೆ ಅವಮಾನವಾಗದ ರೀತಿಯಲ್ಲಿ ಎಚ್ಚರಿಕೆಯಿಂದ ಧ್ವಜಾರೋಹಣ ಮಾಡಿ. ಈ ಸಂದರ್ಭದಲ್ಲಿ ಯಾವುದೇ ಪಕ್ಷದ ಚಿನ್ಹೆಗಳ ಬಳಕೆ ಬೇಡ ಎಂದು ಕರೆ ನೀಡಿದರು. ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ನಿಂಗದಳ್ಳಿ, ಅಶೋಕ ಬಗಲಿ, ಭೀಮರಾಯ ಕಲಶೆಟ್ಟಿ, ಶಂಕು ಮ್ಯಾಕೇರಿ, ಶ್ರೀಶೈಲ ಬಳೂರ್ಗಿ, ಮಂಜೂರ್‌ ಅಗರಖೇಡ, ಶಿವು ಪದಕಿ, ಮಳೇಪ್ಪ ಡಾಂಗೆ, ಶಂಕು ಮ್ಯಾಕೇರಿ, ದತ್ತು ದೇವರನಾವದಗಿ, ಧಾನು ಪತಾಟೆ, ಸುನೀಲ್‌ ಶೇಟ್ಟಿ, ಸುಭಾಷ ರಾಠೊಡ, ಪಾಶಾ ಮಣೂರ, ಸುರೇಖಾ ಪದಕಿ, ಅನು ದೊಡ್ಮನಿ, ಸರಳಾ ದೊಡ್ಮನಿ, ಚಂದಮ್ಮ ಪಾಟೀಲ್‌ ಮತ್ತಿತರರು ಇದ್ದರು.

ಉದಯವಾಣಿ 10 Aug 2022 3:30 pm

ತಮಿಳುನಾಡಿನಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನ ಬೆಂಗಳೂರಿನಲ್ಲಿ ಪತ್ತೆ…ವಾಹನದ​ ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದ ಆರೋಪಿ ಅರೆಸ್ಟ್​…

ಬೆಂಗಳೂರು: ಸಂಚಾರಿ‌ ಪೊಲೀಸರ ತಪಾಸಣೆ ವೇಳೆ ತಮಿಳುನಾಡಿನಲ್ಲಿ ಕಳುವಾಗಿದ್ದ ವಾಹನವೊಂದು ಬೆಂಗಳೂರಿನಲ್ಲಿ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ದ್ವಿಚಕ್ರ ವಾಹನ ಬಳಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಯಾಸೀನ್ ಉಲ್ಲಾ ಖಾನ್ ಬಂಧಿತ ಆರೋಪಿ. ಈತ ತಮಿಳುನಾಡಿನಲ್ಲಿ ಕಳ್ಳತನವಾಗಿದ್ದ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದ. ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಅಂಜನಮೂರ್ತಿ ಹಾಗೂ ಹೆಡ್ ಕಾನ್ಸ್ ಟೇಬಲ್ ಅನಂತ ಕುಮಾರ್ ಹೆಲ್ಮೆಟ್ ರಹಿತ ಚಾಲನೆಗೆ ಆರೋಪಿಯನ್ನ ತಡೆದು ವಾಹನದ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ದಾಖಲೆಗಳ ಪರಿಶೀಲನೆ […]

ಬಿಟಿವಿ ನ್ಯೂಸ್ ಲೈವ್ 10 Aug 2022 3:22 pm

ಅತಿವೃಷ್ಟಿಯ ಹಾನಿಗೆ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ: ಸಚಿವ ಗೋವಿಂದ ಕಾರಜೋಳ

ಬೆಳಗಾವಿ : ಅತಿವೃಷ್ಟಿಯಿಂದ ಮನೆಹಾನಿ ಅಥವಾ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದರು. ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಳ್ಳಲಾದ ಕ್ರಮಗಳ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕುಟುಂಬಗಳು 2019 ರ ನಂತರ ಮನೆ ಬಿಟ್ಟು ಬೇರೆ ಕಡೆ ಇದ್ದಾಗಲೂ ಅಂತಹ ಖಾಲಿ ಮನೆಗಳು ಬಿದ್ದರೂ ಕೂಡ ಅಂತಹ ಕುಟುಂಬಗಳಿಗೂ ಮನೆಹಾನಿ ಪರಿಹಾರವನ್ನು ಬಿಡುಗಡೆಗೊಳಿಸಬೇಕು ಎಂದರು. ವಿದ್ಯುತ್ ಸಂಪರ್ಕ ಕಡಿತಗೊಂಡರೆ ಕೂಡಲೇ ಸಂಪರ್ಕ ಕಲ್ಪಿಸಬೇಕು. ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕುಟುಂಬಗಳು ಹೊಂದಿರುವ ಹಳೆಯ ನಳಗಳ ಸಂಪರ್ಕವನ್ನು ಮುಂದುವರಿಸಬೇಕು. ಜಲಜೀವನ ಮಿಷನ್ ಯೋಜನೆ ಸಂಪೂರ್ಣ ಅನುಷ್ಠಾನಗೊಂಡ ಬಳಿಕವೇ ಹಳೆಯ ಸಂಪರ್ಕ ತೆರವುಗೊಳಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಪ್ರವೀಣ್‌ ಹತ್ಯೆ: ಪ್ರಮುಖ ಮೂವರು ಆರೋಪಿಗಳಿಗಾಗಿ ಕಾರ್ಯಾಚರಣೆ; ಎಡಿಜಿಪಿ ಅಲೋಕ್‌ ಕುಮಾರ್‌ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಳ್ಳಾರಿ ನಾಲಾ ನಿರ್ವಹಣೆಯನ್ನು ಪಾಲಿಕೆ ಹಾಗೂ ಉಳಿದ ಕಡೆಗಳಲ್ಲಿ ನೀರಾವರಿ ಇಲಾಖೆಯ ವತಿಯಿಂದ ನಿರ್ವಹಿಸಬೇಕು ಎಂದರು. ಪಾಲಿಕೆ ವ್ಯಾಪ್ತಿಯಲ್ಲಿ 35 ಕಿ.ಮೀ. ಹರಿವು ಇರುತ್ತದೆ. ಅದನ್ನು ನಿರ್ವಹಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು. ನಾಲಾ ಅಕ್ಕಪಕ್ಕದ ಮನೆಗಳಿಗೆ ಹಾಗೂ ಬೆಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದರು. ನಾಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅನುಕೂಲವಾಗುವಂತೆ ಸಮಗ್ರ ಯೋಜನಾ ವರದಿ(ಡಿಪಿಆರ್) ರೂಪಿಸುವಂತೆ ಸೂಚನೆ ನೀಡಿದ ಅವರು, ನಾಲಾ ವ್ಯಾಪ್ತಿಯ ರೈತರನ್ನು ಭೇಟಿ ಮಾಡಿ ಅವರ ಮನವೊಲಿಸುವ ಮೂಲಕ ಬದುಗಳಲ್ಲಿ ನಿಲ್ಲುವ ನೀರು ನಾಲಾಕ್ಕೆ ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ 255 ಕೋಟಿ ಹಾನಿ : ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟಾರೆ 255 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಹಾನಿಯ ಕುರಿತು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಆಗಸ್ಟ್ 12 ರಿಂದ 15 ರವರೆಗೆ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗಾ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು ಎಂದು ಹೇಳಿದ ಗೋವಿಂದ ಕಾರಜೋಳ ಜಿಲ್ಲೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮನೆಗಳಿದ್ದು, ಬಹುತೇಕ ಮನೆಗಳ ಮೇಲೆ ನಾಗರಿಕರು ಸ್ವಯಂಪ್ರೇರಣೆಯಿಂದ ಧ್ವಜಾರೋಹಣ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲ ಸಹಕಾರ ನೀಡಬೇಕು ಎಂದರು. ಜಿಲ್ಲೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮನೆಗಳಿದ್ದು, ಶೇ.75 ರಷ್ಟು ಮನೆಗಳಿಗೆ ಧ್ವಜಗಳನ್ನು ಪೂರೈಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಜಿಲ್ಲೆಯಲ್ಲಿ ಹತ್ತು ಲಕ್ಷ ಮನೆಗಳಿದ್ದು, ಅದರ ಶೇ.75 ರಷ್ಟು ಮನೆಗಳಿಗೆ ಧ್ವಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಜಿಲ್ಲೆಗೆ 4.83 ಲಕ್ಷ ಧ್ವಜಗಳು ಈಗಾಗಲೇ ಬಂದಿರುತ್ತವೆ. ಅವುಗಳ ಪೈಕಿ 3.50 ಲಕ್ಷಕ್ಕೂ ಅಧಿಕ ಧ್ವಜಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಹೇಳಿದರು. ಬೆಳಗಾವಿ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಸಂತೋಷ ಕಾಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಉಪಸ್ಥಿತರಿದ್ದರು.

ಉದಯವಾಣಿ 10 Aug 2022 3:18 pm

Bihar Politics: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿಗೆ ನಿತೀಶ್ ಕುಮಾರ್ ಟಾಂಗ್

Nitish Kumar: ಬಿಹಾರದ ಮುಖ್ಯಮಂತ್ರಿಯಾಗಿ ಎಂಟನೇ ಬಾರಿ ನಿತೀಶ್ ಕುಮಾರ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರಿಗೆ ನಿತೀಶ್ ಕುಮಾರ್ ಸವಾಲು ಹಾಕಿದ್ದಾರೆ.

ವಿಜಯ ಕರ್ನಾಟಕ 10 Aug 2022 3:17 pm

ಮೈಸೂರು: 3 ತಿಂಗಳ ಕಂದಮ್ಮನ ಅನಾಥ ಮಾಡಿ ಬಾಣಂತಿ ಆತ್ಮಹತ್ಯೆ

ಮೈಸೂರು: ಹುಣಸೂರಿನ ನರಸಿಂಹಸ್ವಾಮಿ ಬಡಾವಣೆಯಲ್ಲಿ ಮೂರು ತಿಂಗಳ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಶ್ಮಿ (24) ಮೃತ ದುರ್ದೈವಿ. ವರದಕ್ಷಿಣೆ ಕಿರುಕುಳ ನೀಡಿ ಗಂಡನೇ ಕೊಲೆ ಮಾಡಿದ್ದಾನೆಂದು ಅಳಿಯನ ಮೇಲೆ ಪೋಷಕರು ದೂರು ನೀಡಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಮಾರಿಮುತ್ತು-ಪದ್ಮಮ್ಮ ದಂಪತಿಯು ಐದು ವರ್ಷದ ಹಿಂದೆ ಮಗಳು ರಶ್ಮಿಗೆ ಮದುವೆ ಮಾಡಿದ್ದರು. ಹುಣಸೂರಿನ ನರಸಿಂಹಸ್ವಾಮಿ ಬಡಾವಣೆಯ ಜಗದೀಶ್‌ಗೆ ರಶ್ಮಿಯನ್ನ ಕೊಟ್ಟು ಮದುವೆ ಮಾಡಿದ್ದರು. ಮೂರು ವರ್ಷದ ಹೆಣ್ಣು ಮಗು, ಮೂರು ತಿಂಗಳ ಗಂಡು ಮಗು […] The post ಮೈಸೂರು: 3 ತಿಂಗಳ ಕಂದಮ್ಮನ ಅನಾಥ ಮಾಡಿ ಬಾಣಂತಿ ಆತ್ಮಹತ್ಯೆ appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 3:15 pm

ಗಾಣಗಾಪುರದಲ್ಲಿ ಭೀಮಾ ನದಿಯಲ್ಲಿ ಪುಣ್ಯ ಸ್ನಾನ‌ ಮಾಡಲು ಹೋಗಿ ನೀರುಪಾಲಾದ ಯುವಕ…

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿ ಆರ್ಭಟಿಸುತ್ತಿದ್ದು, ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪೂರದಲ್ಲಿ ಪುಣ್ಯ ಸ್ನಾನ‌ ಮಾಡಲು ಹೋಗಿ ಯುವಕನೊಬ್ಬ ನೀರುಪಾಲಾಗಿದ್ದಾನೆ. ಮಹಾರಾಷ್ಟ್ರ ರಾಜ್ಯದ ಲಾತೂರ್ ನಿವಾಸಿ 20 ವರ್ಷದ ಗೋಪಾಲ್ ರಾಠೋಡ ದತ್ತಾತ್ರೇಯ ದೇವರ ದರ್ಶನಕ್ಕೆ ಆಗಮಿಸಿದ್ದ. ಕುಟುಂಬ ಸಮೇತ ಬಂದು ಸ್ನಾನಕ್ಕಾಗಿ ನದಿಗೆ ಇಳಿದಾಗ ಗೋಪಾಲ್​​​​ ಕೊಚ್ಚಿ ಹೋಗಿದ್ದಾರೆ. ಸ್ಥಳೀಯ ಪೋಲಿಸರು, SDRF, ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಶೋಧ ನಡೆಸುತ್ತಿದ್ಧಾರೆ. ಇದನ್ನೂ ಓದಿ :2ನೇ ವರ್ಷದ ವಾರ್ಷಿಕೋತ್ಸವ ಸಂಭದ್ರದಲ್ಲೇ BSY ಇಳಿಸಿದ್ರು..! ಈಗ 1ನೇ […]

ಬಿಟಿವಿ ನ್ಯೂಸ್ ಲೈವ್ 10 Aug 2022 3:11 pm

ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ…ನೂರಕ್ಕೆ ನೂರು ಬೊಮ್ಮಾಯಿ ಸಿಎಂ ಆಗಿ ಮುಂದುವರೆಯುತ್ತಾರೆ: ಬಿ.ಎಸ್​. ಯಡಿಯೂರಪ್ಪ…

ಬೆಂಗಳೂರು: ಕಾಂಗ್ರೆಸ್​ ಟ್ವೀಟ್​ಗೆ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ನೂರಕ್ಕೆ ನೂರು ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ಧಾರೆ. ಬೆಂಗಳೂರಿನಲ್ಲಿ ಮಾತನಾಡಿದ ಬಿ.ಎಸ್​. ಯಡಿಯೂರಪ್ಪ ಸಿಎಂ ಬದಲಾವಣೆ ಬಗ್ಗೆ ಯಾರೂ ಮಾತನಾಡಬಾರದು. ಸಿಎಂ ಬದಲಾವಣೆ ಮಾತು ಇಲ್ಲಿಗೇ ನಿಲ್ಲಬೇಕು. ಅಮಿತ್​ ಶಾ ಬೆಂಗಳೂರಿಗೆ ಬಂದಾಗಲೂ ಏನೂ ಚರ್ಚೆ ಆಗಿಲ್ಲ ಎಂದು ಹೇಳಿದ್ಧಾರೆ. ಇದನ್ನೂ ಓದಿ :ಚಾಮರಾಜಪೇಟೆ ಜಮೀರ್​ ಫಾದರ್​ ಪ್ರಾಪರ್ಟಿನಾ..? ಮೈದಾನ ಕೊಡಲ್ಲಾ ಅನ್ನೋದಕ್ಕೆ ಅವರ್ಯಾರು..?: […]

ಬಿಟಿವಿ ನ್ಯೂಸ್ ಲೈವ್ 10 Aug 2022 3:06 pm

ಮುಂಬಯಿ ಕನ್ನಡ ಪತ್ರಿಕಾರಂಗದಲ್ಲಿ ಅಪೂರ್ವ ಕಾರ್ಯಕ್ರಮ: ಜ್ಯೋತಿ ಪ್ರಕಾಶ್‌ ಕುಂಠಿನಿ

ಮುಂಬಯಿ : ಪತ್ರಿಕಾರಂಗದ ಒತ್ತಡ ಭರಿತ ಜೀವನದ ಮಧ್ಯೆ ಮುಂಬಯಿ ಕನ್ನಡ ಪತ್ರಿಕೋದ್ಯಮ ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ ಮುಂಬಯಿ ಮಹಾನಗರದಲ್ಲಿ ಮೊಟ್ಟಮೊದಲಾಗಿ ಕನ್ನಡ ಪತ್ರಿಕೋದ್ಯಮದ ಬಗ್ಗೆ ಸಂಶೋಧನೆ ಕೃತಿಯನ್ನು ಲೋಕರ್ಪಣೆ ಮಾಡುವಂತಹ ಮಹಾನ್‌ ಕಾರ್ಯವನ್ನು ಮಾಡುತ್ತಿರುವ ಡಾ|ದಿನೇಶ್‌ ಶೆಟ್ಟಿ ರೆಂಜಾಳ ಅವರ ಕಾರ್ಯ ಅಭಿನಂದನೀಯಾವಾಗಿದೆ ಎಂದು ಜ್ಯೋತಿ ಪ್ರಕಾಶ್‌ ಕುಂಠಿನಿ ನುಡಿದರು. ಅವರು ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್‌ ಸಭಾಭವನದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಿರಿಯ ಪತ್ರಕರ್ತ ಡಾ|ದಿನೇಶ್‌ ಶೆಟ್ಟಿ ರೆಂಜಾಳ ಅವರ ಮುಂಬಯಿ ಕನ್ನಡ ಪತ್ರಿಕೋದ್ಯಮ ಸಂಶೋಧನಕೃತಿ ಬಿಡುಗಡೆ ಮತ್ತು ಮುಂಬಯಿ ಕನ್ನಡಿಗ ಪತ್ರಕರ್ತರ ಸಮಾಗಮ’ ಕಾರ್ಯಕ್ರಮದಲ್ಲಿ ದೀಪವನ್ನು ಪ್ರಜ್ವಲಿಸಿ ಮಾತನಾಡಿದರು. ಪತ್ರಿಕಾ ರಂಗದಲ್ಲಿ ಪತ್ರಕರ್ತರ ಬದುಕು ಬಹಳ ಕಷ್ಟಕರವಾದುದು. ಪತ್ರಕರ್ತರು ತಮ್ಮ ವೃತ್ತಿಯ ಮಧ್ಯೆ ಸಂಶೋಧನಾ ಕೃತಿ ರಚಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಕಠಿಣ ಪರಿಶ್ರಮಬೇಕು. ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲವಾಗಿರುವ ಡಾ|ದಿನೇಶ್‌ ಶೆಟ್ಟಿ ಅವರು ಪತ್ರಕರ್ತರ ಜವಾಬ್ದಾರಿ ಮತ್ತು ಪರಿಶ್ರಮವನ್ನು ಬಹಳ ಹತ್ತಿರದಿಂದ ಕಂಡವರು. ಪತ್ರಕರ್ತರ ಹಿಂದೆ ಅವರ ಪತ್ನಿಯರು ಬೆಂಬಲವಾಗಿ ನಿಂತಿದ್ದಾರೆ ಎಂಬ ಉದ್ದೇಶದಿಂದ ಡಾ|ದಿನೇಶ್‌ ಶೆಟ್ಟಿಯವರು ತಮ್ಮ ಸಂಶೋಧನಾ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ನಮಗೆ ದೀಪ ಪ್ರಜ್ವಲಿಸುವುದ್ದಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಪತ್ರಕರ್ತರ ಪತ್ನಿಯರಿಗೆ ಮನ್ನಣೆ ನೀಡಿರುವುದಕ್ಕೆ ಡಾ|ದಿನೇಶ್‌ ಶೆಟ್ಟಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.ಇದು ಸಮಸ್ತ ಕನ್ನಡ ಪತ್ರಕರ್ತರಿಗೆ ಸಂದ ಗೌರವವಾಗಿದೆ. ನಾವೆಲ್ಲ ಜತೆ ಸೇರಿ ಸಮಾಜವನ್ನು ಕಟ್ಟುವ ಕಾಯಕದಲ್ಲಿ ಕೈಜೋಡಿಸೋಣ ಎಂದು ಕುಂಠಿನಿ ನುಡಿದರು. ಕುಸುಮಾ ಚಂದ್ರಶೇಖರ ಪಾಲೆತ್ತಾಡಿಯವರು ಮಾತನಾಡಿ ವಿಶಿಷ್ಟವಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ನಮಗೆ ವೇದಿಕೆ ಕಲ್ಪಿಸಿದ ಡಾ| ದಿನೇಶ್‌ ಶೆಟ್ಟಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಡಾ|ದಿನೇಶ್‌ ಶೆಟ್ಟಿ ಅವರಿಂದ ಮತ್ತಷ್ಟು ಕೃತಿ ಹೊರ ಬರಲಿ ಎಂದು ಹಾರೈಸಿದರು. ಶಿಕ್ಷಕಿ ಜಯಲಕ್ಷ್ಮೀ ಸುಭಾಶ್‌ ಶಿರಿಯಾ ಅವರು ಮಾತನಾಡಿ, ಪತ್ರಕರ್ತರ ಪರಿವಾರದವರನ್ನು ಒಟ್ಟುಗೂಡಿಸಿ ನಡೆಸಿರುವಂತಹ ಈ ಕಾರ್ಯಕ್ರಮದಲ್ಲಿ ನಮ್ಮನ್ನು ಗುರುತಿಸಿ ಗೌರವಿಸಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಡಾ|ದಿನೇಶ್‌ ಶೆಟ್ಟಿ ಅವರಿಂದ ಮತ್ತಷ್ಟು ಕೃತಿಗಳು ಸಾರಸ್ವತ ಲೋಕಕ್ಕೆ ಸಲ್ಲಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಇವರ ಗೌರವ ಉಪಸ್ಥಿತಿಯಲ್ಲಿ ಹಿರಿಯ ಉಪಸಂಪಾದಕ, ಸಾಹಿತಿ ಶ್ರೀನಿವಾಸ್‌ ಜೋಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮುಂಬಯಿ ಕನ್ನಡ ಪತ್ರಿಕೋದ್ಯಮ “ಅಂದು-ಇಂದು-ಮುಂದು’ ಎಂಬ ವಿಚಾರ ಸಂಕಿರಣ ಜರಗಿತು. ಛಾಯಾಕಿರಣದ ಪ್ರಕಾಶ್‌ ಕುಂಠಿನಿ, ಬಂಟರವಾಣಿಯ ಅಶೋಕ್‌ ಪಕ್ಕಳ, ಮೊಗವೀರ ಮಾಸಿಕದ ಅಶೋಕ್‌ ಸುವರ್ಣ, ಅಕ್ಷಯ ಮಾಸಿಕದ ಡಾ|ಈಶ್ವರ್‌ ಅಲೆವೂರು, ಯುವ ಪತ್ರಕರ್ತ ವಿಶ್ವನಾಥ್‌ ಅಮೀನ್‌ ನಿಡ್ಡೋಡಿ, ನೇಸರು ಮಾಸಿಕದ ಡಾ|ಜ್ಯೋತಿ ಸತೀಶ್‌, ನ್ಯಾಯ ವಾದಿ ಅಮಿತಾ ಭಾಗ್ವತ್‌, ಪತ್ರಕರ್ತ ಹರೀಶ್‌ ಮೂಡಬಿದ್ರಿ ಪುಣೆ ಇವರೆಲ್ಲರೂ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ದಯಾಸಾಗರ್‌ ಚೌಟ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಟೀಂ ಐಲೇಸಾ ತಂಡದ ಸುರೇಂದ್ರ ಕುಮಾರ್‌ ಮಾರ್ನಾಡ್‌ ನಿರೂಪಣೆಯಲ್ಲಿ ವಿಜಯ್‌ ಶೆಟ್ಟಿ ಮೂಡು ಬೆಳ್ಳೆ,ಕಾವ್ಯ ಎನ್‌ ಶೆಟ್ಟಿ ಯವರಿಂದ ಸರಿಗಮ -ಸಮಾಗಮ ನಡೆಯಿತು. ಸುರೇಖಾ ದಯಾಸಾಗರ ಚೌಟ, ಮಲ್ಲಿಕಾ ನವೀನ್‌ ಇನ್ನ, ಪ್ರೀತಿ ರವೀಂದ್ರ ಶೆಟ್ಟಿ ಶುಭಕೋರಿದರು. ವರ್ಷಾ ದಿನೇಶ್‌ ಶೆಟ್ಟಿಯವರು ಅತಿಥಿಗಳನ್ನು ಗೌರವಿಸಿದರು. ವೇದಿಕೆಯಲ್ಲಿ ಪತ್ರಕರ್ತರಾದ ಚಂದ್ರಶೇಖರ ಪಾಲೆತ್ತಾಡಿ, ದಯಾಸಾಗರ್‌ ಚೌಟ, ಪ್ರಕಾಶ್‌ ಕುಂಠಿನಿ, ಸುಭಾಶ್‌ ಶಿರಿಯಾ ಹಾಗೂ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ನಿರೂಪಿಸಿದರು.

ಉದಯವಾಣಿ 10 Aug 2022 3:01 pm

‘ವಿಶ್ವಕಪ್​​ನಲ್ಲಿ ಈತನ ಅಲಭ್ಯತೆ ಟೀಂ ಇಂಡಿಯಾಗೆ ಕಾಡಲಿದೆ’- ಮಾಜಿ ಕ್ರಿಕೆಟರ್​​

ಪ್ರತಿಷ್ಠಿತ ಏಷ್ಯಾಕಪ್​​ ಟೂರ್ನಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಏಷ್ಯಾಕಪ್​​ಗೆ ಟೀಂ ಇಂಡಿಯಾ ತಂಡ ಅನೌನ್ಸ್​ ಆಗಿದೆ. ಸಾಕಷ್ಟು ಅಳೆದು ತೂಗಿ ಅನೌನ್ಸ್​ ಮಾಡಿರೋ ಈ ತಂಡದಿಂದ ಭಾರತದ ಪ್ರಮುಖ ಆಟಗಾರ ಜಸ್ಪ್ರೀತ್ ಬುಮ್ರಾ ಹೊರಬಿದ್ದಿದ್ದಾರೆ. ಗಾಯದ ಕಾರಣದಿಂದಾಗಿ ಬೂಮ್ರಾ ಏಷ್ಯಾಕಪ್‌ನಿಂದ ಹೊರಬಿದ್ದಿರೋದು ಟೀಂ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟಿದೆ. ಇನ್ನು, ಏಷ್ಯಾಕಪ್‌ಗೆ ಆಯ್ಕೆಯಾದ ಟೀಂ ಇಂಡಿಯಾ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟರ್​​​ ಸಲ್ಮಾನ್ ಬಟ್ ಮಾತಾಡಿದ್ದಾರೆ. ಬುಮ್ರಾ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಅರ್ಷದೀಪ್ ಹಾಗೂ ಆವೇಶ್ […] The post ‘ವಿಶ್ವಕಪ್​​ನಲ್ಲಿ ಈತನ ಅಲಭ್ಯತೆ ಟೀಂ ಇಂಡಿಯಾಗೆ ಕಾಡಲಿದೆ’- ಮಾಜಿ ಕ್ರಿಕೆಟರ್​​ appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 2:59 pm

Petrol Bomb: ಕೆಜೆ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆ ಮೇಲೆ ಪೆಟ್ರೋಲ್ ಬಾಂಬ್ 'ಭಯೋತ್ಪಾದನಾ ಕೃತ್ಯ': ಹೈಕೋರ್ಟ್

KG Halli, DJ Halli Riot: ಪೊಲೀಸ್ ಠಾಣೆ ಮುಂದೆ ಉದ್ರಿಕ್ತ ಜನರು ಗುಂಪುಗೂಡಿರುವುದು, ಪೊಲೀಸ್‌ ಠಾಣೆ ಹಾಗೂ ಸಿಬ್ಬಂದಿಯ ಮೇಲೆ ರಾಡ್‌, ಪೆಟ್ರೋಲ್‌ ತುಂಬಿದ ಬಾಟಲ್‌ಗಳು ಮತ್ತಿತರ ಮಾರಕಾಸ್ತ್ರಗಳಿಂದ ದಾಳಿ ನಡೆಸುವುದು ಹಾಗೂ ಗಲಭೆ ಉಂಟು ಮಾಡುವುದೆಲ್ಲವೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಾಡಿದ ಭಯೋತ್ಪಾದನಾ ಕೃತ್ಯಗಳೆನಿಸುತ್ತವೆ. ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಮೇಲ್ನೋಟಕ್ಕೆ ಆರೋಪಿಗಳು ಕೃತ್ಯ ಎಸಗುವ ಉದ್ದೇಶದಿಂದಲೇ ಘಟನಾ ಸ್ಥಳದಲ್ಲಿ ಸೇರಿದ್ದರು ಎಂಬುದನ್ನು ನಿರೂಪಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿಜಯ ಕರ್ನಾಟಕ 10 Aug 2022 2:46 pm

ಏಷ್ಯಾಕಪ್​​ ತಂಡದಿಂದ ಶ್ರೇಯಸ್​​​​ ಅಯ್ಯರ್​ಗೆ ಕೊಕ್​-T20 ಸ್ಪೆಷಲಿಸ್ಟ್​​ ಕೈಬಿಟ್ಟು ಎಡವಿತಾ ಆಯ್ಕೆ ಸಮಿತಿ?

ಏಷ್ಯಾಕಪ್​ ಟೂರ್ನಿಗೆ ತಂಡದ ಆಯ್ಕೆಯಲ್ಲಿ ಸೆಲೆಕ್ಷನ್​ ಕಮಿಟಿ ಎಡವಿತಾ..? ನಿನ್ನೆ, ಮೊನ್ನೆ ಎಂಟ್ರಿ ಕೊಟ್ಟ ಆಟಗಾರನ ಮೇಲಿರೋವಷ್ಟು ನಂಬಿಕೆ, 3 ವರ್ಷದಿಂದ ಇರೋ ಆಟಗಾರನ ಮೇಲಿಲ್ವಾ.? ಹಿಂಗಾದ್ರೆ ಯುವ ಆಟಗಾರನ ಭವಿಷ್ಯ ಏನು.? ಏಷ್ಯಾಕಪ್ ಟೂರ್ನಿಗೆ ಟೀಮ್​ ಇಂಡಿಯಾ ಕೊನೆಗೂ​ ಪ್ರಕಟಗೊಂಡಿದೆ. ಇದರೊಂದಿಗೆ ಕುತೂಹಲವನ್ನ ಹುಟ್ಟುಹಾಕಿದ್ದ ಹಲ ಪ್ರಶ್ನೆಗಳಿಗೂ, ಉತ್ತರ ಸಿಕ್ಕಿದೆ. ಅದರ ಜೊತೆಗೆ ತಂಡದಲ್ಲಿ ಆಯ್ಕೆಯಲ್ಲಿ ಆಯ್ಕೆ ಸಮಿತಿ ಎಡವಟ್ಟು ಮಾಡಿಕೊಳ್ತಾ ಎಂಬ ಪ್ರಶ್ನೆಯೂ ಹುಟ್ಟಿದೆ. ಏಷ್ಯಾಕಪ್​​ಗೆ ತಂಡ ಪ್ರಕಟವಾಗೋಕೂ ಮುಂಚೆ, ಸಿಕ್ಕಾಪಟ್ಟೆ ಡಿಬೆಟ್​​ಗಳು ನಡೆದಿದ್ವು. […] The post ಏಷ್ಯಾಕಪ್​​ ತಂಡದಿಂದ ಶ್ರೇಯಸ್​​​​ ಅಯ್ಯರ್​ಗೆ ಕೊಕ್​-T20 ಸ್ಪೆಷಲಿಸ್ಟ್​​ ಕೈಬಿಟ್ಟು ಎಡವಿತಾ ಆಯ್ಕೆ ಸಮಿತಿ? appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 2:45 pm

ಬಿಜೆಪಿಯವರು ಮೂರು ಅಥವಾ ನಾಲ್ಕು ಸಿಎಂಗಳನ್ನಾದರೂ ಮಾಡಲಿ, ನಾವು ತಲೆ ಕೆಡಿಸಿಕೊಳ್ಳಲ್ಲ: ಡಿಕೆಶಿ

ಬಿಜೆಪಿಯವರ ಆದ್ಯತೆ ಬೇರೆ. ಅವರು ರಾಜ್ಯದ ಹಿತದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಪಕ್ಷದಲ್ಲಿನ ಗೊಂದಲ, ಯಾರು ಏನು ಮಾತನಾಡುತ್ತಿದ್ದಾರೆ ಎಂದು ಎಲ್ಲರೂ ಗಮನಿಸುತ್ತಿದ್ದಾರೆ. ಬಿಜೆಪಿಗರೇ ಈ ವಿಚಾರವಾಗಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆ ಕುರಿತು ನಾವು ಚರ್ಚೆ ಮಾಡಿದ್ದೇವೆ. ಮಾಜಿ ಶಾಸಕರು, ಸಚಿವರು ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ವಿಜಯ ಕರ್ನಾಟಕ 10 Aug 2022 2:40 pm

ಪ್ರವೀಣ್‌ ಹತ್ಯೆ: ಪ್ರಮುಖ ಮೂವರು ಆರೋಪಿಗಳಿಗಾಗಿ ಕಾರ್ಯಾಚರಣೆ; ಎಡಿಜಿಪಿ ಅಲೋಕ್‌ ಕುಮಾರ್‌

ಮಂಗಳೂರು: ಬಿಜೆಪಿ ಯುವಮುಖಂಡ ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಜನರನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರು ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಲು ಬೇರೆ ಬೇರೆ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಬುಧವಾರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಾರಿಯಾದ ಮೂವರು ಆರೋಪಿಗಳ ಫೋಟೋ , ಮನೆ ವಿಳಾಸ, ಮನೆಯವರ ಬಗ್ಗೆ ತಿಳಿದಿದೆ. ಆದರೆ ಆರೋಪಿಗಳನ್ನು ಕೆಲವರು ಸೇರಿ ಬಚ್ಚಿಟ್ಟಿದ್ದಾರೆ. ಅವರನ್ನು ಯಾವ ರೀತಿ ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಿದವರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರ ಮೇಲೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರೆಲ್ಲರ ಮೇಲೆ ಕರ್ನಾಟಕ ಪೊಲೀಸ್‌ ಹಾಗೂ ಎನ್‌ಐಎ ಮೂಲಕ ಕ್ರಮ ಜರುಗಿಸುತ್ತೇವೆ. ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ಕೋರ್ಟ್‌ ಮುಖಾಂತರ ವಾರೆಂಟ್‌ ಪಡೆದು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ದಾಖಲೆಗಳ ಆಧಾರದ ಮೇಲೆ ಸಾಕ್ಷಿ ಸಂಗ್ರಹಿಸಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಪಿಎಫ್‌ಐ ಜತೆ ಶಂಕಿತ ನಂಟು ಕಂಡು ಬಂದಿದೆ. ತನಿಖೆ ನಂತರ ಯಾರಿಗೆಲ್ಲಾ ಪಿಎಫ್‌ಐ ಜತೆ ನಂಟು ಇದೆ ಎನ್ನುವುದನ್ನು ಹೇಳಬಹುದು. ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಅಕ್ರಮ ಬಯಲಿಗೆ: ಪರೀಕ್ಷೆ ವೇಳೆ ಸ್ಮಾರ್ಟ್ ವಾಚ್ ಬಳಸಿದ್ದವ ಸೆರೆ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಅದರ ಕುರಿತಾಗಿಯೂ ಸಭೆ ನಡೆಸಲಿದ್ದೇವೆ. ಮುಂದೆಯೂ ಕಾನೂನು ಸುವ್ಯವಸ್ಥೆ ಉತ್ತಮ ರೀತಿಯಲ್ಲಿ ಇರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಉದಯವಾಣಿ 10 Aug 2022 2:38 pm

Langya Virus: ಚೀನಾದಲ್ಲಿ ಮತ್ತೊಂದು ವೈರಸ್ ಭೀತಿ: ಏನಿದು ಲಾಂಗ್ಯಾ ವೈರಸ್? ಇದರ ಲಕ್ಷಣಗಳೇನು?

Langya Virus In China: ಚೀನಾದಲ್ಲಿ ಮತ್ತೊಂದು ವೈರಸ್ ಭೀತಿ ಸೃಷ್ಟಿಸಿದೆ. ಹೆನಾನ್ ಮತ್ತು ಶಾಂಡೊಂಗ್ ಪ್ರಾಂತ್ಯಗಳಲ್ಲಿ ಲಾಂಗ್ಯಾ ವೈರಸ್ ಕಾಣಿಸಿಕೊಂಡಿದ್ದು, 35 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದು ಪ್ರಾಣಿಗಳಿಂದ ಹರಡುವ ವೈರಸ್ ಆಗಿದೆ.

ವಿಜಯ ಕರ್ನಾಟಕ 10 Aug 2022 2:36 pm

ರಾಜ್ಯದಲ್ಲಿ ಮತ್ತೊಂದು ಅಕ್ರಮ ಬಯಲಿಗೆ: ಪರೀಕ್ಷೆ ವೇಳೆ ಸ್ಮಾರ್ಟ್ ವಾಚ್ ಬಳಸಿದ್ದವ ಸೆರೆ

ಬೆಳಗಾವಿ: ಪಿಎಸ್ ಐ ಹಾಗೂ ಪದವಿ ಉಪನ್ಯಾಸಕರ ಅಕ್ರಮ ನೇಮಕಾತಿ ಬೆನ್ನಲ್ಲೇ ಈಗ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಲಿಖಿತ ಪರೀಕ್ಷೆ ವೇಳೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಲಿಖಿತ ಪರೀಕ್ಷೆ ವೇಳೆ ನಕಲು ಮಾಡಲು ಸ್ಮಾರ್ಟ್ ವಾಚ್ ಬಳಸಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಗೋಕಾಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸಿದ್ದಪ್ಪ ಮಡ್ಡಿಹಳ್ಳಿ ಎಂದು ಗುರುತಿಸಲಾಗಿದೆ. ಗೋಕಾಕ ಪೊಲೀಸರು ಈಗಾಗಲೇ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯನ್ನು ಬಂಧಿಸಿದ್ದಾರೆ.‌ ತನಿಖೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಗೋಕಾಕ ಡಿಎಸ್ ಪಿ ಮನೋಜಕುಮಾರ ನಾಯಕ ನೇತೃತ್ವದಲ್ಲಿ ಪ್ರಕರಣದ ತನಿಖೆ ತೀವ್ರಗೊಳಿಸಿದ್ದು, ಇದರ ಹಿಂದಿರುವ ಜಾಲ ಭೇದಿಸಲಾಗುತ್ತಿದೆ. ಪರೀಕ್ಷೆ ಅಕ್ರಮ ನಡೆಸಲು ಪ್ರಕರಣದ ಹಿಂದೆ ಯಾರು ಇದ್ದಾರೆ ಎಂಬುದರ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ ಪಿ ಸಂಜೀವ ಪಾಟೀಲ್ ‘ಉದಯವಾಣಿ’ಗೆ ತಿಳಿಸಿದರು.

ಉದಯವಾಣಿ 10 Aug 2022 2:28 pm

ಚಾಮರಾಜಪೇಟೆ ಜಮೀರ್​ ಫಾದರ್​ ಪ್ರಾಪರ್ಟಿನಾ..? ಮೈದಾನ ಕೊಡಲ್ಲಾ ಅನ್ನೋದಕ್ಕೆ ಅವರ್ಯಾರು..?: ಸಿ.ಟಿ. ರವಿ…

ಬೆಂಗಳೂರು :ಚಾಮರಾಜಪೇಟೆ ಜಮೀರ್​ ಫಾದರ್​ ಪ್ರಾಪರ್ಟಿನಾ, ಮೈದಾನ ಕೊಡಲ್ಲಾ ಅನ್ನೋದಕ್ಕೆ ಅವರ್ಯಾರು, ಸಾರ್ವಜನಿಕವಾಗಿ ಗಣೇಶನ ಇಡ್ಬೇಕು ಅಂದ್ರೆ ಇಟ್ಟೇ ಇಡ್ತೀವಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ ಗಣೇಶೋತ್ಸವ ಬೇಡ ಅನ್ನೋಕೆ ಜಮೀರ್​ ಅಹ್ಮದ್​ ಯಾರು, ಅದು ಕಂದಾಯ ಇಲಾಖೆ ಪ್ರಾಪರ್ಟಿಯಾಗಿದ್ದು, ಸರ್ಕಾರದ ಸ್ವತ್ತಾಗಿದೆ. ಕೋಳಿ ಕೇಳಿ ಖಾರ ಅರೆಯೋಕೆ ಆಗುತ್ತಾ, ಜಮೀರ್​ ಯಾವ ಸೀಮೆ ದೊಣ್ಣೆ ನಾಯಕ, ಗಣೇಶನ ಇಡೋಕೆ ಜಮೀರ್​ ಪರ್ಮಿಷನ್​ ಬೇಕಾ..? ಗಣೇಶೋತ್ಸವವನ್ನು […]

ಬಿಟಿವಿ ನ್ಯೂಸ್ ಲೈವ್ 10 Aug 2022 2:23 pm

Bengaluru Crime News: ಬೆಂಗಳೂರಿನಲ್ಲಿ ಪೊಲೀಸರ ಮೊಬೈಲ್‌ ಫೋನನ್ನೇ ಕದ್ದು ಸಿಕ್ಕಿಬಿದ್ದ ಖತರ್ನಾಕ್ ಕಳ್ಳರು..!

Bengaluru Crime News: ಆರೋಪಿಗಳು ಬೆಳಗಿನ ಜಾವ ಒಂಟಿಯಾಗಿ ಓಡಾಡುವ ಜನರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಮೊಬೈಲ್‌ ದೋಚುತ್ತಿದ್ದರು. ಜುಲೈನಲ್ಲಿ ಆನಂದ ರಾವ್‌ ವೃತ್ತದ ಬಳಿ ಸಂಚಾರ ತರಬೇತಿ ಸಂಸ್ಥೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರ ಮೊಬೈಲ್‌ ದೋಚಿದ್ದರು. ಕಾನ್‌ಸ್ಟೆಬಲ್‌, ಆನಂದ ರಾವ್‌ ವೃತ್ತದ ಸಮೀಪ ಬಿಎಂಟಿಸಿ ಬಸ್‌ಗೆ ಕಾಯುತ್ತಾ ನಿಂತಿದ್ದಾಗ ಆರೋಪಿಗಳು ಬೈಕ್‌ನಲ್ಲಿ ಬಂದು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು. ಕಾನ್‌ಸ್ಟೆಬಲ್‌ ಸಮವಸ್ತ್ರ ಧರಿಸಿರದ ಕಾರಣ ಆರೋಪಿಗಳಿಗೆ ಅವರು ಪೊಲೀಸ್‌ ಎಂದು ಗೊತ್ತಾಗಿರಲಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ವಿಜಯ ಕರ್ನಾಟಕ 10 Aug 2022 2:21 pm

ನಾನು ಕುಡುಕರ ಮಾತಿಗೆ ಬೆಲೆ‌ ಕೊಡಲ್ಲ ಎಂದ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡರ ಹೇಳಿಕೆ ಬೆನ್ನಲ್ಲೇ ಶಾಸಕ ಕೆ.ಎಸ್.ಈಶ್ವರಪ್ಪ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ನಾನು ಕುಡುಕರ ಮಾತಿಗೆ ಬೆಲೆ‌ ಕೊಡಲ್ಲ. ಇವರ ಅವಧಿಯಲ್ಲಿ ಮೂವರು ಸಿಎಂ ಆಗಿಲ್ವ. ಶಿವಮೊಗ್ಗದ ಜನ ವೀರೇಂದ್ರ ಪಾಟೀಲ್​ ಹೆಸರು ಹೇಳಿ ನೀರು ಕುಡಿತಿದ್ದೇವೆ. ಅಂತಹ ಸಿಎಂ ಅವರನ್ನೇ ಇವರು ಏರ್ಪೋರ್ಟ್​ನಲ್ಲೇ ಬದಲಾಯಿಸಿದ್ದರು. ಸಿಎಂ ಬದಲಾಗಲಿ ಎಂಬುದು ಅವರ ಭಾವನೆ ಇರಬಹುದು ಎಂದರು. ಇದನ್ನೂ ಓದಿ: ‘ಎಲ್ಲಿದ್ಯಪ್ಪ’ ಎಂದ ಅಶ್ವತ್ಥ್​ […] The post ನಾನು ಕುಡುಕರ ಮಾತಿಗೆ ಬೆಲೆ‌ ಕೊಡಲ್ಲ ಎಂದ ಕೆ.ಎಸ್.ಈಶ್ವರಪ್ಪ appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 2:20 pm

‘ಫೈವ್​​ಸ್ಟಾರ್​​​​ ಹೋಟೆಲ್​​ನಲ್ಲಿ ಏನ್ ಬಿಚ್ಚಿಡ್ತಿದ್ದೆ ಎಂದು ಗೊತ್ತಿದೆ’ -HDKಗೆ ಅಶ್ವಥ್​ ನಾರಾಯಣ್ ಕೌಂಟರ್

ಬೆಂಗಳೂರು: ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ಸಚಿವ ಅಶ್ವಥ್ ನಾರಾಯಣ್ ನಡುವಿನ ವಾಗ್ಯುದ್ಧ ಮುಂದುವರಿದಿದೆ. ಕುಮಾರಸ್ವಾಮಿ ವಾಗ್ದಾಳಿಗೆ ಕೌಂಟರ್ ಕೊಟ್ಟಿರುವ ಸಚಿವರು, ಎಲ್ಲರ ಹತ್ತಿರ ಆಡಿದ ಹಾಗೆಯೇ ನನ್ನ ಹತ್ತಿರ ಆಟ ಆಡೋದು ಬೇಡ. ನನ್ನ ಹತ್ರ ಹಾಗೆ ಆಟ ಆಡಿದ್ರೆ ಫೇಲ್ಯೂರ್ ಆಗ್ತೀರಾ ಎಂದು ಎಚ್ಚರಿಕೆಯನ್ನ ನೀಡಿದ್ದಾರೆ. ಏನ್ ಬಿಚ್ಚಿ ಇಡ್ತೀಯಾ ಬಿಚ್ಚಿ ಇಡಪ್ಪ. ನೀನು ಫೈವ್ ಸ್ಟಾರ್ ಹೋಟೆಲ್​​ನಲ್ಲಿ ಏನ್ ಬಿಚ್ಚಿಡುತ್ತಿದ್ದೆ ಎಂದು ಗೊತ್ತಿದೆ. ಅದೇನು ಬಿಚ್ಚಿಡುತ್ತೀಯಾ ಎಂದು ಕಾಯ್ತಿದ್ದೇನೆ. ಅದೇನ್ ಬಿಚ್ಚಿ ಇಡ್ತಿಯಾ […] The post ‘ಫೈವ್​​ಸ್ಟಾರ್​​​​ ಹೋಟೆಲ್​​ನಲ್ಲಿ ಏನ್ ಬಿಚ್ಚಿಡ್ತಿದ್ದೆ ಎಂದು ಗೊತ್ತಿದೆ’ -HDKಗೆ ಅಶ್ವಥ್​ ನಾರಾಯಣ್ ಕೌಂಟರ್ appeared first on News First Kannada .

ನ್ಯೂಸ್ ಫಸ್ಟ್ ಲೈವ್ 10 Aug 2022 2:18 pm

ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ: ಆರಗ ಜ್ಞಾನೇಂದ್ರ

ಬೆಂಗಳೂರು : ಅಕ್ರಮ ವಿದೇಶಿ ವಲಸಿಗರನ್ನು ಹಿಡಿದಿಡುವ ದಿಗ್ಬಂಧನ ಕೇಂದ್ರದ ಸಾಮರ್ಥ್ಯ ವನ್ನು ಇಮ್ಮಡಿಗೊಳಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಬುಧವಾರ ಉನ್ನತ ಮಟ್ಟದ ಜಂಟಿ ಸಭೆಯನ್ನು, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ, ಅವರೊಂದಿಗೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಅಕ್ರಮ ವಲಸಿಗರು, ವೀಸಾ ಅವಧಿ ಮುಗಿದರೂ, ದೇಶದಲ್ಲಿಯೇ ಉಳಿದುಕೊಳ್ಳುತ್ತಿದ್ದು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಅಪಾಯ ಇರುವ ದೃಷ್ಟಿಯಿಂದ, ಅವರನ್ನು ಗಡಿಪಾರು ಮಾಡುವ ಅಗತ್ಯವಿದೆ ಎಂದರು. ಪ್ರಸ್ತುತ ಇರುವ ಅಕ್ರಮ ವಿದೇಶಿ ವಲಸಿಗರಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ‘ ದಿಗ್ಬಂಧನ ಕೇಂದ್ರ ‘ (detention center) ವನ್ನು ವಿಸ್ತರಿಸಿ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ, ರಾಜ್ಯ ಪೊಲೀಸ್ ಮಹನಿರ್ದೇಶಕ ಪ್ರವೀಣ್ ಸೂದ್ ಅವರು ಪ್ರಸ್ತಾಪಿಸಿ, ಅಕ್ರಮ ಬಾಂಗ್ಲಾದೇಶಿ ನಾಗರಿಕರೂ ಸೇರಿದಂತೆ ಇತರ ದೇಶದ ವಲಸಿಗರನ್ನು, ದೇಶದ ಕಾನೂನಿನಂತೆ, ಬಂಧಿಸಿ, ಯಾವುದೇ ಕಾರಾಗೃಹ ಗಳಲ್ಲಿ ಇಡದೆ, ಇವರಿಗೆಂದೇ ಇರುವ ದಿಗ್ಬಂಧನ ಕೇಂದ್ರದಲ್ಲಿ ವಸತಿ ಕಲ್ಪಿಸಬೇಕು ಹಾಗೂ ಅದಕ್ಕಾಗಿ ತಕ್ಷಣ ಕ್ರಮ ವಹಿಸಬೇಕಾಗಿದೆ. ಪ್ರಸ್ತುತ ಬೆಂಗಳೂರಿನ ಸಮೀಪ ವಿರುವ ನೆಲಮಂಗಲದ ಸಮೀಪ ದಿಗ್ಬಂಧನ ಕೇಂದ್ರವೊಂದು ಕಾರ್ಯಾಚರಣೆ ನಡೆಸುತ್ತಿದ್ದು, ಅಲ್ಲಿ ಸ್ಥಳಾವಕಾಶ ಕೊರತೆ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರಸ್ತುತ ದಿಗ್ಬಂಧನ ಕೇಂದ್ರದ ಸಾಮರ್ಥ್ಯ ವಿಸ್ತರಣೆಗೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಒದಗಿಸಬೇಕು ಹಾಗೂ ವಿಳಂಬ ವಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು. ಈ ಕುರಿತು ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಕುರಿತು ಗೃಹ ಇಲಾಖೆ ಸಲ್ಲಿಸುವ ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದರು. ಇದನ್ನೂ ಓದಿ: ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸಮಾಜ ಕಲ್ಯಾಣ ಅಧಿಕಾರಿಗಳಿಗೆ, ಸಚಿವ ಪೂಜಾರಿಯವರು, ಸಭೆಯಲ್ಲಿಯೇ ನಿರ್ದೇಶನ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉದಯವಾಣಿ 10 Aug 2022 2:17 pm

8 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್…

ಪಾಟ್ನಾ: ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆಯಾಗಿದ್ದು, ನಿತೀಶ್ ಕುಮಾರ್ ಅವರು ದಾಖಲೆಯ 8 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರಿಗೆ ರಾಜ್ಯಪಾಲ ಫಗು ಚೌಹಾಣ್ ಅವರು ಪ್ರಮಾಣ ವಚನ ಬೋಧಿಸಿದರು. ಇನ್ನು ಆರ್ ಜೆ ಡಿ ಯ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿರುವ ಜೆಡಿಯು ಪಕ್ಷ ಆರ್ ಜೆಡಿ, ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳು ಮತ್ತು ಒಬ್ಬ […]

ಬಿಟಿವಿ ನ್ಯೂಸ್ ಲೈವ್ 10 Aug 2022 2:14 pm

ದೋಟಿಹಾಳ: ನಿಯಂತ್ರಣ ತಪ್ಪಿ ರಸ್ತೆ ಬದಿ ವಾಲಿದ ಬಸ್; ತಪ್ಪಿದ ಭಾರೀ ಅನಾಹುತ

ದೋಟಿಹಾಳ: ವಾಯುವ್ಯ ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗದೆ ಪ್ರಾಣಪಾಯದಿಂದ ಪಾರಾದ ಘಟನೆ ಗ್ರಾಮದ ಇಳಕಲ್ ಮುಖ್ಯ ರಸ್ತೆಯಲ್ಲಿ ಸಮೀಪ ಬುಧವಾರ ಸಂಭವಿಸಿದೆ. ಇಳಕಲ್ ಪಟ್ಟಣದಿಂದ ದೋಟಿಹಾಳ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಹೋಗುತ್ತಿರುವ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿದ್ದು, ಬಸ್ ಇಳಕಲ್ ಡಿಪೋಗೆ ಸೇರಿದ್ದು ಎನ್ನಲಾಗಿದೆ. ‌ ಇದನ್ನೂ ಓದಿ: ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ ಅದೇ ಬಸ್ ಮುಂಭಾಗ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯ ಬಸ್ ಚಾಲಕ ಅಪಘಾತ ತಪ್ಪಿಸಲು ಪಕ್ಕದ ರಸ್ತೆಗೆ ಬಸ್ ಚಲಾಯಿಸಿದ್ದಾನೆ. ಸದ್ಯ ಮಳೆಯಿಂದ ಕಚ್ಚಾ ರಸ್ತೆಯ ಭೂಮಿ ಹಸಿಯಾದ ಹಿನ್ನೆಲೆ ಬಸ್ಸಿನ ಚಕ್ರಗಳು ಸಿಲುಕಿಕೊಂಡು ಒಂದು ಕಡೆ ವಾಲಿದೆ. ಆದರೆ ಪಕ್ಕದಲ್ಲಿರುವ ಗುಂಡಿಗೆ ಬಸ್ ವಾಲಿದ್ದರೆ ಭಾರೀ ಅನಾಹುತವೇ ಸಂಭವಿಸುತಿತ್ತು ಎನ್ನಲಾಗಿದೆ‌. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಬೇರೊಂದು ಬಸ್ಸಿಗೆ ಕಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ.

ಉದಯವಾಣಿ 10 Aug 2022 2:07 pm